ಸೆಕ್ಸ್ ಬಗ್ಗೆ ಭಾರತದಲ್ಲಿ ಮಡಿವಂತಿಕೆಯಿದೆ. ಜನರು ತಮ್ಮ ಆಸೆಯನ್ನು ಸಂಗಾತಿ ಮುಂದೆಯೂ ಹೇಳಿಕೊಳ್ಳುವುದಿಲ್ಲ. ವಿದೇಶಗಳಲ್ಲಿ ಸೆಕ್ಸ್ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಲ್ಲದೆ ಅನುಭವ ಹಂಚಿಕೊಳ್ತಾರೆ. ಕೆಲ ಮಹಿಳೆಯರ ಅನುಭವ ವಿಚಿತ್ರವಾಗಿದೆ. 

ಸಂಭೋಗ ದಾಂಪತ್ಯದಲ್ಲಿ ಸಾಮಾನ್ಯ. ಇಬ್ಬರ ಮಧ್ಯೆ ಬಂಧ ಬಿಗಿಯಾಗ್ಬೇಕೆಂದ್ರೆ ಶಾರೀರಿಕ ಸಂಬಂಧ ಬೆಳೆಯುವುದು ಮುಖ್ಯವಾಗುತ್ತದೆ. ಸೆಕ್ಸ್ ಮಾನಸಿಕ ಹಾಗೂ ದೈಹಿಕವಾಗಿ ಇಬ್ಬರನ್ನು ಹತ್ತಿರಕ್ಕೆ ಸೆಳೆಯುತ್ತದೆ. ಕೆಲವರು ನೀರಸ ಸಂಭೋಗಕ್ಕೆ ಹೊಂದಿಕೊಂಡಿರ್ತಾರೆ. ಮತ್ತೆ ಕೆಲವರು ಸೆಕ್ಸ್ ನಲ್ಲಿ ಹೊಸ ಪ್ರಯೋಗಗಳನ್ನು ಮಾಡಲು ಬಯಸ್ತಾರೆ. ಇನ್ನೂ ಕೆಲವರು ಈ ವಿಷ್ಯದಲ್ಲಿ ಮಿತಿ ಮೀರಿ ವರ್ತನೆ ಮಾಡ್ತಾರೆ. ಅವರ ಸೆಕ್ಸ್ ಫ್ಯಾಂಟಸಿ ವಿಚಿತ್ರವಾಗಿರುತ್ತದೆ. ನಾವು ಊಹಿಸಲೂ ಸಾಧ್ಯವಾಗದ ಚಿತ್ರವಿಚಿತ್ರ ಸ್ವಭಾವವನ್ನು ಕೆಲವರು ಹೊಂದಿರ್ತಾರೆ. ವಿಭಿನ್ನ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯರು ತಮ್ಮ ಲೈಂಗಿಕ ಜೀವನದ ಅನುಭವ ಹಂಚಿಕೊಂಡಿದ್ದಾರೆ. ಅವರ ಅನುಭವಗಳು ವಿಚಿತ್ರವಾಗಿವೆ.

ಸೆಕ್ಸ್ (Sex) ಜೀವನದ ಬಗ್ಗೆ ವಿಚಿತ್ರ ಅನುಭವ ಹಂಚಿಕೊಂಡ ಮಹಿಳೆಯರು :
ಖಾಸಗಿ ಅಂಗಕ್ಕೆ (Private Part) ಹೊಡೆತ :
ಜನರು ಅನೇಕ ರೀತಿಯ ಲೈಂಗಿಕ ಕಲ್ಪನೆಗಳನ್ನು ಹೊಂದಿರುತ್ತಾರೆ. ಮಹಿಳೆಯೊಬ್ಬಳು ಡೇಟಿಂಗ್ ಮಾಡ್ತಿದ್ದ ವ್ಯಕ್ತಿ ಆಸೆ ಕೇಳಿ ದಂಗಾಗಿದ್ದಳಂತೆ. ಆಕೆ ಡೇಟ್ ಮಾಡ್ತಿದ್ದ ವ್ಯಕ್ತಿ ಸೆಕ್ಸ್ ವೇಳೆ ತನ್ನ ಆಸೆ ಹೇಳಿಕೊಂಡಿದ್ದನಂತೆ. ಖಾಸಗಿ ಅಂಗಕ್ಕೆ ಹೊಡೆಯುವಂತೆ ಹೇಳ್ತಿದ್ದನಂತೆ. ಇದು ನೋವುಂಟು ಮಾಡುತ್ತದೆ ಎಂದು ಮಹಿಳೆ ಭಾವಿಸಿದ್ದಳಂತೆ. ಆದ್ರೆ ಹೊಡೆತ ಬೀಳ್ತಿದ್ದಂತೆ ನೋವಿನ ಬದಲು ಆತ ಉತ್ತೇಜಿತನಾಗ್ತಿದ್ದನಂತೆ. ಇದು ನನಗೆ ಬಹಳ ವಿಚಿತ್ರ ಅನುಭವ ಎಂದಿದ್ದಾಳೆ ಮಹಿಳೆ.

