ಡಿವೋರ್ಸ್‌ ಸಂದರ್ಭದಲ್ಲಿ ಪತಿ ತನ್ನ ನಿವ್ವಳ ಆದಾಯದಲ್ಲಿ ಶೇ.25ರಷ್ಟನ್ನು ಪತ್ನಿಗೆ ನೀಡ್ಬೇಕು ಎನ್ನುವ ನಂಬಿಕೆ ಇದೆ. ಆದ್ರೆ ಇದ್ರ ಬಗ್ಗೆ ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಡಿವೋರ್ಸ್‌ ನಂತ್ರ ಪತಿ, ಪತ್ನಿಗೆ ನೀಡುವ ಮೆಂಟೆನನ್ಸ್‌ ಗೆ ಸಂಬಂಧಿಸಿದಂತೆ ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಬಹಳ ವರ್ಷಗಳಿಂದ, ವಿಚ್ಛೇದನ ಅಥವಾ ದಾಂಪತ್ಯ ಕಲಹದ ಪ್ರಕರಣಗಳಲ್ಲಿ ಪತಿಯ ನಿವ್ವಳ ಆದಾಯದ ಶೇಕಡಾ 25ರಷ್ಟು ಭಾಗವನ್ನು ಪತ್ನಿಗೆ ಮೆಂಟೆನನ್ಸ್ ಆಗಿ ನೀಡಬೇಕು ಎಂಬ ನಂಬಿಕೆ ಇತ್ತು. ಆದರೆ ಅಲಹಾಬಾದ್ ಹೈಕೋರ್ಟ್ ಈಗ ಇದು ಕಾನೂನಿನ ಕಡ್ಡಾಯ ನಿಯಮವಲ್ಲ ಎಂದು ಸ್ಪಷ್ಟಪಡಿಸಿದೆ.

ಮೆಂಟೆನನ್ಸ್ ಆಗಿ ಶೇ. 25ರಷ್ಟು ಭಾಗ ನೀಡೋದು ಕಡ್ಡಾಯವಲ್ಲ

ಜೀವನಾಂಶ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಚಲ್ ಸಚ್ದೇವ್ ಅವರ ಪೀಠದ ಪ್ರಕಾರ, ಶೇಕಡಾ 25 ರಷ್ಟು ಎಂಬುದು ಕೇವಲ ಒಂದು ಸಾಮಾನ್ಯ ಮಾರ್ಗಸೂಚಿ ಮಾತ್ರ. ಪ್ರತಿಯೊಂದು ಪ್ರಕರಣದಲ್ಲೂ ಅದನ್ನೇ ಅನ್ವಯಿಸಬೇಕು ಎಂಬ ನಿಯಮ ಇಲ್ಲ. ಪ್ರಕರಣದ ಪರಿಸ್ಥಿತಿಗೆ ಅನುಗುಣವಾಗಿ ನ್ಯಾಯಾಲಯ ಹೆಚ್ಚು ಅಥವಾ ಕಡಿಮೆ ಮೊತ್ತವನ್ನು ನಿಗದಿಪಡಿಸಬಹುದು.

18 ವರ್ಷ ಅಮೆರಿಕಾದಲ್ಲಿದ್ದ ಟೆಕ್ಕಿ ಕುಟುಂಬ ಸಮೇತ ಬೆಂಗಳೂರಿಗೆ ವಾಪಸ್‌, ಕಾರಣ ಕೇಳಿ ಭೇಷ್‌ ಎಂದ ನೆಟ್ಟಿಗರು

ಮೆಂಟೆನನ್ಸ್ ಮೊತ್ತ ನಿರ್ಧಾರ ಹೇಗೆ? 

