Asianet Suvarna News Asianet Suvarna News

ದೀದಿ ನಾಡಲ್ಲಿ ಹಿಂಸಾಚಾರವೇ ಹೆಚ್ಚು, ಇಂದ್ರಜಿತ್‌ಗೆ ಉತ್ತರಿಸಿದ ದಚ್ಚು; ಜು.15ರ ಟಾಪ್ 10 ಸುದ್ದಿ!

ಪಶ್ಚಿಮ ಬಂಗಾಳ ಚುನಾವಣೋತ್ತರ ಹಿಂಸಾಚಾರ ಕುರಿತು ಮಾನವ ಹಕ್ಕುಗಳ ಆಯೋಗ ವರದಿ ಸಲ್ಲಿಸಿದೆ. ಇತ್ತ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ಇದರ ಬೆನ್ನಲ್ಲೇ ರೇಣುಕಾಚಾರ್ಯ ತಂಡ ಕೂಡ ದೆಹಲಿಗೆ ದೌಡಾಯಿಸಿದೆ. ಇಂದ್ರಿಜಿತ್ ಆರೋಪಕ್ಕೆ ದರ್ಶನ್ ಉತ್ತರ ನೀಡಿದ್ದಾರೆ. ರಿಷಬ್ ಪಂತ್‌ಗೆ ಕೊರೋನಾ ಪಾಸಿಟೀವ್, ಗೊಂದಲಕ್ಕೆ ತೆರೆ ಎಳೆದ ಅನು ಸಿರಿಮನೆ ಸೇರಿದಂತೆ ಜುಲೈ 15ರ ಟಾಪ್ 10 ಸುದ್ದಿ
 
west Bengal poll Violence to Sandalwood Darshan top 10 News of July 15 ckm
Author
Bengaluru, First Published Jul 15, 2021, 5:06 PM IST

ಬಂಗಾಳ ಹಿಂಸಾಚಾರದ ಕೂಪ, ಕಾನೂನು ಸುವ್ಯವಸ್ಥೆ ಇಲ್ಲವೇ ಇಲ್ಲ ಮಾನವ ಹಕ್ಕು ಆಯೋಗ ವರದಿ!

west Bengal poll Violence to Sandalwood Darshan top 10 News of July 15 ckm

ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಅನ್ನೋ ಬಿಜೆಪಿ ಆರೋಪವನ್ನು ತಳ್ಳಿಹಾಕುತ್ತಲೇ ಬಂದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರಕ್ಕೆ ಇದೀಗ ಬಾರಿ ಮುಖಭಂಗವಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಬಂಗಾಳದಲ್ಲಿನ ಹಿಂಸಾಚಾರ ಹಾಗೂ ಆಡಳಿತ ಕುರಿತು ವರದಿಯನ್ನು ಕೋಲ್ಕತಾ ಹೈಕೋರ್ಟ್‌ಗೆ ಸಲ್ಲಿಸಿದೆ. ಈ ವರದಿಯಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ  ಹಿಂಸಾಚಾರದ ಆಡಿಳತನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.

ಸಿಎಂ ಬೆನ್ನ ಹಿಂದೆ ದೆಹಲಿಗೆ ಹೊರಟ ರೇಣುಕಾಚಾರ್ಯ ಮತ್ತು ತಂಡ!

west Bengal poll Violence to Sandalwood Darshan top 10 News of July 15 ckm

ಲೋಕಸಭಾ ಅಧಿವೇಶನ 19 ರಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ 21-22 ರಂದು ಕೆಲವು ಶಾಸಕರು ದೆಹಲಿಗೆ ಹೋಗಬೇಕು ಅಂತಿದ್ದೇವೆ. ಸಿಎಂ ಅವರನ್ನು ಬದಲಾಯಿಸಬೇಕು ಅಂತ ಹೇಳೋ ಹಕ್ಕು ಯಾರಿಗೂ ಇಲ್ಲ. ಬದಲಾವಣೆ ಮಾಡೋ ಅಧಿಕಾರ ಒಬ್ಬಿಬ್ಬರ ಕೈಯ್ಯಲ್ಲಿಲ್ಲ. ಅಂಥವರು ರಾಜ್ಯದ ಜನರ ಮುಂದೆ ವಿಲನ್ ಆಗ್ತಾರೆ  ಎಂದು ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ಇಂದ್ರಜಿತ್ ಲಂಕೇಶ್  ಚಾಲೆಂಜ್‌ಗೆ ದರ್ಶನ್ ಕೊಟ್ಟ ಖಡಕ್ ಉತ್ತರ!...

west Bengal poll Violence to Sandalwood Darshan top 10 News of July 15 ckm

ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಕ್ಕೆ ಹೋಟೆಲ್ ಮಾಲೀಕ ಸಂದೇಶ್ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಗಲಾಟೆ ನಡೆದಿದ್ದು ನಿಜ. ಹಲ್ಲೆ ಮಾಡಿಲ್ಲ ಆದರೆ ಸಿಬ್ಬಂದಿಗೆ ಬೈದಿದ್ದು ನಿಜ ಎಂದು ಹೇಳಿದ್ದಾರೆ.

