ಇದು ವಾಯುವ್ಯ ಅಮೆರಿಕದ ಇಡಾಹೊ ಎಂಬ ನಗರದಲ್ಲಿ ನಡೆದ ವಿಚಿತ್ರ ವಿದ್ಯಮಾನ. ಇಡಾಹೋದ ನಿವಾಸಿ, 18 ವರ್ಷದ ಹುಡುಗಿ ಗೇಬ್ರಿಯೆಲ್‌ ರೀಸ್ ಎಂಬಾಕೆಗೆ ಒಂದು ವಿಚಿತ್ರ ಆಸೆ. ತನಗಿಂತ ಸುಮಾರು ದೊಡ್ಡವನಾದ, ಅಂದರೆ ಅಪ್ಪನ ವಯಸ್ಸಿನವನಿಂದ ತನ್ನ ಕನ್ಯತ್ವ ಕಳೆದುಕೊಳ್ಳಬೇಕು ಅನ್ನುವುದು! ಇದೇ ಸಂದರ್ಭದಲ್ಲೇ ತಾನು ಬೈ ಸೆಕ್ಷುವಲ್ ಅನ್ನುವುದೂ ಆಕೆಗೆ ಗೊತ್ತಾಗಿತ್ತು. ಬೈ ಸೆಕ್ಸುವಲ್‌ ಅಂದರೆ ಹೆಣ್ಣು ಮತ್ತು ಗಂಡು ಇಬ್ಬರ ಜೊತೆಗೂ ಲೈಂಗಿಕ ಕ್ರಿಯೆಯ ಸುಖ ಪಡೆಯಬಲ್ಲವರು.

18 ವರ್ಷ ಮಗಳ ಕನ್ಯತ್ವ ಪರೀಕ್ಷೆ ಮಾಡ್ತೇನೆ ಎಂದಿದ್ದ ಗಾಯಕ ಮಾಡಿದ್ದೇನು?

18 ವರ್ಷದಲ್ಲೇ ಈಕೆ ಡೇಟಿಂಗ್‌ ವೆಬ್‌ಸೈಟ್‌ಗಳ ಮೊರೆ ಹೋದಳು. ಅಲ್ಲಿ ಇಡಾಹೋಗಿಂತ 500 ಕಿಲೋಮೀಟರ್‌ ದೂರದ ಸಾಲ್ಟ್‌ಲೇಕ್‌ ಎಂಬ ನಗರದಲ್ಲಿ ವಾಸಿಸುವ ಜೇಕಬ್ ಬಾಸ್ವೆಲ್‌ ಎಂಬಾತನ ಪರಿಚಯವಾಯಿತು. ಆತ ಈಕೆಗಿಂತ 24 ವರ್ಷ ದೊಡ್ಡವನು. ಈತನಿಗೊಬ್ಬಳು ಗರ್ಲ್‌ಫ್ರೆಂಡ್‌ ಕೂಡ ಇದ್ದಳು- ಮೇಗನ್‌ ಮುಯಿರ್‌ಹೆಡ್‌. ಮೂವರ ಮಧ್ಯೆ ಸೆಕ್ಸ್ ಚಾಟಿಂಗ್‌ ಎಗ್ಗಿಲ್ಲದೆ ನಡೆಯಿತು. ಇಬ್ಬರೂ ಈಕೆಯನ್ನು ಮುಕ್ತ ಸೆಕ್ಸ್‌ಗೆ ಆಹ್ವಾನಿಸಿದರು. ಗೇಬ್ರಿಯೆಲ್‌ ತನ್ನ ಊರಿನಿಂದ 500 ಕಿಲೋಮೀಟರ್ ದೂರ ಪ್ರಯಾಣಿಸಿ ಸಾಲ್ಟ್‌ಲೇಕ್‌ಗೆ ತೆರಳಿ, ಈ ಸಂಗಾತಿಗಳ ಜೊತೆ ಕೂಡಿ ತನ್ನ ಕನ್ಯತ್ವವನ್ನು ಕಳೆದುಕೊಂಡೇ ಬಿಟ್ಟಳು!


ಮತ್ತೀಗ ಈ ಗೇಬ್ರಿಯೆಲ್, ಈ ದಂಪತಿಯ ಜೊತೆಗೇ ವಾಸಿಸುತ್ತಿದ್ದಾಳೆ. ಮೂವರೂ ತಮ್ಮನ್ನು ತ್ರಿಪಲ್‌ ಎಂದೇ ಕರೆದುಕೊಳ್ಳುತ್ತಾರೆ. ಎಂದರೆ ಮೂವರು ಇರುವ ದಾಂಪತ್ಯ. ಈಕೆ ಬೈಸೆಕ್ಷುವಲ್‌ ಆದ್ದರಿಂದ ಜೇಕಬ್‌ ಹಾಗೂ ಮೇಗನ್‌ ಇಬ್ಬರ ಜೊತೆಗೂ ಮಿಲನದ ಆನಂದ ಅನುಭವ ಅನುಭವಿಸುತ್ತಾಳಂತೆ. ಇದೇನೂ ಅಮೆರಿಕದ ಕಾನೂನಿನ ಪ್ರಕಾರ ಅಪರಾಧವಲ್ಲ. ಈಕೆ ಇವರನ್ನು ಮೊದಲ ಬಾರಿಗೆ ಭೇಟಿಯಾಗಿ ಮೂರು ವರ್ಷವಾಗಿದೆ, ಗೇಬ್ರಿಯೆಲ್‌ಗೆ ಈಗ 21 ವರ್ಷ. ಕಾನೂನು ಪ್ರಕಾರ ಮದುವೆಯಾಗುವ, ಸೆಕ್ಸ್ ನಡೆಸುವ ಎಲ್ಲ ಅಧಿಕಾರವೂ ಆಕೆಗೆ ಇದೆ. ಅಮೆರಿಕದ ಕಾನೂನು ಕೂಡ ಈ ವಿಷಯದಲ್ಲಿ ಮುಕ್ತವಾಗಿದೆ. ಆದರೆ ಮೂವರ ದಾಂಪತ್ಯ ಎಂಬ ಪರಿಕಲ್ಪನೆ ಕಾನೂನಿನಲ್ಲಿ ಇಲ್ಲ. ಹೀಗಾಗಿ ಇದು ಕಾನೂನುಬದ್ಧವಲ್ಲ. ಆದರೆ ಇವರು ಜತೆಗಿದ್ದಾರೆ ಅಷ್ಟೇ.

