ಇದು ರಿಯಲ್ ಬದಾಯಿ ಹೋ.... 47ರಲ್ಲಿ ತಾಯಿಯಾದ 23 ಹರೆಯದ ಮಗಳಿರುವ ಅಮ್ಮ ...
23 ವರ್ಷ ಪ್ರಾಯದ ಮಗಳಿರುವವರು ತಮ್ಮ 47ನೇ ಹರೆಯಕ್ಕೆ ಗರ್ಭ ಧರಿಸಿದರೆ ಅವರ ಸ್ಥಿತಿ ಹೇಗಿರುತ್ತದೆ. ಅದೂ ಊಹೆಗೂ ನಿಲುಕದ್ದು. ಅಂತಹದೊಂದು ವಿಶೇಷ ಘಟನೆಯೊಂದು ಕುಟುಂಬವೊಂದರಲ್ಲಿ ನಡೆದಿದ್ದು, ಇದನ್ನು ದಂಪತಿಯ 23ರ ಹರೆಯದ ಮಗಳು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.
ಆಯುಷ್ಮಾನ್ ಖುರಾನಾ ಅಭಿನಯದ ಬದಾಯಿ ಹೋ ಚಿತ್ರವನ್ನು ನೀವು ನೋಡಿದ್ದೀರಾ? ಈ ಚಿತ್ರವನ್ನು ನೋಡಿದ್ದರೆ ಬೆಳೆದ ಮಕ್ಕಳ ಮುಂದೆ ಮಧ್ಯ ವಯಸ್ಸಿನ ಗರ್ಭಧಾರಣೆ ಹೇಗೆ ದಂಪತಿಗೆ ಮುಜುಗರ ಉಂಟು ಮಾಡುತ್ತಿತ್ತು ಎಂಬುದು ನಿಮಗೆ ತಿಳಿದು ಬರುತ್ತದೆ. ಈಗ ಮಧ್ಯೆ ಒಡಹುಟ್ಟಿದ ಮಕ್ಕಳ ಮಧ್ಯೆ ದೊಡ್ಡ ಗ್ಯಾಪ್ ಇದ್ದರೆಯೇ ಸ್ನೇಹಿತರು ಮಕ್ಕಳನ್ನು ಕಿಚಾಯಿಸುತ್ತಿರುತ್ತಾರೆ. ಹೀಗಿರುವಾಗ 23 ವರ್ಷ ಪ್ರಾಯದ ಮಗಳಿರುವವರು ತಮ್ಮ 47ನೇ ಹರೆಯಕ್ಕೆ ಗರ್ಭ ಧರಿಸಿದರೆ ಅವರ ಸ್ಥಿತಿ ಹೇಗಿರುತ್ತದೆ. ಅದೂ ಊಹೆಗೂ ನಿಲುಕದ್ದು. ಅಂತಹದೊಂದು ವಿಶೇಷ ಘಟನೆಯೊಂದು ಕುಟುಂಬವೊಂದರಲ್ಲಿ ನಡೆದಿದ್ದು, ಇದನ್ನು ದಂಪತಿಯ 23ರ ಹರೆಯದ ಮಗಳು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಜೊತೆಗೆ ಪೋಷಕರಿಗೆ ಈ ಮುಜುಗರದ ಕ್ಷಣದಲ್ಲಿ ಧೈರ್ಯ ತುಂಬಿದ್ದಾಳೆ. ಆಕೆಯ ಪೋಸ್ಟ್‌ಗೆ ನೋಡುಗರು ಕೂಡ ಮೆಚ್ಚುಗೆಯ ಜೊತೆ ಬೆಂಬಲ ಸೂಚಿಸಿದ್ದಾರೆ.
