ಅಬ್ಬಬ್ಬಾ..31ನೇ ವಯಸ್ಸಿನಲ್ಲಿ 57 ಮಕ್ಕಳ ತಂದೆ, ತಿಂಗಳಿಗೆ ಐದು ಮಹಿಳೆಯರನ್ನು ಪ್ರೆಗ್ನೆಂಟ್ ಮಾಡ್ತಾನಂತೆ!

ಇವತ್ತಿನ ದಿನಗಳಲ್ಲಿ ಮೂವತ್ತೈದು ವರ್ಷ ಕಳೆದರೂ ಬಹುತೇಕ ಪುರುಷರಿಗೆ ಮದುವೆ ಆಗಿರುವುದಿಲ್ಲ. ಆದ್ರೆ ಇಲ್ಲೊಬ್ಬಾತ 31ನೇ ವಯಸ್ಸಿಗೆ  57 ಮಕ್ಕಳ ತಂದೆಯಾಗಿದ್ದಾನೆ. ಅಷ್ಟೇ ಅಲ್ಲ, ತಿಂಗಳಿಗೆ ಐದು ಜನರ ಹೆಂಗಸರನ್ನು ಪ್ರೆಗ್ನೆಂಟ್ ಮಾಡ್ತಾನಂತೆ.

Father of 57 children at the age of 31, makes 5 women pregnant every month Vin

ನಾನಾ ಕಾರಣಗಳಿಂದ ಇವತ್ತಿನ ದಿನಗಳಲ್ಲಿ ಪುರುಷರು ತುಂಬಾ ತಡವಾಗಿ ಮದುವೆ ಆಗುತ್ತಿದ್ದಾರೆ. ಸೆಟಲ್‌ ಆಗಬೇಕು, ಬೆಸ್ಟ್ ಪಾರ್ಟನರ್ ಸಿಗಬೇಕು ಹೀಗೆ ನಾನಾ ಉದ್ದೇಶದಿಂದ ಮೂವತ್ತೈದು, ನಲವತ್ತು ವರ್ಷವಾದ ಬಳಿಕವಷ್ಟೇ ಮದುವೆಯ ಯೋಚನೆ ಮಾಡುತ್ತಾರೆ. ಆದ್ರೆ ಇಲ್ಲೊಬ್ಬಾತ ಮಾತ್ರ 31ನೇ ವಯಸ್ಸಿನಲ್ಲಿ 57 ಮಕ್ಕಳ ತಂದೆಯಾಗಿದ್ದಾನೆ. ಇನ್ನೂ ಅಚ್ಚರಿಯ ವಿಚಾರವೆಂದರೆ ಈತ ಪ್ರತಿ ತಿಂಗಳು ಸರಾಸರಿ ಐದು ಹೆಂಗಸರ ತಂದೆಯಾಗುತ್ತಾನೆ. ಪ್ರಪಂಚದ ಅನೇಕ ದೇಶಗಳಲ್ಲಿ ಈತನ ಮಕ್ಕಳಿದ್ದಾರೆ. ಒಬ್ಬ ವ್ಯಕ್ತಿಯು ಇಷ್ಟು ಮಕ್ಕಳನ್ನು ಹೇಗೆ ಹುಟ್ಟುಹಾಕುತ್ತಾನೆ ಮತ್ತು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುತ್ತಿರುವ ಈತನ ಉದ್ದೇಶವೇನು ಎಂಬುದು ಅಚ್ಚರಿಗೆ ಕಾರಣವಾಗುತ್ತಿದೆ.

57 ಮಕ್ಕಳನ್ನು ಹೊಂದಿರುವ ವ್ಯಕ್ತಿಯ ಹೆಸರು ಕೈಲ್ ಗೋರ್ಡಿ
ಪ್ರಪಂಚದಾದ್ಯಂತ ಅನೇಕ ಮಹಿಳೆಯರು ಬಂಜೆತನದ (Fertility) ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ. ಆದರೆ ಇದಕ್ಕೆ ಪರಿಹಾರವಾಗಿ ಹಲವಾರು ವೈದ್ಯಕೀಯ ಚಿಕಿತ್ಸೆಗಳಿವೆ. ವೀರ್ಯ ದಾನ (Sperm donating) ಇದರ ಒಂದು ಭಾಗವಾಗಿದೆ. ಕೆಲವೊಬ್ಬರು ವೀರ್ಯದಾನವನ್ನು ಸದುದ್ದೇಶಕ್ಕೆ ಬಳಸುತ್ತಿದ್ದರೆ, ಇನ್ನು ಕೆಲ ಪುರುಷರು ಇದನ್ನು ವ್ಯಾಪಾರವಾಗಿ ಬಳಸಲು ಪ್ರಾರಂಭಿಸಿದ್ದಾರೆ. ವಿದೇಶಗಳಲ್ಲಿ, ಮಹಿಳೆಯರು (Woman) ತಾಯಂದಿರಾಗಲು ವೀರ್ಯ ದಾನಿಗಳನ್ನು ಸಂಪರ್ಕಿಸಲು ಪ್ರಾರಂಭಿಸಿದ್ದಾರೆ. ಅದಕ್ಕೆ ಅವರು ಹಣವನ್ನೂ ಸಹ ಕೊಡುತ್ತಾರೆ. ಹೀಗೆ ವೀರ್ಯದಾನ ಮಾಡುತ್ತಿರುವವರಲ್ಲಿ ಒಬ್ಬರು, ಕೈಲ್ ಗೋರ್ಡಿ.

ಗುಣಮಟ್ಟದ ವೀರ್ಯಬೇಕೆಂದ್ರೆ ಟಿವಿ, ಮೊಬೈಲ್ ಬಳಸೋ ಚಟ ಬಿಟ್ ಬಿಡಿ

31ನೇ ವಯಸ್ಸಿನಲ್ಲಿ 57 ಮಕ್ಕಳನ್ನು ಹೊಂದಿರುವ ವ್ಯಕ್ತಿಯ ಹೆಸರು ಕೈಲ್ ಗೋರ್ಡಿ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಕೆಲ್ ಗಾರ್ಡಿ ಅವರು ವೀರ್ಯ ದಾನಿಯಾಗಿ ಹಲವು ದೇಶಗಳಲ್ಲಿ ಛಾಪು ಮೂಡಿಸಿದ್ದಾರೆ. ಅವರೇ ತಮ್ಮ ವೀರ್ಯ ದಾನದ ಪ್ರಯಾಣವನ್ನು ಸಾಮಾಜಿಕ ಜಾಲತಾಣದಲ್ಲಿ (Social media) ಹಂಚಿಕೊಂಡಿದ್ದಾರೆ.

ಕೆಲ್ ವೀರ್ಯದಾನದ ಮೂಲಕ ತಾಯಿಯಾಗಲು ಕಷ್ಟಪಡುವ ಮಹಿಳೆಯರಿಗೆ ತಾಯ್ತನದ ಆನಂದವನ್ನು ನೀಡುತ್ತಾರೆ. ಕಳೆದ 9 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ. ಅವರು ಇದುವರೆಗೆ 57 ಮಕ್ಕಳ ಜೈವಿಕ ತಂದೆಯಾಗಿದ್ದಾರೆ. ಅವರ ದಾಖಲೆಯಿಂದಾಗಿ, ಅವರನ್ನು ಸರಣಿ ವೀರ್ಯ ದಾನಿ ಎಂದು ಕರೆಯಲಾಗುತ್ತದೆ. ಅವರು ವಿವಿಧ ದೇಶಗಳಿಗೆ ಹೋಗಿ ನಿರ್ಗತಿಕ ಮಹಿಳೆಯರಿಗೆ ವೀರ್ಯವನ್ನು ನೀಡುತ್ತಾರೆ. ಇತ್ತೀಚೆಗಷ್ಟೇ ಅವರು ಯುಕೆ ಮತ್ತು ಫ್ರಾನ್ಸ್‌ನಲ್ಲಿದ್ದು ಅಲ್ಲಿ ಮೂವರು ಮಹಿಳೆಯರಿಗೆ ವೀರ್ಯ ನೀಡಿದ್ದರು. ಮುಂದಿನ ದಿನಗಳಲ್ಲಿ ಅವರು ಇನ್ನೂ 14 ಮಕ್ಕಳ ಜೈವಿಕ ತಂದೆಯಾಗಲಿದ್ದಾನೆ ಎಂದು ಅವರು ಹೇಳುತ್ತಾರೆ.

ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ, ಪುರುಷರ ವೀರ್ಯದ ಸಂಖ್ಯೇನೆ ಕಡಿಮೆಯಾಗುತ್ತೆ!

ವೀರ್ಯದಾನ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಿದ್ಯಾ ?
ಕೈಲ್ ಗೋರ್ಡಿಯೊಂದಿಗೆ ವೀರ್ಯ ದಾನಿಯಾಗಿರುವುದರಿಂದ ಅವರ ವೈಯಕ್ತಿಕ ಸಂಬಂಧಗಳು ಎಷ್ಟು ಪರಿಣಾಮ ಬೀರುತ್ತವೆ ಎಂಬುದರ ಕುರಿತು ಅವರು ಮಾತನಾಡಿದ್ದಾರೆ. ಇದು ಅವರ ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಹೇಳಿದರು. ಅವನು ವೀರ್ಯದಾನಿ ಎಂದು ತಿಳಿದ ತಕ್ಷಣ ಹುಡುಗಿಯರು ಅವರನ್ನು ಬಿಟ್ಟು ಹೋಗುತ್ತಾರೆ ಎಂದು ತಿಳಿಸಿದರು. ಮಾತ್ರವಲ್ಲ ಕೈಲ್‌ ಉತ್ತಮ ಗುಣಮಟ್ಟದ ವೀರ್ಯಕ್ಕಾಗಿ ಒತ್ತಡ-ಮುಕ್ತ ಜೀವನವನ್ನು ನಡೆಸುತ್ತಾರೆ. 10 ಗಂಟೆಗಳ ನಿದ್ದೆ (Sleep) ಪಡೆಯುತ್ತಾರೆ. ವೈದ್ಯಕೀಯವಾಗಿ ತುಂಬಾ ಫಿಟ್ ಆಗಿರುತ್ತಾರೆ. ಅಷ್ಟೇ ಅಲ್ಲ, ದೈಹಿಕ ಸಂಬಂಧಗಳನ್ನು ತಪ್ಪಿಸುತ್ತಾರೆ. ಇದರಿಂದ ವೀರ್ಯವು ವ್ಯರ್ಥವಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

Health Tips: ಟೈಟ್ ಅಂಡರ್ ವೆರ್ ಹಾಕ್ತೀರಾ? ಬಂಜೆತನ ಕಾಡಬಹುದಂತೆ !

Latest Videos
Follow Us:
Download App:
  • android
  • ios