Asianet Suvarna News Asianet Suvarna News

Single Fathers: ಬಾಲಿವುಡ್‌ನ ಪ್ರಖ್ಯಾತ ಸಿಂಗಲ್ ಅಪ್ಪಂದಿರಿವರು, ಅಮ್ಮನೂ ಆಗಿದ್ದಾರೆ!

ಬಾಲಿವುಡ್‌ನ ಖ್ಯಾತ ಸಿಂಗಲ್ ಮದರ್‌ಗಳ ಬಗ್ಗೆ ಕೇಳಿರುತ್ತೀರಿ. ಸಿಂಗಲ್‌ ಫಾದರ್‌ಗಳ ಬಗ್ಗೆ ಕೇಳಿದ್ದೀರಾ? 

Famous single fathers of Bollywood and who take care of kids like mothers
Author
Bengaluru, First Published Feb 16, 2022, 4:14 PM IST

ಅಮ್ಮನಾಗಲೀ (Mother), ಅಪ್ಪನಾಗಲೀ (Father), ಸಿಂಗಲ್ ಪೇರೆಂಟಿಂಗ್ (Single Parenting) ತುಂಬಾ ಕಷ್ಟ. ಒಂಟಿ ತಂದೆಯಾಗಿರುವುದು ತಾಯಿಗಿಂತಲೂ ಕಷ್ಟವಾಗಬಹುದು. ಮಗುವನ್ನು ತಾಯಿಗಿಂತ ಉತ್ತಮವಾಗಿ ಯಾರೂ ಅರ್ಥಮಾಡಿಕೊಳ್ಳುವುದಿಲ್ಲ ಎಂದು ಯಾವಾಗಲೂ ಹೇಳಲಾಗುತ್ತದೆ. ಆದರೆ ಅನೇಕ ಬಾರಿ ತಂದೆ ತಮ್ಮ ಮಕ್ಕಳನ್ನು ಬೆಳೆಸುವಲ್ಲಿ ಅತ್ಯುತ್ತಮವಾದ ಕೆಲಸ ಮಾಡುತ್ತಾರೆ. ಸಿಂಗಲ್ ಫಾದರ್ ಪೋಷಕನಾಗಿರುವ ಏಕೈಕ ಜವಾಬ್ದಾರಿಯನ್ನು ಹೊಂದಿರುವಾಗ, ಅವನು ಹೆಚ್ಚು ಸಂವೇದನಾಶೀಲನಾಗಿರುತ್ತಾನೆ ಮತ್ತು ತನ್ನ ಮಗುವಿನ ಅಗತ್ಯತೆಗಳನ್ನು ಪೂರೈಸಲು ಹೆಚ್ಚು ಸುಲಭವಾಗಿ ಲಭ್ಯವಿರುತ್ತಾನೆ. ಬಾಲಿವುಡ್‌ನ (Bollywood) ಈ ಕೆಳಗಿನ ಸಿಂಗಲ್ ಡ್ಯಾಡ್‌ಗಳು ಇತರ ಪುರುಷರಿಗೆ ತಂದೆಯ ಹೊಣೆಗಾರಿಕೆಗಳ ಬಗ್ಗೆ ಮಾರ್ಗದರ್ಶನ ಮಾಡಬಲ್ಲರು. 

