Asianet Suvarna News Asianet Suvarna News

ತಾಪ್ಸಿ ಪನ್ನುಗಿಂತ ನನ್ನ ಸ್ತನ ದೊಡ್ಡದಿದೆ; ದೋಬಾರಾ ನಟಿ ಕಾಲೆಳೆದ ನಿರ್ದೇಶಕ ಅನುರಾಗ್ ಕಶ್ಯಪ್

ರಣ್ವೀರ್ ಸಿಂಗ್ ಫೋಟೋಶೂಟ್ ಅನ್ನು ಅನುರಾಗ್ ಕಶ್ಯಪ್ ಸಮರ್ಥಿಕೊಂಡಿದ್ದಾರೆ. ಈ ವೇಳೆ ನಿರೂಪಕ ಅನುರಾಗ್ ಕಶ್ಯಪ್ ಫೋಟೋವನ್ನು ಪೋಸ್ ಮಾಡುವ ಬಗ್ಗೆ ತಮಾಷೆ ಮಾಡಿದ್ದಾರೆ. ಆಗ ತಕ್ಷಣ ತಾಪ್ಸಿ ಪನ್ನು ನಾವು ಇಲ್ಲಿ ಹಾರರ್ ಶೋ ಪ್ರಾರಂಭಿಸುವುದು ಬೇಡ ಎಂದು ಹೇಳಿದರು. 

Anurag Kashyap says That His B*obs Are Bigger Than That Of Taapsee Pannu sgkl
Author
Bengaluru, First Published Aug 16, 2022, 12:37 PM IST

ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ವಿವಾದಾತ್ಮಕ ಹೇಳಿಕೆ ಮೂಲಕ ಆಗಾಗ ಸದ್ದು ಮಾಡುತ್ತಿರುತ್ತಾರೆ. ಅನುರಾಗ್ ಸದ್ಯ ಮುಂದಿನ ಸಿನಿಮಾದ ರಿಲೀಸ್ ಬ್ಯುಸಿಯಲ್ಲಿದ್ದಾರೆ. ಅನುರಾಗ್ ನಿರ್ದೇಶನದ ದೋಬಾರಾ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾದಲ್ಲಿ ತಾಪ್ಸಿ ಪನ್ನು ನಾಯಕಿಯಾಗಿ ಮಿಂಚಿದ್ದಾರೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು ತಾಪ್ಸಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ತಾಪ್ಸಿ ಪನ್ನು ಮತ್ತು ಅನುರಾಗ್ ಕಶ್ಯಪ್ ಇಬ್ಬರು ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಅನುರಾಗ್ ಕಶ್ಯಪ್ ತಾಪ್ಸಿ ಪನ್ನು ಬಗ್ಗೆ ಹೇಳಿದ್ದ ಮಾತು ವೈರಲ್ ಆಗುತ್ತಿದೆ. ಕಶ್ಯಪ್ ಮಾತು ಕೇಳಿ ನೆಟ್ಟಿಗರು ನಾನಾರೀತಿ ಕಾಮೆಂಟ್ ಮಾಡುತ್ತಿದ್ದಾರೆ. 

ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಇಬ್ಬರು ಸಂದರ್ಶನ ನೀಡುವ ವೇಳೆ ರಣ್ವೀರ್ ಸಿಂಗ್ ವಿಚಾರ ಬಂದಿದೆ. ಇತ್ತೀಚಿಗಷ್ಟೆ ರಣ್ವೀರ್ ಸಿಂಗ್ ಬೆತ್ತಲಾಗಿ ಫೋಟೋಶೂಟ್ ಮಾಡಿಸಿಕೊಂಡಿರುವುದು ಗೊತ್ತಿರುವ ವಿಚಾರ. ರಣ್ವೀರ್ ಸಿಂಗ್ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆಲ್ಲದೆ ಪರವಿರೋಧ ಚರ್ಚೆ ಕೂಡ ಪ್ರಾರಂಭವಾಗಿತ್ತು. ಅನೇಕರು ರಣ್ವೀರ್ ಸಿಂಗ್ ಪರ ಬ್ಯಾಟ್ ಬೀಸಿದ್ರೆ ಇನ್ನು ಕೆಲವರು ಆಕ್ರೋಶ ಹೊರಹಾಕಿದ್ರು. ಅಲ್ಲದೇ ಬೆತ್ತಲಾಗಿ ಕ್ಯಾಮರಾ ಮುಂದೆ ಪೋಸ್ ಕೊಟ್ಟಿದ್ದಕ್ಕೆ ರಣ್ವೀರ್ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿದೆ. 

