Asianet Suvarna News Asianet Suvarna News

ಅಪ್ಪನೇ ಹಂಗೆ. ಇನ್ನು ಮಗಳ ಜೀವನ ಹೇಗಿರಬೇಡ !

ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ ಕಶ್ಯಪ್ ಬಾಯ್‌ಫ್ರೆಂಡ್ ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಬಾಯ್ ಫ್ರೆಂಡ್ ಜೊತೆಗಿನ ಫೋಟೋವನ್ನು ಸದಾ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಆಕೆ ವೀಡಿಯೋವೊಂದರಲ್ಲಿ ನಾನು ಸಹ ಕೆಟ್ಟ ಸಂಬಂಧವನ್ನು ಹೊಂದಿದ್ದೆ ಎಂದು ಹೇಳಿಕೊಂಡಿದ್ದಾರೆ.

Anurag Kashyaps Daughter Aaliyah Reveals She Was In A Toxic Relationship Vin
Author
First Published Sep 3, 2022, 4:45 PM IST

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಮಗಳು ಆಲಿಯಾ ಕಶ್ಯಪ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಆಗಾಗ ಇನ್‌ಸ್ಟಾಗ್ರಾಂನಲ್ಲಿ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಈ ಸ್ಟಾರ್ ಕಿಡ್ ತಮ್ಮದೇ ಆದ ಯೂಟ್ಯೂಬ್ ಪೇಜ್ ಹಾಗೂ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹೀಗೆ ಇತ್ತೀಚಿಗೆ ಆಲಿಯಾ ಕಶ್ಯಪ್ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ. ಸೆಪ್ಟೆಂಬರ್ 1 ರಂದು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ 'ಗರ್ಲ್ ಟಾಕ್ ಎಪಿಸೋಡ್ 5' ಹೆಸರಿನ ವೀಡಿಯೊದಲ್ಲಿ, ಅನುರಾಗ್ ಅವರ ಮಗಳು ಇಂಟರ್ನೆಟ್ ಬಳಕೆದಾರರ ಹಲವಾರು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ನೀವು ಯಾವಾಗಲಾದರೂ ಕೆಟ್ಟ ಸಂಬಂಧವನ್ನು ಹೊಂದಿದ್ದೀರಾ? ಮತ್ತು ನೀವು ಅದರಿಂದ ಹೇಗೆ ಹೊರಬಂದಿದ್ದೀರಿ ? ಎಂದು ವಿವರವಾಗಿ ಕೇಳಿದಾಗ ಆಲಿಯಾ ಕಶ್ಯಪ್ ಉತ್ತರ ನೀಡಿದ್ದಾರೆ.

ನಾನು ಕೆಟ್ಟ ಸಂಬಂಧವನ್ನು ಹೊಂದಿದ್ದೆ ಎಂದ ಅನುರಾಗ್ ಕಶ್ಯಪ್ ಮಗಳು
'ನಾನು ಸಹ ಕೆಟ್ಟ ಸಂಬಂಧ (Relationship)ವನ್ನು ಹೊಂದಿದ್ದೇನೆ ಮತ್ತು ನಾನು ಅದರ ಬಗ್ಗೆ ಸುಳ್ಳು ಹೇಳಲು ಹೋಗುವುದಿಲ್ಲ. ಅದರಿಂದ ಹೊರಬರುವುದು ಸರಳವಾದ ವಿಷಯವಲ್ಲ, ವಿಶೇಷವಾಗಿ ನೀವು ಸ್ವಲ್ಪ ಸಮಯದವರೆಗೆ ಒಟ್ಟಿಗೆ ಇದ್ದರೆ ಬೇರೆಯಾಗುವುದು ತುಂಬಾ ಕಷ್ಟಕರವಾಗುತ್ತದೆ' ಎಂದಿದ್ದಾರೆ.

ತಾಪ್ಸಿ ಪನ್ನುಗಿಂತ ನನ್ನ ಸ್ತನ ದೊಡ್ಡದಿದೆ; ದೋಬಾರಾ ನಟಿ ಕಾಲೆಳೆದ ನಿರ್ದೇಶಕ ಅನುರಾಗ್ ಕಶ್ಯಪ್

ಕೆಟ್ಟ ಸಂಬಂಧದಿಂದ ಹೊರಬರಲು ತಾನು ಹೇಗೆ ಯಶಸ್ವಿಯಾದೆ ಎಂಬುದನ್ನು ಸಹ ಆಲಿಯಾ ಕಶ್ಯಪ್ ವಿವರಿಸಿದ್ದಾರೆ. 'ನನಗೆ ಸಹಾಯ ಮಾಡಿದ್ದು, ನಾನು ನನ್ನ ಆದ್ಯತೆಯ ಅಗತ್ಯವಿದೆ ಎಂಬ ಅರಿವು. ನೀವು ಏನು ಮಾಡಬೇಕು ಎಂಬುದನ್ನು ನೀವು ನಿರ್ಧರಿಸಬೇಕು. ನೀವು ಯಾವಾಗಲೂ ನಿಮ್ಮನ್ನು ಮೊದಲ ಸ್ಥಾನದಲ್ಲಿರಿಸಬೇಕು. ಸಂಬಂಧಗಳಿಂದ ನಿಮ್ಮ ಮಾನಸಿಕ ಆರೋಗ್ಯಕ್ಕೆ (Mental health) ಹಾನಿಯಾಗುತ್ತಿದೆ, ಅದು ನಿಮ್ಮ ಮೇಲೆ ಬಲವಾಗಿ ಪರಿಣಾಮ ಬೀರುತ್ತಿದೆ ಎಂದು ತಿಳಿದೊಡನೆ ಅದರಿಂದ ಹೊರಬರುವುದು ಮುಖ್ಯವಾಗಿದೆ' ಎಂದು ಹಂಚಿಕೊಂಡಿದ್ದಾರೆ.

