67 ವರ್ಷದ ವ್ಯಕ್ತಿ ಬೆಲೆಬಾಳುವ ಗಿಫ್ಟ್‌ ಕೊಟ್ಟ, 31 ವರ್ಷದ ಯುವತಿ ಹೃದಯ ಕೊಟ್ಟಳು!

ತನ್ನದೇ ವಯಸ್ಸಿನ ಆಸುಪಾಸಿನ ಹುಡುಗರ ನಾಟಕಗಳಿಂದ ಬೇಸತ್ತ ಯುವತಿಯೊಬ್ಬಳು, 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರ ಜೊತೆ ಡೇಟ್‌ ಮಾಡಲು ಬಯಸಿದ್ದಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಳು. ಆದರೆ, ಡೇಟ್‌ ಮಾಡುವ ವ್ಯಕ್ತಿ ಶ್ರೀಮಂತನಾಗಿರಬೇಕು ಹಾಗೂ ನನಗೆ ಆರ್ಥಿಕವಾಗಿ ಸಹಾಯ ಮಾಡಬೇಕು ಎನ್ನುವ ಷರತ್ತನ್ನೂ ಪೋಸ್ಟ್‌ನಲ್ಲಿ ಹಾಕಿದ್ದರು. ಇದಾದ ನಂತರ ಆಕೆಗೆ ಅಂಥದ್ದೇ ಸಂಗಾತಿ ಸಿಕ್ಕಿರುವುದು ವಿಶೇಷವಾಗಿದೆ.

67 year old man gifts car and house to young girl  and she gave heart san

ನವದೆಹಲಿ (ಸೆ.9): ವ್ಯಕ್ತಿಯೊಬ್ಬ ಯುವರಿಗೆ 3 ಕೋಟಿ ರೂಪಾಯಿ ಮೌಲ್ಯದ ಮನೆ ಹಾಗೂ 37 ಲಕ್ಷ ರೂಪಾಯಿ ಮೌಲ್ಯದ ಕಾರ್‌ಅನ್ನು ಉಡುಗೊರೆಯಾಗಿ ನೀಡಿದ್ದಾನೆ. ಇದರ ಬೆನ್ನಲಿಯೇ ಆ ಯುವತಿ ಆತನನ್ನು ಪ್ರೀತಿಸಲು ಆರಂಭಿಸಿದ್ದಾಳೆ. ತನಗಿಂತ 36 ವರ್ಷ ಹಿರಿಯನಾದ ವ್ಯಕ್ತಿಯೊಂದಿಗೆ ಕೆಲ ವರ್ಷದ ಹಿಂದೆ ಇಬ್ಬರೂ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ. ಇವರಿಬ್ಬರ ಸಂಬಂಧ 2017ರಲ್ಲಿ ಆರಂಭವಾಗಿತ್ತು.  31 ವರ್ಷದ ಡಾಮಿಯಾ ವಿಲಿಯಮ್ಸ್ ಅವರಿಗೆ 67 ವರ್ಷದ ಜೇಮ್ಸ್ ಪಾರ್ಕರ್ ಅವರು ಫೇಸ್‌ಬುಕ್‌ನಲ್ಲಿ ಸಂದೇಶ ಕಳುಹಿಸಿದ ಬೆನ್ನಲ್ಲಿಯೇ ಈ "ಪ್ರೇಮ" ಸಂಬಂಧ ಆರಂಭವಾಗಿದೆ. ಡೇಮಿಯಾ ಅವರು ಡೇಟಿಂಗ್‌ನ ಕುರಿತಾಗಿ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್‌ ಮಾಡಿದ್ದರು ಅದರ ಬೆನ್ನಲ್ಲಿಯೇ ಜೇಮ್ಸ್‌ ಅವರಿಂದ ಸಂದೇಶ ಬಂದಿತ್ತು. ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದ ಡೇಮಿಯಾ ವಿಲಿಯಮ್ಸ್‌, ತಾನು 50 ವರ್ಷಕ್ಕಿಂತ ಮೇಲ್ಪಟ್ಟ ಹುಡುಗನೊಂದಿಗೆ ಡೇಟಿಂಗ್‌ ಮಾಡಲು ಬಯಸಿದ್ದೇನೆ. ಯಾರಾದರೂ ಇದ್ದಲ್ಲಿ ನನಗೆ ಮೆಸೇಜ್‌ ಮಾಡಬಹುದು ಎಂದಿದ್ದರು. ಆ ಕಾರಣದಿಂದಾಗಿ ಜೇಮ್ಸ್‌ ಅವರ ಸಂದೇಶ ಬಂದಿದೆ. ತನ್ನದೇ ವಯಸ್ಸಿನ ಆಸುಪಾಸಿನ ಹುಡುಗರ ನಾಟಕಗಳಿಂದ ನಾನು ಬೇಸತ್ತಿದ್ದೇನೆ. ಹಾಗಾಗಿ ಈಗ 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಯಾರಾದರೂ ಇದ್ದರೆ ನಾನು ಡೇಟಿಂಗ್‌ ಮಾಡುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಅದರ ಬಳಿಕ ಜೇಮ್ಸ್‌ ಅವರಿಂದ ಈ ಸಂದೇಶ ಬಂದಿತ್ತು.

