Asianet Suvarna News Asianet Suvarna News

ನಾನು ಪಾತ್ರಗಳನ್ನಲ್ಲ ಒಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ; ಆಲಿಯಾ ಭಟ್

ನಾನು ನನ್ನ ಪಾತ್ರಗಳಿಗಿಂತ ಹೆಚ್ಚಾಗಿ ಒಳ್ಳೆಯ ಟೀಮ್ ಆಯ್ಕೆ ಮಾಡಿಕೊಳ್ಳುತ್ತೇನೆ. ಕಾರಣ, ಒಳ್ಳೆಯ ಟೀಮ್ ಮೂಲಕ ಒಳ್ಳೆಯ ಸಿನಿಮಾಗಳು ಬರುತ್ತವೆ. 

I am very grateful to all my film makers says Bollywood actress Alia Bhatt srb
Author
First Published Dec 18, 2023, 6:59 PM IST

ಬಾಲಿವುಡ್ ನಟಿ ಆಲಿಯಾ ಭಟ್ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ 'ನಾನು ಅದೃಷ್ಟವಂತೆ' ಎಂದಿದ್ದಾರೆ. ಸಂದರ್ಶಕಿ ಕೇಳಿದ 'ನೀವು ಸಿನಿಮಾಗಳಲ್ಲಿ ತುಂಬಾ ಒಳ್ಳೆಯ ಪಾತ್ರಗಳನ್ನೇ ಪಡೆದಿದ್ದೀರಿ, ಅದು ಹೇಗೆ?' ಎಂಬ ಪ್ರಶ್ನೆಗೆ ನಟಿ ಆಲಿಯಾ ಭಟ್ ಉತ್ತರ ನೀಡಿದ್ದಾರೆ. 'ನಾನು ಯಾವತ್ತೂ ಉತ್ತಮ ಕಥೆ ಇರುವ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಅದರರ್ಥ, ನಾನು ಒಳ್ಳೆಯ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಏಕೆಂದರೆ, ಒಳ್ಳೆಯ ಚಿತ್ರಗಳು ಮಾತ್ರ ಸಕ್ಸಸ್ ಆಗುತ್ತವೆ, ಅಂತಹ ಚಿತ್ರಗಳಿಂದ ಮಾತ್ರ ಎಲ್ಲರಿಗೂ ಬೆಲೆ ಬರುತ್ತದೆ' ಎಂದಿದ್ದಾರೆ. 

ನಟಿ ಆಲಿಯಾ ಭಟ್ 'ನಾನು ಕೆಲಸ ಮಾಡಿದ ನಿರ್ಮಾಪಕರು, ನಿರ್ದೇಶಕರು ಹಾಗೂ ಇಡೀ ಟೀಮ್‌ಗೆ ನಾನು ಗ್ರೇಟ್‌ಫುಲ್ ಆಗಿರುತ್ತೇನೆ. ನನ್ನ ಪಾಲಿಗೆ ಒಳ್ಳೆಯ ಚಿತ್ರಗಳು ಮಾತ್ರ ಬಂದಿವೆ. ಕೆಲವೊಂದು ಸೂಪರ್ ಹಿಟ್ ಆಗಿದ್ದರೆ ಕೆಲವೊಂದು ಹಿಟ್ ಆಗಿವೆ. ಹಾಕಿದ ಬಂಡವಾಳಕ್ಕೆ ಮೋಸ ಆಗಿರುವ ಸಿನಿಮಾಗಳು ಅತ್ಯಂತ ಕಡಿಮೆ ಎಂದೇ ಹೇಳಬಹುದು. ನನಗೆ ಈ ಬಗ್ಗೆ ಖುಷಿಯಿದೆ. ನಾನು ಜನರನ್ನು ಮನರಂಜಿಸಲು ಈ ಉದ್ಯಮಕ್ಕೆ ಬಂದಿದ್ದೇನೆ. ಅದು ಒಳ್ಳೆಯ ಸಿನಿಮಾಗಳಿಂದ ಸಾಧ್ಯವಾಗಿದೆ. 

ಮತ್ತೆ ಬಾಲಿವುಡ್ ರಾಜಕೀಯದಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡಲು ನನಗಿಷ್ಟವಿಲ್ಲ; ಪ್ರಿಯಾಂಕಾ ಚೋಪ್ರಾ

ನಾನು ನನ್ನ ಪಾತ್ರಗಳಿಗಿಂತ ಹೆಚ್ಚಾಗಿ ಒಳ್ಳೆಯ ಟೀಮ್ ಆಯ್ಕೆ ಮಾಡಿಕೊಳ್ಳುತ್ತೇನೆ. ಕಾರಣ, ಒಳ್ಳೆಯ ಟೀಮ್ ಮೂಲಕ ಒಳ್ಳೆಯ ಸಿನಿಮಾಗಳು ಬರುತ್ತವೆ. ಒಳ್ಳೆಯ ಸಿನಿಮಾಗಳ ಮೂಲಕ ಎಲ್ಲರಿಗೂ ಒಳ್ಳೆಯದಾಗುತ್ತದೆ. ನಾನು ನನ್ನ ಪಾತ್ರವನ್ನು ಮಾತ್ರ ನೋಡಿದರೆ ಅದು ಸೋಲಲೂಬಹುದು. ಏಕೆಂದರೆ, ಸಿನಿಮಾ ಸೋತರೆ ಪಾತ್ರ ಗೆದ್ದು ಪ್ರಯೋಜನವೇನು? ಸಿನಿಮಾ ಗೆದ್ದರೆ ಹಣವೂ, ಹೆಸರೂ ಸಿಗುತ್ತದೆ. ಇಲ್ಲದಿದ್ದರೆ ಯಾವುದೂ ಇಲ್ಲ' ಎಂದಿದ್ದಾರೆ ನಟಿ ಆಲಿಯಾ ಭಟ್.

ಭಾಗ್ಯನ ಬಿಟ್ಟು ಬಂದು, ಶ್ರೇಷ್ಠಾ ಮನೇಲಿ ಪಾತ್ರೆ ತೊಳೆಯೋದು ತಾಂಡವ್‌ಗೆ ಬೇಕಿತ್ತಾ? 

ಅಂದಹಾಗೆ, ನಟಿ ಆಲಿಯಾ ಭಟ್ ಬಾಲಿವುಡ್ ನಟ ರಣಬೀರ್ ಕಪೂರ್ ಅವರನ್ನು ಮದುವೆ ಆಗಿ ಒಂದು ಮಗುವಿನ ತಾಯಿಯೂ ಆಗಿದ್ದಾರೆ. ಇತ್ತೀಚೆಗೆ ಸಿನಿಮಾ ವಿಷಯದಲ್ಲಿ ನಟಿ ಆಲಿಯಾ ಭಟ್ ತುಂಬಾ ಚೂಸಿ ಆಗಿದ್ದಾರೆ. ಬ್ರಹ್ಮಾಸ್ತ್ರ ಬಳಿಕ ನಟಿ ಆಲಿಯಾ ಭಟ್ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಸದ್ಯ ನಟಿ ತಾಯ್ತನವನ್ನು ಅನುಭವಿಸುತ್ತ ಖುಷಿ ಎಂಜಾಯ್ ಮಾಡುತ್ತಿದ್ದಾರೆ. ಅದರೆ, ಆಲಿಯಾ ಗಂಡ ರಣಬೀರ್ ಕಪೂರ್ ತಮ್ಮ ನಟನೆ ಮುಂದುವರೆಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡುತ್ತಿದೆ. 

Follow Us:
Download App:
  • android
  • ios