ಪಾಕಿಸ್ತಾನದಲ್ಲಿ ಇತ್ತೀಚೆಗೆ ವಯೋವೃದ್ಧನೊಬ್ಬನನ್ನು 18 ವರ್ಷದ ಬಾಲಕಿಯೊಬ್ಬಳು ವಿವಾಹವಾದ ಬಗ್ಗೆ ವರದಿಯಾಗಿತ್ತು. ಈಗ ಪಾಕಿಸ್ತಾನದಲ್ಲಿ ಅಂಥದ್ದೇ ಒಂದು ಘಟನೆ ವರದಿಯಾಗಿದೆ. ಈ ಬಾರಿ 70 ವರ್ಷದ ಅಜ್ಜಿಯೊಬ್ಬಳನ್ನು 37 ವರ್ಷದ ಯುವಕನೋರ್ವ ಮದುವೆಯಾಗಿದ್ದಾನೆ. ಇದು ಯುವಕನಿಗೆ 2ನೇ ಮದುವೆಯಾಗಿದ್ದರೆ, ಈವರೆಗೂ ಕನ್ಯೆಯಾಗಿರುವ 70 ವರ್ಷದ ಅಜ್ಜಿಗೆ ಮೊದಲ ಮದುವೆ. 

ನವದೆಹಲಿ (ಆ. 25): ಪ್ರೀತಿಯನ್ನು ಪಡೆಯೋಕೆ ಮನುಷ್ಯ ಯಾವ ಹಂತದವರೆಗೂ ಬೇಕಾದರೂ ಹೋಗ್ತಾನೆ. ಇದನ್ನು ನಿಜವೆಂದು ಸಾಬೀತುಪಡಿಸುವಂಥ ಪ್ರಕರಣ ಪಾಕಿಸ್ತಾನದಲ್ಲಿ ವರದಿಯಾಗಿದೆ. 37 ವರ್ಷದ ಯುವಕನೋರ್ವ, 70 ವರ್ಷದ ಮುದುಕಿಯೊಬ್ಬಳನ್ನು ವಿವಾಹವಾಗಿದ್ದಾನೆ. ತಾವಿಬ್ಬರೂ ಬಾಲ್ಯದಿಂದಲೇ ಪ್ರೀತಿ ಮಾಡುತ್ತಿದ್ದೆವು. ಹಾಗಾಗಿ ಈಗ ಮದುವೆಯಾಗಿರುವುದಾಗಿ "ನವ" ದಂಪತಿಗಳು ಹೇಳಿದ್ದಾರೆ. ಬಹಳ ದೀರ್ಘಕಾಲದಿಂದ ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೆವು. ಆದರೆ, ನಾವಿಬ್ಬರೂ ವಯಸ್ಸಿನಲ್ಲಿದ್ದಾಗ ಎರಡೂ ಕುಟುಂಬಗಳು ನಮ್ಮ ಪ್ರೀತಿಗೆ ಸಮ್ಮತಿ ನೀಡಿರಲಿಲ್ಲ. ವಯಸ್ಸಿನ ಅಂತರದ ಕಾರಣ ನೀಡಿ ಅವರು ಮದುವೆಗೆ ಒಪ್ಪಿರಲಿಲ್ಲ. ಯುವಕನಿಗೆ ಬೇರೆ ಮದುವೆ ಮಾಡಿದ್ದರು. ಮೊದಲ ಮದುವೆಯಿಂದ ಯುವಕ 6 ಮಂದಿ ಮಕ್ಕಳನ್ನೂ ಹೊಂದಿದ್ದಾರೆ. ಇನ್ನೊಂದೆಡೆ 70 ವರ್ಷದ ಅಜ್ಜಿ ಮಾತ್ರ, ಯುವಕನನ್ನು ಮದುವೆಯಾಗುವವರೆಗೂ ಕನ್ಯೆಯಾಗಿಯೇ ಉಳಿದಿದ್ದರು. 37 ವರ್ಷದ ಇಫ್ತಿಕಾರ್‌ ಹಾಗೂ 70 ವರ್ಷದ ಕಿಶ್ವರ್‌ ಬಿಬಿ ನಡುವೆ ಈ ಅಪರೂಪದ ಮದುವೆ ನಡೆದಿದೆ. ಕೊನೆಗೂ ದೀರ್ಘಕಾಲದಿಂದ ಪ್ರೀತಿ ಮಾಡುತ್ತಿದ್ದ ಇವರಿಬ್ಬರ ನಡುವೆ ವಿವಾಹ ನಡೆಯುವುದರೊಂದಿಗೆ ಇವರ ಆಸೆಯೂ ಈಡೇರಿದೆ. ಅದಲ್ಲದೆ, ಪಾಕಿಸ್ತಾನದಲ್ಲಿ ಇವರ ಮದುವೆಯ ವಿಡಿಯೋಗಳು ಕೂಡ ದೊಡ್ಡಮಟ್ಟದಲ್ಲಿ ವೈರಲ್‌ ಆಗಿವೆ. ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಚರ್ಚೆಗೆ ಗ್ರಾಸವಾಗಿರುವ ಮದುವೆ ಇದಾಗಿದೆ.