ಕೇವಲ ಪತಿಯ ಆದಾಯವನ್ನು ಮಾತ್ರ ನೋಡದೆ, ಅವರ ನಿವ್ವಳ ಆದಾಯ, ಕುಟುಂಬದ ಜವಾಬ್ದಾರಿಗಳು, ತೆರಿಗೆ, ಸಾಲಗಳು, ಇತರ ಆರ್ಥಿಕ ಹೊಣೆಗಾರಿಕೆಗಳು ಹಾಗೂ ಪತ್ನಿಯ ಆರ್ಥಿಕ ಸ್ಥಿತಿ ಎಲ್ಲವನ್ನೂ ನ್ಯಾಯಾಲಯ ಪರಿಗಣಿಸುತ್ತದೆ. ಒಂದು ವೇಳೆ ಪತ್ನಿಯೂ ಉದ್ಯೋಗದಲ್ಲಿದ್ದರೆ ಅಥವಾ ಸ್ವಂತ ಆದಾಯ ಹೊಂದಿದ್ದರೆ, ಅದನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ ಪತ್ನಿಗೆ ಯಾವುದೇ ಆದಾಯವಿಲ್ಲದಿದ್ದರೆ, ಅವರು ಗೌರವಯುತ ಜೀವನ ನಡೆಸಲು ಅಗತ್ಯವಿರುವಷ್ಟು ಮೆಂಟೆನನ್ಸ್ ನೀಡುವಂತೆ ನ್ಯಾಯಾಲಯ ಆದೇಶಿಸಬಹುದು.

ಹೆಚ್ಚುತ್ತಿರುವ ದುಬಾರಿ ಜೀವನ ವೆಚ್ಚ ಮತ್ತು ಸಾಮಾಜಿಕ ಪರಿಸ್ಥಿತಿಯೂ ಮೆಂಟೆನನ್ಸ್ ಮೊತ್ತವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೈಕೋರ್ಟ್ ತಿಳಿಸಿದೆ. ಒಟ್ಟಾರೆ, ಪತಿಯ ಆದಾಯದ ಶೇಕಡಾ 25ರಷ್ಟು ನೀಡುವುದು ಕಡ್ಡಾಯ ಕಾನೂನು ಅಲ್ಲ. ಪ್ರತಿಯೊಂದು ಪ್ರಕರಣದ ವಾಸ್ತವಾಂಶಗಳನ್ನು ಪರಿಶೀಲಿಸಿ, ನ್ಯಾಯಸಮ್ಮತವಾದ ನಿರ್ಧಾರ ತೆಗೆದುಕೊಳ್ಳುವುದು ನ್ಯಾಯಾಲಯದ ಕರ್ತವ್ಯ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಗೌರಿ ಹಿಂದೂನೂ ಅಲ್ಲ, ಇದು ಲವ್​ ಜಿಹಾದೂ ಅಲ್ಲ: ಫತ್ವಾ ಹೊರಡುತ್ತಲೇ ಆಮೀರ್ ಖಾನ್​ ತಿರುಗೇಟು

ಕೌಟುಂಬಿಕ ನ್ಯಾಯಾಲಯಗಳು ಪ್ರತಿಯೊಂದು ಪ್ರಕರಣದಲ್ಲೂ ಪತಿಯ ಆದಾಯ ಮತ್ತು ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದು ಹೈಕೋರ್ಟ್ ಹೇಳಿದೆ. ಪತಿ ತನ್ನ ಆದಾಯ ಮತ್ತು ಹೊಣೆಗಾರಿಕೆಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸದಿದ್ದರೆ, ಅಗತ್ಯ ಸಂದರ್ಭಗಳಲ್ಲಿ ನ್ಯಾಯಾಲಯವು ಅವನ ವಿರುದ್ಧ ಪ್ರತಿಕೂಲ ತೀರ್ಮಾನವನ್ನು ತೆಗೆದುಕೊಳ್ಳಬಹುದು. ಕೇವಲ ಅಂದಾಜುಗಳು ಅಥವಾ ಸ್ಥಿರ ಶೇಕಡಾವಾರುಗಳ ಆಧಾರದ ಮೇಲೆ ಆದೇಶವನ್ನು ಹೊರಡಿಸುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಹೇಳಿದೆ.