ಬ್ಯೂಟಿಫುಲ್ ಹುಡುಗಿಯರನ್ನು ನೋಡಿ ಹುಡುಗರಲ್ಲಿ ಹಾರ್ಟ್ ಫೈಲ್ಯೂರ್ ಹೆಚ್ಚಾಗ್ತಿದ್ಯಂತೆ !
ಸುಂದರ ಹುಡುಗಿಯರು ಸನಿಹ ಹಾದು ಹೋದಾಗ ತಿರುಗಿ ನೋಡದ ಹುಡುಗರೇ ಇಲ್ಲ. ವಾರೆವ್ಹಾ, ಕ್ಯೂಟ್, ಸಖತ್ತಾಗಿದ್ದಾಳೆ ಅಂತ ಕಾಮೆಂಟ್ ಮಾಡ್ತಾರೆ. ಆದ್ರೆ ಹುಡುಗಿಯರ ಬ್ಯೂಟಿಫುಲ್ ಫುಲ್ ಹುಡುಗರಲ್ಲಿ ಹಾರ್ಟ್ ಫೈಲ್ಯೂರ್‌ಗೂ ಕಾರಣವಾಗುತ್ತೆ ಅನ್ನೋದು ನಿಮ್ಗೊತ್ತಾ
ಹಾರ್ಟ್ ಅಟ್ಯಾಕ್ ಇವತ್ತಿನ ದಿನದಲ್ಲಿ ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆ. ಕಿರಿಯರು-ಹಿರಿಯರು ಅನ್ನೋ ಬೇಧವಿಲ್ಲದೆ ಎಲ್ರೂ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಾಘಾತಕ್ಕೆ ಹೆಚ್ಚು ಬಲಿಯಾಗ್ತಿರೋದನ್ನು ಗಮನಿಸಬಹುದು. ಜಿಮ್‌ನಲ್ಲಿ, ಆಫೀಸ್‌ನಲ್ಲಿ, ನಡೆದುಕೊಂಡು ಹೋಗುವಾಗ ಅದೆಷ್ಟೋ ಯುವಕರು ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದಾರೆ. ಇದಕ್ಕೆ ಒತ್ತಡದ ಜೀವನಶೈಲಿ, ಕಳಪೆ ಅಹಾರಪದ್ಧತಿ, ಅನುವಂಶಿಕತೆ ಮೊದಲಾದ ವಿಚಾರಗಳು ಕಾರಣಗಳಾಗ್ತಿವೆ. ಆದ್ರೆ ಇದಲ್ಲದೆಯೂ ಬ್ಯೂಟಿಫುಲ್ ಹುಡುಗಿಯರಿಂದಲೂ ಹುಡುಗರಲ್ಲಿ ಹಾರ್ಟ್ ಫೈಲ್ಯೂರ್ ಪ್ರಮಾಣ ಹೆಚ್ಚಾಗ್ತಿದ್ಯಂತೆ. ಸ್ಪೇನ್‌ನ ವೇಲೆನ್ಸಿಯಾ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಈ ವಿಚಾರವನ್ನು ಬಹಿರಂಗಪಡಿಸಿದೆ.
ಸುಂದರವಾದ ಹುಡುಗಿಯರಿಂದ ಹುಡುಗರ ಹೃದಯ ವೈಫಲ್ಯ
ಹೌದು, ಸ್ಪೇನ್‌ನ ವೇಲೆನ್ಸಿಯಾ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಹುಡುಗಿಯರ ಸುಂದರವಾದ ರೂಪ, ಹುಡುಗರಲ್ಲಿ ಹಾರ್ಟ್ ಫೈಲ್ಯೂರ್‌ಗೆ ಒಂದು ಮುಖ್ಯ ಕಾರಣವಾಗ್ತಿದೆ ಎಂಬುದನ್ನು ಹೇಳಿದೆ. ಸುಂದರವಾದ ಹುಡುಗಿಯರು ಮುಂದೆ ಬಂದಾಗ, ಹುಡುಗರಲ್ಲಿ ಉದ್ವೇಗವು ಹೆಚ್ಚಾಗುತ್ತದೆ. ಮನಸ್ಸಿನಲ್ಲಿ ಒತ್ತಡವು ರೂಪುಗೊಳ್ಳುತ್ತದೆ. ಇದರಿಂದಾಗಿ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ ಎಂದು ತಿಳಿಸಲಾಗಿದೆ. ಈ ಒತ್ತಡವನ್ನು ಹೆಚ್ಚಿಸುವ ಪ್ರವೃತ್ತಿಯು ಪರಿಚಯವಿಲ್ಲದ ಸುಂದರ ಹುಡುಗಿಯರ ವಿಷಯದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಎಂಬುದನ್ನು ಸಂಶೋಧನೆಯಲ್ಲಿ ತಿಳಿಸಲಾಗಿದೆ.
