ಮಹಾಭಾರತ ಸಂಗ್ರಾಮ: ಬೆಂಗಳೂರು ಕೇಂದ್ರ ಕ್ಷೇತ್ರ

ಬೆಂಗಳೂರು[ಫೆ.28]: ಒಮ್ಮೊಮ್ಮೆ ಹೀಗೂ ಆಗಿ ಬಿಡುತ್ತದೆ. ಕ್ಷೇತ್ರದ ಮತದಾರರ ಪೈಕಿ ಶೇ. 50ಕ್ಕಿಂತ ಹೆಚ್ಚು ಮಂದಿ ನಿರ್ದಿಷ್ಟ ಪಕ್ಷದ ಪಕ್ಕಾ ವೋಟ್‌ಬ್ಯಾಂಕ್ ಆಗಿರುತ್ತಾರೆ. ಸದರಿ ಪಕ್ಷದ ಶಾಸಕರೇ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಗೆಲ್ಲುತ್ತಿರುತ್ತಾರೆ. ಆದರೆ, ಲೋಕಸಭಾ ಚುನಾವಣೆ ವಿಚಾರ ಬಂದಾಗ ಮಾತ್ರ ಮತದಾರ ಸದರಿ ಪಕ್ಷದ ವಿರೋಧಿ ಪಕ್ಷಕ್ಕೆ ಬೆಂಬಲ ನೀಡುತ್ತಾನೆ!

ಟಿಕೆಟ್ ಫೈಟ್: ಅನಂತ್‌ ಕ್ಷೇತ್ರದಲ್ಲಿ ಪತ್ನಿ ಬಿಜೆಪಿ ಅಭ್ಯರ್ಥಿ?

ಇಂತಹ ವೈಚಿತ್ರ್ಯಕ್ಕೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಅತ್ಯುತ್ತಮ ಉದಾಹರಣೆ. ಸುಮಾರು 23 ಲಕ್ಷ ಜನಸಂಖ್ಯೆಯಲ್ಲಿ 17 ಲಕ್ಷದಷ್ಟು ಮತದಾರರನ್ನು ಈ ಕ್ಷೇತ್ರ ಹೊಂದಿದೆ. ಈ ಪೈಕಿ ಕಾಂಗ್ರೆಸ್ ನ ಮತಬ್ಯಾಂಕ್ ಎಂದು ಗುರು ತಿಸಬಹುದಾದ ವರ್ಗದ ಸಂಖ್ಯಾಬಲ ಇಲ್ಲಿ ಸುಮಾರು 12 ಲಕ್ಷ ದಷ್ಟು ಇದೆ. ಅಷ್ಟೇ ಅಲ್ಲ, ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಆಧಿಪತ್ಯವಿದೆ.

ಟಿಕೆಟ್ ಫೈಟ್: ದೇವಮೂಲೆಯಲ್ಲಿ ಮತ್ತೆ ‘ಕೈ’ ಪತಾಕೆ?

ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ (ಗಾಂಧಿನಗರ), ಸಚಿವರಾದ ಕೆ.ಜೆ. ಜಾರ್ಜ್ (ಸರ್ವಜ್ಞ ನಗರ), ಜಮೀರ್ ಅಹ್ಮದ್ ಖಾನ್ (ಚಾಮರಾಜಪೇಟೆ), ಮಾಜಿ ಸಚಿವ ರೋಷನ್ ಬೇಗ್ (ಶಿವಾಜಿನಗರ) ಮತ್ತು ಬಿಎಂಟಿಸಿ ಅಧ್ಯಕ್ಷ ಹ್ಯಾರೀಸ್ (ಶಾಂತಿನಗರ)ರಂತಹ ಪ್ರಭಾವಿ ಕಾಂಗ್ರೆಸ್ ನಾಯಕರಿರುವ ಕ್ಷೇತ್ರವಿದು. ಇಷ್ಟಾಗಿಯೂ ಈ ಕ್ಷೇತ್ರ ತನ್ನ ಹುಟ್ಟಿದಾರಭ್ಯ ಬಿಜೆಪಿಯ ಪಿ.ಸಿ. ಮೋಹನ್ ಅವರನ್ನೇ ಸಂಸದರನ್ನಾಗಿ ಆಯ್ಕೆ ಮಾಡಿದೆ.

ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಮೋಹನ್

2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಹುಟ್ಟಿಕೊಂಡ ಹೊಸ ಕ್ಷೇತ್ರವಿದು. ಈ ಕ್ಷೇತ್ರಕ್ಕೆ ಮೊದಲ ಚುನಾವಣೆ 2009ರಲ್ಲಿ ನಡೆಯಿತು. ಕಾಂಗ್ರೆಸ್‌ನ ಎಚ್.ಟಿ. ಸಾಂಗ್ಲಿ ಯಾನ ಅಭ್ಯರ್ಥಿಯಾಗಿದ್ದ ಈ ಚುನಾವಣೆಯಲ್ಲಿ ಬಿಜೆ ಪಿಯ ಪಿ.ಸಿ. ಮೋಹನ್ ಸುಮಾರು 35 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ೨೦೧೪ರ ಚುನಾವಣೆಯಲ್ಲೂ ಕಾಂಗ್ರೆಸ್‌ನ ಯುವ ಮುಖಂಡ ರಿಜ್ವಾನ್ ಅರ್ಷದ್ ಅವರನ್ನು 1.35 ಲಕ್ಷ ಮತಗಳಿಂದ ಮಣಿಸಿದ ಮೋಹನ್ ಭರ್ಜರಿ ಗೆಲುವು ದಾಖಲಿಸಿದ್ದರು. ಈ ಬಾರಿ ಹ್ಯಾಟ್ರಿಕ್ ಗೆಲುವಿಗೆ ಅವರು ತಹತಹಿಸಿದ್ದಾರೆ.

ಟಿಕೆಟ್ ಫೈಟ್: ಉಡುಪಿಯಲ್ಲಿ ಕರಂದ್ಲಾಜೆ ನಿರಾಕರಿಸಿದ್ರೆ ಹೆಗ್ಡೆಗೆ ಟಿಕೆಟ್?

ಕಾಂಗ್ರೆಸ್ಸಿಗೆ ಒಳಜಗಳದ್ದೇ ಸಮಸ್ಯೆ

ತನ್ನ ಮತಬ್ಯಾಂಕ್ ಅನ್ನು ಅತಿ ದೊಡ್ಡದಾಗಿ ಹೊಂದಿದ್ದರೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಈ ಪರಿ ಹಿನ್ನಡೆ ಏಕೆ ಎಂಬುದಕ್ಕೆ ಉತ್ತರ ಸರಳ. ಅದು ಕಾಂಗ್ರೆಸ್ ಮತಗಳ ವಿಭಜನೆ ಹಾಗೂ ಪಕ್ಷದೊಳಗಿನ ನಾಯಕರ ಆಂತರಿಕ ಕಚ್ಚಾಟ ಅರ್ಥಾತ್ ಒಳಏಟು. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಕಳೆದ ಎರಡು ಬಾರಿಯೂ ಇಲ್ಲಿ ನಾಯಕರ ನಡುವೆ ಒಗ್ಗಟ್ಟು ಮೂಡಿಸುವಲ್ಲಿ ವಿಫಲವಾಗಿದೆ. 2009ರಲ್ಲಿ ಸಾಂಗ್ಲಿಯಾನ ಅವರಿಗೆ ಟಿಕೆಟ್ ಕೊಟ್ಟಾಗ ಜಾಫರ್ ಷರೀಫ್, ರೋಷನ್ ಬೇಗ್‌ರಂತಹ ಪ್ರಮುಖ ಮುಸ್ಲಿಂ ಮುಖಂಡರು ಅಸಮಾ ಧಾನಗೊಂಡಿದ್ದರು. 2014ರಲ್ಲಿ ಮತ್ತೆ ಹಿರಿಯ ಮುಸ್ಲಿಂ ನಾಯಕರ ಆಶಯಗಳಿಗೆ ವಿರುದ್ಧವಾಗಿ ಯುವ ಮುಖಂಡ ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ನೀಡಲಾಯಿತು. ಇದರ ಪರಿಣಾಮವೆಂದರೆ, 1.35 ಲಕ್ಷಗಳ ಬೃಹತ್ ಅಂತರದಲ್ಲಿ ದಯನೀಯ ಸೋಲು. ಈ ಬಾರಿಯೂ ಕಾಂಗ್ರೆಸ್ ಇದೇ ಸಮಸ್ಯೆ ಎದುರಿಸುತ್ತಿದೆ.