1. ಕರಣ್ ಜೋಹರ್ (Karan Johar)
ನಿರ್ಮಾಪಕ, ನಿರ್ದೇಶಕ, ನಟ ಮತ್ತು ಫ್ಯಾಷನ್ ಡಿಸೈನರ್ ಆಗಿರುವ ಕರಣ್ ಜೋಹರ್ ಸಿಂಗಲ್ ಡ್ಯಾಡಿಯೂ ಹೌದು. ಕೆಲ ವರ್ಷಗಳ ಹಿಂದೆ ಅವರು ತಮ್ಮ ಮಕ್ಕಳ ಜನನವನ್ನು ಘೋಷಿಸಿದರು. ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ತಂದೆಯಾದರು. ಅವರು ತಮ್ಮ ಮಕ್ಕಳಿಗೆ ತಮ್ಮ ತಂದೆ-ತಾಯಿಯ ಹೆಸರನ್ನು ಇಟ್ಟಿದ್ದಾರೆ- ಯಶ್ ಮತ್ತು ರೂಹಿ. ಮಕ್ಕಳೊಂದಿಗೆ ಇರುವುದಕ್ಕಾಗಿ ತಮ್ಮ ತಮ್ಮ ಬಾಲಿವುಡ್ ಕೆಲಸಗಳನ್ನು ಹಿಂದೆ ಹಾಕುವುದೂ ಉಂಟು. ಪಿತೃತ್ವವನ್ನು ಅನುಭವಿಸುವುದು ಅವರ ಕನಸಾಗಿತ್ತು ಮತ್ತು ಅವರು ಅದನ್ನು ಅನುಭವಿಸುತ್ತಿದ್ದಾರೆ!

2. ಹೃತಿಕ್ ರೋಷನ್ (Hrithik Roshan)
ಈ ಬಾಲಿವುಡ್ ಹಾರ್ಟ್‌ಥ್ರೋಬ್ ತನ್ನ ಪತ್ನಿ ಸೂಸನ್ ಖಾನ್ ಜೊತೆಗಿನ ತನ್ನ 13 ವರ್ಷಗಳ ಸುದೀರ್ಘ ಸಂಬಂಧವನ್ನು ಕೊನೆಗೊಳಿಸಿದ್ದಾರೆ ಮತ್ತು ಈಗ ತನ್ನ ಮಕ್ಕಳಾದ ಹ್ರೆದಾನ್ ಮತ್ತು ಹ್ರೇಹಾನ್ ಅನ್ನು ಏಕಾಂಗಿಯಾಗಿ ನೋಡಿಕೊಳ್ಳುತ್ತಿದ್ದಾರೆ. ಅವರು ಮಕ್ಕಳನ್ನು ನೋಡಿಕೊಳ್ಳುತ್ತಾನೆ, ರಜೆಯಲ್ಲಿ ಕರೆದುಕೊಂಡು ಹೋಗುತ್ತಾನೆ ಮತ್ತು ಸಂತೋಷವಾಗಿರುತ್ತಾರೆ. ಹೃತಿಕ್ ತಮ್ಮ ಮಕ್ಕಳಿಗೆ ಜವಾಬ್ದಾರಿ, ಆತ್ಮವಿಶ್ವಾಸ ಕಲಿಸಲು ಎಚ್ಚರ ವಹಿಸಿದ್ದಾರೆ. ಅವರೆಂದೂ ಮಕ್ಕಳ ವಿಷಯಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಹೃತಿಕ್‌ ಬಹುಶಃ ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಸಿಂಗಲ್ ಡ್ಯಾಡ್‌ಗಳಲ್ಲಿ ಒಬ್ಬರು.

