ಲೈವ್ ಬ್ಯಾಂಡ್‌ಗೆ ಎಚ್ಚರಗೊಂಡ ಗೆಳತಿಗೆ ಅಚ್ಚರಿ, ಬಾಯ್‌ಫ್ರೆಂಡ್ ಭಿನ್ನ ಪ್ರಪೋಸ್‌ಗೆ ಉತ್ತರವೇನು? ಮುದ್ದಾದ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ರೀತಿ ಪ್ರಪೋಸ್ ಮಾಡಿದರೆ ಹುಡುಗಿಯರು ಸುಲಭವಾಗಿ ಒಪ್ಪಿಕೊಳ್ತಾರಾ?
ದೆಹಲಿ (ಜ.04) ಪ್ರೇಮ ನಿವೇದನೆಗಳ ಸಾಕಷ್ಟು ವಿಡಿಯೋಗಳು ವೈರಲ್ ಆಗಿದೆ. ಪ್ರತಿ ಭಾರಿ ಭಿನ್ನ ಪ್ರಯತ್ನಗಳು, ಉತ್ತರಗಳು, ಪ್ರತಿಕ್ರಿಯಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದೆ. ಇದೀಗ ಬಾಯ್‌ಫ್ರೆಂಡ್, ಗೆಳತಿಗೆ ಇದೇ ರೀತಿ ಅಚ್ಚರಿಯೊಂದಿಗೆ ಪ್ರಪೋಸಲ್ ಮಾಡಿದ ವಿಡಿಯೋ ಭಾರಿ ವೈರಲ್ ಆಗಿದೆ. ಬೆಳ್ಳಂಬೆಳಗ್ಗೆ ಗೆಳತಿ ಮನೆಗೆ ಬಾಯ್‌ಫ್ರೆಂಡ್ ಎಂಟ್ರಿಕೊಟ್ಟಿದ್ದಾನೆ. ಆಕೆಗೆ ಯಾವುದೇ ಸುಳಿವು ನೀಡದೆ ಗೆಳತಿ ಮಲಗಿದ್ದ ಬೆಡ್‌ರೂಂ ಸೇರಿಕೊಂಡಿದ್ದು ಮಾತ್ರವಲ್ಲ, ಲೈವ್ ಬ್ಯಾಂಡ್ ಮೂಲಕ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ಬ್ಯಾಂಡ್ ಸದ್ದಿಗೆ ಎದ್ದ ಗೆಳತಿಗೆ ಅಚ್ಚರಿಯಾಗಿದೆ. ಜೊತೆಗೆ ಬಾಯ್‌ಫ್ರೆಂಡ್‌ನ ಕ್ಯೂಟ್ ಪ್ರಪೋಸಲ್‌ಗೆ ನಾಚಿ ನೀರಾಗಿ ಯೆಸ್ ಎಂದ ಘಟನೆ ದೆಹಲಿಯಲ್ಲಿ ನಡೆದಿದೆ.
ಗೆಳತಿ ಮನೆಗೆ ಬಂದು ಬೆಡ್‌ರೂಂನಲ್ಲಿ ಪ್ರಪೋಸಲ್
ನೇಹಾ ಜೈನ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ಮೇರಿ ಬ್ಯಾಂಡ್ ಬಜ್ ಗಯಿ ಎಂದು ನೇಹಾ ಜೈನ್ ಬರೆದುಕೊಂಡಿದ್ದಾಳೆ. ಈ ವಿಡಿಯೋದ ಆರಂಭ, ಬಾಯ್‌ಫ್ರೆಂಡ್ ಕ್ಯಾಬ್‌ನಿಂದ ಇಳಿದು ಬರುವ ದೃಶ್ಯವಿದೆ. ದೆಹಲಿಯಲ್ಲಿರುವ ಗೆಳತಿ ಮನೆಗೆ ಬಂದ ಬಾಯ್‌ಫ್ರೆಂಡ್, ಲೈವ್ ಬ್ಯಾಂಡ್ ತಂಡವನ್ನು ಕರೆತಂದಿದ್ದಾನೆ. ಬಳಿಕ ಗೆಳತಿಯ ಮಲಗಿದ್ದ ಕೋಣೆಯತ್ತ ತೆರಳಿದ್ದಾನೆ. ಇನ್ನೂ ಸೂರ್ಯನ ಬೆಳಕು ಬೀಳುತ್ತಿದೆ ಅಷ್ಟೆ. ಬೆಳ್ಳಂಬೆಳಗ್ಗೆ ಬಾಯ್‌ಫ್ರೆಂಡ್ ಆಗಮಿಸಿದ್ದಾನೆ. ಗೆಳತಿ ಗಾಢ ನಿದ್ದೆಯಲ್ಲಿದ್ದಾಗಲೇ ಈತ ಕೋಣೆ ಸೇರಿಕೊಂಡಿದ್ದಾನೆ.