ಟಿಕೆಟ್ ಫೈಟ್: ಕಾಂಗ್ರೆಸ್ ಭದ್ರಕೋಟೆ ಚಾಮರಾಜನಗರದಲ್ಲಿ ಅರಳುತ್ತಾ ಕಮಲ?

ಟಿಕೆಟ್‌ಗಾಗಿ ನಾಲ್ವರ ಪೈಪೋಟಿ

ಭಾರಿ ಅಂತರದಿಂದ ಕಳೆದ ಬಾರಿ ಪರಾಭವಗೊಂಡಿದ್ದರೂ ರಿಜ್ವಾನ್ ಅರ್ಷದ್ ಮತ್ತೆ ಟಿಕೆಟ್ ಬಯಸಿದ್ದಾರೆ. ಶಿವಾಜಿ ನಗರ ಕ್ಷೇತ್ರದ ಶಾಸಕ ರೋಷನ್ ಬೇಗ್ ಅವರು ಲೋಕಸಭೆಗೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಹಿಂದುಳಿದ ವರ್ಗಗಳ ನಾಯಕ ಹಾಗೂ ಪ್ರಭಾವಿ ನಾಯಕ ಬಿ.ಕೆ. ಹರಿಪ್ರಸಾದ್ ಟಿಕೆಟ್ ಕೋರಿದ್ದಾರೆ. ಹಳೆ ಹುಲಿ ಹಾಗೂ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಕುಟುಂಬದ ಆಪ್ತ ಎಚ್.ಟಿ. ಸಾಂಗ್ಲಿಯಾನ ಮತ್ತೆ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ. ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿರುವ ಈ ಎಲ್ಲರೂ ಪ್ರಭಾವಿಗಳೆ. ಒಬ್ಬರಿಗೆ ಟಿಕೆಟ್ ದೊರಕಿದರೆ ಉಳಿ ದವರೆಲ್ಲರೂ ಒಗ್ಗೂಡಿ ಟಿಕೆಟ್ ಪಡೆದವರನ್ನು ಸೋಲಿಸುವಷ್ಟು ಶಕ್ತಿಶಾಲಿಗಳು. ಇದು ಕಾಂಗ್ರೆಸ್‌ನ ಸಮಸ್ಯೆ.

ಟಿಕೆಟ್ ಫೈಟ್: ದಾವಣಗೆರೆಯಲ್ಲಿ ಕೈ-ಕಮಲ ನಡುವೆ ಪ್ರಬಲ ಪೈಪೋಟಿ

ಹಿರಿಯರು ವರ್ಸಸ್ ಕಿರಿಯರು

ರಿಜ್ವಾನ್ ಅರ್ಷದ್ ಅವರ ಲಾಬಿ ಪ್ರಭಾವಶಾಲಿಯಾಗಿದೆ. ರಾಜ್ಯ ಕಾಂಗ್ರೆಸ್‌ನ ಯುವ ನಾಯಕರ ಪ್ರಭಾವಿ ಗುಂಪು ರಿಜ್ವಾನ್ ಅರ್ಷದ್ ಬೆನ್ನಿಗಿದೆ. ದಿನೇಶ್ ಗುಂಡೂರಾವ್, ಪ್ರಭಾವಿ ಸಚಿವ ಕೃಷ್ಣ ಬೈರೇಗೌಡ ಆದಿಯಾಗಿ ಹತ್ತಕ್ಕೂ ಹೆಚ್ಚು ಪ್ರಭಾವಿಗಳಿರುವ ಈ ಗುಂಪು ರಾಹುಲ್ ಗಾಂಧಿ ಅವರೊಂದಿಗೆ ಸಾಮೀಪ್ಯ ಹೊಂದಿದ್ದು, ಇದನ್ನು ಬಳಸಿಕೊಂಡು ರಾಜ್ಯದ ಹಿರಿಯ ನಾಯಕರಿಗೂ ಚಳ್ಳೆ ಹಣ್ಣು ತಿನ್ನಿಸುವುದರಲ್ಲಿ ನಿಸ್ಸೀಮ ಎನಿಸಿದೆ. ಈ ಗುಂಪಿನ ವಿರುದ್ಧ

