Asianet Suvarna News Asianet Suvarna News

ಬಂಗಾಳ ಹಿಂಸಾಚಾರದ ಕೂಪ, ಕಾನೂನು ಸುವ್ಯವಸ್ಥೆ ಇಲ್ಲವೇ ಇಲ್ಲ ಮಾನವ ಹಕ್ಕು ಆಯೋಗ ವರದಿ!

  • ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ
  • ಆಡಳಿತ ಪಕ್ಷದ ಕಾನೂನೇ ಅಂತಿಮವಾಗಿದೆ, ಮಾನ ಹಕ್ಕು ಆಯೋಗ ವರದಿ
  • ಚುನಾವಣೋತ್ತರ ಹಿಂಸಾಚಾರ ಕುರಿತು ಮಾನವ ಹಕ್ಕು ಆಯೋಗ ಹೈಕೋರ್ಟ್‌ಗೆ ವರದಿ
Law of Ruler in West Bengal not Rule of Law NHRC submit final report on post poll violence ckm
Author
Bengaluru, First Published Jul 15, 2021, 4:15 PM IST

ಕೋಲ್ಕತಾ(ಜು.15): ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಅನ್ನೋ ಬಿಜೆಪಿ ಆರೋಪವನ್ನು ತಳ್ಳಿಹಾಕುತ್ತಲೇ ಬಂದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರಕ್ಕೆ ಇದೀಗ ಬಾರಿ ಮುಖಭಂಗವಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಬಂಗಾಳದಲ್ಲಿನ ಹಿಂಸಾಚಾರ ಹಾಗೂ ಆಡಳಿತ ಕುರಿತು ವರದಿಯನ್ನು ಕೋಲ್ಕತಾ ಹೈಕೋರ್ಟ್‌ಗೆ ಸಲ್ಲಿಸಿದೆ. ಈ ವರದಿಯಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ  ಹಿಂಸಾಚಾರದ ಆಡಿಳತನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ.

ಬಂಗಾಳದ ಹಿಂದೂಗಳ ರಕ್ಷಣೆ ಕೋರಿ ಸಲ್ಲಿಸಿದ್ದ PIL ವಿಚಾರಣೆಗೆ ಮುಂದಾದ ಸುಪ್ರೀಂ ಕೋರ್ಟ್!

ಬಂಗಾಳದಲ್ಲಿ  ಈ ನೆಲದ ಕಾನೂನಿನಲ್ಲ, ಆಡಳಿತ ಪಕ್ಷದ ಕಾನೂನೇ ಅಂತಿಮವಾಗಿದೆ. ಆಡಳಿತ ಪಕ್ಷದ ಬೆಂಬಲಿಗರಿಂದ ಹಿಂಸಾಚಾರ ಪ್ರಕರಣಗಳು ನಡೆದಿದೆ. ಹಿಂಸಾಚಾರದಲ್ಲಿನ ಸಂತ್ರಸ್ತರ ದುಸ್ಥಿತಿ ಕುರಿತು ರಾಜ್ಯ ಸರ್ಕಾರ ನಿರಾಸಕ್ತಿ ವಹಿಸಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಕೋಲ್ಕತಾ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ.

'ಪ್ರಜಾಪ್ರಭುತ್ವಕ್ಕೆ ಮಮತಾ ಅಪಾಯಕಾರಿ, ಹಿಂಸೆ ಇದೆಯೇ ಹೊರತು ಅಭಿವೃದ್ಧಿ ಅಲ್ಲ!'

ಬಂಗಾಳದಲ್ಲಿ ಮತದಾನ ಬಳಿಕ ನಡೆದ ಹಿಂಸಾಚಾರ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವರದಿ ಸಲ್ಲಿಸಿದೆ. ಕೋಲ್ಕತಾ ಹೈಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಸ್ಫೋಟಕ ಮಾಹಿತಿಯನ್ನು ಉಲ್ಲೇಖಿಸಿದೆ.   ವಿರೋಧ ಪಕ್ಷದ ಬೆಂಬಲಿಗರ ವಿರುದ್ಧ ಆಡಳಿತ ಪಕ್ಷದ (ತೃಣಮೂಲ ಕಾಂಗ್ರೆಸ್) ಬೆಂಬಲಿಗರು ನಡೆಸಿದ ಪ್ರತೀಕಾರದ ಹಿಂಸಾಚಾರದಲ್ಲಿ ಸಾವಿರಾರು ಜನರ ಜೀವನಕ್ಕೆ ಕುತ್ತಾಗಿದೆ. ಅಮಾಯಕರ ಮೇಲೆಯೂ ಹಲ್ಲೆ ನಡೆದಿದೆ ಎಂದು ಮಾನವ ಹಕ್ಕು ಆಯೋಗ ತನ್ನ ವರದಿಯಲ್ಲಿ ಹೇಳಿದೆ.

ಬಂಗಾಳದಲ್ಲಿ ರಾಜ್ಯಪಾಲರ ಕಾರಿಗೇ ತಡೆ, ಕಪ್ಪು ಬಾವುಟ ಪ್ರದರ್ಶನ!