ನಾಯಿ ಕಣ್ತಪ್ಪಿಸಿ ಸೆಕ್ಸ್ : ಮಹಿಳೆ ಸಂಗಾತಿ ಜೊತೆ ಕುರ್ಚಿ ಮೇಲೆ ಸಂಭೋಗ ಸುಖ ಪಡೆಯುತ್ತಿದ್ದಳಂತೆ. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಎರಡು ನಾಯಿಗಳು ಇವರನ್ನು ನೋಡ್ತಿದ್ದವಂತೆ. ನಮಗೆ ಎಲ್ಲವೂ ತಿಳಿಸಿದೆ ಎಂಬ ರೀತಿಯಲ್ಲಿ ಅವರ ವರ್ತನೆ ಇತ್ತಂತೆ. ಅವರ ಕಣ್ಣುಗಳನ್ನು ನೋಡಿ ನಮಗೆ ಭಯವಾಯ್ತು ಎನ್ನುವ ಮಹಿಳೆ, ಆ ನಂತ್ರ ನಾಯಿಗಳ ಕಣ್ತಪ್ಪಿಸಿ ಶಾರೀರಿಕ ಸಂಬಂಧ ಬೆಳೆಸುತ್ತಾರಂತೆ. ಕೋಣೆಗೆ ಲಾಕ್ ಹಾಕುವ ಜೊತೆಗೆ ನಾಯಿ ಬೇರೆ ರೂಮಿನಲ್ಲಿದೆಯೇ ಎಂಬುದನ್ನು ಪರೀಕ್ಷಿಸಿದ ನಂತ್ರ ಒಂದಾಗ್ತಾರಂತೆ. 

ಬ್ಯೂಟಿಫುಲ್ ಹುಡುಗಿಯರನ್ನು ನೋಡಿ ಹುಡುಗರಲ್ಲಿ ಹಾರ್ಟ್ ಫೈಲ್ಯೂರ್ ಹೆಚ್ಚಾಗ್ತಿದ್ಯಂತೆ !

ಸಿಂಹದಂತೆ ಘರ್ಜನೆ : ಕೆಲವೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ಬದಲಾವಣೆ ಬಯಸುವ ಜನರು ಸಿಂಹಗಳಂತೆ ವರ್ತಿಸ್ತಾರೆ. ಸಿಂಹದಂತೆ ಆಕ್ರಮಣಕಾರಿಯಾಗ್ತಾರೆ. ಆದರೆ ಈ ಮಹಿಳೆ ಸಂಗಾತಿ, ಸಂಭೋಗ ಬೆಳೆಸುವಾಗೆಲ್ಲ ಸಿಂಹದಂತೆ ಘರ್ಜಿಸುತ್ತಾನಂತೆ. ಅವಳ ರೂಮ್‌ಮೇಟ್ ಕೂಡ ಒಂದು ದಿನ ಆತನ ಘರ್ಜನೆ ಕೇಳಿ ನಕ್ಕಿದ್ದಳಂತೆ. ಅದು ತಮಾಷೆಯಾಗಿತ್ತು ಎನ್ನುವ ಮಹಿಳೆ, ನನ್ನ ಸಂಗಾತಿಗೆ ಮಾತ್ರ ಇದು ವಿಚಿತ್ರ ಸಾಧನೆಯಾಗಿತ್ತು ಎನ್ನುತ್ತಾಳೆ.

ಫೋನ್ ಜೊತೆ ಸಂಪರ್ಕ : ಅದು ಫೋನ್ ಸೆಕ್ಸ್ ಅಲ್ಲ. ದೈಹಿಕ ಸಂಭೋಗವನ್ನು ಪ್ರಾರಂಭಿಸಿದಾಗ, ಅವಳ ಸಂಗಾತಿ, ಫೋನ್‌ ಮಾಡ್ತಿದ್ದನಂತೆ. ಒಂದೇ ಕೋಣೆಯಲ್ಲಿ, ಒಟ್ಟಿಗೆ ಇದ್ದರೂ ಫೋನ್ ಮಾಡುವ ಸಂಗಾತಿ, ಫೋನ್ ನಲ್ಲಿ ಮಾತನಾಡ್ತಿದ್ದನಂತೆ. ಎದುರಿಗಿರುವ ನನ್ನನ್ನು ಬಿಟ್ಟು ಫೋನ್ ನಲ್ಲಿ ನನಗೆ ಏನು ಬೇಕು ಎಂದು ಕೇಳ್ತಿದ್ದ. ನಂತ್ರ ಫೋನ್ ಹೋಲ್ಡ್ ಗೆ ಹಾಕಿ ಸಂಬಂಧ ಬೆಳೆಸುತ್ತಿದ್ದ. ನನಗೆ ನಿಜವಾಗ್ಲೂ ಗೊಂದಲವಾಗ್ತಿತ್ತು ಎಂದು ಮಹಿಳೆ ಹೇಳಿದ್ದಾಳೆ.

ಲೂಬ್ರಿಕಂಟ್ ಆಗಿ ವ್ಯಾಸಲೀನ್ ಬಳಸೋದು ಎಷ್ಟು ಸರಿ?

ಕೊಕೊ ಬೀನ್ಸ್ ಮತ್ತು ಸ್ಟ್ರಾಬೆರಿ : ಸಂಭೋಗ ಬೆಳೆಸಲು ಮನಸ್ಥಿತಿ ಮುಖ್ಯವಾಗುತ್ತದೆ. ಮೂಡ್ ಬರಲು ಅನೇಕರು ಹೊಸ ಹೊಸ ಪ್ರಯತ್ನ ಮಾಡ್ತಾರೆ. ಹಾಸಿಗೆಯ ಮೇಲೆ ಕೋಕೋ ಬೀನ್ಸ್ ಮತ್ತು ಸ್ಟ್ರಾಬೆರಿ ಚೆಲ್ಲಿ ಅದ್ರ ವಾಸನೆ ರೂಮ್ ತುಂಬ ಹರಡುವಂತೆ ಮಾಡಬಹುದು. ಒಂದೆರಡು ಬಾರಿ ಇದು ಓಕೆ. ಆದ್ರೆ ಈ ಮಹಿಳೆ ಸಂಗಾತಿ ಪ್ರತಿ ಬಾರಿಯೂ ಹೀಗೆ ಮಾಡ್ತಿದ್ದನಂತೆ.

ಲೇಸ್ ಪ್ಯಾಂಟಿ : ಲೇಸ್ ಪ್ಯಾಂಟಿಯನ್ನು ಅನೇಕರು ಇಷ್ಟಪಡ್ತಾರೆ. ಆದ್ರೆ ಅದರ ಹುಚ್ಚು ವಿಪರೀತವಾದ್ರೆ ಕಷ್ಟ. ಈ ಮಹಿಳೆಯ ಸಂಗಾತಿ, ಸಂಭೋಗದ ವೇಳೆ ಲೇಸ್ ಪ್ಯಾಂಟಿ ಧರಿಸ್ತಿದ್ದನಂತೆ. ಒಂದು ದಿನ ಸ್ನೇಹಿತನ ಮನೆಯಲ್ಲಿ ಇಬ್ಬರೂ ಉತ್ಸುಕರಾಗಿದ್ದಾರೆ. ಸಂಭೋಗ ಬೆಳೆಸಲು ಮುಂದಾಗಿದ್ದಾರೆ. ಅವರ ಬಳಿ ಕಾಂಡೋಮ್ ಕೂಡ ಇತ್ತಂತೆ. ಆದ್ರೆ ಲೇಸ್ ಪ್ಯಾಂಟಿ ಇಲ್ಲ ಎಂಬ ಕಾರಣಕ್ಕೆ ಸಂಗಾತಿ ಸಂಬಂಧ ಬೆಳೆಸಲು ನಿರಾಕರಿಸಿದನಂತೆ. ನನಗೆ ಈ ವರ್ತನೆ ಇನ್ನೂ ಅರ್ಥವಾಗ್ಲಿಲ್ಲ ಎನ್ನುತ್ತಾಳೆ ಮಹಿಳೆ.