ಹಿರಿಯ ಕಾಂಗ್ರೆಸ್ಸಿಗರಿಗೆ ದೊಡ್ಡ ಮುನಿಸಿದೆ. ಈ ಹಿರಿಯರು ಈ ಬಾರಿ ರೋಷನ್‌ಬೇಗ್ ಪರ ನಿಂತಿದ್ದಾರೆ. ಟಿಕೆಟ್‌ಗಾಗಿ ಈ ಮುಸ್ಲಿಂ ನಾಯಕರ ನಡುವಿನ ಕಚ್ಚಾಟವನ್ನು ಬಳಸಿಕೊಳ್ಳಲು ಬಿ.ಕೆ. ಹರಿಪ್ರಸಾದ್ ಸಜ್ಜಾಗಿದ್ದಾರೆ. ಹೈಕಮಾಂಡ್‌ನಲ್ಲೂ ಪ್ರಭಾವಿಯಾಗಿರುವ ಬಿ.ಕೆ. ಹರಿಪ್ರಸಾದ್ ಈ ಬಾರಿ ಟಿಕೆಟ್‌ನ ಪ್ರಬಲ ಆಕಾಂಕ್ಷಿ.

ಟಿಕೆಟ್ ಫೈಟ್: ಡಿಕೆ+ಎಚ್‌ಡಿಕೆ ವರ್ಸಸ್‌ ಯೋಗಿ?

ಕಾಂಗ್ರೆಸ್ ಮತ ಕಸಿಯುವ ಇತರರು

ಈ ಕ್ಷೇತ್ರ ಕಾಂಗ್ರೆಸ್‌ನ ಪ್ರಮುಖ ಮತ ಬ್ಯಾಂಕ್ ಆಗಿದೆ ಎಂಬುದು ಏಕೆ ಎಂದರೆ ಇಲ್ಲಿ ಸುಮಾರು 12 ಲಕ್ಷದಷ್ಟು ಮತ ದಾರರು ಮುಸ್ಲಿಂ ಹಾಗೂ ಕ್ರೈಸ್ತರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ತಮಿಳು, ಉರ್ದು ಹಾಗೂ ತೆಲುಗು ಭಾಷಿಕರು. ಈ ಮತಗಳು ವಿಭಜನೆಯಾಗದಿದ್ದರೆ ಇಲ್ಲಿ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿಯಿದೆ. ಆದರೆ ಇಲ್ಲಿ ಚುನಾವಣೆಗೆ ಅತಿ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಕಣಕ್ಕೆ ಇಳಿಯುತ್ತಾರೆ. 2009ರಲ್ಲಿ ಒಟ್ಟು 38 ಮಂದಿ ಸ್ಪರ್ಧಿಗಳಿದ್ದರೆ, 2014ರಲ್ಲಿ 26 ಮಂದಿ ಕಣದಲ್ಲಿದ್ದರು. ಅತಿ ದೊಡ್ಡ ಸಂಖ್ಯೆಯಲ್ಲಿ ಕಣಕ್ಕೆ ಇಳಿಯುವ ಸ್ವತಂತ್ರ ಅಭ್ಯರ್ಥಿಗಳು ನೇರವಾಗಿ ಕಾಂಗ್ರೆಸ್ ಮತ ಬುಟ್ಟಿಗೆ ಕೈ ಹಾಕುತ್ತಾರೆ. ಇದೇ ವೇಳೆ ಕ್ಷೇತ್ರದಲ್ಲಿರುವ ಬಿಜೆಪಿ ಪರ ಮತಗಳು ಸ್ವಲ್ಪವೂ ವಿಭಜ ನೆಯಾಗುವುದಿಲ್ಲ. ಪರಿಣಾಮ ಮೋಹನ್ ಸತತ ಎರಡು ಬಾರಿ ಜಯಗಳಿಸಿದ್ದಾರೆ.

ಟಿಕೆಟ್ ಫೈಟ್: ವಿಜಯಪುರದಲ್ಲಿ ಜಿಗಜಿಣಗಿ V/S ಅಲಗೂರ?

ಪ್ರಕಾಶ್ ರೈ ಸ್ಪರ್ಧೆ ಯಾರಿಗೆ ಲಾಭ?