ಇನ್ನು ತಾನು ಡೇಟ್‌ ಮಾಡುವ ವ್ಯಕ್ತಿಗೆ ಕೆಲವು ಷರತ್ತುಗಳನ್ನೂ ಡೇಮಿಯಾ ವಿಧಿಸಿದ್ದರು. ಅದರಂತೆ ಆತ ಬಹಳ ಶ್ರೀಮಂತನಾಗಿರಬೇಕು ಹಾಗೂ ಅರ್ಥಿಕವಾಗಿ ನನಗೆ ಸಹಾಯ ಮಾಡಬೇಕು ಎಂದು ಹೇಳಿದ್ದರು. ಇದರಿಂದಾಗಿ ಅಂದು 62 ವರ್ಷದ ವ್ಯಕ್ತಿಯಾಗಿದ್ದ ಜೇಮ್ಸ್‌, ಡೇಮಿಯಾರನ್ನು ಸಂಪರ್ಕಿಸಿದ್ದರು. ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಜೇಮ್ಸ್‌ ಪತ್ನಿಯಿಂದ ವಿಚ್ಛೇದನವನ್ನೂ ಪಡೆದಿದ್ದರು. ದಿನಕಳೆದಂತೆ ಜೇಮ್ಸ್‌ ಹಾಗೂ ಡೇಮಿಯಾ ನಡುವೆ ಸಂಬಂಧ ಆರಂಭವಾಗಿತ್ತು.

ಇದು ಪಾಕಿಸ್ತಾನದ ದಿಲ್ ಚಾಹ್ತಾ ಹೈ.. 70 ವರ್ಷದ ಅಜ್ಜಿಯನ್ನು ವಿವಾಹವಾದ 37 ವರ್ಷದ ಯುವಕ!