ಸಂಗಾತಿ ನಿಮ್ಮನ್ನು ನೋಡಿ ನಗ್ತಿಲ್ಲವೆಂದ್ರೆ ಬೇಸರ ಬೇಡ : ಇದಕ್ಕೆ ಕಾರಣ Hormones
ಇತ್ತೀಚಿನ ದಿನಗಳಲ್ಲಿ ಯುವಜನಾಂಗದಲ್ಲಿ ಹಾರ್ಟ್ ಫೈಲ್ಯೂರ್ ಹೆಚ್ಚುತ್ತದೆ. ಪುರುಷರು ಮತ್ತು ಮಹಿಳೆಯರನ್ನೂ ಹೃದ್ರೋಗದ ಅಪಾಯ ಕಾಡ್ತಿದೆ. ಆದ್ರೆ ಇದರಲ್ಲೂ ಪುರುಷರು ಈ ಅಪಾಯಕ್ಕೆ ತುಲನಾತ್ಮಕವಾಗಿ ಹೆಚ್ಚು ಒಳಗಾಗುತ್ತಾರೆ. ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಹಲವಾರು ಅಧ್ಯಯನಗಳು ನಡೆದಿವೆ.
ಹೃದ್ರೋಗದ ಸಮಸ್ಯೆಗಳಿಗೂ ಇದುವೇ ಕಾರಣ
ಅದರಲ್ಲಿ ಅಚ್ಚರಿಗೆ ಕಾರಣವಾಗಿರುವ ವಿಚಾರ, ಸುಂದರ ಮಹಿಳೆಯರನ್ನು ನೋಡುವುದರಿಂದ ಹುಡುಗರ ಹೃದಯ ಬಡಿತ ಹೆಚ್ಚಾಗುತ್ತದೆ ಎಂಬುದಾಗಿದೆ. ಸ್ಪೇನ್‌ನ ಸಂಶೋಧಕರ ಗುಂಪು ಈ ವಿಚಾರವನ್ನು ಹೇಳಿಕೊಂಡಿದೆ. ಮಾತ್ರವಲ್ಲ ಕ್ಯೂಟ್ ಹುಡುಗಿಯರನ್ನು ನೋಡುವುದು ಹುಡುಗರಲ್ಲಿ ಹಾರ್ಟ್ ಫೈಲ್ಯೂರ್ ಮಾತ್ರವಲ್ಲ ಹೃದ್ರೋಗದಂತಹ ಸಮಸ್ಯೆಗಳನ್ನು ಹೆಚ್ಚಿಸಬಹುದು ಎಂದು ತಿಳಿಸಲಾಗಿದೆ. ಹೀಗಾಗಿ ಯುವಕರು ಸುಂದರ ಹುಡುಗಿಯರನ್ನು ಕಂಡಾಗ ಸಂಯಮ ಹೊಂದಿರುವುದು ಮುಖ್ಯ ಎಂದು ತಜ್ಞರು ತಿಳಿಸಿದ್ದಾರೆ. ಇದನ್ನು ಮೊದಲು WBMDಯಲ್ಲಿ ವರದಿ ಮಾಡಲಾಗಿದೆ.
