ಕನಸಿನ ಹುಡುಗಿಯನ್ನು ಮದ್ವೆಯಾದೆ ಎಂದು ಖುಷಿಯಲ್ಲಿದ್ದ ಹುಡುಗ, ಆಕೆ ಹೆಣ್ಣಲ್ಲ ಎಂದು ತಿಳಿದು ಶಾಕ್ !
ಅನೇಕ ಸಂಬಂಧ (Relationship)ಗಳು ಶುರುವಾಗುವ ಮೊದಲೇ ಅಂತ್ಯವಾಗಿರುತ್ತದೆ. ಮದುವೆ (Marriage) ಹೊಸ್ತಿಲಿಗೆ ಬಂದ ಎಷ್ಟೋ ಸಂಬಂಧಗಳು ಮುರಿದು ಬಿದ್ದಿವೆ. ಮೊದಲ ರಾತ್ರಿ ಎರಡು ಜೀವಗಳು ಒಂದಾಗುವ ಬದಲು ಬೇರೆಯಾದ ಅನೇಕ ಘಟನೆಗಳಿವೆ. ಈಗ ಇಂಥಹದೇ ಮತ್ತೊಂದು ಘಟನೆ ಒಡಿಶಾ (Odisha)ದಲ್ಲಿ ಬೆಳಕಿಗೆ ಬಂದಿದೆ.
ಮದುವೆ (Wedding) ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಘಟ್ಟ. ವಿವಾಹದ ನಂತ್ರ ಪತಿ (Husband) – ಪತ್ನಿ (Wife) ಜೀವನ ಪರ್ಯಂತ ಒಂದಾಗಿರುವ ಕನಸು (Dream) ಕಾಣ್ತಾರೆ. ಒಂದಾಗಿ ಬಾಳ್ವೆ ಮಾಡ್ತೇವೆಂದು ಪ್ರಮಾಣ ಮಾಡ್ತಾರೆ. ಆದ್ರೆ ಅನೇಕರ ಬಾಳಲ್ಲಿ ಮದುವೆಯೇ ಮುಳುವಾಗುತ್ತದೆ. ಕೆಲ ತಿಂಗಳ ನಂತ್ರ ದಾಂಪತ್ಯ (Married life) ಮುರಿದು ಬೀಳುವುದಿದೆ. ಒಡವೆಗಳ ಕಾರಣಕ್ಕೆ, ಹೆಣ್ಣಿನ, ಗಂಡಿನ ಸ್ವಭಾವದ ಕಾರಣಕ್ಕೆ ದಾಂಪತ್ಯ ಬೇಡವೆಂದು ಕೊನೆಗಾಣಿಸಿ ಬಿಡುತ್ತಾರೆ. ಮತ್ತೆ ಕೆಲವರು ವರ್ಷದಲ್ಲಿ ದೂರವಾಗ್ತಾರೆ. ಇಲ್ಲೊಂದು ಮದುವೆ ಮುರಿದು ಬಿದ್ದಿದೆ. ಅದಕ್ಕೆ ಕಾರಣ ಹುಡುಗಿಯ ವರ್ತನೆ (Behaviour0, ಸ್ವಭಾವ ಏನು ಅಲ್ಲ. ಎಲ್ಲಾ ಸರಿಯಾಗಿದೆ ಅಂದುಕೊಂಡಲ್ಲೇ ಏನೋ ತಪ್ಪಾಗಿದೆ. ಅದೇನು ತಿಳ್ಕೊಳ್ಳೋಣ ಬನ್ನಿ.
ಎಲ್ಲರಂತೆ ಅವನಿಗೂ ಜೀವನ (Life)ದಲ್ಲಿ ಮನಸ್ಸಿಗೊಪ್ಪುವ ಹುಡುಗಿಯನ್ನೇ ಮದುವೆಯಾಗಬೇಕೆಂಬ ಆಸೆಯಿತ್ತು. ಕನಸಿನ ಹುಡುಗಿಯನ್ನು ಕುಟುಂಬಸ್ಥರ ಸಮ್ಮುಖದಲ್ಲಿ ತನ್ನವಳಾಗಿ ಮಾಡಿಕೊಳ್ಳಬೇಕೆಂಬ ಕನಸಿತ್ತು. ಕೊನೆಗೂ ಅವನ ಕನಸಿನ ಹುಡುಗಿಯೇನೋ ಸಿಕ್ಕಿಬಿಟ್ಟಳು. ಸಾಮಾಜಿಕ ಜಾಲತಾಣ (Social media)ದಲ್ಲಿ ಆಕೆಯ ಪರಿಚಯವಾಗಿತ್ತು. ತನ್ನ ಸುಧೀರ್ಘ ಕಾಲದ ಕನಸಿನಂತೆ ಆಕೆಯನ್ನು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯೂ ಆದ. ಆದರೆ ಆಮೇಲೆ ನಡೆದಿದ್ದು ನೋಡಿ ಬೆಚ್ಚಿಬೀಳುವ ಸಂಗತಿ.
