ಲೂಬ್ರಿಕಂಟ್ ಆಗಿ ವ್ಯಾಸಲೀನ್ ಬಳಸೋದು ಎಷ್ಟು ಸರಿ?
ಲೈಂಗಿಕ ಆರೋಗ್ಯ ಬಹಳ ಮುಖ್ಯ. ಅನೇಕರು ಸಂಭೋಗ ಸುಗಮವಾಗ್ಲಿ ಎನ್ನುವ ಕಾರಣಕ್ಕೆ ಲೂಬ್ರಿಕಂಟ್ ಬಳಸ್ತಾರೆ. ಆದ್ರೆ ತಪ್ಪಾದ ಲೂಬ್ರಿಕಂಟ್ ಆರೋಗ್ಯವನ್ನು ಹಾಳು ಮಾಡುತ್ತೆ. ಅನೇಕ ಸೋಂಕಿಗೆ ಕಾರಣವಾಗುತ್ತದೆ.
ವ್ಯಾಸಲೀನ್ ಪೆಟ್ರೋಲಿಯಂ ಆಧಾರಿತ ಒಂದು ಮುಲಾಮ್. ಇದು ನಯವಾದ, ಮೃದು ಮತ್ತು ಜಿಗುಟಾಗಿರುತ್ತದೆ. ನಿಮ್ಮ ಕೈಗಳನ್ನು ಸುಲಭವಾಗಿ ಮೃದುಗೊಳಿಸುತ್ತದೆ. ವ್ಯಾಸಲೀನ್ ಲೈಂಗಿಕತೆಗೆ ಉತ್ತಮವಾದ ಲೂಬ್ರಿಕಂಟ್ ಎಂದು ಅನೇಕರು ನಂಬಿದ್ದಾರೆ. ಆದ್ರೆ ಇದು ಸತ್ಯವಲ್ಲ. ಪಿಂಚ್‌ನಲ್ಲಿರುವಾಗ ಮಾತ್ರ ವ್ಯಾಸಲೀನ್ ಬಳಸಬೇಕು. ವ್ಯಾಸಲೀನ್ ನಿಮ್ಮ ಕೊನೆಯ ಆಯ್ಕೆಯಾಗಿರಬೇಕು ಎನ್ನುತ್ತಾರೆ ತಜ್ಞರು. ನಾವಿಂದು ವ್ಯಾಸಲೀನ್ ಅನ್ನು ಲೂಬ್ರಿಕಂಟ್ ಆಗಿ ಬಳಸಬಹುದೇ ಹಾಗೆ ಅದನ್ನು ಬಳಸಿದ್ರೆ ಏನೆಲ್ಲ ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದನ್ನು ನಿಮಗೆ ಹೇಳ್ತೇವೆ.
ವ್ಯಾಸಲೀನ್ ಅನ್ನು ಲೂಬ್ರಿಕಂಟ್ ಆಗಿ ಬಳಸಬಹುದೇ ? : ವ್ಯಾಸಲೀನ್ ಬಾಹ್ಯ ಬಳಕೆಗೆ ಮಾತ್ರ ಎಂದು ಅದ್ರ ಮೇಲೆ ಬರೆದಿರುತ್ತದೆ. ಲೂಬ್ರಿಕಂಟ್ ಗೆ ಅನುಕೂಲವಾಗುವ ರೀತಿಯಲ್ಲಿ ಅದನ್ನು ತಯಾರಿಸಿಲ್ಲ. ಹಾಗೆ ಇದನ್ನು ಲೂಬ್ರಿಕಂಟ್ ಹೆಸರಿನಲ್ಲಿ ಮಾರಾಟ ಕೂಡ ಮಾಡ್ತಿಲ್ಲ. ಯುನೈಟೆಡ್ ಸ್ಟೇಟ್ಸ್ ನಲ್ಲಿ 2013ರಲ್ಲಿ 141 ಮಹಿಳೆಯರ ಮೇಲೆ ಅಧ್ಯಯನ ನಡೆದಿದೆ. ಅದ್ರ ಪ್ರಕಾರ, ಪೆಟ್ರೋಲಿಯಂ ಜೆಲ್ಲಿಯನ್ನು ಲೈಂಗಿಕ (Sex) ಲೂಬ್ರಿಕಂಟ್ ಆಗಿ ಬಳಸಿದ ಮಹಿಳೆಯರು ಕೆಲ ಸಮಸ್ಯೆಗಳನ್ನು ಎದುರಿಸಿದ್ದಾರೆ. ಬೇರೆ ಲೂಬ್ರಿಕಂಟ್ ಬಳಸಿದ ಮಹಿಳೆಯರಿಗಿಂತ ವ್ಯಾಸಲಿನ್ ಅನ್ನು ಲೂಬ್ರಿಕಂಟ್ ರೀತಿಯಲ್ಲಿ ಬಳಸಿದ ಮಹಿಳೆಯರಿಗೆ ಹೆಚ್ಚು ಯೋನಿ ಬ್ಯಾಕ್ಟೀರಿಯಾದ ಸಮಸ್ಯೆ ಕಾಣಿಸಿಕೊಂಡಿದೆ. ವ್ಯಾಸಲೀನ್ ಲೈಂಗಿಕತೆಗೆ ಉತ್ತಮವಾದ ಲೂಬ್ರಿಕಂಟ್ ಅಲ್ಲ. ಆದಾಗ್ಯೂ, ಬೇರೆ ಯಾವುದೇ ಆಯ್ಕೆ ಲಭ್ಯವಿಲ್ಲದಿದ್ದರೆ, ಅದನ್ನು ಬಳಸಬಹುದು. ದಪ್ಪ ಜೆಲ್ಲಿಯನ್ನು ಲೂಬ್ರಿಕಂಟ್ ಆಗಿ ನೀವು ಬಳಸುತ್ತಿದ್ದರೆ ಕೆಲ ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.
Dispute Marriage: ನಪುಂಸಕ ಮಗ ಕೊಡದ ಸಂತೋಷ ನಾನು ಕೊಡ್ತೀನೆಂದ ಮಾವ…!
ಇದು ಬಹಳ ಸಮಯ ಉಳಿಯುತ್ತದೆ : ಪೆಟ್ರೋಲಿಯಂ ಆಧಾರಿತ ಲೂಬ್ರಿಕಂಟ್ ಹೆಚ್ಚು ಕಾಲ ಉಳಿಯುತ್ತದೆ. ನೀರು ಆಧಾರಿತ ಲೂಬ್ರಿಕಂಟ್ ಗೆ ಹೋಲಿಸಿದ್ರೆ ಬೇಗ ಒಣಗುವುದಿಲ್ಲ. ಸೆಕ್ಸ್ ನಂತರ, ವ್ಯಾಸಲೀನ್ ಅನ್ನು ಸ್ವಚ್ಛಗೊಳಿಸಲು ಅಥವಾ ತೊಳೆಯಲು ಕಷ್ಟವಾಗುತ್ತದೆ. ವ್ಯಾಸಲೀನ್ ನಿಮ್ಮ ದೇಹವನ್ನು ಸಂಪೂರ್ಣವಾಗಿ ಬಿಡಲು ಹಲವಾರು ದಿನಗಳನ್ನು ತೆಗೆದುಕೊಳ್ಳಬಹುದು. ಆದ್ದರಿಂದ ನೀವು ವ್ಯಾಸಲೀನ್ ಅನ್ನು ಲೂಬ್ರಿಕಂಟ್ ಆಗಿ ಬಳಸಿದರೆ ಯೋನಿ ಸ್ವಚ್ಛಗೊಳಿಸಲು ನಿಮಗೆ ಹೆಚ್ಚು ಸಮಯಬೇಕಾಗುತ್ತದೆ.
ವ್ಯಾಸಲೀನ್ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ : ವ್ಯಾಸಲೀನ್ ಇತರ ಲ್ಯೂಬ್‌ಗಳಿಗಿಂತ ಹೆಚ್ಚು ಕಾಲ ಅಂಟಿಕೊಳ್ಳುವುದರಿಂದ ಇದು ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗಬಹುದು. ಲೂಬ್ರಿಕಂಟ್ ಆಗಿ ವ್ಯಾಸಲೀನ್ ಬಳಸುವ ಮಹಿಳೆಯರು ಇತರ ಮಹಿಳೆಯರಿಗಿಂತ ಬ್ಯಾಕ್ಟೀರಿಯಾ ಸೋಂಕಿನ ಅಪಾಯವನ್ನು 2.2 ಪಟ್ಟು ಹೆಚ್ಚು ಹೊಂದಿರುತ್ತಾರೆ.