ದಿಢೀರ್ ಏರುಪೇರಾಗುತ್ತೆ ಹೃದಯಬಡಿತ
ಒಂಭತ್ತು ವರ್ಷಗಳ ಸುದೀರ್ಘ ಸಂಶೋಧನೆಯ ನಂತರ, ಸ್ಪೇನ್‌ನ ಸಂಶೋಧಕರ ತಂಡ ಈ ವಿಚಾರವನ್ನು ಕಂಡು ಹಿಡಿದಿದೆ. ಬಂದಿದ್ದಾರೆ. ಸ್ಪೇನ್‌ನ ಸಂಶೋಧಕರು ಹೇಳುವಂತೆ ಸುಂದರ ಮಹಿಳೆಯರನ್ನು ಹಠಾತ್ ನೋಡುವುದು ಮನಸ್ಸಿಗೆ ದಿಢೀರ್ ಖುಷಿ ನೀಡುತ್ತದೆ. ಇದನ್ನು ಹೃದಯಬಡಿತದಲ್ಲಿ ಏರುಪೇರಿಗೆ ಕಾರಣವಾಗಬಹುದು. ಈ ಆಘಾತ ಕೆಲವೊಮ್ಮೆ ತುಂಬಾ ತೀವ್ರವಾಗಿರುತ್ತದೆ, ಅದು ಹಾರ್ಟ್ ಫೈಲ್ಯೂರ್ ಕಾರಣವಾಗಬಹುದು ಎಂದು ತಿಳಿಸಲಾಗಿದೆ.
15 ವರ್ಷದ ಹುಡುಗನ ಜತೆ 2 ಮಕ್ಕಳ ತಾಯಿಗೆ ಸಂಬಂಧ, ಲೈಂಗಿಕ ಕ್ರಿಯೆವೇಳೆ ಗಂಡನಿಗೆ ಸಿಕ್ಕಿಬಿದ್ದ ಪ್ರೇಮಿಗಳು
ವೇಲೆನ್ಸಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು 64 ಪುರುಷ ಸ್ವಯಂಸೇವಕರ ಮೇಲೆ ಅಧ್ಯಯನವನ್ನು ನಡೆಸಿದ ನಂತರ, ಸುಂದರ ಹುಡುಗಿಯರನ್ನು ಸಮೀಪಿಸಿದ ಐದು ನಿಮಿಷಗಳಲ್ಲಿ, ಹುಡುಗರ ಹೃದಯ ಬಡಿತವು ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂಬುದನ್ನು ಕಂಡುಕೊಂಡರು. ಈ 5 ನಿಮಿಷಗಳಲ್ಲಿ ಹುಡುಗರ ದೇಹದಲ್ಲಿ 'ಕಾರ್ಟಿಸೋಲ್' ಎಂಬ ವಿಶೇಷ ಹಾರ್ಮೋನ್ ಸ್ರವಿಸುವಿಕೆಯು ಹೆಚ್ಚಾಗುತ್ತದೆ ಎಂದು ಅಧ್ಯಯನವು ಹೇಳುತ್ತದೆ. ಈ 'ಕಾರ್ಟಿಸೋಲ್' ಹಾರ್ಮೋನ್‌ನ ಅತಿಯಾದ ಸ್ರವಿಸುವಿಕೆಯು ನಮ್ಮ ಹೃದಯಕ್ಕೆ ಹಾನಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಇಂಥಾ ಸಂದರ್ಭದಲ್ಲಿಯೇ ಇತರ ಆರೋಗ್ಯ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ. ಮಧುಮೇಹ ಅಥವಾ ವಿವಿಧ ನರಗಳ ಸಮಸ್ಯೆಗಳು ಸಂಭವಿಸಬಹುದು. ಆದ್ದರಿಂದ, ಸುಂದರ ಹುಡುಗಿಯರನ್ನು ನೋಡುವಾಗ ಸಂಯಮವನ್ನು ತೋರಿಸುವುದು ಮುಖ್ಯ ಎಂದು ತಜ್ಞರು ಯುವಕರಿಗೆ ಸೂಚಿಸಿದ್ದಾರೆ.