ಬಾಲಿವುಡ್‌ನ ಸಿಂಗಲ್ ಮದರ್ಸ್ ತಾಯ್ತನದ ಬಗ್ಗೆ ಹೇಳುವುದಿಷ್ಟು

3. ತುಷಾರ್ ಕಪೂರ್ (Tushar Kapoor)
'ಕ್ಯಾ ಕೂಲ್ ಹೇ ಹಮ್'ನ ಈ ತಾರೆ 2016ರಲ್ಲಿ ಐವಿಎಫ್ (IVF) ಮತ್ತು ಬಾಡಿಗೆ ತಾಯ್ತನದ ಮೂಲಕ ಹೆಮ್ಮೆಯ ಸಿಂಗಲ್ ಪೇರೆಂಟ್ ಆದರು. ಅವರು ತಮ್ಮ ಮಗ ಲಕ್ಷ್ಯನಿಗೆ ದೃಢನಿಶ್ಚಯದಿಂದ ಕೂಡಿದ ತಂದೆ. ಅವರ ಮಗ ಲಕ್ಷ್ಯ ಅವರ ಅತ್ಯಂತ ಸಂತೋಷದ ಮೂಲ. ತುಷಾರ್ ತಮ್ಮ ಪೇರೆಂಟಿಂಗ್ ಕರ್ತವ್ಯಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಲಕ್ಷ್ಯ ಅವರಂತೆಯೇ ಕಾಣುತ್ತಾನೆ ಎಂದು ತುಷಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಲಕ್ಷ್ಯ ಕಪೂರ್ ಮನೆಯ ಆಕರ್ಷಣೆಯ ಕೇಂದ್ರ ಮತ್ತು ಅಜ್ಜ ಜೀತೇಂದ್ರ ಅವರೊಂದಿಗೆ ಆಟವಾಡಲು ಇಷ್ಟಪಡುತ್ತಾನಂತೆ.4. ರಾಹುಲ್ ಬೋಸ್ (Rahul Bose)
ರಾಹುಲ್ ಸದಾ ಚಾರಿಟಿಗೆ ಸಾಕಷ್ಟು ದೇಣಿಗೆ ನೀಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಈ ಡೈನಾಮಿಕ್ ನಟ ತಮ್ಮ ವೈಯಕ್ತಿಕ ಜೀವನಕ್ಕೆ ಬಂದಾಗ ತುಂಬಾ ಪ್ರೊಟೆಕ್ಟಿವ್. ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಂದ ಆರು ಮಕ್ಕಳನ್ನು ದತ್ತು ಪಡೆದಿದ್ದಾರೆ. ಈ ಎಲ್ಲಾ ಮಕ್ಕಳಿಗೆ ಅವರು ಸಿಂಗಲ್ ತಂದೆ. ಹಿಂದಿ ಚಿತ್ರರಂಗದ ಬಹುಮುಖ ನಟರಲ್ಲಿ ಒಬ್ಬರಾದ ರಾಹುಲ್ 2007ರಲ್ಲಿ ಮಕ್ಕಳನ್ನು ದತ್ತು ಪಡೆದರು. ಅವರು ಮಾದಕ ವ್ಯಸನಿ ಮಕ್ಕಳ ಪುನರ್ವಸತಿ ಕೇಂದ್ರಗಳಿಗಾಗಿಯೂ ಕೆಲಸ ಮಾಡಿದ್ದಾರೆ. ಅವರನ್ನು ಅಸಾಂಪ್ರದಾಯಿಕ ನಟ ಎಂದು ಪರಿಗಣಿಸಲಾಗಿದೆ. ಬಾಲಿವುಡ್‌ನ ಕಡಿಮೆ ರೇಟಿಂಗ್ ಹೊಂದಿರುವ ಸಿಂಗಲ್ ಡ್ಯಾಡ್‌ಗಳಲ್ಲಿ ಒಬ್ಬರು.

