ವಾಟ್ಸಾಪ್‌ನ ಹೊಸ ಫೀಚರ್‌, ಬಳಕೆದಾರರಿಗೆ ನೆಮ್ಮದಿ!...

ವಿಶ್ವದ ಅತ್ಯಂತ ಜನಪ್ರಿಯ ಸೋಷಿಯಲ್‌ ಮೀಡಿಯಾ ತಾಣಗಳ ಪೈಕಿ ಒಂದಾದ ವಾಟ್ಸಾಪ್‌, ಶೀಘ್ರವೇ ತನ್ನ ಬಳಕೆದಾರರಿಗೆ ‘ರೀಡ್‌ ಲೇಟರ್‌’ (ಆಮೇಲೆ ಓದಿ) ಎಂಬ ಹೊಸ ಸೌಲಭ್ಯ ಕಲ್ಪಿಸಲು ಮುಂದಾಗಿದೆ.

ಲಸಿಕೆ ಪಡೆಯುವ ಮುನ್ನ ಮೋದಿ ಎಚ್ಚರಿಕೆ, ಈ ತಪ್ಪು ಮಾಡಬೇಡಿ ಎಂದ ಪಿಎಂ!...

ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಇಂದು ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಿದೆ. ಹೀಗಿರುವಾಗ ಪಿಎಂ ಮೋದಿ ಈ ಅಭಿಯಾನ ಆರಂಭವಾಗುವುದಕ್ಕೂ ಮೊದಲು ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ಅವರು ಕೊರೋನಾ ಲಸಿಕೆ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಯತ್ನ ನಡೆಸಿದ್ದಾರೆ.

ಪಾಂಡ್ಯ ಸಹೋದರರಿಗೆ ಪಿತೃ ವಿಯೋಗ; ಮುಷ್ತಾಕ್ ಅಲಿ ಟೂರ್ನಿಯಿಂದ ಹೊರನಡೆದ ಬರೋಡ ನಾಯಕ...

ಪಾಂಡ್ಯ ಸಹೋದರರಿಗೆ ಪಿತೃ ವಿಯೋಗ ಎದುರಾಗಿದೆ. ಹಿಮಾಂಶು ಪಾಂಡ್ಯ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ವೈರಲ್ ಆಯ್ತು ಸುದೀಪ್‌ ಸರ್ಪ್ರೈಸ್‌ ಕೊಟ್ಟ ವಿಡಿಯೋ!...

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮ್ಮ ಜೊತೆ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬಾಡಿಗಾರ್ಡ್‌ಗೆ ಸರ್ಪ್ರೈಸ್‌ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ...

ಕಾರು ವಾಶ್ ಸಿಬ್ಬಂದಿಯ ಎಡವಟ್ಟು, 5 ಕೋಟಿ ರೂ ಫೆರಾರಿ ಕಾರು ಪುಡಿ ಪುಡಿ!...

ಫೆರಾರಿ 812 ಸೂಪರ್‌ಫಾಸ್ಟ್ ಕಾರು. ಎಕ್ಸ್ ಶೋ ರೂಂ ಬೆಲೆ 5.20 ಕೋಟಿ ರೂಪಾಯಿ. ದುಬಾರಿ ಕಾರನ್ನು ವಾಶ್ ಮಾಡಲು ಕೊಡಲಾಗಿತ್ತು. ಸರ್ವೀಸ್ ಸೆಂಟರ್ ಉದ್ಯೋಗಿ ಕಾರು ವಾಶ್ ಮಾಡಿ, ಫೆರಾರಿ ಕಾರನ್ನು ಮರಳಿ ಮಾಲೀಕನಿಗೆ ಕೊಡಲು ತೆರಳಿದ್ದಾರೆ. ಫೆರಾರಿ ಕಾರಿನ ವೇಗಕ್ಕೆ ಸಾಟಿ ಎಲ್ಲಿದೆ.  ನೌಕರ ಕೂಡ ಅತೀ ವೇಗದಿಂದ ತೆರಳಿದ್ದಾನೆ. ನಿಯಂತ್ರಣಕ್ಕೆ ಸಿಗದ ಕಾರು ಅಪಘಾತಕ್ಕೀಡಾಗಿ ಪುಡಿ ಪುಡಿಯಾಗಿದೆ. ಮುಂದೇನಾಯ್ತು? ಈ ಕಾರು ಯಾರದು? ಇಲ್ಲಿದೆ ವಿವರ.

