18 ವರ್ಷಗಳ ಬಳಿಕ ಬಾಲ್ಯದ ಗೆಳತಿಯನ್ನು ಹುಡುಕಿಕೊಟ್ಟ ಹಳೆ ಫೋಟೋ
ಬಾಲ್ಯದ ಸ್ನೇಹ ಬಹಳ ಅಮೋಘವಾದುದು, ಬಾಲ್ಯದಲ್ಲಿ ತೆಗೆದ ಫೋಟೋಗಳು ಚಿರಕಾಲ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ. ಅದೇ ಬಾಲ್ಯದ ಫೋಟೋವೊಂದು ಈಗ ಹಳೆಯ ಸ್ನೇಹವನ್ನು ಮರು ಸ್ಥಾಪಿಸಲು ನೆರವು ನೀಡಿದೆ.
ಬಾಲ್ಯದ ಸ್ನೇಹ ಬಹಳ ಅಮೋಘವಾದುದು, ಬಾಲ್ಯದಲ್ಲಿ ತೆಗೆದ ಫೋಟೋಗಳು ಚಿರಕಾಲ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ. ಅದೇ ಬಾಲ್ಯದ ಫೋಟೋವೊಂದು ಈಗ ಹಳೆಯ ಸ್ನೇಹವನ್ನು ಮರು ಸ್ಥಾಪಿಸಲು ನೆರವು ನೀಡಿದೆ.
ಬಾಲ್ಯದ ಸ್ನೇಹವು ಬಹುಕಾಲ ನೆನಪಿನಲ್ಲುಳಿಯುವ ನೆನಪುಗಳಲ್ಲಿ ಒಂದಾಗಿದೆ. ಸರಳ, ಗಡಿ ಬಿಡಿ ಮುಕ್ತ ಮತ್ತು ಎಂದಿಗೂ ಚಿಂತೆ ಇಲ್ಲದ ಬಾಲ್ಯದ ನೆನಪುಗಳು ಜೀವನವನ್ನು ಮತ್ತೆ ಫ್ರೆಶ್ ಮಾಡುತ್ತವೆ. ನಮಗೆಲ್ಲರಿಗೂ ಬಾಲ್ಯದ ಗೆಳತಿಯರು/ಗೆಳೆಯರು ಜೊತೆಯಾಗಿ ಆಡಿದ ತುಂಟಾಟ, ಕಿತ್ತಾಟ, ಮುನಿಸು ಕೀಟಲೆ ಹಾಗೂ ಸಣ್ಣಪುಟ್ಟ ಅಪರಾಧಗಳು ಸದಾ ನೆನಪಿನಲ್ಲಿರುತ್ತವೆ. ಆದರೆ ಕಾರಣಾಂತರಗಳಿಂದ ಈ ಸ್ನೇಹ ಕೆಲವೊಮ್ಮೆ ಮಧ್ಯದಲ್ಲಿ ಕಡಿದು ಹೋಗುತ್ತದೆ. ಊರು ಬಿಟ್ಟು ಫೋಷಕರು ಪರವೂರಿಗೆ ಹೋಗುವ ಕಾರಣಕ್ಕೋ ಅಪ್ಪ ಅಮ್ಮನಿಗೆ ಟ್ರಾನ್ಸ್‌ಫರ್ ಆದ ಕಾರಣಕ್ಕೋ ಅಥವಾ ಹೆಚ್ಚಿನ ಉತ್ತಮ ಶಿಕ್ಷಣಕ್ಕಾಗಿ ಊರು ಬಿಟ್ಟು ಹಾಸ್ಟೆಲ್ ಸೇರುವ ಕಾರಣಕ್ಕೆ ಸ್ನೇಹಗಳು ಕಡಿದು ಹೋಗುತ್ತವೆ.
'ಜೀವಕಿನ್ನ ಜಾಸ್ತಿ ಕಣೋ ಕುಚಿಕು..' ಸ್ನೇಹಿತನ ಚಿತೆಗೆ ಹಾರಿ ಪ್ರಾಣಬಿಟ್ಟ ಜೀವದ ಗೆಳೆಯ!