ಸಂಗಾತಿ ಇಲ್ಲದೇ ಮಕ್ಕಳನ್ನು ಬೆಳೆಸುತ್ತಿದ್ದಾರೆ ಈ ಬಾಲಿವುಡ್ ಪೇರೆಂಟ್ಸ್

5. ರಾಹುಲ್ ದೇವ್ (Rahul Dev)
ಮಾಡೆಲ್, ನಟ, ವಾಣಿಜ್ಯೋದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತರಾದ ರಾಹುಲ್ ದೇವ್ ಈಗ ಮತ್ತೊಂದು ಪಾತ್ರವನ್ನು ನಿರ್ವಹಿಸುತ್ತಿದ್ದಾರೆ- ಅವರ 19 ವರ್ಷದ ಮಗ ಸಿದ್ಧಾಂತ್‌ಗೆ ಏಕೈಕ ಪೋಷಕರವರು, ಅವರ ಪತ್ನಿ 2009ರಲ್ಲಿ ಕ್ಯಾನ್ಸರ್‌ನಿಂದ ನಿಧನರಾದರು. ತಾಯಿಯನ್ನು ಕಳೆದುಕೊಂಡಿರುವ ಸಿದ್ಧಾಂತ್‌ಗೆ ರಾಹುಲ್ ಸಾಧ್ಯಾವಾದಾಗಲೆಲ್ಲ ಜೊತೆಯಾಗಿ ಇರುತ್ತಾರೆ. ವಿಚ್ಛೇದನವಾಗಲಿ ಅಥವಾ ದುರಂತವಾಗಲಿ, ಒಂಟಿ ತಂದೆಯಾಗಿರಲು ಸಾಕಷ್ಟು ಧೈರ್ಯ ಮತ್ತು ತಾಳ್ಮೆ ಬೇಕಾಗುತ್ತದೆ, 

6. ಅನುರಾಗ್ ಕಶ್ಯಪ್ (AnurAg kashyap)
ಸುಂದರಿ ಕಲ್ಕಿ (Kalki Koechlin) ಯೊಂದಿಗಿನ ಅನುರಾಗ್ ಅವರ ಮದುವೆ ಮತ್ತು ಎರಡು ವರ್ಷಗಳ ನಂತರ ಅವರ ಡೈವೋರ್ಸ್ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಆದರೆ ಇದು ಅನುರಾಗ್ ಅವರ ಎರಡನೇ ಮದುವೆ ಎಂಬುದು ಕೆಲವರಿಗೆ ತಿಳಿದಿಲ್ಲ. ಈ ಹಿಂದೆ ಆರತಿ ಬಜಾಜ್ ಅವರನ್ನು ವಿವಾಹವಾಗಿದ್ದರು, ದಂಪತಿಗೆ ಆಲಿಯಾ ಎಂಬ ಮಗಳಿದ್ದಾಳೆ. ಅನುರಾಗ್ ಏಕಾಂಗಿ ತಂದೆಯಾಗಿ ಮುಂದುವರೆದಿದ್ದಾರೆ.

7. ಕಮಲ್ ಹಾಸನ್ (Kamal Hassan) 
ದಕ್ಷಿಣ ಭಾರತದ ಜನಪ್ರಿಯ ನಟ, ಕಮಲ್ ಹಾಸನ್ 1980ರ ದಶಕದಲ್ಲಿ ತಮ್ಮ ಪ್ರೇಮಿ ಸಾರಿಕಾ ಅವರೊಂದಿಗೆ ದೀರ್ಘಾವಧಿಯ ಲಿವ್-ಇನ್ ಸಂಬಂಧದಲ್ಲಿದ್ದರು. ಅವರು ಅಂತಿಮವಾಗಿ ಮದುವೆಯಾಗಲು ನಿರ್ಧರಿಸುವ ಮೊದಲು ಅವರಿಗೆ ಶ್ರುತಿ ಮತ್ತು ಅಕ್ಷರ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಅದೃಷ್ಟವಶಾತ್, ಒಂದು ದಶಕದ ಹಿಂದೆ ದಂಪತಿಗಳು ಬೇರ್ಪಟ್ಟಿದ್ದಾರೆ ಮತ್ತು ಈಗ ಕಮಲ್ ನಟಿ ಗೌತಮಿ ಅವರೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಹೆಮ್ಮೆಯ ಏಕೈಕ ತಂದೆಯಾಗಿ ಮುಂದುವರೆದಿದ್ದಾರೆ. 

ಸಲಿಂಗಿ ಆಗಿರೋ ಕರಣ್‌ಗೆ ಅಪ್ಪ-ಅಮ್ಮ ಇಬ್ಬರೂ ಇದ್ದಾರಾ?

Follow Us:
Download App:
  • android
  • ios