ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆ ತೀವ್ರಗೊಂಡಿದ್ದು, ಸಚಿವ ಸಂತೋಷ್ ಲಾಡ್ ಅವರು ಸಿದ್ದರಾಮಯ್ಯನವರ ಪರ ನಿಲ್ಲುವುದಾಗಿ ಹೇಳಿದ್ದಾರೆ. ಆದರೆ, ಈ ಕುರಿತು ಅಂತಿಮ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಸಚಿವ ಮಧುಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಡಿಸಿಎಂ ಮತ್ತು ಸಿಎಂ ಮಧ್ಯೆ ಪವರ್ ಶೇರಿಂಗ್ ವಿಚಾರ ವ್ಯಾಪಕ ಚರ್ಚೆಯಾಗುತ್ತಿದ್ದರು. ಒಬ್ಬೊಬ್ಬರು ಒದೊಂದು ಅಭಿಪ್ರಾಯವ್ಯಕ್ತಪಡಿಸುತ್ತಿದ್ದಾರೆ. ನಾವು ಸಾಯೋತನಕ ಸಿದ್ದರಾಮಯ್ಯ ಸಾಹೇಬ್ರ ಜೊತೆಗೆ ಇರ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೆ. ನಾವು ಅದರ ಬಗ್ಗೆ ಚರ್ಚೆ ಮಾಡಲ್ಲ. ಸ್ವಾಮೀಜಿಗಳ ಅಭಿಪ್ರಾಯದ ಬಗ್ಗೆ ನಾನು ಟೀಕೆ ಮಾಡಲ್ಲ. ಅವರ ಅಭಿಪ್ರಾಯ ಅವರು ಹೇಳ್ತಾರೆ. ಅದನ್ನ ನಾನು ತಪ್ಪು ಅಂತ ಹೇಳಲ್ಲ ಎಂದು ಹೇಳಿಕೆ ನೀಡಿದ್ದಾರೆ.

ನೀವು ಯಾಕಯ್ಯ ಬಡಿದುಕೊಳ್ತೀರಾ.?

ಇನ್ನು ಇದೇ ವಿಚಾರವಾಗಿ ಸಚಿವ ಮಧುಬಂಗಾರಪ್ಪ ಹೇಳಿಕೆ ನೀಡಿ. ಕ್ಯಾಬಿನೆಟ್ ನಲ್ಲಿ ರಾಜ್ಯದ ವಿಚಾರ ಚರ್ಚೆಯಾಗಿದೆಯಷ್ಟೇ. ಸಿಎಂ ಬದಲಾವಣೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಖರ್ಚಿ ಕದನವನ್ನು ಹೈಕಮಾಂಡ್ ಗೆ ಬಿಡಿ, ನೀವು ಯಾಕಯ್ಯ ಬಡೆದುಕೊಳ್ತೀರಾ? ಕ್ಯಾಬಿನೆಟ್ ನಲ್ಲಿ ರಾಜ್ಯದ್ದು ಇರುತ್ತೆ. ರಾಜ್ಯದಲ್ಲಿ ಹೋಗಿ ಯಾರಾದ್ರೂ ಹೈಕಮಾಂಡ್ ದು ಮಾತಾಡ್ತಾರಾ? ಎಂತ ಔಪಚಾರಿವಾಗಿಯೂ ಚರ್ಚೆ ಆಗಿಲ್ಲ. ಅದು ಮಾಡುವಂತದ್ದು ಅಲ್ಲ. ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಲ್ಲ ನೀವು ಪ್ರಶ್ನೆ ಕೇಳಬಾರದು ಎಂದರು.

ಇನ್ನು ಡಿಕೆಶಿ ಸಿಎಂ ಆಗಬೇಕು ಅಂತ ಸ್ವಾಮೀಜಿ ಒತ್ತಡ ವಿಚಾರವಾಗಿ ಮಾತನಾಡಿದ ಅವರು, ಯಾರು ಏನೇ ಮಾಡಿದ್ರು ಹೈಕಮಾಂಡ್ ನಾವು ಇತ್ಯರ್ಥ ಮಾಡ್ತೀವಿ ಅಂತ ದೊಡ್ಡವರು ಹೇಳಿರೋದ್ರಿಂದ I don't think we should really speak about that, ನಾನು ಏನು ಹೇಳೊದಕ್ಕೆ ಹೋಗಲ್ಲ ಎಂದಷ್ಟೇ ಪ್ರತಿಕ್ರಿಯೆ ನೀಡಿದರು.