ಡೇಮಿಯಾರ ಕಾರು ಕಳ್ಳತನವಾದಾಗ ಜೇಮ್ಸ್‌ ಆಕೆ ಅಂದಾಜು 37 ಲಕ್ಷ ರೂಪಾಯಿ ಮೌಲ್ಯದ ಜೀಪ್‌ಅನ್ನು ಖರೀದಿಸಿಕೊಟ್ಟಿದ್ದರು. ಪ್ರತಿ ವಾರ ಜೇಮ್ಸ್‌, ಡೇಮಿಯಾಳನ್ನು ಡೇಟ್‌ಗೆ ಕರೆದುಕೊಂಡು ಹೋಗುತ್ತಾರೆ. ಹಾಗೇನಾದರೂ ಡೇಟಿಂಗ್‌ಗೆ ಕರೆದುಕೊಂಡು ಹೋಗಲು ಸಾಧ್ಯವಾಗದೇ ಇದ್ದಲ್ಲಿ, ಆಕೆಗೆ ಹಣ ಕಳಿಸು ಹೊರ ಹೋಗಲು ಹೇಳುತ್ತಿದ್ದ. ಅಲ್ಲದೆ, ಪ್ರತಿ ವಾರ ಇಬ್ಬರೂ ತಪ್ಪದೆ ಶಾಪಿಂಗ್‌ಗೆ ಹೋಗುತ್ತಾರೆ. ಇದರ ಬೆನ್ನಲ್ಲಿಯೇ ಡೇಮಿಯಾ ಹಾಗೂ ಜೇಮ್ಸ್‌ ಪ್ರೀತಿ ಮಾಡಲು ಆರಂಭಿಸಿದ್ದರು. 2017ರ ನವೆಂಬರ್‌ನಲ್ಲಿ ಡೇಟಿಂಗ್‌ ಮಾಡಲು ಆರಂಭಿಸಿದ್ದ ಡೇಮಿಯಾಗೆ 2019ರಲ್ಲಿ ಜೇಮ್ಸ್‌ ಸುಂದರವಾದ ಮನೆಯೊಂದನ್ನು ಗಿಫ್ಟ್‌ ಮಾಡಿದ್ದಾರೆ. ಇಲ್ಲಿ ಡೇಮಿಯಾ ಒಬ್ಬರೇ ವಾಸ ಮಾಡುತ್ತಿದ್ದರು. ಆದರೆ, ತಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಎಂದು ತಿಳಿದಾಗ ಒಟ್ಟಿಗೆ ಈ ಮನೆಯಲ್ಲಿ ಇರಲು ಆರಂಭಿಸಿದ್ದಾರೆ. 2018ರ ಮಾರ್ಚ್‌ ತಿಂಗಳಲ್ಲಿ ಇಬ್ಬರೂ ನಿಶ್ಚಿತಾರ್ಥವಾಗಿದ್ದರೂ, ಜೊತೆಯಲ್ಲಿ ಒಂದೇ ಮನೆಯಲ್ಲಿ ಇರಲು ಆರಂಭ ಮಾಡಿದ್ದು 2019ರಲ್ಲಿ. ಈಗ ಲಾಸ್‌ ವೇಗಸ್‌ಗೆ ಶಿಫ್ಟ್‌ ಮಾಡುವ ಯೋಜನೆಯಲ್ಲಿದ್ದಾರೆ. ಕೂದಲು ವಿನ್ಯಾಸ ಮಾಡುವ ಕಂಪನಿಯ ಮಾಲೀಕಳಾಗಿರುವ ಡೇಮಿಯಾ ಜಾರ್ಜಿಯಾದಲ್ಲಿ ವಾಸವಿದ್ದಾರೆ.

61 ವರ್ಷದ ಶಂಶದ್‌ನನ್ನು ಪ್ರೀತಿಸಿ ಮದುವೆಯಾದ 18 ವರ್ಷದ ಆಲಿಯಾ, ವೈರಲ್ ಅದ ಲವ್‌ ಸ್ಟೋರಿ!

ಆರಂಭದಲ್ಲಿ ನನಗೆ ಜೇಮ್ಸ್‌ ಮೇಲೆ ಪ್ರೀತಿಯಾಗುತ್ತದೆ ಎಂದು ಅಂದುಕೊಂಡಿರಲೇ ಇಲ್ಲ. ಆದರೆ, ಜೇಮ್ಸ್‌ ನನ್ನ ಜೀವನದ ವಿಶೇಷ ವ್ಯಕ್ತಿ. ಆತ ಬಂದ ಬಳಿಕ ನನ್ನ ಜೀವನವೇ ಬದಲಾಗಿದೆ. 67 ವರ್ಷ ಆಗಿದ್ದರೂ, ತುಂಬಾ ಎನರ್ಜಿಟಿಕ್‌ ಹಾಗೂ ಚಟುವಟಿಕೆಯಿಂಡ ಇರುತ್ತಾರೆ. ಆತನಿಂದ ನನ್ನ ಜೀವನವೇ ಬದಲಾಗಿದೆ ಎನ್ನುತ್ತಾರೆ. ಇನ್ನು ಡೇಮಿಯಾ ಮೂಡ್‌ನಲ್ಲಿ ಇಲ್ಲ ಎಂದಾದದಲ್ಲಿ, ಆಕೆಯನ್ನು ಹೊರಗೆ ಡಿನ್ನರ್‌ಗೆ ಕರೆದುಕೊಂಡು ಹೋಗುವ ಜೇಮ್ಸ್‌, ವಿಶೇಷ ವಿನ್ಯಾಸದ, ದುಬಾರಿ ಬಟ್ಟೆಗಳನ್ನು ಕೊಡಿಸುತ್ತಾರಂತೆ.

Latest Videos
Follow Us:
Download App:
  • android
  • ios