ಲೈವ್ ಬ್ಯಾಂಡ್‌ಗೆ ಸಿಗ್ನಲ್ ನೀಡಿದ ಬಾಯ್‌ಫ್ರೆಂಡ್
ಬಾಯ್‌ಫ್ರೆಂಡ್ ಗೆಳತಿ ಕೋಣೆಯೊಳಗೆ ಸೇರಿಕೊಂಡು ಗೋಡೆಗೆ ಮರೆಯಾಗಿ ನಿಂತಿದ್ದಾನೆ. ಇತ್ತ ಗೆಳತಿಗೆ ಇದ್ಯಾವುದರ ಅರಿವೇ ಇಲ್ಲ. ಗಾಢ ನಿದ್ದೆಯಲ್ಲಿದ್ದಾಳೆ. ಅಷ್ಟೊತ್ತಿಗೆ ಬಾಯ್‌ಫ್ರೆಂಡ್ ಲೈವ್ ಬ್ಯಾಂಡ್‌ಗೆ ಸಿಗ್ನಲ್ ನೀಡಿದ್ದಾನೆ. ಲೈವ್ ಬ್ಯಾಂಡ್ ತಂಡದ ಸದಸ್ಯರು ಕೋಣೆಯೊಳಗೆ ಬಂದು ಬ್ಯಾಂಡ್ ಆರಂಭಿಸಿದ್ದಾನೆ. ಈ ಸದ್ದಿಗೆ ಗೆಳತಿ ಎಚ್ಚರಗೊಂಡಿದ್ದಾಳೆ. ಬಾಗಿಲ ಬಳಿ ನಿಂತಿದ್ದ ಲೈವ್ ಬ್ಯಾಂಡ್ ಸದಸ್ಯರ ಲೈವ್ ಪರ್ಫಾಮೆನ್ಸ್ ನೋಡಿ ಅಚ್ಚರಿಗೊಂಡಿದ್ದಾಳೆ. ಏನಿದು, ಯಾಕಿದು? ಬೆಳಗ್ಗೆ ಏನಾಗುತ್ತಿದೆ ಎಂದು ಯೋಚಿಸುತ್ತಾ ನೇಹಾ ಜೈನ್ ಕುಳಿತಿದ್ದಾಳೆ. ಒಂದೆಡೆ ಲೈವ್ ಬ್ಯಾಂಡ್ ನೋಡಿ ನಗು, ಮತ್ತೊಂದೆಡೆ ಕುತೂಹಲ.
ಮಂಡಿಯೂರಿ ಗೆಳೆಯನ ಪ್ರಪೋಸಲ್
ಲೈವ್ ಬ್ಯಾಂಡ್ ಸದಸ್ಯರ ಕಡೆ ತಿರುಗಿ ನೋಡುತ್ತಲೇ ಇದ್ದ ನೇಹಾ ಜೈನ್‌ಗೆ ಪಕ್ಕದಲ್ಲೇ ಬಾಯ್‌ಫ್ರೆಂಡ್ ಮಂಡಿಯೂರಿದ್ದು ಆರಂಭದಲ್ಲಿ ಗೊತ್ತಾಗಲಿಲ್ಲ. ಯಾರೋ ಪಕ್ಕದಲ್ಲಿರುವುದು ಭಾಸವಾಗುತ್ತಿದ್ದಂತೆ ತಿರುಗಿದ್ದಾಳೆ. ನೋಡಿದರೆ ಬಾಯ್‌ಫ್ರೆಂಡ್. ಅಚ್ಚರಿ, ಖುಷಿಯಲ್ಲಿ ನೇಹಾ ಜೈನ್ ಹಾಗೆ ಬೆಡ್ ಮೇಲೆ ಬಿದ್ದುಕೊಂಡಿದ್ದಾಳೆ. ಏನಿದು ಎಂದು ಯೋಚಿಸುವಾಗಲೇ, ವಿಲ್ ಯು ಮ್ಯಾರಿ ಮಿ ಎಂಬ ಪ್ರಪೋಸಲ್ ನೇಹಾ ಜೈನ್ ಖುಷಿ ಇಮ್ಮಡಿಗೊಳಿಸಿದ್ದು ಮಾತ್ರವಲ್ಲ, ಆನಂದಬಾಷ್ಪ ಸುರಿಸಿದೆ. ಮರು ಕ್ಷಣದಲ್ಲೇ ಯೆಸ್ ಎಂದಿದ್ದಾಳೆ. ಬಾಯ್‌ಫ್ರೆಂಡ್ ರಿಂಗ್ ತೊಡಿಸಿದ್ದಾನೆ. ಬಳಿಕ ಲೈವ್ ಬ್ಯಾಂಡ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಇದು ಅತ್ಯಂತ ಕ್ಯೂಟ್ ಹಾಗೂ ಬೆಸ್ಟ್ ಪ್ರಪೋಸಲ್ ಎಂದಿದ್ದಾರೆ. ಇದೇ ವೇಳೆ ಹಲವರು ಈ ರೀತಿ ಬ್ಯಾಂಡ್ ಬಜಾಯಿಸಿದರೆ ಹುಡುಗಿಯರು ಯೆಸ್ ಹೇಳುತ್ತಾರಾ ಎಂದು ಪ್ರಶ್ನಿಸಿದ್ದಾರೆ. ನಾನು ಪ್ರಪೋಸಲ್ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದೇನೆ, ಲೈವ್ ಬ್ಯಾಂಡ್‌ನಿಂದ ಯೆಸ್ ಉತ್ತರ ಸಿಗುವುದಾದರೆ ನಾನು ಬೇಕಾದರೆ ಲೈವ್ ಬ್ಯಾಂಡ್ ಜೊತೆ ಆರ್ಕೆಸ್ಟ್ರಾ ಆಯೋಜಿಸುತ್ತೇನೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.


