1954ರ ಅಂದರೆ ಸುಮಾರು 68 ವರ್ಷಗಳ ಹಿಂದೆ ಪ್ರೌಢಶಿಕ್ಷಣ ಮುಗಿಸಿದ ಎಸ್‌ಎಸ್‌ಎಲ್‌ಸಿ ಬ್ಯಾಚೊಂದು ಮತ್ತೆ ಸೇರುವುದೆಂದರೆ ಸಾಹಸವಲ್ಲದೇ ಮತ್ತೇನು ಅಲ್ಲ, ಈ ಬ್ಯಾಚ್‌ನ ಬಹುತೇಕರು ತಮ್ಮ ಇಳಿವಯಸ್ಸಿನಲ್ಲಿದ್ದು  ಹಿಂದಿ ಹಾಡೊಂದಕ್ಕೆ ಸಖತ್ ಆಗಿ ಡಾನ್ಸ್ ಮಾಡಿದ್ದು, ಈ ವೀಡಿಯೋ ಸಾಕಷ್ಟು ವೈರಲ್ ಆಗಿದೆ.

ಕಾಲೇಜು ಅಥವಾ ಶಾಲಾ ಜೀವನ ಅದು ಜೀವನದಲ್ಲಿ ಎಂದಿಗೂ ಮರೆಯಲಾಗದ ನೆನಪು. ಅಂದು ಆಡಿದ ತುಂಟಾಟ ತರಲೆ ಕೀಟಲೆಗಳು, ಶಿಕ್ಷಕರಿಂದ ತಿಂದ ಏಟುಗಳು ಸದಾ ಕಾಲ ಎಲ್ಲರ ಮನದಲ್ಲಿ ಮತ್ತೆ ಮತ್ತೆ ನೆನಪಾಗುತ್ತ ಕಚಗುಳಿ ಇಡುತ್ತಲೇ ಇರುತ್ತದೆ. ಕಾಲೇಜು ಮುಗಿದ ನಂತರ ವಿದ್ಯಾರ್ಥಿಗಳು ಸ್ನೇಹಿತರು ಬೇರೆ ಬೇರೆ ಕಾಲೇಜುಗಳನ್ನು ಅರಸಿ ದೂರ ಸಾಗುತ್ತಾರೆ. ಕೆಲವರು ಮದುವೆಯಾಗಿ ಹೋಗುತ್ತಾರೆ. ಅದರಲ್ಲೂ 1954ನೇ ಇಸವಿ ಎಂದರೆ ಬಹುತೇಕ ಹೆಣ್ಣು ಮಕ್ಕಳು ಎಸ್‌ಎಸ್‌ಎಲ್‌ಸಿ ಅದಂತೆ ಮದುವೆಯಾಗಿ ಹೋದರೆ ಹುಡುಗರು ಉನ್ನತ ಶಿಕ್ಷಣ ಮಾಡುವವರಾದರೆ ದೂರದ ಕಾಲೇಜುಗಳನ್ನು ಅರಸಿ ಹೋಗಿರುತ್ತಾರೆ. ಆಗ ಈಗಿನಂತೆ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಫೋನ್ ಇರಲು ಸಾಧ್ಯವಿಲ್ಲ, ಹೀಗಿರುವಾಗ ಹಳೆಯ ಸಹಪಾಠಿಗಳನ್ನು ಸಂಪರ್ಕಿಸುವುದು ಅವವರೊಂದಿಗೆ ಒಡನಾಟ ಮುಂದುವರೆಸುವುದು ಬಹಳ ಕಷ್ಟದ ವಿಚಾರವೇ ಹೀಗಿರುವಾಗ 1954ರ ಅಂದರೆ ಸುಮಾರು 68 ವರ್ಷಗಳ ಹಿಂದೆ ಪ್ರೌಢಶಿಕ್ಷಣ ಮುಗಿಸಿದ ಎಸ್‌ಎಸ್‌ಎಲ್‌ಸಿ ಬ್ಯಾಚೊಂದು ಮತ್ತೆ ಸೇರುವುದೆಂದರೆ ಸಾಹಸವಲ್ಲದೇ ಮತ್ತೇನು ಅಲ್ಲ, ಈ ಬ್ಯಾಚ್‌ನ ಬಹುತೇಕರು ತಮ್ಮ ಇಳಿವಯಸ್ಸಿನಲ್ಲಿದ್ದು ಮತ್ತೆ ಜೊತೆ ಸೇರಿ ಹಿಂದಿ ಹಾಡೊಂದಕ್ಕೆ ಸಖತ್ ಆಗಿ ಡಾನ್ಸ್ ಮಾಡಿದ್ದು, ಈ ವೀಡಿಯೋ ಸಾಕಷ್ಟು ವೈರಲ್ ಆಗಿದೆ.

ಮುಂಬೈ ನ್ಯೂಸ್ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದೆ. 2 ನಿಮಿಷದ ವೀಡಿಯೋದಲ್ಲಿ 1958ನೇ ಬ್ಯಾಚ್‌ನ ಎಸ್‌ಎಸ್‌ಎಲ್‌ಸಿ ಮಕ್ಕಳು ಹಿಂದಿ ಸಿನಿಮಾದ ಹಾಡೊಂದಕ್ಕೆ ಬಿಂದಾಸ್ ಆಗಿ ಕುಣಿಯುತ್ತಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ಎಲ್ಲರೂ ಇಳಿವಯಸ್ಸಿನವರೇ ಆಗಿದ್ದು, ಸಂಭ್ರಮದಿಂದ ಡಾನ್ಸ್ ಮಾಡುತ್ತಿರುವುದು ನೋಡುಗರಲ್ಲಿ ಖುಷಿ ಮೂಡಿಸುತ್ತಿದೆ. 

