Asianet Suvarna News Asianet Suvarna News

ನ್ಯೂಯಾರ್ಕ್‌ನಲ್ಲಿ ಸಂಜಯ್ ದತ್ ಪುತ್ರಿ ತ್ರಿಶಾಲ ಜೊತೆ ಸುತ್ತಾಡಿದ ಎನಿಮಲ್ ನಟ ರಣ್‌ಬೀರ್

ಅನಿಮಲ್ ಸಿನಿಮಾದ ಸಕ್ಸಸ್ ಬಳಿಕ ನಟ ರಣ್‌ಬೀರ್ ಕಪೂರ್, ತನ್ನ ಸ್ನೇಹಿತರು ಆತ್ಮೀಯರ ಜೊತೆ ಕಾಲ ಕಳೆಯುತ್ತಿದ್ದು, ಸಂಜಯ್ ದತ್ ಪುತ್ರಿ ತನ್ನ ಆತ್ಮೀಯ ಗೆಳತಿ ತ್ರಿಶಾಲಾ ಭೇಟಿ ಮಾಡಿ ಆಕೆಯ ಜೊತೆ ಹೊರಗಡೆ ಡಿನ್ನರ್ ಸವಿದಿದ್ದಲ್ಲೇ ರೆಡ್‌ವೈನ್‌ ಎಂಜಾಯ್ ಮಾಡಿದ್ದಾರೆ

Animal actor Ranbir Kapoor hung out In Newyork with Sanjay Dutt's daughter Trishala Dutt akb
Author
First Published Dec 20, 2023, 4:37 PM IST

ಅನಿಮಲ್ ಸಿನಿಮಾದ ಸಕ್ಸಸ್ ಬಳಿಕ ನಟ ರಣ್‌ಬೀರ್ ಕಪೂರ್, ತನ್ನ ಸ್ನೇಹಿತರು ಆತ್ಮೀಯರ ಜೊತೆ ಕಾಲ ಕಳೆಯುತ್ತಿದ್ದು, ಸಂಜಯ್ ದತ್ ಪುತ್ರಿ ತನ್ನ ಆತ್ಮೀಯ ಗೆಳತಿ ತ್ರಿಶಾಲಾ ಭೇಟಿ ಮಾಡಿ ಆಕೆಯ ಜೊತೆ ಹೊರಗಡೆ ಡಿನ್ನರ್ ಸವಿದಿದ್ದಲ್ಲೇ ರೆಡ್‌ವೈನ್‌ ಎಂಜಾಯ್ ಮಾಡಿದ್ದಾರೆ. ಸ್ವತಃ ಸಂಜಯ್ ಪುತ್ರಿ ತ್ರಿಶಾಲಾ ಈ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.  ನಟ ರಣ್‌ಬೀರ್ ಕಪೂರ್ ಅವರು ಈ ಹಿಂದೆ 2018ರಲ್ಲಿ ಸಂಜಯ್ ದತ್ ಆತ್ಮಕತೆ ಸಂಜು ಸಿನಿಮಾದಲ್ಲಿ ನಟಿಸಿದ್ದರು. ಇದಕ್ಕೂ ಮೊದಲಿನಿಂದಲೂ ಇವರಿಬ್ಬರು ಉತ್ತಮ ಬಾಂಧವ್ಯವನ್ನು ಹೊಂದಿದ್ದು ಅದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ.