ಈಗಿನಂತೆ ಆಗ ಸ್ಮಾರ್ಟ್‌ಫೋನ್ (Smartphone) ಇರಲಿಲ್ಲ, ಹೀಗಾಗಿ ಸ್ನೇಹಿತರ ಜೊತೆ ಸಂಪರ್ಕ ಇಟ್ಟುಕೊಳ್ಳುವುದು ಬಹಳ ದೂರದ ಮಾತು ಆದಾಗ್ಯೂ ಸ್ನೇಹದ ನೆನಪಿನ ಕಾರಣಕ್ಕೆ ಅನೇಕರು ತಮ್ಮ ಬಾಲ್ಯದ ಸಹಪಾಠಿಗಳನ್ನು ಹುಡುಕುವ ಪ್ರಯತ್ನ ಮಾಡುತ್ತಾರೆ. ಅದೇ ರೀತಿ ಬಾಲ್ಯದ ಫೋಟೋವನ್ನಿರಿಸಿಕೊಂಡು ಮಹಿಳೆಯೊಬ್ಬರು ತಮ್ಮ ಬಾಲ್ಯದ ಗೆಳತಿಯನ್ನು ಹುಡುಕುವ ಪ್ರಯತ್ನ ಮಾಡಿದ್ದು, ಇದರಲ್ಲಿ ಯಶಸ್ವಿಯೂ ಆಗಿದ್ದಾರೆ. ಅವರ ಕತೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ (Instagram) ಬಳಕೆದಾರರಾದ ನೇಹಾ ಹಾಗೂ ಅವರ ಬಾಲ್ಯದ ಗೆಳತಿ ಲಕ್ಷಿತಾ 2006ರಲ್ಲಿ ಎಲ್‌ಕೆಜಿಯಲ್ಲಿ ಜೊತೆಯಾಗಿ ವ್ಯಾಸಂಗ ಮಾಡಿದ್ದರು. ಲಕ್ಷಿತಾ ತನ್ನ ಪೋಷಕರೊಂದಿಗೆ ನಗರ ತೊರೆಯುವವರೆಗೂ ಅವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಹೀಗಾಗಿ ನಂತರದಲ್ಲಿ ಅವರ ಸ್ನೇಹ ಕಡಿದು ಹೋಗಿತ್ತು. ನೇಹಾ ಗೆಳತಿ ಲಕ್ಷಿತಾಳನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಿತಾ ಹೆಸರಿನಲ್ಲಿ ಗೆಳತಿಗಾಗಿ ಹುಡುಕಾಟ ನಡೆಸಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿರುವ ಲಕ್ಷಿತಾ (Lakshita) ಹೆಸರಿನ ಎಲ್ಲಾ ಖಾತೆಗಳನ್ನು ಸರ್ಚ್ ಮಾಡಿದ ನೇಹಾ ಅವರಿಗೆ ಸಂದೇಶವನ್ನು ಕೂಡ ಕಳುಹಿಸಿ ಸುಮ್ಮನಾಗಿದ್ದರು. ಆದರೆ ಕೊನೆಗೂ ಇವರ ಹುಡುಕಾಟಕ್ಕೆ ಬ್ರೇಕ್ ಬಿದ್ದಿದ್ದು, ನಿಜವಾಗಿಯೂ ಇವರ ಗೆಳತಿಯಾಗಿದ್ದ ಲಕ್ಷಿತಾ ಎಂಬಾಕೆಯೇ ಇವರಿಗೆ ಮರಳಿ ಸಂದೇಶ ಕಳುಹಿಸಿದ್ದಾರೆ. ಪರಿಣಾಮ 18 ವರ್ಷಗಳ ಬಳಿಕ ಇವರಿಗೆ ಬಾಲ್ಯದ ಗೆಳತಿ ಮತ್ತೆ ಸಿಕ್ಕಂತಾಗಿದೆ. ಈ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದರು.
ಎಳವೆಯಲ್ಲೇ ಎಷ್ಟೊಂದು ಜವಾಬ್ದಾರಿ ನೋಡಿ: ಪುಟ್ಟ ಬಾಲಕನ ವೀಡಿಯೋ ವೈರಲ್
ಒಳ್ಳೆಯದು ನಿನ್ನನ್ನು ಹುಡುಕುವುದು ಅಷ್ಟೊಂದು ಸುಲಭವಿರಲಿಲ್ಲ, ಸುಮಾರು 18 ವರ್ಷಗಳ ಬಳಿಕ ನಿನ್ನ ಸಂಪರ್ಕ ಮತ್ತೆ ಸಿಕ್ಕಿರುವುದನ್ನು ನಂಬಲಾಗುತ್ತಿಲ್ಲ, ನಾನು 2006ರಲ್ಲಿ ಎಲ್‌ಕೆಜಿಯಲ್ಲಿ ಲಕ್ಷಿತಾ ಎಂಬ ಗೆಳತಿಯನ್ನು ಹೊಂದಿದ್ದೆ, ನಂತರದಲ್ಲಿ ಆಕೆ ಜೈಪುರಕ್ಕೆ ಹೊರಟು ಹೋದಳು ನಮ್ಮ ಸಂಪರ್ಕ ಇದರಿಂದ ಕಡಿದು ಹೋಯ್ತು, ನನಗೆ ಆಕೆಯ ಸರ್‌ನೇಮ್ ಕೂಡ ನೆನಪಿರಲಿಲ್ಲ ಎಂದು ನೇಹಾ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಅವರ ಈ ಹುಡುಕಾಟ ಯಶಸ್ವಿಯಾಗಿರುವುದಕ್ಕೆ ಹಾಗೂ ಅವರ ಶ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬಾಲ್ಯದ ಸ್ನೇಹವೊಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಿಂದಾಗಿ (Instagram) ಮರಳಿ ಸಿಕ್ಕಂತಾಗಿದೆ.