National Best Friends Day: ನಿಮ್ಮ ಜೀವದ ಗೆಳೆಯರಿಗೆ ಈ ರೀತಿಯಾಗಿ ವಿಶ್ ಮಾಡಿ!

ಈ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ಪುನರ್ಮಿಲನ ಸಮಾರಂಭವೂ ಮುಂಬೈನಲ್ಲಿ ನಡೆದಿದೆ ಎನ್ನಲಾಗಿದ್ದು, 2 ಲಕ್ಷಕ್ಕೂ ಅಧಿಕ ಜನ ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ವೀಕ್ಷಿಸಿದ್ದಾರೆ. ಇದು ಎಸ್‌ಎಸ್‌ಸಿ (11ನೇ ತರಗತಿ) ಬ್ಯಾಚ್‌ನ ವಿದ್ಯಾರ್ಥಿಗಳ ವಿಡಿಯೋ ಆಗ ಎಸ್‌ಎಸ್ಎಲ್‌ಸಿ ಇರಲಿಲ್ಲ, ದೇಶಕ್ಕೆ ಸ್ವಾತಂತ್ರ ಬರುವುದಕ್ಕೂ ಮೊದಲು ಜನಿಸಿದ ಮಕ್ಕಳ ತಲೆಮಾರು ಇದಾಗಿದ್ದು, ಅವರಿಗೆ ದೇವರು ಆರೋಗ್ಯ ಆಯಸ್ಸು ಕರುಣಿಸಲಿ ಎಂದು ಒಬ್ಬರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು ಈ ವೀಡಿಯೋ ನೋಡಿ ನನಗೆ ಅಳು ಬರುತ್ತಿದೆ, ಜೀವನ ಎಂದರೆ ಸಂಭ್ರಮಾಚರಣೆ, ಎಲ್ಲೇ ಇರಿ ಹೇಗೆ ಇರಿ ಖುಷಿಯಾಗಿರಿ ಎಂದು ಕಾಮೆಂಟ್ ಮಾಡಿದ್ದಾರೆ. ವೀಡಿಯೋದಲ್ಲಿ ನೃತ್ಯ ಮಾಡುತ್ತಿರುವ ವೃದ್ಧರೊಬ್ಬರನ್ನು ಗುರುತಿಸಿದ ಟ್ವಿಟ್ಟರ್ ಬಳಕೆದಾರರೊಬ್ಬರು, ಹ್ಯಾಟ್ ಧರಿಸಿದ ವೀಡಿಯೋದಲ್ಲಿ ನೃತ್ಯ ಮಾಡುತ್ತಿರುವವರೊಬ್ಬರು ನನ್ನ ತಾಯಿಯ ಬೆಸ್ಟ್‌ ಫ್ರೆಂಡ್‌ನ ತಾಯಿಯಾಗಿದ್ದಾರೆ. ನಾನು ನೋಡಿದ ಅತ್ಯಂತ ಉತ್ಸಾಹಭರಿತ ಮತ್ತು ಹಲವು ಪ್ರತಿಭೆಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಅವರು ಒಬ್ಬರು ಎಂದು ಕಾಮೆಂಟ್ ಮಾಡಿದ್ದಾರೆ. 

18 ವರ್ಷಗಳ ಬಳಿಕ ಬಾಲ್ಯದ ಗೆಳತಿಯನ್ನು ಹುಡುಕಿಕೊಟ್ಟ ಹಳೆ ಫೋಟೋ

ಇತ್ತೀಚೆಗೆ ಕಾಲೇಜು ಸ್ನೇಹಿತರ (ಸಹಪಾಠಿಗಳ) ರೀಯೂನಿಯನ್ ಸಾಮಾನ್ಯ ಎನಿಸಿದೆ. ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಇರುವುದರಿಂದ ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದರಿಂದ ಸ್ನೇಹಿತರ ಜೊತೆ ಸಹಪಾಠಿಗಳ ಜೊತೆ ಒಡನಾಟ ಮುಂದುವರೆಸುವುದು ದೊಡ್ಡ ವಿಷಯವೇನಲ್ಲ, ಆದರೆ ಮೊಬೈಲ್ ಫೋನ್ ಇಲ್ಲದ, ಒಡನಾಟ ಮುಂದುವರೆಸಲು ಕೇವಲ ಇಂಡಿಯನ್ ಪೋಸ್ಟ್ ಮಾತ್ರ ಒಂದೇ ಆಯ್ಕೆಯಾಗಿದ್ದಂತಹ ಆ ಜಮಾನದ ವಿದ್ಯಾರ್ಥಿಗಳು ಮತ್ತೆ ಸೇರಿ ಸಂಭ್ರಮಿಸುವುದೆಂದರೆ ಇದು ಯಾವುದೇ ಹಬ್ಬಕ್ಕೂ ಕಡಿಮೆ ಇರಲ್ಲ ಬಿಡಿ ಇದೇ ಕಾರಣಕ್ಕೆ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Scroll to load tweet…