ವಾಷಿಂಗ್ ಟನ್[ನ. 26]  ಅಮೆರಿಕನ್ ರಾಪ್ ಸಿಂಗರ್ ಟಿ.ಐ ಒಂದು ಹೇಳಿಕೆ ನೀಡಿದ್ದಾರೆ. ತನ್ನ ಮಗಳನ್ನೇ ಪ್ರತಿ ವರ್ಷ ಕನ್ಯತ್ಯ ಪರೀಕ್ಷೆಗೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದಕ್ಕೆ ಮಗಳ ಬಳಿಯೇ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.

ರೆಡ್ ಟೇಬಲ್ ಟಾಕ್ ಎಂಬ ಶೋ ಒಂದರಲ್ಲಿ ಮಾತನಾಡಿಸ ಸಿಂಗರ್ ನನ್ನ ಮಗಳು ಡೇಜಾ ಬಳಿ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ. ನನ್ನ ಮಗಳಿಗೆ ನಾನು ಏನು ಎಂಬುದು ಗೊತ್ತು. ಆದರೂ ಆಕೆ ಒಂದು ಮಾತನ್ನಾಡದೆ ಒಪ್ಪಿಕೊಳ್ಳುತ್ತಿದ್ದಳು ಎಂದು 39 ವರ್ಷದ ಗಾಯಕ ಹೇಳಿದ್ದಾರೆ.

'ಕನ್ಯತ್ವ ಪರೀಕ್ಷೆ'ಎಂಬ ದುಷ್ಟಪದ್ಧತಿ ಎಷ್ಟೆಲ್ಲ ವಿಕೃತಿ ಹೊಂದಿದೆ ಕೇಳಿದ್ರೆ ಶಾಕ್ ಆಗ್ತೀರಾ!...

ಗಾಯಕನ ನಿಜವಾದ ನಾಮಧೇಯ ಕ್ಲಿಫೋರ್ಡ್ ಜೋಸೆಫ್ ಹ್ಯಾರೀಸ್ ಆದರೆ ವೃತ್ತಿಯಲ್ಲಿ ಕಾಣಿಸಿಕೊಂಡ ಮೇಲೆ ಟಿಐ ಎಂದು ಬದಲಾಯಿಸಿಕೊಂಡಿದ್ದಾರೆ. ನನ್ನ ಮಗಳು ಇದೆಲ್ಲವನ್ನು ಇಲ್ಲಿಗೆ ಬಿಟ್ಟುಬಿಡೋಣ ಎಂದು ಉದಾರವಾದ ತೋರಿಸಿದ್ದಾಳೆ ನಾನು ಇನ್ನು ಹೇಳಲು ಏನೂ ಉಳಿದಿಲ್ಲ ಎಂದು ಗಾಯಕ ವಿಷಾದ ವ್ಯಕ್ತಪಡಿಸಿದ್ದಾರೆ.

ಕನ್ವತ್ವ ಕಾಪಾಡುವುದು ದೊಡ್ಡ ವಿಷಯ ಎಂದು ಭಾವಿಸಿದ್ದೆ. ಅನ್ನೇ ನನ್ನ ಮಗಳ ಮೇಲೆ ಹೇರುತ್ತ ಬಂದಿದ್ದೆ. ಆದರೆ ಪ್ರಪಂಚದ ಉಳಿದ ವಿಷಯಗಳ ಮುಂದೆ ಇದೆಲ್ಲ ಗೌಣ ಎನಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.