ಆಲಿಯಾ. ಆಲಿಯಾ ಮತ್ತು ಶೇನ್ ಗ್ರೆಗೊಯಿರ್ ಪ್ರಸ್ತುತ ಡೇಟಿಂಗ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ, ಸ್ಟಾರ್ ಯಂಗ್ ಸ್ಟಾರ್ ಆಗಾಗ್ಗೆ ತನ್ನ ಮತ್ತು ತನ್ನ ಗೆಳೆಯ (Boyfriend) ಒಟ್ಟಿಗೆ ಇರುವ ಚಿತ್ರಗಳನ್ನು ಪೋಸ್ಟ್ ಮಾಡುತ್ತಾರೆ. ಅದರ ಬಗ್ಗೆ ತುಂಬಾ ಮುಕ್ತವಾಗಿ ಮಾತನಾಡುತ್ತಾರೆ. ಅನುರಾಗ್‌ನ ಮಾಜಿ ಪತ್ನಿ ಆರತಿ ಬಜಾಜ್ ಆಲಿಯಾಳ ತಾಯಿ.

ಬಾಯ್‌ಫ್ರೆಂಡ್ ಜೊತೆ ಲಿಪ್‌ಲಾಕ್‌, ಆಲಿಯಾ ಕಶ್ಯಪ್ ಹಾಟ್ ಫೋಟೋ ವೈರಲ್‌
ಇದೀಗ ಆಲಿಯಾ ಕಶ್ಯಪ್ ಬಾಯ್ ಫ್ರೆಂಡ್ ಶಾನ್ ಗ್ರೆಗೊಯಿರ್ ಜೊತೆಗಿನ ಮತ್ತೊಂದಿಷ್ಟು ಪೋಟೋವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ ಆಲಿಯಾ ಮತ್ತು ಶೇನ್ ಇಬ್ಬರು 2 ವರ್ಷಗಳ ಪ್ರೀತಿ (Love)ಯನ್ನು ಸಂಭ್ರಮಿಸಿದ್ದಾರೆ. ಶಾನ್ ಗ್ರೆಗೊಯಿರ್‌ನನ್ನು ಹುಚ್ಚಳಂತೆ ಪ್ರೀತಿಸುವ ಅಲಿಯಾ ಬಾಯ್ ಪ್ರೆಂಡ್ ಜೊತೆ ಲಿಪ್ ಲಾಕ್ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದರು. ತಮ್ಮ ಪ್ರೀತಿಗೆ ಎರಡು ವರ್ಷ ತುಂಬಿದ ಖುಷಿಗೆ ಬಾಯ್ ಫ್ರೆಂಡ್ ಶಾನ್ ಜೊತೆ ಪಾರ್ಟಿ ಮಾಡಿರುವ  ಆಲಿಯಾ ಸಾಮಾಜಿಕ ಜಾಲತಾಣದಲ್ಲಿ (Social media) ಫೋಟೋ ಹಂಚಿಕೊಂಡಿದ್ದಾರೆ. ಆಲಿಯಾ ಹಾಟ್‌ಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

Single Fathers: ಬಾಲಿವುಡ್‌ನ ಪ್ರಖ್ಯಾತ ಸಿಂಗಲ್ ಅಪ್ಪಂದಿರಿವರು, ಅಮ್ಮನೂ ಆಗಿದ್ದಾರೆ!

ಆಲಿಯಾ ತನ್ನ ಉಡುಗೆ (Dress) ಮತ್ತು ಬೋಲ್ಡ್‌ನೆಸ್‌ನಿಂದ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುತ್ತಾರೆ. ಆದರೆ ಬಾಯ್‌ಫ್ರೆಂಡ್ ಶಾನ್ ಸದಾ ಆಲಿಯಾ ಜೊತೆ ನಿಂತು ಪ್ರೇಯಸಿಗೆ ಸಾಥ್ ನೀಡುತ್ತಾರೆ. ಆಲಿಯಾ ಪ್ರೀತಿಗೆ ಮನೆಯವರ ಒಪ್ಪಿಗೆ ಕೂಡ ಸಿಕ್ಕಿದೆ. ಹಾಗಾಗಿ ಯಾವುದೇ ಭಯವಿಲ್ಲದೇ ಆಲಿಯಾ ಬಾಯ್‌ಫ್ರೆಂಡ್ ಜೊತೆಗಿನ ಫೋಟೋವನ್ನು ಶೇರ್ ಮಾಡುತ್ತಿರುತ್ತಾರೆ. 

Follow Us:
Download App:
  • android
  • ios