ಬದಾಯಿ ಹೋ ಸಿನಿಮಾದಲ್ಲಿ ಮಧ್ಯವಯಸ್ಕ ದಂಪತಿಯ ನಡುವೆ ಅನೋನ್ಯತೆ, ದೈಹಿಕ ಸಂಬಂಧ ಇಲ್ಲ ಎಂಬಂತೆ ಸಮಾಜ ನೋಡುತ್ತಿರುತ್ತದೆ. ಆದರೆ ಅದಕ್ಕೆ ತದ್ವಿರುದ್ಧ ಎಂಬಂತೆ ಅಚಾನಕ್ ಆಗಿ ಮಹಿಳೆ ಗರ್ಭಿಣಿಯಾಗುತ್ತಾಳೆ. ಈ ಸಿನಿಮಾವೂ ವೀಕ್ಷಕರಿಂದ ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದಿದೆ. ಅದರ ಜೊತೆ ಮಧ್ಯವಯಸ್ಕ ಮಹಿಳೆ ಪ್ರಿಯಂವದಾಳ ಪಾತ್ರವನ್ನು ನಿರ್ವಹಿಸಿ ನೀನಾ ಗುಪ್ತಾ 64ನೇ ಫಿಲ್ಮ್‌ಫೇರ್‌ನಲ್ಲಿ ತಮ್ಮ ಪಾತ್ರಕ್ಕಾಗಿ ಪ್ರಶಸ್ತಿ ಪಡೆದರು. ಚಿತ್ರದಲ್ಲಿ, ಗುಪ್ತಾ ಪಾತ್ರದ ಪ್ರಿಯಂವದಾ ತಮ್ಮ ಮಧ್ಯವಯಸ್ಸಿನಲ್ಲಿ ಗರ್ಭಿಣಿಯಾಗಿರುತ್ತಾರೆ. ಆದರೆ ಇದನ್ನು ಕೇಳಿ ಹರೆಯದ ಮಕ್ಕಳಿಗೆ ಆಘಾತವಾಗುತ್ತದೆ. ಆದರೆ ಅಸಹ್ಯಗೊಂಡಿದ್ದ ಮಕ್ಕಳೇ ಕೊನೆಗೆ ಹತ್ತಿರ ಬಂದು ಅಮ್ಮನಿಗೆ ಪ್ರೀತಿ ತೋರುತ್ತಾರೆ. ಅಲ್ಲದೇ ಮಗು ಹೊಂದುವ ಆಕೆಯ ನಿರ್ಧಾರವನ್ನು ಬೆಂಬಲಿಸುತ್ತಾರೆ.
ಮಗನ ಮಗುವಿಗೆ ಜನ್ಮ ನೀಡಿದ ತಾಯಿ, ಈಕೆ ಅಜ್ಜಿಯೂ ಹೌದು, ತಾಯಿಯೂ ಹೌದು!
ಅದೇ ರೀತಿ ಇಲ್ಲಿ 23 ವರ್ಷದ ಆರ್ಯ ಪಾರ್ವತಿ ಮತ್ತು 47 ವರ್ಷದ ಪ್ರಾಯದಲ್ಲಿ ಮತ್ತೆ ಅಮ್ಮನಾದ ಆರ್ಯ ಪಾರ್ವತಿ ಅಮ್ಮನ ಕತೆ ಇದಾಗಿದೆ. ಪೋಸ್ಟ್‌ನಲ್ಲಿ, ಆರ್ಯ ತನ್ನ ತಾಯಿಯ ತಡವಾದ ಗರ್ಭಾವಸ್ಥೆಯು ತನಗೆ ಹೇಗೆ ಆಘಾತವನ್ನುಂಟುಮಾಡಿತು ಎಂಬುದರ ಕುರಿತು ಮಾತನಾಡಿದ್ದಾರೆ. ಆದರೆ ನಂತರ ಪರಿಸ್ಥಿತಿಯು ತಿಳಿಯಾಯಿತು ಹಾಗೂ ತಾನು ಕೂಡ ತನ್ನ ಅಮ್ಮನ ಮಗುವನ್ನು (ತಮ್ಮ ಅಥವಾ ತಂಗಿ) ಸ್ವೀಕರಿಸಲು ಸ್ವಾಗತಿಸಲು ಸಿದ್ದಳಾದೆ ಎಂದು ಆಕೆ ಹೇಳಿಕೊಂಡಿದ್ದಾಳೆ.
'ಒಂದು ಫೋನ್ ಕರೆ ನನ್ನ ಜೀವನವನ್ನು ಬದಲಾಯಿಸಿತು. ಕಳೆದ ವರ್ಷ, ನಾನು ರಜೆಗಾಗಿ ಮನೆಗೆ ಹೋಗಲು ಕೆಲವು ದಿನಗಳಿರುವಾಗ ನನ್ನ ಅಪ್ಪನಿಂದ ಕರೆ ಬಂತು. ಅವರ ಧ್ವನಿಯಲ್ಲಿ ಏನು ಅಳುಕಿತ್ತು. ಕೆಲವು ನಿಮಿಷಗಳ ನಂತರ ಅವರು ಹೇಳಿದರು 'ಅಮ್ಮ ಗರ್ಭಿಣಿಯಾಗಿದ್ದಾಳೆ' ಎಂದು. ನನಗೆ ಈ ವಿಚಾರಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯಲಿಲ್ಲ. ನೀವು 23ರ ಹರೆಯದಲ್ಲಿರುವಾಗ ಇದು ನಿಮಗೆ ಪೋಷಕರು ಹೇಳುವ ವಿಚಾರ ಆಗಿರುವುದಿಲ್ಲ. ಜೊತೆಗೆ ನೀವು ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ. ನಾನಂತೂ ಈ ವಿಚಾರ ಕೇಳಿ ಮೊದಲಿಗೆ ಆಘಾತಗೊಂಡಿದ್ದೆ. ಏಕೆಂದರೆ ನನ್ನಮ್ಮ 47ರ ಹರೆಯದಲ್ಲಿದ್ದರು ಎಂದು ಆರ್ಯ ಪಾರ್ವತಿ ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ವಿಸ್ತಾರವಾಗಿ ಬರೆದುಕೊಂಡಿದ್ದಾರೆ.
