ಮಧು‘ಚಂದ್ರ’ಕ್ಕೆ ‘ವಿಶೇಷ ಹೆಣ್ಣು’ ಬಯಸಿ ಅರ್ಜಿ ಆಹ್ವಾನಿಸಿದ ಬಿಲೆನಿಯರ್!
ಚಂದ್ರ ಪರ್ಯಟನೆಗಾಗಿ ಗರ್ಲ್’ಫ್ರೆಂಡ್ ಬಯಸಿದ ಬಿಲೆನಿಯರ್| ಜಪಾನ್’ನ ಆನ್’ಲೈನ್ ರಿಟೇಲರ್ ‘ಜೋಜೋ’ ಸಂಸ್ಥೆಯ ಮುಖ್ಯಸ್ಥ| ಎಲಾನ್ ಮಸ್ಕ್ ನಿರ್ಮಾಣದ ರಾಕೆಟ್ ಮೂಲಕ ಚಂದ್ರನ ಪರ್ಯಟನೆ ಹೊರಟ ಯುಸಾಕು ಮೊಯ್ಜಾವಾ| ಮಹಿಳೆಯರಿಗೆ ಅರ್ಜಿ ಆಹ್ವಾನಿಸಿದ ಯುಸಾಕು ಮೊಯ್ಜಾವಾ| ಚಂದ್ರ ಪರ್ಯಟನೆ ವೇಳೆ ಹೊಸ ಸಂಗಾತಿಗೆ ಪ್ರಪೋಸ್ ಮಾಡುವ ಪ್ಲ್ಯಾನ್|
ಟೊಕಿಯೋ(ಜ.23): ಜಪಾನ್’ನ ಆನ್’ಲೈನ್ ರಿಟೇಲರ್ ‘ಜೋಜೋ’ ಸಂಸ್ಥೆಯ ಮುಖ್ಯಸ್ಥ ಯುಸಾಕು ಮೊಯ್ಜಾವಾ , ಎಲಾನ್ ಮಸ್ಕ್ ನಿರ್ಮಾಣದ ರಾಕೆಟ್ ಮೂಲಕ ಚಂದ್ರನ ಪ್ರವಾಸ ಕೈಗೊಳ್ಳುತ್ತಿದ್ದಾರೆ.
2023ರಲ್ಲಿ ಎಲಾನ್ ಮಸ್ಕ್ ವರ ಸಂಸ್ಥೆ ನಿರ್ಮಿತ ಬಿಗ್ ಫಾಲ್ಕನ್ ರಾಕೆಟ್’ನಲ್ಲಿ ಯುಸಾಕು ಚಂದ್ರನ ಪರ್ಯಟನೆ ಕೈಗೊಳ್ಳಲಿದ್ದಾರೆ. ಜಪಾನ್’ನ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ಯುಸಾಕು, ಆ ದೇಶದ ಕೋಟ್ಯಾಧಿಪತಿಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ.
ಆದರೆ ಚಂದ್ರ ಪರ್ಯಟನೆಗೆ ತಮ್ಮೊಂದಿಗೆ ವಿಶೇಷ ಗೆಳತಿಯನ್ನು ಕರೆದೊಯ್ಯಲು ಬಯಸಿರುವ ಯುಸಾಕು, ತಮ್ಮೊಂದಿಗೆ ಚಂದ್ರ ಪರ್ಯಟನೆ ಮಾಡಲು ಬಯಸುವ ಮಹಿಳೆಯರಿಗೆ ಅರ್ಜಿ ಸಲ್ಲಿಸುವಂತೆ ಮನಿವಿ ಮಾಡಿದ್ದಾರೆ.
ಯುಸಾಕು ಜೊತೆ ಚಂದ್ರ ಪರ್ಯಟನೆ ಮಾಡಲು ಬಯಸುವ ಮಹಿಳೆ ಅರ್ಜಿ ಸಲ್ಲಿಸುವ ಮೂಲಕ ಆಯ್ಕೆಯಾಗಬಹುದಾಗಿದೆ. ಜನವರಿ 17ರಂದೇ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವೂ ಮುಗಿದಿದೆ.
ಚಂದ್ರನತ್ತ ಪ್ರವಾಸ: ಈ ರಾಕೆಟ್‌ನಲ್ಲಿ ನಿಮಗಾಗದು ಆಯಾಸ!
ಈ ಕುರಿತು ಟ್ವೀಟ್ ಮೂಲಕ ಖುದ್ದು ಮಾಹಿತಿ ನೀಡಿರುವ ಯುಸಾಕು, ತಾವು ಇತ್ತಿಚೀಗಷ್ಟೇ ವಿಚ್ಛೇದನ ಪಡೆದಿದ್ದು, ಮತ್ತೋರ್ವ ಜೀವನ ಸಂಗಾತಿಯ ಅನ್ವೇಷಣೆಯಲ್ಲಿರುವುದಾಗಿ ಹೇಳಿದ್ದಾರೆ.
ಜೀವನದ ಏಕಾಂತದಿಂದ ಹೊರಬಂದು ಹೊಸ ಸಂಗಾತಿಗಾಗಿ ಮನಸ್ಸು ಬಯಸುತ್ತಿದ್ದು, ಚಂದ್ರ ಪರ್ಯಟನೆ ವೇಳೆ ಹೊಸ ಸಂಗಾತಿಗೆ ಪ್ರಪೋಸ್ ಮಾಡುವುದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ ಎಂದು ಯುಸಾಕು ಹೇಳಿದ್ದಾರೆ.