ಸ್ವತಃ ರಣ್‌ಬೀರ್ ತಾನು ಬಾಲ್ಯದಿಂದಲೂ ಸಂಜಯ್ ದತ್ ನಟನೆಯಿಂದ ಎಷ್ಟೊಂದು ಪ್ರಭಾವಿಯಾಗಿದ್ದೆ ಎಂದು ಹೇಳಿಕೊಂಡಿದ್ದರೆ ಇತ್ತ ತ್ರಿಶಾಲಾ ತನ್ನ ಆತ್ಮೀಯ ಸ್ನೇಹಿತ ಹಾಗೂ ಆತನ ಪತ್ನಿ ಆಲಿಯಾಗೆ ಆದಷ್ಟು ಬೇಗ ಮಗು ಮಾಡಿಕೊಳ್ಳಿ ಎಂದು ಹೇಳುವವರೆಗೆ ಈ ಸ್ನೇಹಿತ ಜೋಡಿ ಇಬ್ಬರ ಮಧ್ಯೆ ಉತ್ತಮವಾದ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ. ಇದರ ಜೊತೆಗೆ ಸಂಜಯ್ ದತ್ ಹಾಗೂ ರಣ್‌ಬೀರ್‌ ಕುಟುಂಬವೂ ಕೂಡ ಪರಸ್ಪರ ತುಂಬಾ ಆತ್ಮೀಯರಾಗಿದ್ದಾರೆ. ಇದಕ್ಕೆ ಸಾಕ್ಷಿಯೇ ತನ್ನ ಆತ್ಮೀಯ ಸ್ನೇಹಿತನ ಭೇಟಿ ಬಳಿಕ ತ್ರಿಶಾಲಾ ಮಾಡಿದ ಇನ್ಸ್ಟಾಗ್ರಾಮ್ ಪೋಸ್ಟ್. 

ಸಂಜಯ್ ದತ್ ದುಶ್ಚಟಗಳಿಗೆ ಬೇಸತ್ತು ಬ್ರೇಕಪ್‌ ಮಾಡಿಕೊಂಡು ಭಾರತದ ಶ್ರೀಮಂತ ಉದ್ಯಮಿಯನ್ನು ಮದುವೆಯಾದ ಟಾಪ್‌ ನಟಿ!

ತನ್ನ ಆತ್ಮೀಯ ಸ್ನೇಹಿತ ರಣ್‌ಬೀರ್ ಜೊತೆ ಸುತ್ತಾಟ ಹಾಗೂ ಡಿನ್ನರ್ ಸಮಯದಲ್ಲಿ ಕಳೆದ ಕ್ಷಣಗಳನ್ನು ತ್ರಿಶಾಲ ದತ್ ಪೋಸ್ಟ್ ಮಾಡಿದ್ದಾರೆ. ತ್ರಿಶಾಲ ದತ್ ಅವರು ಸಂಜಯ್ ದತ್ ಅವರ ಮೊದಲ ಹಾಗೂ ದಿವಂಗತ ಪತ್ನಿ ರಿಚಾ ಶರ್ಮಾ ಅವರ ಪುತ್ರಿಯಾಗಿದ್ದಾರೆ. ಮನಃಶಾಸ್ತ್ರ ಅಧ್ಯಯನ ಮಾಡಿದ್ದು ಅಮೆರಿಕಾದಲ್ಲೇ ಥೆರಪಿಸ್ಟ್ ಆಗಿ ಅವರು ಕೆಲಸ ಮಾಡುತ್ತಿದ್ದಾರೆ. 

ರಣ್‌ಬೀರ್ ಫೋಟೋಗೆ ತ್ರಿಶಾಲ ನೀಡಿದ ಕ್ಯಾಪ್ಷನ್ನೇ  ಅವರ ಸ್ನೇಹ ಎಂಥದ್ದು ಎಂದು ಹೇಳುತ್ತಿದೆ. ನೆಟ್ಟೆಡ್‌ ಕಪ್ಪು ಟಾಪ್‌ಗೆ ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ತುಸು ಮೇಕಪ್‌ನೊಂದಿಗೆ ಸರಳವಾಗಿ ತ್ರಿಶಾಲ ಕಂಗೊಳಿಸುತ್ತಿದ್ದರೆ ಅತ್ತ, ಗ್ರೇ ಬಣ್ಣದ ಟೀ ಶರ್ಟ್ ಟೋಪಿಯೊಂದಿಗೆ ರಣ್‌ಬೀರ್ ಕಾಣಿಸಿಕೊಂಡಿದ್ದಾರೆ. ಎಲ್ಲಾ ಸಾಮಾನ್ಯರಂತೆ ತಾವು ಸೇವಿಸಿದ ಆಹಾರದ ಜೊತೆ ಫೋಟೋ ಶೇರ್ ಮಾಡಿದ ತ್ರಿಶಾಲ, ಎನಿಮಲ್ ಭೇಟಿಯಾಗಲು ಬಂದಾಗ ಎಂದು ಬರೆದುಕೊಂಡಿದ್ದಾರೆ.  ಅದರಲ್ಲಿ ರೆಡ್ ವೈನ್ ಹಾಗೂ ಪಾಸ್ತಾದ ಪೋಟೋ ಇದೆ. 