ಇದೇ ತಂತ್ರ ಈ ಬಾರಿಯೂ ಪುನರಾವರ್ತನೆಯಾಗುವ ದಿಸೆ ಯಲ್ಲಿ ಪ್ರಯತ್ನ ನಡೆದಂತೆ ಕಾಣುತ್ತಿದೆ. ಏಕೆಂದರೆ, ಕಾಂಗ್ರೆಸ್ ಮತ ಬ್ಯಾಂಕ್‌ನ ಮೇಲೆ ನೇರವಾಗಿ ಕಣ್ಣಿಟ್ಟಿರುವ ಸಿನಿಮಾ ನಟ ಪ್ರಕಾಶ್ ರೈ ಈಗಾಗಲೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಬೆಂಬಲ ನೀಡುವಂತೆ ಕಾಂಗ್ರೆಸ್ ಅನ್ನು ಕೋರಿದ್ದಾರೆ. ಕಾಂಗ್ರೆಸ್ ಪ್ರಕಾಶ್ ರೈಗೆ ಬೆಂಬಲ ನೀಡುವ ಸಾಧ್ಯತೆಯೇ ಇಲ್ಲ. ಇನ್ನೂ ರೈ ಅವರಿಗೆ ಟಿಕೆಟ್ ನೀಡುವುದು ಸಾಧ್ಯವಿಲ್ಲ. ಕ್ರೈಸ್ತ ಧರ್ಮೀಯರು ಎಂದು ಹೇಳಲಾದ ಪ್ರಕಾಶ್ ರೈ ಅವರು ಕಣದಲ್ಲಿ ಉಳಿದರೆ ಅದು ಖಂಡಿತವಾಗಿಯೂ ಬಿಜೆಪಿಯ ಪಿ.ಸಿ. ಮೋಹನ್‌ಗೆ ವರದಾನವಾಗಬಹುದು.

ಟಿಕೆಟ್ ಫೈಟ್: ಬಿಜೆಪಿ ಟಿಕೆಟ್‌ಗೆ ಸವದಿ, ಕತ್ತಿ, ಕೋರೆ ಫೈಟ್‌

ಜೆಡಿಎಸ್‌ನಲ್ಲಿ ಆಕಾಂಕ್ಷಿಗಳೇ ಇಲ್ಲ

ಮೈತ್ರಿ ಏರ್ಪಟ್ಟರೆ ಈ ಕ್ಷೇತ್ರ ನಿಶ್ಚಯವಾಗಿ ಕಾಂಗ್ರೆಸ್ ಪಾಲಾಗಲಿದೆ. ಹೀಗಾಗಿ ಜೆಡಿಎಸ್‌ನಲ್ಲಿ ಯಾರೂ ಟಿಕೆಟ್ ಕೇಳುವವರೇ ಇಲ್ಲ. ಅಲ್ಲದೆ, ಈ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಅಸ್ತಿತ್ವವೂ ಇಲ್ಲ. 2009ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಹಾಲಿ ಸಚಿವ ಜಮೀರ್ ಅಹ್ಮದ್ ಖಾನ್ 1.62 ಲಕ್ಷ ಮತಗಳನ್ನು ಗಳಿಸಿದ್ದರು. ಆದರೆ, ೨೦೧೪ರಲ್ಲಿ ಕಣಕ್ಕೆ ಇಳಿದಿದ್ದ ನಂದಿನಿ ಆಳ್ವ ಗಳಿಸಿದ್ದು ಕೇವಲ 20 ಸಾವಿರ ಮತ ಮಾತ್ರ. ಇದು ಸ್ಪಷ್ಟವಾಗಿ ಕ್ಷೇತ್ರದಲ್ಲಿ ಜೆಡಿಎಸ್‌ನ ಪ್ರಭಾವ ಇಲ್ಲ ಎಂದು ನಿರೂಪಿಸುತ್ತದೆ.

