Child Health : ನಿಮ್ಮ ಮಗು ಏನೂ ತಿನ್ತಿಲ್ವಾ? ಹಸಿವು ಹೆಚ್ಚಿಸಲು ಇಲ್ಲಿದೆ ಪರಿಹಾರ
Health tips for children: ಮಕ್ಕಳಿಗೆ ಊಟ ಮಾಡಿಸೋದು ಪಾಲಕರ ತಲೆನೋವು. ಹಸಿವಾಗಲ್ಲ ಎನ್ನುವ ಮಕ್ಕಳನ್ನು ಸುಧಾರಿಸೋದೆ ತಂದೆ –ತಾಯಿಗೆ ದೊಡ್ಡ ಸಮಸ್ಯೆ. ಏನ್ಕೊಟ್ಟರೂ ಬೇಡ ಎನ್ನುವ ಮಕ್ಕಳ ಹಸಿವನ್ನು ಮನೆ ಮದ್ದಿನ ಮೂಲಕವೇ ಹೆಚ್ಚಿಸಬಹುದು.
ಊಟ (Meals) ಬೇಡ, ತಿಂಡಿ ಸೇರಲ್ಲ, ನೀರು (Water) ಕುಡಿಯೋದಿಲ್ಲ, ಹಣ್ಣು (Fruit) ಮುಟ್ಟೋದಿಲ್ಲ. ಈ ಮಕ್ಕಳ ಹೊಟ್ಟೆಗೆ ಆಹಾರ ಸೇರ್ಸೋದೆ ದೊಡ್ಡ ಸಮಸ್ಯೆಯಾಗಿದೆ ಎಂತಾ ಬಹುತೇಕ ಪಾಲಕರು ಹೇಳ್ತಿರುತ್ತಾರೆ. ಮಕ್ಕಳ (Children) ಹಸಿವು ಹೆಚ್ಚಾಗೋಕೆ ಮಾತ್ರೆ, ಔಷಧಿ ಇದ್ದರೆ ಕೊಡಿ ಡಾಕ್ಟರ್ ಎನ್ನುವವರಿದ್ದಾರೆ. ಮಕ್ಕಳ ಊಟ ತಾಯಂದಿರ ದೊಡ್ಡ ತಲೆ ನೋವು. ಆಹಾರ ತಿಂದಿಲ್ಲವೆಂದ್ರೆ ಮಕ್ಕಳು ಆರೋಗ್ಯ ಹದಗೆಡುತ್ತೆ. ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಸಿಗುವುದಿಲ್ಲ. ಹಸಿ ತರಕಾರಿ, ಬೇಳೆ,ಕಾಳು, ಡ್ರೈಫ್ರೂಟ್ಸ್ ಗಳನ್ನು ಮಕ್ಕಳಿಗೆ ನೀಡ್ಲೇಬೇಕು. ಸರಿಯಾದ ಸಮಯದಲ್ಲಿ ಸರಿಯಾದ ಆಹಾರ ಸಿಕ್ಕದೆ ಮಾತ್ರ ಮಕ್ಕಳು ಆರೋಗ್ಯ ಸುಧಾರಿಸಿ, ಮಕ್ಕಳು ಸದೃಢವಾಗಿರಲು ಸಾಧ್ಯ. ಇದಕ್ಕೆ ಪಾಲಕರು ಏನೆಲ್ಲ ಪ್ರಯತ್ನ ನಡೆಸ್ತಾರೆ. ಎಂಥ ರುಚಿಯಾದ ಆಹಾರ ಮುಂದಿಟ್ಟರೂ ಮಕ್ಕಳು ಮಾತ್ರ ತಿನ್ನೋದಿಲ್ಲ. ಮೊದಲು ಮಕ್ಕಳ ಹಸಿವನ್ನು ಹೆಚ್ಚಿಸಬೇಕು. ಇಂದು ಮಕ್ಕಳ ಹಸಿವು ಹೆಚ್ಚಾಗುವ ಆಹಾರದ ಬಗ್ಗೆ ಮಾಹಿತಿ ನೀಡ್ತೇವೆ.