ಪೂರ್ಣಾ​ವಧಿ ಆಡ​ಳಿ​ತಕ್ಕೆ ಒಕ್ಕ​ಲಿಗ​ರಿಗೆ ಶಾಪವಿದೆ : ಇವರದ್ದೆಲ್ಲಾ ಅರ್ಧದ ಅಧಿಕಾರ...

ಪೂರ್ಣಾವಧಿಯಲ್ಲಿ ಅಧಿಕಾರ ನಡೆಸಲು ಒಕ್ಕಲಿಗರಿಗೆ ಶಾಪವಿದೆ. ಇವರದ್ದೆಲ್ಲಾವೂ ಅರ್ಧಕ್ಕೆ ಅಧಿಕಾರ ಮುಕ್ತಾಯ.. ಏನಿದು ವಿಚಾರ..?

ಲಾಂಗ್‌ನಲ್ಲಿ ಕೇಕ್ ಕತ್ತರಿಸಿದ ನಟ: ಕ್ಷಮೆ ಕೇಳಿದ ವಿಜಯ್...

ಲಾಂಗ್ ಹಿಡಿದು ಕೇಕ್ ಕಟ್ ಮಾಡಿದ್ದಕ್ಕಾಗಿ ಕಾಲಿವುಡ್ ನಟ ವಿಜಯ ಸೇತುಪತಿ ಕ್ಷಮೆ ಕೇಳಿದ್ದಾರೆ. ನಾನು ಲಾಂಗ್ ಹಿಡಿದು ಕೇಕ್ ಕಟ್ ಮಾಡೋ ಮೂಲಕ ಕೆಟ್ಟ ಉದಾಹರಣೆ ಕೊಟ್ಟಿದ್ದೇನೆ. ಇನ್ಮುಂದೆ ಹುಷಾರಾಗಿರುತ್ತೇನೆ ಎಂದು ನಟ ಹೇಳಿದ್ದಾರೆ.

ಭೀಮತೀರದಲ್ಲೊಂದು ಹೊಸ ಹೆಸ್ರು, ಅವನ ಹೆಸರು ಕೇಳಿದ್ರೇ ಕುಖ್ಯಾತರೆಲ್ಲಾ ಸೈಲೆಂಟ್..!...

ಭೀಮಾ ತೀರದಲ್ಲಿ ನಟೋರಿಯಸ್ ಹಂತಕರ ಹೆಸರು ಸ್ವಲ್ಪ ಸೈಲೆಂಟ್ ಆಗಿತ್ತೇನೋ. ಆದ್ರೆ,  ಅಷ್ಟರಲ್ಲಿಯೇ ಈಗ ಹೊಸ ಪಾಪಿಯ ಹೆಸರು ಕೇಳುತ್ತಿದೆ.

ಬಿಜೆಪಿಯಲ್ಲಿ ಸಿದ್ಧವಾಗುತ್ತಿದೆ ಮಾಸ್ಟರ್ ಪ್ಲಾನ್ : ಭರ್ಜರಿ ಗೆಲುವಿವಾಗಿ ತಂತ್ರಗಾರಿಕೆ...

ರಾಜ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಆಗಮಿಸುತ್ತಿದ್ದು ಇಂದು ನಡೆಯುವ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.  ಈ ವೇಳೆ ಹಲವು ತಂತ್ರಗಾರಿಕೆಗಳು ಸಿದ್ಧವಾಗಲಿದೆ