ಅಲ್ಪ ಸಂಖ್ಯಾತರೇ ಹೆಚ್ಚಿದ್ದರೂ ಬಿಜೆಪಿ ಗೆಲ್ಲುವ ಕ್ಷೇತ್ರವಿದು

2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಂತರ ಹುಟ್ಟಿಕೊಂಡ ಕ್ಷೇತ್ರವಿದು. ಕಾಂಗ್ರೆಸ್ ಅತ್ಯಂತ ಪ್ರಭಾವಿ ಎನಿಸಿದ ನಾಯಕರು ಶಾಸಕರಾಗಿರುವ ಕ್ಷೇತ್ರ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಎನಿಸಿರುವ ಅಲ್ಪಸಂಖ್ಯಾತರು, ತಮಿಳು- ತೆಲುಗು ಭಾಷಿಕರು ಹೆಚ್ಚಾಗಿರುವ ಕ್ಷೇತ್ರ. ಇಷ್ಟಾದರೂ ಇಲ್ಲಿ ಬಿಜೆಪಿಯು ಈ ಕ್ಷೇತ್ರ ಹುಟ್ಟಿಕೊಂಡ ನಂತರ ನಡೆದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಜಯ ದಾಖಲಿಸಿದೆ.

ಟಿಕೆಟ್ ಫೈಟ್: ಕಾಂಗ್ರೆಸ್‌ ಸಂಸದ ಜೆಡಿಎಸ್‌ ಅಭ್ಯರ್ಥಿ ಆಗ್ತಾರಾ?

8ರಲ್ಲಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಸರ್ವಜ್ಞ ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ಚಾಮರಾಜಪೇಟೆ, ಸಿ.ವಿ. ರಾಮನ್‌ನಗರ, ರಾಜಾಜಿನಗರ ಮತ್ತು ಮಹದೇವಪುರ. ಈ ಪೈಕಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಮೂರರಲ್ಲಿ ಬಿಜೆಪಿ ಶಾಸಕರಿದ್ದಾರೆ. ಜೆಡಿಎಸ್ ಇಲ್ಲಿ ಬಲವಿಲ್ಲ. ಹೀಗಾಗಿ ಮೈತ್ರಿ ಏರ್ಪಟ್ಟರೆ ಸಹಜವಾಗಿ ಕಾಂಗ್ರೆಸ್‌ಗೆ ಈ ಕ್ಷೇತ್ರ ಲಭಿಸಲಿದೆ. ಬಿಜೆಪಿಯಿಂದ ಸುರೇಶ್ ಕುಮಾರ್ (ರಾಜಾಜಿ ನಗರ), ಅರವಿಂದ ಲಿಂಬಾವಳಿ (ಮಹದೇವ ಪುರ) ಮತ್ತು ರಘು (ಸಿ.ವಿ. ರಾಮನ್ ನಗರ) ಶಾಸಕರು.

ಟಿಕೆಟ್ ಫೈಟ್: ಸಿದ್ದು ಸ್ಪರ್ಧೆ ವದಂತಿಯಿಂದ ಕೊಪ್ಪಳ ಕ್ಷೇತ್ರದಲ್ಲಿ ಸಂಚಲನ

ರೇಸ್‌ನಲ್ಲಿ ಯಾರ‌್ಯಾರು

ಬಿಜೆಪಿ: ಪಿ.ಸಿ. ಮೋಹನ್

ಕಾಂಗ್ರೆಸ್: ರಿಜ್ವಾನ್ ಅರ್ಷದ್ ರೋಷನ್ ಬೇಗ್, ಸಾಂಗ್ಲಿಯಾನ, ಬಿ.ಕೆ ಹರಿಪ್ರಸಾದ್

ಟಿಕೆಟ್ ಫೈಟ್: ಉಗ್ರಪ್ಪಗೆ ಮೈತ್ರಿ ಟಿಕೆಟ್‌ ಖಚಿತ, ಬಿಜೆಪಿಯಿಂದ ಯಾರೆಂಬುದೇ ಅನಿಶ್ಚಿತ!

ಟಿಕೆಟ್ ಫೈಟ್: ಶಿವಮೊಗ್ಗದಿಂದ ಮಧು ಸ್ಪರ್ಧಿಸ್ತಾರಾ? ಗೀತಾ ಕಣಕ್ಕಿಳೀತಾರಾ?

ಟಿಕೆಟ್ ಫೈಟ್: ಬಿಜೆಪಿ ಭದ್ರಕೋಟೆ ಕಸಿಯಲು ಕಾಂಗ್ರೆಸ್‌ ಕಸರತ್ತು!