ಹಾಲು ಕುಡಿಯದ ಮಕ್ಕಳಿಗೆ ಏನ್ಮಾಡ್ಬೇಕು ? : ಹತ್ತರಲ್ಲಿ 8 ಮಕ್ಕಳು ಹಾಲು ಕಂಡ್ರೆ ದೂರ ಓಡ್ತಾರೆ. ಹಾಲಿಗೆ ಸಕ್ಕರೆ ಹಾಕಿ ನೀಡಿದ್ರೂ ಕುಡಿಯೋದಲ್ಲಿ. ಮಕ್ಕಳಿಗೆ ಹಾಲು ಅತ್ಯಗತ್ಯ. ಅಂಥ ಸಂದರ್ಭದಲ್ಲಿ ಪಾಲಕರು ಮಕ್ಕಳಿಗೆ ಡೈರಿ ಉತ್ಪನ್ನಗಳನ್ನು ನೀಡಿ. ಹಾಲಿನ ಬದಲು ಮಕ್ಕಳು ಮೊಸಲು, ಚೀಸ್ ಇಷ್ಟಪಡ್ತಿದ್ದರೆ ಅದನ್ನು ನೀಡಿ. ಕೆಲ ಮಕ್ಕಳು ಮಿಲ್ಕ್ ಶೇಕ್ ಇಷ್ಟಪಡ್ತಾರೆ. ಅಂಥವರಿಗೆ ನೀವು ಮಿಲ್ಕ್ ಶೇಕ್ ನೀಡ್ಬಹುದು.
ಕಡಲೆಕಾಯಿ : ಕಡಲೆಕಾಯಿ ಹಸಿವನ್ನು ಹೆಚ್ಚಿಸುತ್ತದೆ. ಅಲ್ಲದೆ ಪ್ರೊಟೀನ್ ಉತ್ತೇಜಿಸುವ ಅಂಶಗಳು ಇದ್ರಲ್ಲಿದೆ. ಇದು ಮಕ್ಕಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಹಸಿ ಕಡಲೆಕಾಯಿಯನ್ನು ಮಕ್ಕಳು ತಿನ್ನುವುದಿಲ್ಲ. ಹಾಗಾಗಿ ಕಡಲೆಕಾಯಿಯ ರುಚಿ ಹೆಚ್ಚಿಸಿ ಅವರಿಗೆ ನೀಡಿ. ಮಕ್ಕಳಿಗೆ ಕಡಲೆಕಾಯಿಯನ್ನು ಹುರಿದು ಅಥವಾ ಕಡಲೆಕಾಯಿಯಲ್ಲಿ ಸ್ವೀಟ್ ತಯಾರಿಸಿ ನೀಡಿ.
ಕೆಲವೊಂದು ಮನೆ ಮದ್ದು :
ಶುಂಠಿ – ಜೇನುತುಪ್ಪ : ರುಚಿಯಾದ ಆಹಾರವನ್ನೇ ಮಕ್ಕಳು ತಿನ್ನೋದಿಲ್ಲ ಇನ್ನು ಇದನ್ನು ಸೇವನೆ ಮಾಡ್ತಾರಾ ಎಂದು ನೀವು ಪ್ರಶ್ನೆ ಮಾಡ್ಬಹುದು. ಮಕ್ಕಳ ಹಸಿವು ಹೆಚ್ಚಾಗ್ಬೇಕು, ಒಳ್ಳೆ ಆಹಾರ ತಿನ್ನಬೇಕೆಂದ್ರೆ ನೀವು ಕಷ್ಟಪಟ್ಟಾದ್ರೂ ಶುಂಠಿ – ಜೇನುತುಪ್ಪ ತಿನ್ನಿಸಲೇಬೇಕು. ಶುಂಠಿ ಪುಡಿಗೆ ಜೇನುತುಪ್ಪ ಸೇರಿಸಿ ಸ್ವಲ್ಪ ತಿನ್ನಲು ನೀಡಿ. ಇದಲ್ಲದೆ ನೀವು ಪುದೀನಾ ಚಟ್ನಿಯನ್ನು ಕೂಡ ಮಕ್ಕಳಿಗೆ ನೀಡಬಹುದು. ಪುದೀನಾ ಮಕ್ಕಳ ಹಸಿವನ್ನು ಹೆಚ್ಚಿಸುತ್ತದೆ. ದೋಸೆ, ಚಪಾತಿ ಜೊತೆ ಪುದೀನಾ ಚಟ್ನಿಯನ್ನು ಮಕ್ಕಳಿಗೆ ತಿನ್ನಿಸುವ ಪ್ರಯತ್ನ ಮಾಡಿ.
ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಲೆ ತಿಂದು ಆರೋಗ್ಯ ಕಾಪಾಡ್ಕೊಳ್ಳಿ
ಪ್ರತಿ 2 ಗಂಟೆಗೊಮ್ಮೆ ಏನನ್ನಾದ್ರೂ ತಿನ್ನಿಸಿ : ಒಂದೇ ಬಾರಿ ಮಕ್ಕಳಿಗೆ ಹೆಚ್ಚು ಆಹಾರ ಸೇವನೆ ಸಾಧ್ಯವಾಗುವುದಿಲ್ಲ. ಅದೇ ಕಾರಣಕ್ಕೆ ಅನೇಕ ಮಕ್ಕಳು ಪ್ಲೇಟ್ ನಲ್ಲಿ ಆಹಾರ ಬಿಡ್ತಾರೆ. ಹಾಗಾಗಿ 2 ಗಂಟೆಗೊಮ್ಮೆ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡ್ತಿರಿ. ಇದ್ರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯು ಹೆಚ್ಚು ಆಹಾರವನ್ನು ತಿನ್ನಲು ಮತ್ತು ಜೀರ್ಣಿಸಿಕೊಳ್ಳಲು ಉತ್ತೇಜಿಸುತ್ತದೆ.
ಮೊಸರು : ಮೊಸರು ಪ್ರೋಬಯಾಟಿಕ್ ಬ್ಯಾಕ್ಟೀರಿಯಾ ಮತ್ತು ಕ್ಯಾಲ್ಸಿಯಂ ಹೊಂದಿರುತ್ತದೆ. ಮೊಸರಿನ ಸೇವನೆಯಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಹಸಿವು ಕೂಡ ಹೆಚ್ಚುತ್ತದೆ.
ಕಿತ್ತಳೆ ಅಥವಾ ನಿಂಬೆ, ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು
ಮಸಾಲೆ : ಅಡುಗೆ ಮಾಡುವಾಗ ಮಕ್ಕಳ ಹಸಿವನ್ನು ಹೆಚ್ಚಿಸಲು ಸಹಾಯ ಮಾಡುವ ಮಸಾಲೆಯನ್ನು ಬಳಸಿ. ಕೊತ್ತಂಬರಿ ಪುಡಿ, ದಾಲ್ಚಿನ್ನಿ, ಸೋಂಪು ಸೇರಿದಂತೆ ಅನೇಕ ಮಸಾಲೆಗಳು ಹಸಿವು ಹೆಚ್ಚಿಸುತ್ತವೆ.
ನಿಂಬೆ ಪಾನಕ : ಮಕ್ಕಳಿಗೆ ದಿನಕ್ಕೆ 1-2 ಗ್ಲಾಸ್ ನಿಂಬೆ ಪಾನಕವನ್ನು ನೀಡಿ. ನಿಂಬೆ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಮಗುವಿನ ಹಸಿವನ್ನು ಹೆಚ್ಚಿಸುತ್ತದೆ.