ಮದ್ವೆ ವೇಳೆ ಜಾರಿಬಿದ್ದ ವರನ ಪ್ಯಾಂಟ್: ಮುಸಿಮುಸಿ ನಕ್ಕ ವಧು: ವಿಡಿಯೋ ವೈರಲ್
ಮದ್ವೆ ವೇಳೆ ವರನ ಪ್ಯಾಂಟ್ ಬಿದ್ದು ಹೋಗಿ ವರ ಮುಜುಗರಕ್ಕೀಡಾದಂತಹ ಘಟನೆಯೊಂದು ನಡೆದಿದ್ದು,ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದುವೆ ಸಮಯದ ಹಲವು ತಮಾಷೆಯ ವಿಡಿಯೋಗಳನ್ನು ನೀವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ವಧು ಹಾಗೂ ವರನ ಸ್ನೇಹಿತರು ನೂತನ ಜೋಡಿಗಳಿಗೆ ಇನ್ನಿಲ್ಲದಂತೆ ಕೀಟಲೆ ಮಾಡುವ, ತಮಾಷೆ ಮಾಡುವ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೇ ರೀತಿ ಇಲ್ಲೊಂದು ಮದುವೆಯ ತಮಾಷೆಯ ವಿಡಿಯೋವೊಂದು ವೈರಲ್ ಆಗಿದೆ.
ಮದ್ವೆ ದಿನ ಧರಿಸುವ ವೇಷಭೂಷಣಗಳು ಇತರ ದಿನಗಳಿಗಿಂತ ವಿಭಿನ್ನವಾಗಿರುತ್ತದೆ. ಎಷ್ಟು ವಿಭಿನ್ನ ಎಂದರೆ ಕೆಲವೊಮ್ಮೆ ಅವು ನಮ್ಮ ದೇಹದಿಂ ಉದುರಿ ಹೋದರು ನಮಗೆ ತಿಳಿಯದಂತಹ ಸ್ಥಿತಿ ಇರುತದೆ. ಇಲ್ಲೊಬ್ಬ ಮಧುಮಗನಿಗೂ ಅದೇ ಅನುಭವವಾಗಿದೆ. ಮದುವೆಯ ಸಂಭ್ರಮದಲ್ಲಿರುವ ವಧು ಹಾಗೂ ವರ ಪರಸ್ಪರ ಹೂವಿನ ಹಾರವನ್ನು ಬದಲಾಯಿಸಿಕೊಂಡಿದ್ದಾರೆ. ಅಷ್ಟರಲ್ಲೇ ವರ ಧರಿಸಿದ್ದ ಪ್ಯಾಂಟ್ ಕೆಳಗೆ ಜಾರಿದ್ದು, ಇದು ವರನಿಗೆ ತಿಳಿಯಲು ಕೆಲ ಸೆಕೆಂಡುಗಳೇ ಹಿಡಿಯಿತು. ಈ ವೇಳೆಗಾಗಲೇ ವಧು ಅದನ್ನು ಗಮನಿಸಿದ್ದು, ಆಕೆ ಮುಖ ಮುಚ್ಚಿಕೊಂಡು ಜೋರಾಗಿ ನಗಲು ಆರಂಭಿಸಿದ್ದಾಳೆ. ಕೂಡಲೇ ಎಚ್ಛೆತ್ತುಕೊಂಡ ವರ ಕೆಳಗೆ ಜಾರಿದ ಪ್ಯಾಂಟ್‌ನ್ನು ಮತ್ತೆ ಮೇಲೆತ್ತಿ ಸಿಕ್ಕಿಸಿಕೊಂಡಿದ್ದಾನೆ. ತನ್ನ ಪ್ಯಾಂಟ್ ಜಾರಿದ್ದು ನೋಡಿ ವಧುವಿನ ಮುಂದೆ ಆತನಿಗೆ ಮುಜುಗರವಾದರೂ ತೋರಿಸಿಕೊಳ್ಲದೇ ಆತನೂ ನಗುತ್ತಿದ್ದಾನೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ವೀಡಿಯೊವನ್ನು bhutni_ke_memes ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಎರಡು ದಿನಗಳ ಹಿಂದೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಈಗಾಗಲೇ 8,828 ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.