ಮೋದಿ ಪಾದ ಮುಟ್ಟಿ ನಮಸ್ಕರಿಸಲು ಬಂದ ಮಹಿಳೆ: ಹಿಂದೆ ಸರಿದ ಪಿಎಂ, ಬಳಿಕ ಮಾಡಿದ್ದು ಹೀಗೆ!

west Bengal poll Violence to Sandalwood Darshan top 10 News of July 15 ckm

ಮಹಿಳಾ ಕಾರ್ಯಕರ್ತೆಯೊಬ್ಬರೂ ಇಲ್ಲಿ ಹಾಜರಿದ್ದು, ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾದ ಮುಟ್ಟಿ ನಮಸ್ಕರಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ತಡೆದು ಹಿಂದೆ ಸರಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿದ್ದ ಟೀಂ ಇಂಡಿಯಾದ ಈ ಆಟಗಾರನಿಗೆ ಕೋವಿಡ್ ಪಾಸಿಟಿವ್..!

west Bengal poll Violence to Sandalwood Darshan top 10 News of July 15 ckm

ಕಳೆದ ಎಂಟು ದಿನಗಳ ಹಿಂದೆ ರಿಷಭ್‌ ಪಂತ್‌ ಕೋವಿಡ್ ಟೆಸ್ಟ್‌ಗೆ ಒಳಗಾಗಿದ್ದರು, ಅವರಲ್ಲಿ ಯಾವುದೇ ಕೊರೋನಾ ಲಕ್ಷಣಗಳು ಇರಲಿಲ್ಲ. ಹೀಗಿದ್ದೂ ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

ಸೀರಿಯಲ್ ಮುಗಿಯೋ ತನಕ ನಾನೇ ಅನು ಸಿರಿಮನೆ ಎಂದ ಮೇಘ: ಗೊಂದಲಕ್ಕೆ ತೆರೆ

west Bengal poll Violence to Sandalwood Darshan top 10 News of July 15 ckm

ಕನ್ನಡಿಗರ ನೆಚ್ಚಿನ ಧಾರವಾಹಿ ಜೊತೆಜೊತೆಯಲಿ ಕುರಿತು ಭಾರೀ ಚರ್ಚೆಗಳಾಗುತ್ತಿವೆ. ಅನು ಸಿರಿಮನೆ ಧಾರವಾಹಿ ಬಿಡಲಿದ್ದಾರೆ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ ಈಗ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ.

ಸಿಧು ಪಕ್ಷದಲ್ಲೇ ಉಳಿಸಲು ಕಾಂಗ್ರೆಸ್‌ ಮಾಸ್ಟರ್‌ ಪ್ಲಾನ್, ಸಿಗುತ್ತಾ ಈ ಹುದ್ದೆ?

west Bengal poll Violence to Sandalwood Darshan top 10 News of July 15 ckm

ಕ್ರಿಕೆಟರ್‌ನಿಂದ ರಾಜಕೀಯಕ್ಕೆ ಪ್ರವೇಶಿಸಿದ ನವಜೋತ್‌ ಸಿಂಗ್ ಸಿಧುರನ್ನು ಅತೀ ಶೀಘ್ರದಲ್ಲೇ ಪಂಜಾಬ್‌ ಕಾಂಗ್ರೆಸ್‌ನ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆಗಳಿವೆ. ಪಂಜಾಬ್‌ ಕಾಂಗ್ರೆಸ್‌ ಪಕ್ಷದೊಳಗೆ ಭುಗಿಲೆದ್ದಿರುವ ಭಿನ್ನಮತ ಶಮನಗೊಳಿಸುವ ನಿಟ್ಟಿನಲ್ಲಿ ಇಂತಹುದ್ದೊಂದು ಹೆಜ್ಜೆ ಇರಿಸಲು ಪಕ್ಷ ಮುಂದಾಗಿದೆ. ಪಂಜಾಬ್‌ನಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆಹೀಗಿರುವಾಗ ಪಕ್ಷದೊಳಗಿನ ಕಾದಾಟ ತಡೆಯುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿದೆ. 

ಬಿಜೆಪಿ ನಾಯಕನ ಕಾರಿನ ಮೇಲೆ ದಾಳಿ: 100 ರೈತರ ವಿರುದ್ಧ ದೇಶದ್ರೋಹದ ಕೇಸ್!

west Bengal poll Violence to Sandalwood Darshan top 10 News of July 15 ckm

ಹರ್ಯಾಣದಲ್ಲಿ ಡೆಪ್ಯೂಟಿ ಸ್ಫೀಕರ್ ಕಾರಿನ ಮೇಲೆ ದಾಳಿ ನಡೆಸಿದ ಆರೋಪದಡಿ ನೂರು ರೂತರ ವಿರುದ್ಧ ಪೊಲೀಸರು ದೇಶದ್ರೋಹದ ಕೇಸ್‌ ದಾಖಲಿಸಿದ್ದಾರೆ. ವಿವಾದಾತ್ಮಕ ನೂತನ ಕೃಷಿ ಕಾನೂನು ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ, ಉಪ ಸ್ಪೀಕರ್ ರಣಬೀರ್ ಗಂಗ್ವಾ ಅವರ ಅಧಿಕೃತ ವಾಹನದ ಮೇಲೆ 100 ಕ್ಕೂ ಹೆಚ್ಚು ರೈತರು ದಾಳಿ ನಡೆಸಿ ಹಾನಿಗೊಳಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಟಾಪ್‌ಲೆಸ್ ಗೌನ್..! ಎದೆ ಮುಚ್ಚಿದ್ದು ಆಭರಣದಿಂದ..!...

west Bengal poll Violence to Sandalwood Darshan top 10 News of July 15 ckm

ಹಾಲಿವುಡ್‌ನ ಈ ನಟಿಯ ಡ್ರೆಸ್ ನೋಡಿ ಜನ ಅಚ್ಚರಿಗೊಳಗಾಗಿದ್ದಾರೆ. ಹಾಲಿವುಡ್ ಹಿರೋಯಿನ್ ಒಬ್ಬರು ಬಟ್ಟೆ ಬದಲಿಯಂತೆ ಬಳಸಿದ್ದಾರೆ ಆಭರಣ.
 
Follow Us:
Download App:
  • android
  • ios