ರಣ್ವೀರ್ ಸಿಂಗ್ ಫೋಟೋಶೂಟ್ ಅನ್ನು ಅನುರಾಗ್ ಕಶ್ಯಪ್ ಸಮರ್ಥಿಕೊಂಡಿದ್ದಾರೆ. ಈ ವೇಳೆ ನಿರೂಪಕ ಅನುರಾಗ್ ಕಶ್ಯಪ್, ರಣ್ವೀರ್ ಸಿಂಗ್ ಹಾಗೆ ಪೋಸ್ ಕೊಡುವ ಬಗ್ಗೆ ತಮಾಷೆ ಮಾಡಿದರು. ಆಗ ತಕ್ಷಣ ತಾಪ್ಸಿ ಪನ್ನು 'ನಾವು ಇಲ್ಲಿ ಹಾರರ್ ಶೋ ಪ್ರಾರಂಭಿಸುವುದು ಬೇಡ' ಎಂದು ಹೇಳಿದರು. ಆಗ ನಿರೂಪಕ ತಾಪ್ಸಿ ಪನ್ನು ಹೊಟ್ಟೆಕಿಚ್ಚು ಪಡುತ್ತಿದ್ದಾರೆ ಎಂದು ಹೇಳಿದರು. ಆಗ ಅನುರಾಗ್ ಕಶ್ಯಪ್ 'ಹೌದು ಅವಳಿಗೆ ಹೊಟ್ಟೆಯುರಿಯಾಗುತ್ತಿದೆ ಯಾಕೆಂದರೆ ಅವಳಿಗಿಂತ ನಾನು ದೊಡ್ಡ ಸ್ತನ ಹೊಂದಿದ್ದೀನಿ ಅಂತ' ಅಂತ ಹೇಳಿದರು. ಅನುರಾಗ್ ಕಶ್ಯಪ್ ಮಾತು ತಾಪ್ಸಿಗೆ ಶಾಕ್ ನೀಡಿದೆ. 

ವಿಶೇಷ ಗಿಫ್ಟ್ ನೀಡಿದ ಅಭಿಮಾನಿಯನ್ನು ತಬ್ಬಿಕೊಂಡ ತಾಪ್ಸಿ; ವಿಡಿಯೋ ವೈರಲ್

ಈ ಮಾತಿನ ಬಳಿಕ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಸ್ಮೈಲ್ ಇಮೋಜಿ ಹಾಕಿ ಅನುರಾಗ್ ಕಾಲೆಳೆಯುತ್ತಿದ್ದಾರೆ. ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿ ಇಂಥ ಸುಂದರ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಎಂದು ಹೇಳುತ್ತಿದ್ದಾರೆ. ಮತ್ತೊಬ್ಬ ವ್ಯಕ್ತಿ ಕಾಮೆಂಟ್ ಮಾಡಿ ಭಾವನಾತ್ಮಕವಾಗಿ ಡ್ಯಾಮೇಜ್ ಮಾಡಿದ್ರಿ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ತಾಪ್ಸಿ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. 

ಸಾಕಿಬ್ ಸಲೀಮ್‌ನಿಂದ ಮಥಿಯಾಸ್ ಬೋವರೆಗೆ ತಾಪ್ಸೀ ಪನ್ನು ಲವ್‌ಲೈಫ್‌ನ ಹೀರೋಗಳು

ಅಂದಹಾಗೆ ಇತ್ತೀಚಿಗಷ್ಟೆ ತಾಪ್ಸಿ ಪಾಪರಾಜಿಗಳ ಜೊತೆ ಕಿತ್ತಾಡಿಕೊಂಡಿದ್ದರು. ಪ್ರಮೋಷನ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ತಾಪ್ಸಿಗೆ ಪಾಪರಾಜಿಗಳು ಎದುರಾದರು. ಕ್ಯಾಮರಾಗೆ ಪೋಸ್ ನೀಡುವಂತೆ ಕೇಳಿದರು. ಆದರೆ ತಾಪ್ಸಿ ಪೋಸ್ ಕೊಟ್ಟಿಲ್ಲ. ತನಗೆ ನೀಡಿದ ಸೂಚನೆ ಅನುಸರಿಸುತ್ತೇನೆ ಎಂದು ತಾಪ್ಸಿ ಹೊರಟರು. ಆಗ ಪಾಪರಾಜಿಗಳು ನಿಮಗಾಗಿ ಒಂದು ಗಂಟೆಗೂ ಅಧಿಕ ಸಮಯದಿಂದ ಕಾಯುತ್ತಿದ್ದೇವೆ ಎಂದು ಹೇಳಿದರು. ಇದರಿಂದ ಕೆಂಡವಾದ ತಾಪ್ಸಿ ನನ್ನ ತಪ್ಪು ಹೇಗಾಗುತ್ತದೆ ಎಂದು ಪಾಪರಾಜಿಗಳನ್ನು ತರಾಟೆ ತೆಗೆದುಕೊಂಡರು.  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

Follow Us:
Download App:
  • android
  • ios