ಇತ್ತೀಚೆಗೆ ಮದುವೆಗಳು ಅನೇಕ ಕಾರಣಕ್ಕೆ ಸುದ್ದಿಯಾಗುತ್ತಿವೆ. ಮದ್ವೆ ಮಂಟಪದಲ್ಲಿ ವಧುವೂ ವರನನ್ನು ತಿರಸ್ಕರಿಸಿದ ಮದುವೆಗೆ ವರ ಮೂಹೂರ್ತ ಮೀರಿದ ಮೇಲೆ ಬಂದ ಎಂಬ ಕಾರಣಕ್ಕೆ ವಧುವಿಗೆ ಬೇರೆ ಮದುವೆ ಮಾಡಿದ ಹಲವು ಘಟನೆಗಳು ನಡೆದಿವೆ. ಇತ್ತೀಚೆಗೆ ಮದುವೆ ಗಂಡಿನ ತಲೆಯಲ್ಲಿ ಕೂದಲಿಲ್ಲ ಎಂದು ವಧು (Bride) ಮದುವೆಗೆ ನಿರಾಕರಿಸಿದ ಘಟನೆ ಉತ್ತರ ಪ್ರದೇಶದ (Uttar Pradesh) ಉನ್ನಾವೋದಲ್ಲಿ (Unnao) ನಡೆದಿದೆ. ಭಾರತದಲ್ಲಿ ಕೆಲವು ಮದುವೆಗಳಲ್ಲಿ ನಡೆಯುವ ಸೀನ್‌ಗಳು ಯಾವ ಸಿನಿಮಾಗಳಿಗೂ ಕಡಿಮೆ ಇರುವುದಿಲ್ಲ. ಮದುವೆಯಲ್ಲಿ ತಮಗೆ ಬೇಕಾದ ಆಹಾರ ತಯಾರಿಸಲಿಲ್ಲ, ವರದಕ್ಷಿಣೆ ಹಣ ಇನ್ನು ತಲುಪಿಲ್ಲ. ದಿಬ್ಬಣ ಸಮಯಕ್ಕೆ ಸರಿಯಾಗಿ ಆಗಮಿಸಿಲ್ಲ ಮುಂತಾದ ಹಲವಾರು ಕಾರಣಕ್ಕೆ ಮದುವೆ ನಿಂತ ಘಟನೆಗಳನ್ನು ನೀವು ಈಗಾಗಲೇ ಕೇಳಿರಬಹುದು. ಈಗ ಇಲ್ಲಿ ವಧು, ವರ ಬಾಂಡ್ಲಿಯಾಗಿದ್ದಾನೆ ಆತನ ತಲೆಯಲ್ಲಿ ಕೂದಲಿಲ್ಲ ಎಂದು ತಿಳಿದು ಮದುವೆ ನಿರಾಕರಿಸಿದ್ದಾಳೆ.
ಗದಗ: ಆಂಟಿ ಮೋಹಕ್ಕೆ ಸಿಲುಕಿದ ರೌಡಿಶೀಟರ್: ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಪಾಲಿಗೆ ವಿಲನ್!
ಉತ್ತರಪ್ರದೇಶದ ಉನ್ನಾವೋದಲ್ಲಿ ನಡೆದ ಘಟನೆಯಲ್ಲಿಯೂ ಮದುವೆಯ ಅರ್ಧದಷ್ಟು ಸಂಪ್ರದಾಯಗಳು ಮುಗಿದು ಇನ್ನೇನು ಅಂತಿಮ ವಿಧಿಯಷ್ಟೇ ಬಾಕಿ ಇತ್ತು. ಈ ವೇಳೆ ವರ ಮೂರ್ಛೆ ತಪ್ಪಿ ಬಿದ್ದಿದ್ದು, ಇದರಿಂದ ವರ ಧರಿಸಿದ್ದ ವಿಗ್ ನೆಲಕ್ಕೆ ಬಿದ್ದಿದೆ. ಪರಿಣಾಮ ವರನ ತಲೆಯಲ್ಲಿ ಕೂದಲೇ ಇಲ್ಲ ಎಂಬುದು ಎಲ್ಲರಿಗೂ ತಿಳಿದು ಹೋಗಿದ್ದು, ಇದು ಮದುವೆಯ ಸನ್ನಿವೇಶವನ್ನೇ ಕ್ಷಣದಲ್ಲಿ ಬದಲಾಯಿಸಿದೆ. ಇತ್ತ ವಧುವಿನ ಕುಟುಂಬದವರಿಂದ ವರನ ಈ ಬೋಳು ತಲೆಯನ್ನು ವಿಗ್ (wig) ಧರಿಸುವ ಮೂಲಕ ಮುಚ್ಚಿಡಲಾಗಿತ್ತು.
Chikkaballapur: ತಾಳಿ ಕಟ್ಟುವ ವೇಳೆ ಮದುವೆ ಮಂಟಪದಿಂದ ವಧು ಎಸ್ಕೇಪ್!
ಹೀಗಾಗಿ ವರನ ಬೋಳು ತಲೆಯನ್ನು ಮದುವೆ ಮಂಟಪದಲ್ಲಿ ನೋಡಿದ ವಧು ಮದುವೆಯಾಗಲು ನಿರಾಕರಿಸಿದಳು. ಅನೇಕರು ಅವಳನ್ನು ಮನವೊಲಿಸಲು ಮತ್ತು ಮದುವೆಯಾಗುವಂತೆ ಮನವೊಲಿಸಲು ಮುಂದಾದರು ಆದರೆ ವಧು ತನ್ನ ನಿಲುವಿನಲ್ಲಿ ದೃಢವಾಗಿ ಉಳಿದು ಮದುವೆಯನ್ನು ರದ್ದುಗೊಳಿಸಿದಳು.