ನಾನು ಪಾತ್ರಗಳನ್ನಲ್ಲ ಒಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ; ಆಲಿಯಾ ಭಟ್

ಇನ್ನು ನೆಟ್ಟಿಗರು ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್ ಅವರ ನಟನೆ ಹಾಗೂ ಲುಕ್ ಅನ್ನು  ವಾಸ್ತವ್ ಸಿನಿಮಾದಲ್ಲಿದ್ದ ಸಂಜಯ್ ದತ್ ಅವರ  ಲುಕ್‌ಗೆ ಹೋಲಿಕೆ ಮಾಡಿದ್ದಾರೆ.  ಹಾಗೆಯೇ ಸಂಜಯ್ ಅವರ ಸಿನಿಮಾದ ಕೆಲ ಫೋಟೋಗಳೊಂದಿಗೆ ರಣ್ಬೀರ್ ನಟನೆಯ ಎನಿಮಲ್ ಸಿನಿಮಾದ ಸ್ಟಿಲ್‌ಗಳನ್ನು ಸೇರಿಸಿಕೊಂಡು  ಕೊಲಾಜ್ ಮಾಡಿ ಹೋಲಿಕೆ ಮಾಡುತ್ತಿದ್ದಾರೆ. ಬಿಳಿ ಬಣ್ಣದ ಕುರ್ತಾದ ಜೊತೆಗೆ ಹಣೆಗೆ ತಿಲಕ ಇಟ್ಟಿರುವ ರಣ್‌ಬೀರ್‌ ಸಹಜವಾಗಿ ಸಂಜಯ್ ದತ್ ರೀತಿ ಕಾಣಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. 

ಸಂಜಯ್ ದತ್ ಆತ್ಮಕತೆಯಲ್ಲಿ ನಟಿಸಿದ ರಣ್‌ಬೀರ್ ಕಪೂರ್ ಸಂಜಯ್ ದತ್ ನಟನೆ ತನಗೆಷ್ಟು ಇಷ್ಟ ಅವರ ಪಾತ್ರಕ್ಕೆ ತಾನೆಷ್ಟು ಆಡಿಕ್ಟ್ ಆಗಿದ್ದೆ ಎಂಬುದನ್ನು ಹೇಳಿಕೊಂಡಿದ್ದರು. ಸಂಜು ಸಿನಿಮಾದ ಚಿತ್ರೀಕರಣದ ನಂತರವೂ ಸಂಜು ಪಾತ್ರದ ಹ್ಯಾಂಗೋವರ್‌ನಿಂದ ಹೊರಬರಲು ಬಹಳ ಸಮಯ ಹಿಡಿದಿತ್ತು ಎಂದು ರಣ್‌ಬಿರ್ ಹೇಳಿಕೊಂಡಿದ್ದರು.  ಇತ್ತ ಸಂಜಯ್ ದತ್ ಅವರು ರೀಚಾ ಶರ್ಮಾ ಅವರ ಸಾವಿನ ನಂತರ  ರೀಯಾ ಪಿಳೈ ಅವರನ್ನು ಮದುವೆಯಾದ ಸಂಜಯ್ ದತ್ 2008ರಲ್ಲಿ ಅವರಿಂದ ವಿಚ್ಛೇದನ ಪಡೆದಿದ್ದರು. ಇದಾದ ನಂತರ ನಟಿ ಮಾನ್ಯತಾ ದತ್ ಅವರನ್ನು ಮದುವೆಯಾಗಿದ್ದು, ಈ ಜೋಡಿಗೆ ಎರಡು ಮುದ್ದಾದ ಮಕ್ಕಳಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಸಂಜಯ್ ದತ್ ಒಮ್ಮೆ ಬಂಧನವಾಗಿ ಜೈಲು ಶಿಕ್ಷೆಗೂ ಗುರಿಯಾಗಿದ್ದರು. 

Follow Us:
Download App:
  • android
  • ios