ತನ್ನ ಪೋಷಕರು ತನಗೆ ಈ ವಿಚಾರವನ್ನು ತಿಳಿಸಲು ಹೇಗೆ ಹೆದರಿದ್ದರು ಹಾಗೂ ನಾಚಿಕೆ ಮುಜುಗರ ಪಟ್ಟಿದ್ದರು ಎಂಬುದನ್ನು ಆರ್ಯಾ ನೆನಪಿಸಿಕೊಂಡರು. ಅಪ್ಪ ನನಗೆ ಈ ವಿಚಾರ ತಿಳಿಸಿದ ನಂತರ ಅವರು ಹೇಳಿದರು, 'ನಾವು ಈ ವಿಚಾರವನ್ನು ರಹಸ್ಯವಾಗಿಟ್ಟಿದ್ದೆವು ಏಕೆಂದರೆ ನಮಗೆ ನೀನು ಈ ವಿಚಾರದ ಬಗ್ಗೆ ಹೇಗೆ ಪ್ರತಿಕ್ರಿಯಿಸುವೆ ಎಂಬುದು ತಿಳಿದಿರಲಿಲ್ಲ' ಎಂದರು. ಕೆಲವು ದಿನಗಳ ನಂತರ ನಾನು ಮನೆಗೆ ತಲುಪಿದ ಬಳಿಕ ನಾನು ಅಮ್ಮನ ಮಡಿಲಲ್ಲಿ ಮಲಗಿ ಅಳಲು ಆರಂಭಿಸಿದೆ. ನಂತರ ನಾನು ಹೇಳಿದೆ.. ನಾನೇಕೆ ನಾಚಿಕೆ ಪಡುತ್ತೇನೆ. ನಾನು ಇದನ್ನು ಬಹಳ ದೀರ್ಘಕಾಲದಿಂದ ಬಯಸಿದ್ದೆ ಎಂದು ಆರ್ಯಾ ಬರೆದುಕೊಂಡಿದ್ದಾರೆ.
ಅಬ್ಬಬ್ಬಾ..31ನೇ ವಯಸ್ಸಿನಲ್ಲಿ 57 ಮಕ್ಕಳ ತಂದೆ, ತಿಂಗಳಿಗೆ ಐದು ಮಹಿಳೆಯರನ್ನು ಪ್ರೆಗ್ನೆಂಟ್ ಮಾಡ್ತಾನಂತೆ!
ಒಟ್ಟಿನಲ್ಲಿ ಈಗಿನ ತಲೆಮಾರಿನಲ್ಲಿ ಮಧ್ಯವಯಸ್ಸಿನಲ್ಲಿ ಗರ್ಭಿಣಿಯಾದರೆ, ಅಥವಾ ಪ್ರಾಯಕ್ಕೆ ಬಂದ ಮಕ್ಕಳು ಮನೆಯಲ್ಲಿರುವಾಗ ಮಕ್ಕಳಾದರೆ ಅದರ ಮುಜುಗರವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮಕ್ಕಳು ಕೂಡ ಇದನ್ನು ಸಹಜ ಎಂಬಂತೆ ಸ್ವೀಕರಿಸಲು ಸಿದ್ಧರಿರುವುದಿಲ್ಲ. ಆದರೆ ಇಲ್ಲಿ ಸೋಶಿಯಲ್ ಮೀಡಿಯಾ (Sociam Media) ವೀಕ್ಷಕರು ಈ ವಿಚಾರಕ್ಕೆ ಬಹಳ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಇದೊಂದು ಮ್ಯಾಜಿಕ್ ಎಂದಿದ್ದಾರೆ. ಅಲ್ಲದೇ ಆರ್ಯಾ ಹಾಗೂ ಆರ್ಯಾ ಪೋಷಕರಿಗೆ ಶುಭ ಕೋರಿದ್ದಾರೆ.