ಮದ್ವೆ ವೇಳೆ ಜಾರಿಬಿದ್ದ ವರನ ಪ್ಯಾಂಟ್: ಮುಸಿಮುಸಿ ನಕ್ಕ ವಧು: ವಿಡಿಯೋ ವೈರಲ್
ಬಾಲಸೋರ್‌ನ ಅಲೋಕ್ ಕುಮಾರ್ ಮಿಸ್ತ್ರಿ ಎಂಬವರಿಗೆ ಫೇಸ್‌ಬುಕ್ (Facebook)ನಲ್ಲಿ ಒಬ್ಬಾಕೆಯ ಪರಿಚಯ ಮಾಡಿ, ಮೆಸೇಜ್, ಕಾಲ್ ನಂತರ ಇಬ್ಬರೂ ಪರಸ್ಪರ ಪ್ರೀತಿಯನ್ನು ಹೇಳಿಕೊಂಡರು. ಅಲೋಕ್ ಕುಮಾರ್ ತನ್ನ ಕನಸಿನ ಹುಡುಗಿ ಸಿಕ್ಕಳೆಂದು ಖುಷಿಪಟ್ಟರು. ಗುರುಹಿರಿಯರ ಸಮ್ಮುಖದಲ್ಲಿ ಮದುವೆಯೂ ಆಯಿತು. ಮದುವೆಯ ನಂತರ ಪದ್ಧತಿಯಂತೆ ಹಲವು ಕಾರ್ಯಕ್ರಮಗಳು ನಡೆದವು. ಹೆಣ್ಣು ಚಿನ್ನ, ಬೆಳ್ಳಿಯ ಆಭರಣಗಳನ್ನು ಧರಿಸಿ ಸಮಾರಂಭದಲ್ಲಿ ಓಡಾಡಿದ್ದನ್ನು ನೋಡಿ ಸಂಬಂಧಿಕರು, ಸ್ನೇಹಿತರ ಬಳಗ ಸಹ ಅಲೋಕ್‌ಗೆ ಸುರ ಸುಂದರಿ ಹುಡುಗಿಯೇ ಸಿಕ್ಕಳು ಎಂದು ಖುಷಿಪಟ್ಟರು.
ಮದುವೆಯ ಹೆಚ್ಚಿನ ಶಾಸ್ತ್ರಗಳು ಮುಗಿದ ನಂತರ ದೂರದಲ್ಲಿರುವ ಸಂಬಂಧಿಕರು (Relatives) ಪಾಲ್ಗೊಳ್ಳಲೆಂದು ಪಕ್ಕದೂರಿನಲ್ಲಿ ಒಂದು ವಿಶೇಷ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಅಲ್ಲೇ ಬಯಲಾಗಿದ್ದು ವಧುವಿನ ಅಸಲೀಯತ್ತು.
ಹೌದು, ಅಸಲಿಗೆ ಸೀರೆಯುಟ್ಟು ಆಭರಣ ಧರಿಸಿ ವಯ್ಯಾರದಿಂದ ಓಡಾಡುತ್ತಿದ್ದಾಕೆ ಹುಡುಗಿಯೇ ಅಲ್ಲ. ಹುಡುಗ ಎಂದು ಔತಣಕೂಟಕ್ಕೆ ಬಂದ ಮಹಿಳಯೊಬ್ಬರು ಹೇಳಿದರು. ಮಾತ್ರವಲ್ಲ ವಧುವಿನ ದಿರಿಸಿನಲ್ಲಿರುವವನು ಹುಟ್ಟಿನಿಂದಲೇ ಹುಡುಗಿ ತಾನು ನೋಡಿರುವುದಾಗಿ ತಿಳಿಸಿದರು. ಅಲ್ಲಿಗೆ ಹುಡುಗ ತಲೆ ಸುತ್ತಿ ಬೆಚ್ಚಿ ಬೀಳುವುದಷ್ಟೇ ಬಾಕಿ.
ಕಂಕಣ ಭಾಗ್ಯ ಬಂದಿಲ್ಲವೆಂದರೆ ಮಹಿಳೆಯರ ಟೆನ್ಷನ್ ಹೆಚ್ಚಾಗುತ್ತಾ?
ಅಷ್ಟು ದಿನ ಸಾಮಾಜಿಕ ತಾಣದಲ್ಲಿ, ಹುಡುಗನ ಮನೆಯಲ್ಲಿ ಮೇಘನಾ ಎಂದು ಕರೆಸಿಕೊಳ್ಳುತ್ತಿದ್ದ ಆತನ ಅಸಲಿ ಹೆಸರು ಮೇಘಾನಂದ. ಸಿಟ್ಟಿಗೆದ್ದ ಕುಟುಂಬಸ್ಥರು ಹುಡುಗಿಯ ಜಡೆಯನ್ನು ಬಿಡಿಸಿ, ಆಭರಣಗಳನ್ನು ಕಳಚಿ, ಸೀರೆ ಬಿಚ್ಚಿಸಿ ಪ್ಯಾಂಟ್ ಶರ್ಟ್ ಹಾಕಿಸಿದರು. ನಂತರ ಚೆನ್ನಾಗಿ ಥಳಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದರು.
ಇಷ್ಟಕ್ಕೂ ಈಯಪ್ಪಾ ಹುಡುಗಿಯ ವೇಷದಲ್ಲಿ ಬಂದು ಹುಡುಗನನ್ನೇ ಯಾಕೆ ಮದುವೆಯಾದ ಗೊತ್ತಿಲ್ಲ. ಕನಸಿನ ಹುಡುಗಿಯನ್ನು ಮದುವೆಯಾದೆ ಎಂದು ಖುಷಿಯಲ್ಲಿದ್ದ ಹುಡುಗ ಮಾತ್ರ ಈಗ ಎಲ್ಲಾ ಕಳೆದುಕೊಂಡು ಬೆಪ್ಪು ತಕ್ಕಡಿಯಂತಾಗಿದ್ದಾನೆ. ಮದುವೆ ಕಾರ್ಯಕ್ರಮ ಮುಗಿದು ಫಸ್ಟ್ ನೈಟ್ ಆಗಿದ್ರೂ ಅಸಲೀಯತ್ತು ಗೊತ್ತಾಗ್ತಿತ್ತು. ಆದ್ರೆ ಸದ್ಯ ಅದಕ್ಕೂ ಮೊದಲೇ ಗುಟ್ಟು ರಟ್ಟಾಗಿದೆ.