National Best Friends Day: ನಿಮ್ಮ ಜೀವದ ಗೆಳೆಯರಿಗೆ ಈ ರೀತಿಯಾಗಿ ವಿಶ್ ಮಾಡಿ!
ರಾಷ್ಟ್ರೀಯ ಅತ್ಯುತ್ತಮ ಸ್ನೇಹಿತರ ದಿನ 2023 ಪ್ರತಿ ವರ್ಷ ಜೂನ್ 8 ರಂದು ಎಲ್ಲರೂ ಈ ದಿನವನ್ನು ಸಂತೋಷ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ ಸ್ನೇಹವು ನಿಮ್ಮ ಜೀವನದ ಸೌಂದರ್ಯವನ್ನು ಹೆಚ್ಚಿಸುತ್ತದೆ . ಸ್ನೇಹಿತರಿಲ್ಲದ ಜೀವನ ಅಪೂರ್ಣ. ನಿಮ್ಮ ಸ್ನೇಹಿತರಿಗೆ ಈ ರೀತಿ ಫ್ರೆಂಡ್ ಶಿಪ್ ಡೇ ವಿಶ್ ಮಾಡಿ.

ಒಳ್ಳೆಯ ಮತ್ತು ಕೆಟ್ಟ ಸಮಯಗಳಲ್ಲಿ ನಮ್ಮ ಜೊತೆ ಸದಾ ಕಾಲ ಬೆನ್ನೆಲುಬಾಗಿ ನಿಲ್ಲುವವರು ನಮ್ಮ ಸ್ನೇಹಿತರು. ಸ್ನೇಹವು ಅಂತಹ ಸುಂದರವಾದ ಸಂಬಂಧ. ರಕ್ತಸಂಬಂಧಕ್ಕಿಂತ ಮಿಗಿಲಾದ ಸಂಬಂಧ ಇದಾಗಿದೆ. ಹಾಗಾಗಿ ಪ್ರತಿವರ್ಷ ಜೂನ್ 8 ರಂದು ನ್ಯಾಷನಲ್ ಬೆಸ್ಟ್ ಫ್ರೆಂಡ್ ದಿನವನ್ನಾಗಿ (National best friend Day) ಆಚರಿಸಲಾಗುತ್ತೆ. ಈ ಮಹಾನ್ ದಿನವನ್ನು ಮತ್ತಷ್ಟು ಸುಂದರವಾಗಿಸಲು ಅವರಿಗೆ ಹೀಗೆ ವಿಶ್ ಮಾಡಿ.
ಒಂದು ಕಡೆ ಸ್ನೇಹಿತರೂ (friend) ಇದ್ದಾರೆ, ಮತ್ತೊಂದೆಡೆ ಕುಟುಂಬವೂ ಇದೆ. ಆದರೆ ನೀನು ನನ್ನ ಫ್ಯಾಮಿಲಿಯಲ್ಲಿ (family) ಒಬ್ಬನಾಗಿರುವ ನನ್ನ ಬೆಸ್ಟ್ ಫ್ರೆಂಡ್. ಹ್ಯಾಪಿ ನ್ಯಾಷನಲ್ ಬೆಸ್ಟ್ ಫ್ರೆಂಡ್ ಡೇ ಗೆಳೆಯ.
ನಿನ್ನ ಜೊತೆಯಲ್ಲಿದ್ದರೆ ದಿನಪೂರ್ತಿ ಒಂದು ಕ್ಷಣದಂತೆ ಕಳೆದು ಹೋಗುತ್ತೆ. ಯಾಕಂದ್ರೆ ನಿನ್ನ ಸನಿಹವು ನನಗೆ ಖಂಡಿತವಾಗಿ ಸಂತೋಷ ಮತ್ತು ನೆಮ್ಮದಿಯನ್ನು ಕೊಡುತ್ತೆ. ಥ್ಯಾಂಕ್ಯೂ ಎಲ್ಲಾದಕ್ಕೂ. ಹ್ಯಾಪಿ ನ್ಯಾಷನಲ್ ಬೆಸ್ಟ್ ಫ್ರೆಂಡ್ ಡೇ.
ಹ್ಯಾಪಿ ನ್ಯಾಷನಲ್ ಬೆಸ್ಟ್ ಫ್ರೆಂಡ್ ಡೇ. ನೀನು ನನಗೆ ಸಿಕ್ಕಿದಂತಹ ಅತ್ಯಮೂಲ್ಯವಾದ ರತ್ನ(gem of my life). ಈ ಜೀವನದಲ್ಲಿ ನೀನು ನನಗೆ ಸಿಕ್ಕಿರೋದಕ್ಕೆ ನಾನು ಧನ್ಯ. ನನ್ನ ಜೀವನಕ್ಕೆ ಬಂದಿರೋದಕ್ಕೆ ಥ್ಯಾಂಕ್ಯೂ.
ನಿನ್ನಂತಹ ಬೆಸ್ಟ್ ಫ್ರೆಂಡನ್ನು ನನ್ನ ಜೀವನಕ್ಕೆ ಕಳಿಸಿರೋದಕ್ಕೆ ಆ ದೇವರಿಗೆ ನಾನು ಕೈ ಮುಗಿದು ಧನ್ಯವಾದ ಹೇಳದ ದಿನವೇ ಇಲ್ಲ. ನನ್ನ ಪ್ರತಿ ನೋವು, ನಲಿವಿನಲ್ಲಿ ಜೊತೆಯಾಗಿ ನಿಂತಿದ್ದಕ್ಕೆ ಥ್ಯಾಂಕ್ಯೂ ಸೋ ಮಚ್
ನಮ್ಮ ಸ್ನೇಹದ ಸುಂದರವಾದ ಗುಲಾಬಿ ಯಾವಾಗಲೂ ಅರಳುತ್ತದೆ ಮತ್ತು ಎಂದಿಗೂ ಬಾಡೋದಿಲ್ಲ. ಏಕೆಂದರೆ ಇದು ನಮ್ಮ ಪ್ರೀತಿಯ ಕಾಳಜಿ ಮತ್ತು ಗೌರವದ ಭಾವನೆಗಳಿಂದ ಪೋಷಿಸಲ್ಪಡುತ್ತದೆ. ಹ್ಯಾಪಿ ನ್ಯಾಷನಲ್ ಬೆಸ್ಟ್ ಫ್ರೆಂಡ್ ಡೇ.
ನಾನು ನಿನ್ನನ್ನು ಭೇಟಿಯಾಗದೇ ಇದ್ದರೆ, ನನ್ನ ಭಾವನೆಗಳನ್ನು ನಿನ್ನೊಂದಿಗೆ ಹಂಚಿಕೊಳ್ಳದಿದ್ದರೆ ನಿನ್ನನ್ನು ಹಗ್ ಮಾಡದಿದ್ದರೆ ನನ್ನ ದಿನವು ಅಪೂರ್ಣವಾಗಿರುತ್ತದೆ. ನೀನು ಇದ್ರೆ ಮಾತ್ರ ನಾನು ಕಂಪ್ಲೀಟ್ ಆಗೋದು ಯಾಕೆಂದರೆ ಯು ಆರ್ ಮೈ ಬೆಸ್ಟ್ ಫ್ರೆಂಡ್ (bestfriend). ಹ್ಯಾಪಿ ಹ್ಯಾಪಿ ನ್ಯಾಷನಲ್ ಬೆಸ್ಟ್ ಫ್ರೆಂಡ್ ಡೇ ಮೈ ಡಿಯರ್ ಫ್ರೆಂಡ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.