Asianet Suvarna News Asianet Suvarna News

ಆನೆ ಮರಿಯ ತುಂಟಾಟ: ಯುವತಿಯ ಲಂಗ ಎಳೆದಾಡಿ ಆಟ

ಆನೆಯೊಂದು ಮಹಿಳೆಯೊಂದಿಗೆ ತುಂಟಾಟವಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆನೆಮರಿ ಮಹಿಳೆಯೊಂದಿಗೆ ಆಟವಾಡುತ್ತಾ ಆಡುತ್ತಾ ಮಹಿಳೆಯ ಲಂಗವನ್ನು ಎಳೆದು ಬಿಡುತ್ತದೆ. ಜೊತೆಗೆ ಆಕೆಯನ್ನು ಕೆಳಗೆ ಹಾಕಿ ಆಕೆಯ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತದೆ.

Baby Elephant Playfuly fighting with woman watch viral video akb
Author
Bangalore, First Published Jun 20, 2022, 2:26 PM IST

ಸಾಮಾನ್ಯವಾಗಿ ಬೆಕ್ಕು, ನಾಯಿಗಳು, ಮನುಷ್ಯರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುತ್ತವೆ. ಜೊತೆಗೆ ಬುದ್ಧಿವಂತ ಪ್ರಾಣಿ ಎನಿಸಿದ ಆನೆಗಳ ಮರಿಗಳು ಕೂಡ ತುಂಟಾಟವಾಡುವುದರಲ್ಲಿ ಎತ್ತಿದ ಕೈ ಆನೆಗಳು ಸೇರಿದಂತೆ ಅನೇಕ ಪ್ರಾಣಿಗಳ ತುಂಟಾಟದ ಆಟಾಟೋಪಗಳ ವಿಡಿಯೋವನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೋಡಿದ್ದೇವೆ. ಅದೇ ರೀತಿ ಈಗ ಆನೆಯೊಂದು ಮಹಿಳೆಯೊಂದಿಗೆ ತುಂಟಾಟವಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆನೆಮರಿ ಮಹಿಳೆಯೊಂದಿಗೆ ಆಟವಾಡುತ್ತಾ ಆಡುತ್ತಾ ಮಹಿಳೆಯ ಲಂಗವನ್ನು ಎಳೆದು ಬಿಡುತ್ತದೆ. ಜೊತೆಗೆ ಆಕೆಯನ್ನು ಕೆಳಗೆ ಹಾಕಿ ಆಕೆಯ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತದೆ. ಈ ವೇಳೆ ಆನೆಗಳ ಗುಂಪು ಹತ್ತಿರದಲ್ಲೇ ಇತ್ತು. ಆನೆ ಮರಿಯ ತುಂಟಾಟ ನೋಡಿದ ಅದರ ಅಕ್ಕ ಅಲ್ಲಿಗೆ ಬಂದು ಆನೆ ಮರಿಯೂ ಮಹಿಳೆ ಮೇಲಿಂದ ಏಳುವಂತೆ ಮಾಡುತ್ತದೆ. ಒಟ್ಟಿನಲ್ಲಿ ಆನೆ ಮರಿಯ ತುಂಟಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 

ಮೆಗನ್ ಮಿಲನ್ ಎಂಬ ಮಹಿಳೆ ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆದರೆ ವಿಡಿಯೋ ನೋಡಿದ ಜನರು ಮಹಿಳೆಗೆ ಏನಾದರೂ ಗಾಯವಾಗಿರಬಹುದೇ ಎಂದು ಭಯಗೊಂಡರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಮೆಗನ್ ನನಗೆ ಏನು ನೋವಾಗಿಲ್ಲ. ಆತ ಹುಟ್ಟಿ ಕೇವಲ ಮೂರು ವಾರಗಳಾಗಿದೆ. ಆನೆಗಳು ಸಹಾನುಭೂತಿಯನ್ನು ಹೊಂದಿವೆ. ಅವುಗಳು ತಮ್ಮನ್ನು ಪ್ರೀತಿಸುವವರನ್ನು ಎಂದಿಗೂ ಮರೆಯುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. 

ಆನೆಗಳು ಮನುಷ್ಯರೊಂದಿಗೆ ಸಾಕಷ್ಟು ಸ್ನೇಹಪರ ಸಂಬಂಧವನ್ನು ಹೊಂದಿರುತ್ತವೆ. ಆದಾಗ್ಯೂ ಆನೆ ಹಾಗೂ ಮಾನವ ನಡುವಿನ ಸಂಘರ್ಷಗಳು ಒಂದು ಕಡೆ ಕಾಡಂಚಿನ ಗ್ರಾಮಗಳನ್ನು ಕಾಡುತ್ತಿವೆ. ಈ ನಡುವೆ ಆನೆ ಹಾಗೂ ಮನುಷ್ಯನ ನಡುವಿನ ಸ್ನೇಹ ಬಾಂಧವ್ಯವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸುತ್ತು ಹೊಡೆಯುತ್ತಿದೆ.

ಕೆಲ ದಿನಗಳ ಹಿಂದೆ ಮಲಗುವ ಹಾಸಿಗೆಗಾಗಿ ತನ್ನ ನೋಡಿಕೊಳ್ಳುವವನೊಂದಿಗೆ ಆನೆ ಮರಿ ಕಿತ್ತಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ಇದು ಮನಸ್ಸಿಗೆ ಮುದ ನೀಡುವಂತಿತ್ತು. ಭಾರತೀಯ ಅರಣ್ಯ ಅಧಿಕಾರಿ ಡಾ. ಸಾಮ್ರಾಟ್ ಗೌಡ (Samrat Gowda) ಅವರು ತಮ್ಮ ಟ್ವಿಟರ್ ಖಾತೆಯಿಂದ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ (Twitter Account) ಸಾಕಷ್ಟು ಹೃದಯಸ್ಪರ್ಶಿ ಪ್ರಾಣಿಗಳ ವೀಡಿಯೊಗಳನ್ನು ಹಂಚಿಕೊಳ್ಳುವ ಡಾ.ಗೌಡ, 'ಹೇ ಅದು ನನ್ನ ಹಾಸಿಗೆ ಎದ್ದೇಳು' ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

ಮರಿ ಆನೆ ಬೇಲಿ ದಾಟಲು ಹೆಣಗಾಡುವುದರೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ. ಆನೆಯ ಸ್ವಾಭಾವಿಕವಾಗಿ ದೊಡ್ಡ ಗಾತ್ರದ ಕಾರಣ, ಅವು ಜಿಗಿಯಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಮರಿ ಪ್ರಾಣಿಯು ಫೆನ್ಸಿಂಗ್ ಅನ್ನು ದಾಟಲು ಹೆಣಗಾಡುತ್ತದೆ. ಅದನ್ನು ದಾಟಿದ ನಂತರ, ಅದು ನೇರವಾಗಿ ಮೃಗಾಲಯದ ಕೀಪರ್ ಮಲಗಿರುವ ಹಾಸಿಗೆಗೆ ಹೋಗಿ ಆತನನ್ನು ಹಾಸಿಗೆಯಿಂದ ಹೊರ ಹಾಕಲು ನೋಡುತ್ತಾನೆ. 

ವಿಡಿಯೋದಲ್ಲಿ ಕಾಣಿಸುವಂತೆ ಆನೆ ಮರಿಯೊಂದು (Elephant calf) ತನ್ನ ತಾಯಿಯೊಂದಿಗೆ ಮರದ ಕೋಲುಗಳಿಂದ ಸುತ್ತಲೂ ಬೇಲಿಯಂತೆ ಕಟ್ಟಿದ ಸರಪಣಿಯೊಳಗೆ ಇರುತ್ತದೆ. ಈ ಸರಪಳಿಗೆ ಒಂದು ಗೇಟ್ ಇದ್ದು ಆ ಗೇಟ್‌ ಅನ್ನು ತೆರೆದು ಹೊರಗೆ ಬರಲು ಆನೆ ಮರಿ ಒದ್ದಾಡುತ್ತಿರುತ್ತದೆ. ಹಲವು ಪ್ರಯತ್ನಗಳ ನಂತರ ಅಲ್ಲಿಂದ ಹೊರಗೆ ಬರುವ ಆನೆ ಮರಿ ಹೊರಗೆ ಮಲಗಿದ್ದ ತನ್ನನ್ನು ನೋಡಿಕೊಳ್ಳುವವನ ಬಳಿ ಓಡಿ ಬರುತ್ತದೆ. ಬಂದವನೇ ಹಾಸಿಗೆಯಲ್ಲಿ ಮಲಗಿದ್ದ ಆತನನ್ನು ಎಳೆದು ಎಳೆದು ಹಾಸಿಗೆಯಿಂದ ಹೊರಗೆ ದೂಡಲು ಪ್ರಯತ್ನಿಸುತ್ತದೆ. ತನ್ನ ಕಾಲು ಹಾಗೂ ಸೊಂಡಿಲಿನಿಂದ ಆತನನ್ನು ದೂಡುವ ಆನೆ ಮರಿ ಆತ ಎದ್ದು ದೂರ ಹೋಗುವವರೆಗೂ ಅವನನ್ನು ಸುಮ್ಮನೆ ಕೂರಲು ಬಿಡುವುದಿಲ್ಲ ಇದು ನೋಡುಗರಿಗೆ ಮುದ ನೀಡುತ್ತಿದೆ. 
 

Follow Us:
Download App:
  • android
  • ios