Asianet Suvarna News

ಬಿಜೆಪಿ ನಾಯಕನ ಕಾರಿನ ಮೇಲೆ ದಾಳಿ: 100 ರೈತರ ವಿರುದ್ಧ ದೇಶದ್ರೋಹದ ಕೇಸ್!

* ನೂತನ ಕೃಷಿ ಕಾನೂನು ವಿರೋಧಿಸಿ ರೈತರ ಪ್ರತಿಭಟನೆ

* ಹರ್ಯಾಣ ಬಿಜೆಪಿ ನಾಯಕಜನ ಕಾರಿನ ಮೇಲೆ ದಾಳಿ*

* ನೂರು ರೈತರ ವಿರುದ್ಧ ದೇಶದ್ರೋಹದ ಕೇಸ್

100 Farmers Face Sedition Case After Allegedly Attacking BJP Leader Car pod
Author
Bangalore, First Published Jul 15, 2021, 4:34 PM IST
  • Facebook
  • Twitter
  • Whatsapp

ಚಂಡೀಗಢ(ಜ.15): ಹರ್ಯಾಣದಲ್ಲಿ ಡೆಪ್ಯೂಟಿ ಸ್ಫೀಕರ್ ಕಾರಿನ ಮೇಲೆ ದಾಳಿ ನಡೆಸಿದ ಆರೋಪದಡಿ ನೂರು ರೂತರ ವಿರುದ್ಧ ಪೊಲೀಸರು ದೇಶದ್ರೋಹದ ಕೇಸ್‌ ದಾಖಲಿಸಿದ್ದಾರೆ. ವಿವಾದಾತ್ಮಕ ನೂತನ ಕೃಷಿ ಕಾನೂನು ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ, ಉಪ ಸ್ಪೀಕರ್ ರಣಬೀರ್ ಗಂಗ್ವಾ ಅವರ ಅಧಿಕೃತ ವಾಹನದ ಮೇಲೆ 100 ಕ್ಕೂ ಹೆಚ್ಚು ರೈತರು ದಾಳಿ ನಡೆಸಿ ಹಾನಿಗೊಳಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಈ ಘಟನೆ ಜುಲೈ 11 ರಂದು ಹರ್ಯಾಣದ ಸಿರ್ಸಾದಲ್ಲಿ ನಡೆದಿದ್ದು, ದಾಳಿ ನಡೆಸಿದ ರೈತರ ವಿರುದ್ಧ ದೇಶದ್ರೋಹದ ಪ್ರಕರಣದಡಿ ಎಫ್‌ಐಆರ್ ಕೂಡ ಅದೇ ದಿನ ದಾಖಲಿಸಲಾಗಿದೆ. ದೂರಿನಲ್ಲಿ ದೇಶದ್ರೋಹ ಮಾತ್ರವಲ್ಲದೇ ಇನ್ನಿತರ ಹಲವಾರು ಆರೋಪಗಳನ್ನೂ ಮಾಡಲಾಗಿದೆ. ಇದರಲ್ಲಿ "ಕೊಲೆ ಯತ್ನ" ಮತ್ತು "ಜನನಾಯಕನನ್ನು ಸಾರ್ವಜನಿಕ ಕಾರ್ಯಗಳನ್ನು ಮಾಡದಂತೆ ತಡೆಯುವುದು" ಸೇರಿದೆ. ರೈತ ಪ್ರತಿಭಟನೆಯ ಇಬ್ಬರು ನಾಯಕರಾದ ಹರ್ಚರಣ್ ಸಿಂಗ್ ಮತ್ತು ಪ್ರಹ್ಲಾದ್ ಸಿಂಗ್ ಹೆಸರು ಕೂಡ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ಇನ್ನು ಇದರ ಬೆನ್ನಲ್ಲೇ ಈ ಪ್ರಕರಣ ವರದಿಯಾದ ಕೆಲ ಸಮಯದಲ್ಲೇ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದೇಶದ್ರೋಹ ಎಂಬ ಕಾನೂನು "ವಸಾಹತುಶಾಹಿ" ಅವಧಿಯದ್ದಾಗಿದೆ. "ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಇದು ಅಗತ್ಯವಿದೆಯೇ" ಎಂದು ಸರ್ಕಾರವನ್ನು ಪ್ರಶ್ನಿಸಿದೆ.

ಈ ಬಗ್ಗೆ ವಿವರಣೆ ನೀಡಿರುವ ಸಿಜೆಐ ಎನ್‌. ವಿ. ರಮಣ ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಲು, ಭಿನ್ನಾಭಿಪ್ರಾಯದ ಧ್ವನಿಯನ್ನು ಮೌನಗೊಳಿಸಲು ಬ್ರಿಟಿಷರು ದೇಶದ್ರೋಹ ಕಾನೂನನ್ನು ಬಳಸಿದ್ದರು. ಈ ವಿಭಾಗವನ್ನು ಮಹಾತ್ಮ ಗಾಂಧಿ ಮತ್ತು ಬಾಲ ಗಂಗಾಧರ ತಿಲಕ್ ಅವರ ಮೇಲೂ ಈ ಸೆಕ್ಷನ್ ಜಾರಿಒಳಿಸಲಾಗಿತ್ತು. ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರವೂ ಈ ಕಾನೂನನ್ನು ಉಳಿಸಿಕೊಳ್ಳಲು ಸರ್ಕಾರ ಬಯಸುತ್ತದೆಯೇ? ಇದರ ಹೊರತಾಗಿ ದೇಶದ್ರೋಹ ಪ್ರಕರಣಗಳಲ್ಲಿನ ಶಿಕ್ಷೆಯೂ ತುಂಬಾ ಕಡಿಮೆ ಎಂದು ಎಸ್‌ಸಿ ಹೇಳಿದ್ದಾರೆ. 

Follow Us:
Download App:
  • android
  • ios