ಕಿಶ್ವರ್‌ ಬಿಬಿಯನ್ನು ಪ್ರೀತಿ ಮಾಡ್ತಿದ್ದ ಇಫ್ತಿಕಾರ್‌: ಇಫ್ತಿಕಾರ್‌ ಹಾಗೂ ಕಿಶ್ವರ್‌ ಬಿಬಿ ನಡುವೆ 33 ವರ್ಷಗಳ ಅಂತರವಿದೆ. ಬಹಳ ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಇಫ್ತಿಕಾರ್‌, ಕಿಶ್ವರ್‌ ಬಿಬಿಯನ್ನು ಇಷ್ಟಪಡಲು ಆರಂಭಿಸಿದ್ದ. ವಯಸ್ಸಿಗೆ ಬಂದಾಗ, ಕಿಶ್ವರ್‌ಗೆ ಮದುವೆಯಾಗುವ ಪ್ರಸ್ತಾಪವನ್ನೂ ಇಟ್ಟಿದ್ದ. ಆದರೆ, ಇಫ್ತಿಕಾರ್‌ನ ತಾಯಿ ಇದಕ್ಕೆ ಸುತಾರಾಂ ಒಪ್ಪಿರಲಿಲ್ಲ. ಮದುವೆಯಾದರೆ ಇಫ್ತಿಕಾರ್‌ನನ್ನೇ ಮದುವೆಯಾಗ್ತೇನೆ. ಇಲ್ಲದಿದ್ದರೆ, ಇಡೀ ಜೀವನ ಪೂರ್ತಿ ಏಕಾಂಗಿಯಾಗೇ ಇರುತ್ತೇನೆ ಎಂದು ಕಿಶ್ವರ್‌ ಈ ವೇಳೆ ಪಣ ತೊಟ್ಟಿದ್ದರು. ಆದರೆ, 70ನೇ ವಯಸ್ಸಿನಲ್ಲಿ ತಾನು ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾಗುವ ಒಂದು ಸಣ್ಣ ನಿರೀಕ್ಷೆಯನ್ನೂ ತಾನು ಮಾಡಿರಲಿಲ್ಲ ಎಂದು ಕಿಶ್ವರ್‌ ಹೇಳಿದ್ದಾರೆ.



ಹನಿಮೂನ್‌ಗೆ ಕರಾಚಿಗೆ ಹೋಗ್ತೇವೆ: ಕಿಶ್ವರ್‌ ಬಿಬಿಗೆ 70 ವರ್ಷವಾಗಿರಬಹುದು. ಆದರೆ, ಆಸೆ-ಆಕಾಂಕ್ಷೆಗಳು ಮಾತ್ರ ಕಮರಿಲ್ಲ. ಈಗ ಮದುವೆಯಾಗಿದೆ. ಹನಿಮೂನ್‌ಗಾಗಿ ಮರಿ ಅಥವಾ ಕರಾಚಿಗೆ ಇಫ್ತಿಕಾರ್‌ ಜೊತೆ ಹೋಗುತ್ತೇನೆ. ಅಲ್ಲಿ ಕೆಲವೊಂದಷ್ಟು ದಿನ ಸಂತಸದ ಕ್ಷಣಗಳನ್ನು ಕಳೆಯುತ್ತೇವೆ ಎಂದು ಕಿಶ್ವರ್‌ ಹಾಗೂ ಇಫ್ತಿಕಾರ್‌ ಹೇಳಿದ್ದಾರೆ. ಕಿಶ್ವರ್‌ರನ್ನು ಮದುವೆಯಾಗಿರುವ ಇಫ್ತಿಕಾರ್‌ಗೆ ಇದು 2ನೇ ಮದುವೆ. ಕುಟುಂಬದ ಕಾರಣದಿಂದಾಗಿ ಕೆಲವು ವರ್ಷಗಳ ಕಾಲ ನಮ್ಮ ಭೇಟಿ ಸಾಧ್ಯವಾಗಿರಲಿಲ್ಲ. ಆದರೆ, ಇಫ್ತಿಕಾರ್‌ ಮಾತ್ರ ಮೊದಲ ಮದುವೆ ಆದ ಬಳಿಕವೂ ಕಿಶ್ವರ್‌ ಬಿಬಿಯನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದ. ಇಫ್ತಿಕಾರ್‌ ಹಾಗೂ ಕಿಶ್ವರ್‌ ಬಿಬಿ, ಹಲವು ವರ್ಷಗಳ ಕಾಲ ಜೊತೆಯಾಗಿ ಪಾರ್ಕು, ಸಿನಿಮಾ ಅಂತೆಲ್ಲಾ ಸುತ್ತಾಟವನ್ನೂ ನಡೆಸಿದ್ದಾರೆ. ಕೊನೆಗೆ ಇವರಿಬ್ಬರು ಮದುವೆಯಾಗಬೇಕು ಎಂದು ನಿರ್ಧರಿಸಿದಾಗ ನಿಜವಾದ ಸವಾಲು ಎದುರಾಗಿತ್ತು. ಇಫ್ತಿಕಾರ್‌ ಯುವಕನಾಗಿದ್ದ ಸಮಯದಲ್ಲಿ ಕಿಶ್ವರ್‌ ಬಿಬಿಯನ್ನು ಭೇಟಿಯಾಗಲು ಅವರ ಕುಟುಂಬ ವಿರೋಧಿಸಿತ್ತು. ಕೊನೆಗೆ ಒಂದು ಹುಡುಗಿಯನ್ನು ಹುಡುಕಿ ಇಫ್ತಿಕಾರ್‌ಗೆ ಮದುವೆಯನ್ನೂ ಮಾಡಲಾಗಿತ್ತು. ಆಕೆಯೊಂದಿಗೆ 6 ಮಕ್ಕಳನ್ನೂ ಇಫ್ತಿಕಾರ್‌ ಹೊಂದಿದ್ದಾರೆ. 