ಕಾಂಡೋಮ್ ದುರ್ಬಲಕ್ಕೆ ಕಾರಣವಾಗುತ್ತೆ ವ್ಯಾಸಲೀನ್ : ಲ್ಯಾಟೆಕ್ಸ್ ಅಥವಾ ಪಾಲಿಯುರೆಥೇನ್ ಕಾಂಡೋಮ್ ಬಳಸ್ತಿದ್ದರೆ ವ್ಯಾಸಲೀನ್ ಬಳಸಲಾಗುವುದಿಲ್ಲ. ಪೆಟ್ರೋಲಿಯಂ ಜೆಲ್ಲಿ ಲ್ಯಾಟೆಕ್ಸ್ ನೊಂದಿಗೆ ಹೊಂದಿಕೆಯಾಗುವುದಿಲ್ಲ. ಇದು ಕಾಂಡೋಮ್ ದುರ್ಬಲಗೊಳಿಸುತ್ತದೆ. ಸಂಭೋಗದ ವೇಳೆ ಕಾಂಡೋಮ್ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಅನಗತ್ಯ ಗರ್ಭಧಾರಣೆ ಅಥವಾ ಎಸ್ ಟಿಐಗೆ ಗೆ ಕಾರಣವಾಗುತ್ತದೆ.
ಟೀನೇಜ್ ಲವ್‌ಗೆ ರೇಪ್ ಬಣ್ಣ: ಜೈಲು ಪಾಲಾದ ಇನಿಯನ ವಾಪಸ್ ಪಡೆಯಲು ಬೈಕ್ ಕದ್ದ ಯುವತಿ
ವ್ಯಾಸಲೀನ್ ಕಲೆ : ಪೆಟ್ರೋಲಿಯಂ ಆಧಾರಿತ ಉತ್ಪನ್ನಗಳು ಜಿಡ್ಡಿನ ಕಲೆ ಮಾಡ್ತವೆ. ಲೂಬ್ರಿಕಂಟ್ ರೀತಿಯಲ್ಲಿ ವ್ಯಾಸಲೀನ್ ಬಳಸ್ತಿದ್ದರೆ ನೀವು ಕಲೆ ಬಗ್ಗೆಯೂ ಗಮನ ಹರಿಸಬೇಕು. ನೀವು ಬಳಸುವ ಬಟ್ಟೆಗೆ ಕಲೆ ಬೀಳುವ ಸಾಧ್ಯತೆಯಿರುತ್ತದೆ.
ವ್ಯಾಸಲೀನ್ ಬದಲು ಪರ್ಯಾಯ ಲೂಬ್ರಿಕಂಟ್ : ವ್ಯಾಸಲೀನ್ ಅನ್ನು ಲೂಬ್ರಿಕಂಟ್ ಆಗಿ ಬಳಸುವ ಬದಲು ನೀವು ನೀರು ಆಧಾರಿತ ಲೂಬ್ರಿಕಂಟ್ ಅನ್ನು ಬಳಸುವುದು ಉತ್ತಮ. ಸಂಭೋಗದ ಸಮಯದಲ್ಲಿ ಬಳಸಲ ಯೋಗ್ಯವಾದ, ಮಾರುಕಟ್ಟೆಯಲ್ಲಿ ಲೂಬ್ರಿಕಂಟ್ ಹೆಸರಿನಲ್ಲಿಯೇ ಮಾರಾಟವಾಗುವ ಲೂಬ್ರಿಕಂಟ್ ಬಳಸಿದ್ರೆ ಯಾವುದೇ ಅಪಾಯವಿರುವುದಿಲ್ಲ. ಇವು ಸಾಮಾನ್ಯವಾಗಿ ನೀರು ಅಥವಾ ಸಿಲಿಕೋನ್ ಆಧಾರಿತವಾಗಿರುತ್ತವೆ. ಯೋನಿ ಅಥವಾ ಗುದದ್ವಾರದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಇದನ್ನು ತಯಾರಿಸಲಾಗಿರುತ್ತದೆ. ಹಾಗಾಗಿ ಇದ್ರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆ.