ಲಾಂಗ್ ಹಿಡಿದು ಕೇಕ್ ಕಟ್ ಮಾಡಿದ್ದಕ್ಕಾಗಿ ಕಾಲಿವುಡ್ ನಟ ವಿಜಯ ಸೇತುಪತಿ ಕ್ಷಮೆ ಕೇಳಿದ್ದಾರೆ. ನಾನು ಲಾಂಗ್ ಹಿಡಿದು ಕೇಕ್ ಕಟ್ ಮಾಡೋ ಮೂಲಕ ಕೆಟ್ಟ ಉದಾಹರಣೆ ಕೊಟ್ಟಿದ್ದೇನೆ. ಇನ್ಮುಂದೆ ಹುಷಾರಾಗಿರುತ್ತೇನೆ ಎಂದು ನಟ ಹೇಳಿದ್ದಾರೆ.

ನಿರ್ದೇಶಕ ಪೊನ್‌ರಾಮ್ ಮತ್ತು ಅವರ ತಂಡ ವಿಜಯ್ ಸೇತುಪತಿ ಅವರಿಗೆ ವಿಶೇಷ ಹುಟ್ಟುಹಬ್ಬದ ಕೇಕ್ ವ್ಯವಸ್ಥೆ ಮಾಡಿತ್ತು. ವಿಜಯ್ ಹುಟ್ಟುಹಬ್ಬದ ಕೇಕ್ ಅನ್ನು ಕತ್ತಿಯಿಂದ ಕತ್ತರಿಸಿದ್ದರು. ಸೇತುಪತಿ ತನ್ನ ಹುಟ್ಟುಹಬ್ಬದ ಕೇಕ್ ಅನ್ನು ಕತ್ತಿಯಿಂದ ಕತ್ತರಿಸುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು.

ಮಸಲ್ಸ್ ತೋರಿಸಿದ ನಟ: ಇದೇನು ಗೂಗಲ್ ಮ್ಯಾಪಾ ಎಂದ್ರು ಫ್ಯಾನ್ಸ್

ಮಾಸ್ಟರ್ ನಟ ಈಗ ತನ್ನ ಕೆಲಸಕ್ಕೆ ಕ್ಷಮೆಯಾಚಿಸಿದ್ದಾರೆ. ನನ್ನ ಜನ್ಮದಿನದಂದು ನನಗೆ ಶುಭಹಾರೈಸಿದ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಮೂರು ದಿನಗಳ ಹಿಂದೆ, ನನ್ನ ಜನ್ಮದಿನಾಚರಣೆಯ ಸಂದರ್ಭದಲ್ಲಿ ತೆಗೆದ ಫೋಟೋ ಈಗ ವಿವಾದವಾಗಿದೆ. ಫೋಟೋದಲ್ಲಿ, ನನ್ನ ಹುಟ್ಟುಹಬ್ಬದ ಕೇಕ್ ಕತ್ತಿಯಿಂದ ನಾನು ಕತ್ತರಿಸಿದ್ದೇನೆ ಎಂದಿದ್ದಾರೆ.

ನಾನು ನಿರ್ದೇಶಕ ಪೊನ್‌ರಾಮ್ ಅವರ ಚಿತ್ರದಲ್ಲಿ ನಟಿಸಲಿದ್ದೇನೆ, ಅದರಲ್ಲಿ ಕತ್ತಿ ಪ್ರಮುಖ ಪಾತ್ರ ವಹಿಸುತ್ತದೆ. ನನ್ನ ಹುಟ್ಟುಹಬ್ಬವನ್ನು ಪೊನ್‌ರಾಮ್ ಮತ್ತು ತಂಡದೊಂದಿಗೆ ಆಚರಿಸಿ, ಕೇಕ್ ಕತ್ತರಿಸಲು ನಾನು ಕತ್ತಿಯನ್ನು ಬಳಸಿದ್ದೇನೆ. ಇದು ಒಂದು ಕೆಟ್ಟ ಉದಾಹರಣೆಯಾಗಿದೆ. ಇನ್ನು ಜಾಗರೂಕರಾಗಿರುತ್ತೇನೆ. ನಾನು ಯಾರಿಗಾದರೂ ನೋವುಂಟು ಮಾಡಿದ್ದರೆ, ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.