Love Story: ತಂದೆ ಶವದ ಮುಂದೆ ಅಳ್ತಿದ್ದವಳಿಗೆ ಪ್ರಪೋಸ್ ಮಾಡಿದ ಹುಡುಗ
ತಂದೆ – ತಾಯಿ ಸಾವಿನ ದುಃಖವನ್ನು ಅಕ್ಷರದಲ್ಲಿ ಹೇಳಲು ಸಾಧ್ಯವಿಲ್ಲ. ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಆದ್ರೆ ಈ ನೋವಿನ ಸಂದರ್ಭದಲ್ಲಿ ಒಬ್ಬರಾದ್ರೂ ಆಪ್ತರು ಬೇಕೆನ್ನಿಸುತ್ತದೆ. ಇದೇ ಕಾರಣಕ್ಕೆ ವ್ಯಕ್ತಿಯೊಬ್ಬ ತಂದೆ ಶವರ ಮುಂದೆಯೇ ಯುವತಿಗೆ ಪ್ರಪೋಸ್ ಮಾಡಿದ್ದಾರೆ.
ಪ್ರೀತಿ (Love) ಎಲ್ಲೆ ಮೀರಿದ್ದು. ಅದು ಎಲ್ಲಿ, ಯಾವಾಗ,ಯಾರಿಗೆ ಬೇಕಾದ್ರೂ ಹುಟ್ಟಬಹುದು. ಹಾಗೆ ಪ್ರೀತಿಸಿದ ವ್ಯಕ್ತಿ ತನ್ನ ಪ್ರೇಮ ನಿವೇದನೆಯನ್ನು ಎಲ್ಲಿ ಬೇಕಾದ್ರೂ ಮಾಡಬಹುದು. ನಮ್ಮವರನ್ನು ಕಳೆದುಕೊಂಡ ದುಃಖ ಮರೆಯಲು ಎಂದೂ ಸಾಧ್ಯವಿಲ್ಲ. ಅದರಲ್ಲೂ ತಂದೆ (Father) – ತಾಯಿ (Mother) ಯ ಸಾವು (Death ) ಮರೆಯುವಂತಹ ವಿಷ್ಯವೇ ಅಲ್ಲ. ಕೆಲವೊಮ್ಮೆ ಈ ನೋವಿ (Pain)ನ ಮಧ್ಯೆ ಸಿಗುವ ಭರವಸೆ ನಮ್ಮ ದುಃಖವನ್ನು ಕಡಿಮೆ ಮಾಡುತ್ತದೆ. ಮುಂದಿನ ಜೀವನದ ಬಗ್ಗೆ ಆಲೋಚಿಸಲು ದಾರಿ ಮಾಡುತ್ತದೆ. ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ. ದುಃಖದಲ್ಲಿರುವವರನ್ನು ಸಂತೈಸಲು ಅನೇಕ ವಿಧಾನಗಳಿವೆ. ಮಾತಿನ ಮೂಲಕ, ಅಪ್ಪುಗೆಯ ಮೂಲಕ ಹೀಗೆ ಬೇರೆ ಬೇರೆ ವಿಧಾನಗಳಲ್ಲಿ ನೋವಿನಲ್ಲಿರುವವರನ್ನು ಸಂತೈಸಬಹುದು. ಆದ್ರೆ ಪಾದ್ರಿಯೊಬ್ಬ ತಂದೆ ಕಳೆದುಕೊಂಡ ಯುವತಿಯ ನೋವನ್ನು ಕಡಿಮೆ ಮಾಡಲು ಭಿನ್ನ ದಾರಿ ಹುಡುಕಿದ್ದಾನೆ. ಪಾದ್ರಿ ಮಾಡಿದ ಕೆಲಸ ಎಲ್ಲರನ್ನು ಗೊಂದಲಕ್ಕೀಡು ಮಾಡಿದೆ. ಅನೇಕರು ಪಾದ್ರಿ ಕೆಲಸವನ್ನು ಹೊಗಳಿದ್ರೆ ಮತ್ತೆ ಕೆಲವರು ಪಾದ್ರಿಯನ್ನು ತೆಗಳಿದ್ದಾರೆ. ಅಷ್ಟಕ್ಕೂ ಪಾದ್ರಿ ಮಾಡಿದ್ದೇನು ಎಂಬುದನ್ನು ನಾವಿಂದು ಹೇಳ್ತೇವೆ.
ಅಪ್ಪನ ಶವದ ಮುಂದೆ ಪ್ರಪೋಸ್ : ದಕ್ಷಿಣ ಆಫ್ರಿಕಾದಲ್ಲಿ ಘಟನೆ ನಡೆದಿದೆ. ಯುವತಿಯೊಬ್ಬಳು ತಂದೆ ಸಾವಿನ ನೋವಿನಲ್ಲಿದ್ದಳು. ತಂದೆ ಶವ ಮುಂದಿತ್ತು. ಶವ ಪೆಟ್ಟಿಗೆಯಿಂದ ಸ್ವಲ್ಪ ದೂರದಲ್ಲಿ ಯುವತಿ ಕುಳಿತು ಅಳ್ತಿದ್ದಳು. ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಯುವತಿಗೆ ಪ್ರಪೋಸ್ ಮಾಡಿದ್ದಾನೆ. ಯುವತಿ ಮುಂದೆ ಮಂಡಿಯೂರಿ ಕುಳಿತ ವ್ಯಕ್ತಿ ಪ್ರೇಮ ನಿವೇದನೆ ಮಾಡಿದ್ದಾನೆ.
