Asianet Suvarna News Asianet Suvarna News

ಮೋದಿ ಪಾದ ಮುಟ್ಟಿ ನಮಸ್ಕರಿಸಲು ಬಂದ ಮಹಿಳೆ: ಹಿಂದೆ ಸರಿದ ಪಿಎಂ, ಬಳಿಕ ಮಾಡಿದ್ದು ಹೀಗೆ!

* ವಾರಾಣಸಿಗೆ ತಲುಪಿದ ಪಿಎಂ ಮೋದಿ

* ವಿಮಾನ ನಿಲ್ದಾಣದಲ್ಲಿ ಮೋದಿ ಸ್ವಾಗತಿಸಿದ ಆನಂದಿಬೆನ್ ಹಾಗೂ ಸಿಎಂ ಯೋಗಿ

* ವಿಮಾನ ನಿಲ್ದಾಣದಲ್ಲಿ ಮೋದಿ ಪಾದ ಮುಟ್ಟಲು ಬಾಗಿದ ಮಹಿಳೆ, ಮುಂದಾಗಿದ್ದು ಬೇರೆಯೇ

When woman tries to touch PM Modi feet at Varanasi Airport pod
Author
Bangalore, First Published Jul 15, 2021, 12:14 PM IST

ವಾರಾಣಸಿ(ಜು.15): ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿ ತಲುಪಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ರಾಜ್ಯಪಾಲೆ ಆನಂದಿಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್ ಸೇರಿ ಅನೇಕ ಗಣ್ಯರು ಸ್ವಾಗತಿಸಿದ್ದಾರೆ. ಮಾಧ್ಯಮಗಳ ವರದಿಯನ್ವಯ ಈ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತೆಯೊಬ್ಬರೂ ಇಲ್ಲಿ ಹಾಜರಿದ್ದು, ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಾದ ಮುಟ್ಟಿ ನಮಸ್ಕರಿಸಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ತಡೆದು ಹಿಂದೆ ಸರಿದ್ದಾರೆ. ಅಲ್ಲದೇ ತಾವೇ ಅವರಿಗೆ ಕೈಮುಗಿದು ತಲೆಬಾಗಿ ನಮಸ್ಕರಿಸಿದ್ದಾರೆ. ಪ್ರಧಾನಿ ಮೋದಿ ನಡೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಮೋದಿ ಸಂಪೂರ್ಣ ಕಾರ್ಯಕ್ರಮದ ಪಟ್ಟಿ ಹೀಗಿದೆ

ವಾರಾಣಸಿ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ಮೋದಿ ಭಾರತ ಜಪಾನ್ ಸ್ನೇಹದ ಪ್ರತೀಕವಾಗಿರುವ ಕನ್ವೆಂಷನ್ ಸೆಂಟರ್ ರುದ್ರಾಕ್ಷ ಸೇರಿ ಅನೇಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮಾಡಲಿದ್ದಾರೆ. ಇದೇ ವೇಳೆ ಮುಂದಿನ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಮೋದಿ ಬಿಎಚ್‌ಯುನಲ್ಲಿ ನೂರು ಬೆಡ್‌ಗಳ ಎಂಸಿಎಚ್‌ ವಿಂಗ್, ಗೋದೌಲಿಯಾದಲ್ಲಿ ಒಂದು ಬಹುಮಹಡಿ ಪಾರ್ಕಿಂಗ್ ಗಂಗಾ ನದಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೋ-ರೋ ಬೋಟ್‌ಗಳು ಮತ್ತು ವಾರಣಾಸಿ-ಗಾಜಿಪುರ ಹೆದ್ದಾರಿಯಲ್ಲಿ ತ್ರಿಪಥದ ಫ್ಲೈಓವರ್ ಸೇರಿ ಇನ್ನೂ ಕೆಲ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. 

ಸುಮಾರು 744 ಕೋಟಿ ರೂ. ವೆಚ್ಚದ ವಿಭಿನ್ನ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಅಲ್ಲದೇ ಸುಮಾರು 839 ಕೋಟಿ ರೂ.ಗಳ ವೆಚ್ಚದ ಹಲವಾರು ಯೋಜನೆಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಇವುಗಳಲ್ಲಿ ಸೆಂಟರ್ ಫಾರ್ ಸ್ಕಿಲ್ ಮತ್ತು ಟೆಕ್ನಿಕಲ್ ಸಪೋರ್ಟ್ ಆಫ್ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ (ಸಿಐಪಿಇಟಿ), ಜಲ್ ಜೀವನ್ ಮಿಷನ್ ಅಡಿಯಲ್ಲಿ 143 ಗ್ರಾಮೀಣ ಯೋಜನೆಗಳು ಮತ್ತು ಕಾರ್ಖಿಯಾನ್ವ್ನಲ್ಲಿ ಮಾವು ಮತ್ತು ತರಕಾರಿಗಾಗಿ ಇಂಟಿಗ್ರೇಟೆಡ್ ಪ್ಯಾಕ್ ಹೌಸ್ ಸೇರಿವೆ. ಮಧ್ಯಾಹ್ನ 2 ಗಂಟೆಗೆ ಬಿಎಚ್‌ಯುನ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗವನ್ನು ಪರಿಶೀಲಿಸಲಿದ್ದಾರೆ. ಕೋವಿಡ್‌ನ ಸನ್ನದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ಅಧಿಕಾರಿಗಳು ಮತ್ತು ವೈದ್ಯಕೀಯ ವೃತ್ತಿಪರರನ್ನು ಭೇಟಿ ಮಾಡಲಿದ್ದಾರೆ.

Follow Us:
Download App:
  • android
  • ios