 

ಮಧು‘ಚಂದ್ರ’ಕ್ಕೆ ‘ವಿಶೇಷ ಹೆಣ್ಣು’ ಬಯಸಿ ಅರ್ಜಿ ಆಹ್ವಾನಿಸಿದ ಬಿಲೆನಿಯರ್

 

ಗೇಬ್ರಿಯೆಲ್‌ನ ತಂದೆ ತಾಯಿ ಈ ಬಗ್ಗೆ ಏನು ಹೇಳುತ್ತಾರೆ? ಅವರಿಗೆ ಮೊದಲು ಈ ವಿಚಾರದಲ್ಲಿ ಭಯವಾಗಿದ್ದುದು ನಿಜ. ಸಣ್ಣ ವಯಸ್ಸಿನಿಂದಲೇ, ತಾನು ಬೈಸೆಕ್ಷುವಲ್‌ ಎಂಬ ವಿಚಾರವನ್ನು ಗೇಬ್ರಿಯೆಲ್‌ ಅವರಿಗೆ ತಿಳಿಸಿದ್ದಳು. ಇದೇ ಶಾಕಿಂಗ್‌ ಅನಿಸಿದರೆ, ತಾನು ಡೇಟಿಂಗ್‌ ನಡೆಸಿದ ವ್ಯಕ್ತಿ ತನಗಿಂತ 24 ವರ್ಷ ದೊಡ್ಡವನು ಎಂಬುದು ಇನ್ನಷ್ಟು ಆತಂಕ ಮೂಡಿಸಿತ್ತು ಅವರಿಗೆ. ಜೊತೆಗೆ, ಆತನಿಗೆ ಇನ್ನೊಬ್ಬಳು ಗೆಳತಿಯೂ ಇರುವುದು, ಅವರ ಜೊತೆಗಿರಲು ಗೇಬ್ರಿಯಲ್‌ ಹೋಗುತ್ತಿರುವುದು ಇವೆಲ್ಲವೂ ಅವರಲ್ಲಿ ಆತಂಕ ಮೂಡಿಸಿದ್ದವು. ಕ್ರಮೇಣ ಆಕೆ ಸುಖ, ನೆಮ್ಮದಿಯಿಂದ ಅವರ ಜೊತೆಗೆ ಇದ್ದಾಳೆ ಎಂಬುದು ತಿಳಿದ ಬಳಿಕ ಸಮಾಧಾನ ಆಯಿತಂತೆ.
 

ಈ ಮೂವರ ದಾಂಪತ್ಯಕ್ಕೆ ಸಮಸ್ಯೆ ಏನಾದರೂ ಇದೆಯೇ? ಇದೆ. ಮತ್ಸರ ಅಥವಾ ಹೊಟ್ಟೆಕಿಚ್ಚಿನ ಬಗ್ಗೆ ಗೇಬ್ರಿಯಲ್‌ ತುಸು ಅಂಜಿಕೊಳ್ಳುತ್ತಾಳೆ. ಜೇಕಬ್‌ನ ಜೊತೆಗೆ ತಾವಿಬ್ಬರು ಇರುವ ವಿಷಯದಲ್ಲಿ ತನಗೆ ಅಥವಾ ಮೇಗನ್‌- ಇಬ್ಬರಲ್ಲಿ ಯಾರಿಗೇ ಆಗಲಿ ಮತ್ಸರ ಮೂಡಿದರೆ ಅದು ಹಾನಿಕರ ಎಂಬ ಅರಿವು ಆಕೆಗಿದೆ. ಹಾಗೆಯೇ ಜನರನ್ನು ಎದುರಿಸುವುದು ಕೆಟ್ಟ ಬೋರು. ಹೆಚ್ಚಿನವರಿಗೆ ಇವರ ಸಂಬಂಧ ಅರ್ಥವೇ ಆಗುವುದಿಲ್ಲ. ಮೂವರು ಜೊತೆಗಿದ್ದೇವೆ, ಮೂವರದೂ ಸೆಕ್ಸ್ ಸಂಬಂಧ ಎಂಬುದು ಗೊತ್ತಾದರೆ, ಹಾಗಿದ್ದರೆ ಇವರದು ಸೆಕ್ಸ್‌ಗಾಗಿ ಮಾಡಿಕೊಂಡ ಒಪ್ಪಂದ ಎಂದು ಭಾವಿಸುತ್ತಾರಂತೆ. ನಮ್ಮದು ಹಾಗಲ್ಲ, ಇಲ್ಲಿ ಪ್ರೀತಿ, ಅಕ್ಕರೆ, ಇತ್ಯಾದಿ ಎಲ್ಲವೂ ಇದೆ ಎಂದು ಈಕೆ ನಂಬಿಸಲು ಸಾಕುಬೇಕಾಗುತ್ತದೆ.