ಇದನ್ನೂ ಓದಿ: REAL STORY: ಅಪರಿಚಿತನೊಂದಿಗೆ ಕಳೆದಿದ್ದು ಒಂದೇ ರಾತ್ರಿ, ತಪ್ಪಿನಿಂದ ಇಡೀ ಜೀವನವೇ ಕತ್ತಲು
ನೋವಿನಲ್ಲಿದ್ದ ಯುವತಿ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ? : ತಂದೆ ಕಳೆದುಕೊಂಡ ದುಃಖದಲ್ಲಿದ್ದ ಯುವತಿ ಒಂದೇ ಸಮನೆ ಅಳ್ತಿದ್ದಳು. ಆಕೆ ಅಳು ನೋಡಲಾಗದೆ ಆಕೆ ಮುಂದೆ ಬಂದ ವ್ಯಕ್ತಿ ನನ್ನನ್ನು ಮದುವೆಯಾಗ್ತೀಯಾ ಎಂದಿದ್ದಾನೆ. ಒಮ್ಮೆ ಯುವತಿ ಆತನ ವರ್ತನೆಗೆ ಅಚ್ಚರಿಗೊಂಡಿದ್ದಾಳೆ. ನಂತ್ರ ಚೇತರಿಸಿಕೊಂಡಿದ್ದಲ್ಲದೆ ಆತನ ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ.
ವೈರಲ್ ಆಯ್ತು ವಿಡಿಯೋ : ಸಾಮಾಜಿಕ ಜಾಲತಾಣ ಟಿಕ್ ಟಾಕ್ ನಲ್ಲಿ ಒಂದು ವಾರದ ಹಿಂದೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಈವರೆಗೆ ಎರಡುವರೆ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ವಿಡಿಯೋದ ಕೊನೆಯಲ್ಲಿ ಆಕೆ ಉಂಗುರ ಧರಿಸ್ತಿರೋದನ್ನು ನೋಡಬಹುದಾಗಿದೆ.
ಇದನ್ನೂ ಓದಿ: ಪ್ರೀತಿಗೆ ಅಮೀರ ಈ ಭಿಕ್ಷುಕ: ಪತ್ನಿಗಾಗಿ 90 ಸಾವಿರ ನೀಡಿ ಮೊಪೇಡ್ ಕೊಂಡ
ಆತ ಮತ್ತ್ಯಾರೂ ಅಲ್ಲ ಪಾದ್ರಿ : ಯುವತಿ ಮುಂದೆ ಪ್ರೇಮ ನಿವೇದನೆ ಮಾಡಿದ ವ್ಯಕ್ತಿ ಪಾದ್ರಿ ಎಂಬುದು ಇಲ್ಲಿನ ಮತ್ತೊಂದು ವಿಶೇಷ. ಮೊದಲೇ ಹೇಳಿದಂತೆ ಪಾದ್ರಿಯ ಮದುವೆ ವಿಷ್ಯ ಅಲ್ಲಿದ್ದವರನ್ನು ಮತ್ತಷ್ಟು ದಂಗುಬಡಿಸಿದ್ದು ಸುಳ್ಳಲ್ಲ. ಆದ್ರೆ ಯುವತಿ ತಂದೆ ಸಾವಿಗೂ ಮುನ್ನವೇ ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತು ಎನ್ನಲಾಗಿದೆ.
ಪ್ರಪೋಸ್ ನಂತ್ರ ಪಾದ್ರಿ ಹೇಳಿದ್ದೇನು? : ಯುವತಿಗೆ ಉಂಗುರು ತೊಡಿಸಿದ ವ್ಯಕ್ತಿ ನಂತ್ರ ಪ್ರತಿಕ್ರಿಯೆ ನೀಡಿದ್ದಾನೆ. ನನ್ನ ಈ ಪ್ರಪೋಸ್ ಆಕೆ ದುಃಖವನ್ನು ಸ್ವಲ್ಪ ಮಟ್ಟಿಗೆ ಮರೆಸಲಿದೆ ಎಂದು ಭಾವಿಸಿದ್ದೇನೆ. ತಂದೆ ಸತ್ತ ನೋವಿನಿಂದ ಹೊರಬರಲು ಇದು ನೆರವಾಗಲಿದೆ ಎಂದಿದ್ದಾನೆ.
ಪಾದ್ರಿ ಕೆಲಸಕ್ಕೆ ಬಳಕೆದಾರರ ಪ್ರತಿಕ್ರಿಯೆ : ಪರ – ವಿರೋದಗಳು ಎಲ್ಲದರಲ್ಲೂ ಸಾಮಾನ್ಯ. ಹಾಗೆಯೇ ಇಲ್ಲಿಯೂ ಕೆಲವರು ಪಾದ್ರಿ ಕೆಲಸವನ್ನು ಶ್ಲಾಘಿಸಿದ್ರೆ ಮತ್ತೆ ಕೆಲವರು ದೂಷಿಸಿದ್ದಾರೆ. ದುಃಖದ ಸಮಯದಲ್ಲಿ ಪ್ರಪೋಸ್ ಮಾಡಿದ್ದು ತಪ್ಪು ಎಂದು ಕೆಲಸವರು ಅಭಿಪ್ರಾಯಪಟ್ಟಿದ್ದಾರೆ. ಆ ಸಮಯವನ್ನು ಸದಾ ನೆನಪಿಲ್ಲಿರುವಂತೆ ಮಾಡಲು ಪಾದ್ರಿ ಯುವತಿಗೆ ಪ್ರಪೋಸ್ ಮಾಡಿದ್ದಾರೆಂದು ಕೆಲವರು ಹೇಳಿದ್ದಾರೆ. ಒಟ್ಟಿನಲ್ಲಿ ತಂದೆ ಸಾವಿನ ದುಃಖದಲ್ಲೂ ಯುವತಿಗೆ ಪ್ರೀತಿ ಆಸರೆ ಸಿಕ್ಕಿದೆ.