08:21 PM (IST) Nov 27

Karnataka CM Post Race ಕರ್ನಾಟಕ ಪವರ್ ಶೇರಿಂಗ್ ಬಿಸಿಬಿಸಿ ಚರ್ಚೆ ಮಧ್ಯೆಯೇ ಡಿ.ಕೆ. ಶಿವಕುಮಾರ್ ದಿಢೀರ್ ಮುಂಬೈ ಪ್ರಯಾಣ!

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರಗೊಂಡಿರುವಾಗಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತುರ್ತು ಮುಂಬೈ ಪ್ರವಾಸ ಕೈಗೊಂಡಿದ್ದಾರೆ. ಶಾಸಕ ಎನ್.ಎ. ಹ್ಯಾರಿಸ್ ಜೊತೆಗಿನ ಈ ಪ್ರಯಾಣವನ್ನು ಖಾಸಗಿ ಎಂದು ಹೇಳಲಾಗಿದೆ.

Read Full Story
07:32 PM (IST) Nov 27

Karnataka CM Post Race ಸಿದ್ದರಾಮಯ್ಯ ಕುರ್ಚಿ ಕಿತ್ತುಕೊಳ್ಳದಂತೆ ಗಾಳಿ ಆಂಜನೇಯಗೆ ಉರುಳು ಸೇವೆ - ಸಿಎಂ ಬದಲಾದರೆ ಅಹಿಂದ ಉಗ್ರ ಹೋರಾಟ!

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ, ಅಹಿಂದ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಬೀದಿಗಿಳಿದಿವೆ. ಬೆಂಗಳೂರಿನಲ್ಲಿ ಉರುಳು ಸೇವೆ ನಡೆಸುವ ಮೂಲಕ, ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಬೇಕು, ನಾಯಕತ್ವ ಬದಲಾದರೆ ಹೋರಾಟ ನಡೆಸುವುದಾಗಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿವೆ.

Read Full Story
07:17 PM (IST) Nov 27

Karnataka CM Post Race ರಾಜಕೀಯ ಬೆಳವಣಿಗೆಗೆ ಗೃಹಸಚಿವರ ಅಸಮಾಧಾನ, ಹಿರಿಯ ಸಚಿವರೊಂದಿಗೆ ದೆಹಲಿಗೆ ಹೋಗಲು ಸಲಹೆ, ಸಿಎಂ ಡಿಸಿಎಂ ಒಪ್ಪಿಗೆ!

ಕರ್ನಾಟಕದಲ್ಲಿನ ನಾಯಕತ್ವ ಮತ್ತು ಅಧಿಕಾರ ಹಂಚಿಕೆ ಚರ್ಚೆಗಳ ನಡುವೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಆರು ಹಿರಿಯ ಸಚಿವರು ದೆಹಲಿಗೆ ತೆರಳಲಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಸಲಹೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.

Read Full Story
06:22 PM (IST) Nov 27

Karnataka CM Post Race ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!

ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಸಂಘರ್ಷ ತಾರಕಕ್ಕೇರಿದೆ. ಅರ್ಧ ಅವಧಿಯ ಅಧಿಕಾರ ಹಂಚಿಕೆ ಒಪ್ಪಂದದ ಹಿನ್ನೆಲೆಯಲ್ಲಿ, ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಹೈಕಮಾಂಡ್ ತೀರ್ಪಿಗಾಗಿ ಕಾಯುತ್ತಿದ್ದಾರೆ.

Read Full Story
04:51 PM (IST) Nov 27

Karnataka CM Post Race ಸಾಯೋತನಕ ಸಿಎಂ ಸಾಹೇಬ್ರೊಂದಿಗೆ ಇರ್ತೇವೆಂದ ಲಾಡ್, ಯಾಕಯ್ಯ ಬಡೆದುಕೊಳ್ತೀರಾ? ಮೀಡಿಯಾಗೆ ಮಧುಬಂಗಾರಪ್ಪ ಪ್ರಶ್ನೆ!

ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆ ತೀವ್ರಗೊಂಡಿದ್ದು, ಸಚಿವ ಸಂತೋಷ್ ಲಾಡ್ ಅವರು ಸಿದ್ದರಾಮಯ್ಯನವರ ಪರ ನಿಲ್ಲುವುದಾಗಿ ಹೇಳಿದ್ದಾರೆ. ಆದರೆ, ಈ ಕುರಿತು ಅಂತಿಮ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಸಚಿವ ಮಧುಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

Read Full Story
03:52 PM (IST) Nov 27

Karnataka CM Post Race ನಮ್ಮಪ್ಪನೇ 5 ವರ್ಷ ಸಿಎಂ, ಅಧಿಕಾರ ಹಂಚಿಕೆ ಸೂತ್ರವೇ ಇಲ್ಲದಿರುವಾಗ ಬದಲಾವಣೆ ಚರ್ಚೆ ಅನಗತ್ಯ; ಯತೀಂದ್ರ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ಣಾವಧಿಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಯಾವುದೇ ಅಧಿಕಾರ ಹಂಚಿಕೆ ಸೂತ್ರ ರಚನೆಯಾಗಿಲ್ಲ ಮತ್ತು ಹೈಕಮಾಂಡ್ ಕೂಡ ಬದಲಾವಣೆ ಬಗ್ಗೆ ಮಾತನಾಡಿಲ್ಲ ಎಂದು ಅವರು ಹೇಳಿದ್ದಾರೆ.

Read Full Story
12:34 PM (IST) Nov 27

Karnataka CM Post Race ಡಿ.ಕೆ. ಶಿವಕುಮಾರ್ ಸಿಎಂ ಮಾಡದಿದ್ದರೆ ಹೋರಾಟಕ್ಕೆ ಸಿದ್ಧ; ಕಾಂಗ್ರೆಸ್ ಹೈಕಮಾಂಡ್‌ಗೆ ಒಕ್ಕಲಿಗರ ಸಂಘದ ಎಚ್ಚರಿಕೆ

ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಭರವಸೆಯ ಮೇಲೆ ಒಕ್ಕಲಿಗ ಸಮುದಾಯ ಕಾಂಗ್ರೆಸ್‌ಗೆ ಮತ ನೀಡಿದೆ. ಅಧಿಕಾರ ಹಂಚಿಕೆ ಒಪ್ಪಂದ ಪಾಲಿಸದಿದ್ದರೆ, ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವುದಾಗಿ ರಾಜ್ಯ ಒಕ್ಕಲಿಗರ ಸಂಘದ ಮುಖಂಡರು ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ.

Read Full Story
12:29 PM (IST) Nov 27

Karnataka CM Post Race ದೆಹಲಿಯಲ್ಲಿ ಇಂದು ತೀರ್ಮಾನವಾಗಲಿದೆ ಬಂಡೆ ಕುರ್ಚಿ ಭವಿಷ್ಯ?

ಕರ್ನಾಟಕದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವಿನ ಅಧಿಕಾರ ಸಂಘರ್ಷ ತಾರಕಕ್ಕೇರಿದ್ದು, ಈ ಕುರಿತು ದೆಹಲಿಯಲ್ಲಿ ನಡೆಯಲಿರುವ ಹೈಕಮಾಂಡ್ ಸಭೆಯಲ್ಲಿ ಮಹತ್ವದ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ. 

Read Full Story
12:03 PM (IST) Nov 27

Karnataka CM Post Race ಅಧಿಕಾರ ಹಂಚಿಕೆ ಚರ್ಚೆಗೆ ರೆಡಿಯಾದ ಹೈಕಮಾಂಡ್: ಸಿಎಂ-ಡಿಸಿಎಂ ಕರೆಸಿ ಮಾತಾಡೋದಾಗಿ ದೆಹಲಿಗೆ ಹಾರಿದ ಖರ್ಗೆ!

Scroll to load tweet…