ಸೀರಿಯಲ್ ಮುಗಿಯೋ ತನಕ ನಾನೇ ಅನು ಸಿರಿಮನೆ ಎಂದ ಮೇಘ: ಗೊಂದಲಕ್ಕೆ ತೆರೆ
- ಜೊತೆ ಜೊತೆಯಲಿ ಧಾರವಾಹಿಗೆ ಮತ್ತೆ ಬಂದ ಮೇಘ
- ಆದ್ರೆ ಗೊಂದಲಗಳಾಗಿದ್ದು ನಿಜ, ಧಾರವಾಹಿ ಬಿಟ್ಟೋಗಿದ್ದು ಹೌದು
- ಆದ್ರೆ ಇನ್ನು ಸೀರಿಯಲ್ ಮುಗಿಯೋತನಕ ಇರ್ತಾರೆ ನಟಿ
ಕನ್ನಡಿಗರ ನೆಚ್ಚಿನ ಧಾರವಾಹಿ ಜೊತೆಜೊತೆಯಲಿ ಕುರಿತು ಭಾರೀ ಚರ್ಚೆಗಳಾಗುತ್ತಿವೆ. ಅನು ಸಿರಿಮನೆ ಧಾರವಾಹಿ ಬಿಡಲಿದ್ದಾರೆ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ ಈಗ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ.
"
ಅನುಸಿರಿಮನೆ ಪಾತ್ರ ಮಾಡುತ್ತಿದ್ದ ಮೇಘ ಶೆಟ್ಟಿಗೆ ಸಿನಿಮಾ ಆಫರ್‌ಗಳು ಬರುತ್ತಿರುವುದು ಎಲ್ಲರಿಗೂ ಗೊತ್ತು. ಆದರೆ ನಟಿ ಸಡನ್ನಾಗಿ ಸೀರಿಯಲ್ ಬಿಡ್ತಾರೆ ಅನ್ನೋ ಮಾತು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು.
ಲವ್ 360ಯಲ್ಲಿ ಮೇಘಾ ಶೆಟ್ಟಿ ಹಿರೋಯಿನ್
ಆದರೆ ಈಗ ನಟಿ ಇನ್‌ಸ್ಟಗ್ರಾಂ ವಿಡಿಯೊ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ತಾವು ಧಾರವಾಹಿ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಕುಟುಂಬ ಎಂದ ಮೇಲೆ ಗೊಂದಲ ಸಹಜ. ಗೊಂದಲ ಅಗಿತ್ತು. ಪರಿಹರಿಸಿಕೊಂಡಿದ್ದೇವೆ. ಇನ್ನು ಆ ರೀತಿ ಆಗುವುದಿಲ್ಲ ಎಂದಿದ್ದಾರೆ.
ಅದೇ ರೀತಿ ಧಾರವಾಹಿ ಕೊನೆ ತನಕ ಅನು ಪಾತ್ರ ತಾವೇ ಮಾಡೋದಾಗಿ ಸ್ಪಷ್ಟಪಡಿಸಿದ್ದಾರೆ. ಇನ್ನು ಮುಂದೆ ಕೇಳುವ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದಿದ್ದಾರೆ ನಟಿ.
ಜೊತೆ ಜೊತೆಯಲಿ ಧಾರವಾಹಿ ಮೂಲಕ ಕನ್ನಡಿಗರ ಮನ ಗೆದ್ದ ನಟಿಗೆ ಸಿನಿಮಾ ಆಫರ್‌ಗಳು ಹೆಚ್ಚಾಗಿ ಬರುತ್ತಿತ್ತು. ಸೀರಿಯಲ್ ಮೂಲಕ ಅಪಾರ ಜನಪ್ರಿಯತೆ ಗಳಿಸಿಗೊಂಡ ಮೇಘ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತ್ರಿಬಲ್ ರೈಡಿಂಗ್ ಸಿನಿಮಾ ಶೂಟ್‌ನಲ್ಲಿ ಭಾಗಿಯಾಗಿದ್ದಾರೆ.
ಇದನ್ನು ಹೊರತು ಪಡಿಸಿ ನಟಿ ಲವ್ 360 ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಹೊಸ ನಟ ಪ್ರವೀಣ್ ಈ ಚಿತ್ರಕ್ಕೆ ನಾಯಕನಾಗಿ ನಟಿಸುತ್ತಿದ್ದಾರೆ