ಡೆಲ್ಲಿ ಅವರು ತೀರ್ಮಾನ ಮಾಡ್ತಾರೆ

ಒಕ್ಕಲಿಗ ಮತ್ತು ಅಹಿಂದ ಸ್ವಾಮೀಜಿಗಳ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನು ಏನು ಉತ್ತರ ಕೊಡಲ್ಲ. ಹೈಕಮಾಂಡ್ ವಿಚಾರಗಳನ್ನ ನಾನು ಹೇಳಲು ಬರುತ್ತಾ? ಅಥವಾ ಯಾರಾದ್ರೂ ಇಲ್ಲಿ ತೀರ್ಮಾನ ಮಾಡೋಕೆ ಆಗುತ್ತಾ? ಈ ವಿಚಾರಕ್ಕೆ ನೀವು ಏನೇ ಮಾಡಿದ್ರೂ ಡೆಲ್ಲಿ ಅವರು ಉತ್ತರ ಕೊಡ್ತಾರೆ. ನಾವು ಕೊಡೋದಿಲ್ಲ ಎಂದರು.

ನಾಯಕತ್ವ ಬದಲಾವಣೆ ಬಗ್ಗೆ ನಿಮ್ಮ ಸ್ಟಾಂಡ್ ಅನ್ನೋ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವರು, ಸುಮ್ನೆ ಇಲ್ಲದೇ ಇರೋದನ್ನ ಹಚ್ಚಲು ಹೋಗಬೇಡಿ. ಡೆಲ್ಲಿ ಅವರು ತೀರ್ಮಾನ ಮಾಡ್ತಾರೆ. ನಿಮ್ಮ ಸ್ಟಾಂಡ್ ಯಾರ ಪರ ಎಂಬ ಪ್ರಶ್ನೆಗೆ ನಿಮಗೆ ಯಾಕೆ ಹೇಳಬೇಕು ಎಂದು ಮಧುಬಂಗಾರಪ್ಪ ಖಡಕ್ ಆಗಿಯೇ ಉತ್ತರಿಸಿದರು.

ಗೊಂದಲ ನಮ್ಮಲ್ಲಿ ಏನು ಇಲ್ಲ

ಇನ್ನು 140 ಶಾಸಕರಲ್ಲಿ ಗೊಂದಲ ವಿಚಾರವಾಗಿ ಮಾತನಾಡಿದ ಅವರು, ಗೊಂದಲ ನಿಮ್ಮ ಮಾಧ್ಯಮದಲ್ಲಿ ಮಾತ್ರ, ನಮ್ಮಲ್ಲಿ ಏನು ಇಲ್ಲ. ಆದ್ರಲ್ಲೂ ನನ್ನಲ್ಲಿ ಏನು ಇಲ್ಲ. ಚರ್ಚೆ ಆದ್ರೆ, ಯಾರು ವೈಯಕ್ತಿಕವಾಗಿ ಮಾಡಿದ್ದಾರೆ ಅವರು ಉತ್ತರ ಕೊಡ್ತಾರೆ. ಅದು ಡೆಲ್ಲಿಯಲ್ಲಿ ತೀರ್ಮಾನ ಮಾಡ್ತಾರೆ. ಡೆಲ್ಲಿಯವರು ಉತ್ತರ ಕೊಡಬಹುದು ಅಷ್ಟೇ. ದೊಡ್ಡವರು(ಎಚ್.ಕೆ.ಪಾಟೀಲ್) ಬಂದ್ರು ಅವರನ್ನ ಕೇಳಿ ಎಂದು ಹೇಳಿ ಸಚಿವ ಮಧು ಬಂಗಾರಪ್ಪ ಹೊರಟು ಹೋದರು.