61 ವರ್ಷದ ಶಂಶದ್‌ನನ್ನು ಪ್ರೀತಿಸಿ ಮದುವೆಯಾದ 18 ವರ್ಷದ ಆಲಿಯಾ, ವೈರಲ್ ಅದ ಲವ್‌ ಸ್ಟೋರಿ!

2ನೇ ಮದುವೆಗೆ ಒಪ್ಪಿದ ಇಫ್ತಿಕಾರ್‌ ಪತ್ನಿ: ಸಾಮಾನ್ಯವಾಗಿ ಗಂಡನೊಬ್ಬ 2ನೇ ಮದುವೆ ಬಗ್ಗೆ ಹೇಳಿದಾಗ ಪತ್ನಿಗೆ ಇನ್ನಿಲ್ಲದಂತ ಕೋಪ ಬರುತ್ತದೆ. ಆದರೆ, ಇಫ್ತಿಕಾರ್‌ ವಿಚಾರದಲ್ಲಿ ಹಾಗಾಗಿಲ್ಲ. ತನ್ನ ಬಾಲ್ಯದ ಪ್ರೀತಿಯನ್ನು ಮದುವೆಯಾಗುವ ಬಯಕೆಯನ್ನು ಪತ್ನಿಗೆ ಹೇಳಿದಾಗ ಆಕೆ ಇದಕ್ಕೆ ಖುಷಿಯಿಂದಲೇ ಒಪ್ಪಿದ್ದಾಳೆ. ನಾನು ನನ್ನ ಪತಿಯನ್ನು ಬಹಳ ಇಷ್ಟಪಡುತ್ತೇನೆ. ಹಾಗಾಗಿ ಅವರ 2ನೇ ಮದುವೆಗೆ ಒಪ್ಪಿದ್ದೇನೆ ಎಂದು ಮೊದಲ ಪತ್ನಿ ಹೇಳಿದ್ದಾಳೆ. 2ನೇ ಮದುವೆಯಾದ ಬಳಿಕ, ಯಾರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತೀರಿ ಎನ್ನುವ ಪ್ರಶ್ನೆಗೆ ನೇರವಾಗಿ ಉತ್ತರ ನೀಡಿರುವ ಇಫ್ತಿಕಾರ್‌, ನನಗೆ ಕಿಶ್ವರ್‌ ಬಿಬಿಯೇ ಇಷ್ಟ. ಯಾಕೆಂದರೆ ಈಕೆ ನನ್ನ ಬಾಲ್ಯದ ಪ್ರೀತಿ ಎಂದು ಹೇಳಿದ್ದಾರೆ.

ಲವ್ ಮ್ಯಾರೇಜ್‌ಗಿಂತ ಆರೇಂಜ್ಡ್‌ ಮ್ಯಾರೇಜ್‌ ಒಳ್ಳೇದು ಅಂತಾರಲ್ಲ, ಯಾಕೆ ?

ಕುಟುಂಬಸ್ಥರಿಂದಲೂ ಒಪ್ಪಿಗೆ: 70 ವರ್ಷದ ಕಿಶ್ವರ್‌ ಬಿಬಿಯನ್ನು ವಿವಾಹವಾದ ಬಗ್ಗೆ ಇಫ್ತಿಕಾರ್‌ ಅವರ ಕುಟುಂಬವನ್ನೂ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಆದರೆ, ಆತನ ನಿರ್ಧಾರಕ್ಕೆ ನಮ್ಮೆಲ್ಲರ ಸಹಮತ ಇತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ. ತುಂಬಾ ದೀರ್ಘ ವರ್ಷಗಳ ಕಾಲ ಇವರಿಬ್ಬರು ಪ್ರೀತಿಸುತ್ತಿದ್ದಾರೆ. ಮದುವೆಯಾಗುವುದರಿಂದ ತಪ್ಪಿಲ್ಲ ಎನ್ನುವುದು ನಮ್ಮ ಅಭಿಪ್ರಾಯವಾಗಿತ್ತು ಎಂದು ಹೇಳಿದ್ದಾರೆ.