ಮತದಾನ, ಚುನಾವಣೆ ಫಲಿತಾಂಶದ ಬಳಿಕ ನಡೆದ ಹಿಂಸಾಚಾರವನ್ನು ಸ್ಥಳೀಯ ಪೊಲೀಸರು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಯೋಗ ವರದಿಯಲ್ಲಿ ಆರೋಪಿಸಿದೆ. ಹಿಂಸಾಚಾರ ಹಾಗೂ ಬೆದರಿಕ ಈಗಲೂ ನಡೆಯುತ್ತಿದೆ. ಆಡಳಿತ ಪಕ್ಷದ ಗೂಂಡಾಗಳ ವಿರುದ್ಧ ಪೊಲೀಸರು ದಿಟ್ಟ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹಿಂಸಾಚಾರ ಅದೆಷ್ಟರ ಮಟ್ಟಿಗೆ ಭೀಕರತೆ ಪಡೆದುಕೊಂಡಿದೆ ಅನ್ನೋದನ್ನು ಸಂತ್ರಸ್ತರ ಸ್ಥಿತಿಯಿಂದ ಸ್ಪಷ್ಟವಾಗಿ ಗೋಚರಿಸುತ್ತದೆ. ಹಿಂಸಾಚಾರಕ್ಕೆ ಬೆದರಿ ಸ್ಥಳಾಂತರಗೊಂಡಿರುವ ಅನೇಕ ಕುಟುಂಬಗಳು ತಮ್ಮ ಮನೆಗೆ ಹಿಂತಿರುಗಲು, ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗಿಲ್ಲ ಹಲವು ಲೈಂಗಿಕ ದೌರ್ಜನ್ಯ, ಮಕ್ಕಳ ಮೇಲೆ ದೌರ್ಜನ್ಯಗಳು ನಡೆದಿದೆ. ಈ ಸಂತ್ರಸ್ತರು ಜೀವ ಭಯದಿಂದ ಘಟನೆ ಕುರಿತು ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಯೋಗ ಕೋಲ್ಕತಾ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ.

ಪಶ್ಚಿಮ ಬಂಗಾಳ ಹಿಂಸಾಚಾರ: ಕಾನೂನು ಸುವ್ಯವಸ್ಥೆ ಬಗ್ಗೆ ಪಿಎಂ ಮೋದಿ ಕಳವಳ!

ಹಿಂಸಾಚಾರದಲ್ಲಿ ಬಲಿಪಶುಗಳಾದವರಿಗೆ ಪಶ್ಚಿಮ ಬಂಗಾಳ ಆಡಳಿತದ ಮೇಲೆ ನಂಬಿಕ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಆಡಳಿತ ಕಾನೂನಿನ ಬದಲು, ಆಡಳಿತಗಾರರ ಕಾನೂನೇ ಅಂತಿಮವಾಗಿದೆ ಎಂದು ಮಾನವ ಹಕ್ಕುಗಳ ಆಯೋಗ ಹೇಳಿದೆ.  ಈ ಮಟ್ಟಿನ ಹಿಂಸಾಚಾರ ನಡೆದರೂ ಹಿರಿಯ ಅಧಿಕಾರಿಗಳು, ಆಡಳಿತದ ಪಕ್ಷದ ಮುಖಂಡರು, ನಾಯಕರು, ಹಿಂಸಾಚಾರವನ್ನು ಖಂಡಿಸಲಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಲಿಲ್ಲ, ಧೈರ್ಯ ತುಂಬಲಿಲ್ಲ. ಬದಲಾಗಿ ಗೂಂಡಾಗಳ ಪರ ನಿಂತು ಮತ್ತಷ್ಟು ಹಿಂಸೆಗೆ ಪ್ರಚೋದನೆ ನೀಡಿದರು. 

ಹಿಂಸಾಚಾರದಿಂದ ಜರು ತಮ್ಮ ಮೂಲಭೂತ ಹಕ್ಕುಗಳನ್ನು ಕಳೆದುಕೊಂಡರು. ಜೀವನ ನಿರ್ವಹಣೆಗೆ ಸ್ಥಳಾಂತರವಾದರು. ರಾಜಕೀಯ ಅಧಿಕಾರಶಾಹಿಗಾಗಿ ಹಿಂಸಾಚಾರ ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿಯಾಗಿದೆ ಎಂದು ಮಾನವ ಹಕ್ಕುಗಳ ಆೋಗ ವರದಿ ಮಾಡಿದೆ.

ಬಂಗಾಳ ಚುನಾವಣಾ ಹಿಂಸಾಚಾರಕ್ಕೆ 5 ಬಲಿ!

ಹಲವರು ತಮ್ಮ ಹೆಸರು ಹೇಳಲು ಭಯಪಡುವ ಪರಿಸ್ಥಿತಿ ಬಂಗಾಳದಲ್ಲಿ ನಿರ್ಮಾಣವಾಗಿದೆ. ಸಂತ್ರಸ್ತರು ತಮ್ಮ ಮೇಲೆ ನಡೆದ ಹಲ್ಲೆ, ದಾಳಿ ಕುರಿತು ವಿವರಿಸಲು ಹಿಂದೇಟು ಹಾಕಿದ್ದಾರೆ. ಆಯೋಗ ವಾಪಸ್ ತೆರಳಿದ ಬಳಿಕ ಮತ್ತೆ ಸಂತ್ರಸ್ತರ ಮೇಲೆ ದಾಳಿಯಾಗುವ ಸಾಧ್ಯತೆಯನ್ನು ಹೇಳಿದ್ದಾರೆ. 

ಬಂಗಾಳದಲ್ಲಿ ಹಿಂಸಾಚಾರ, ಕೊಲೆ, ಅತ್ಯಾಚಾರ ಮುಂತಾದ ಘೋರ ಅಪರಾಧಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು. ಇಷ್ಟೇ ಅಲ್ಲ ಈ ಪ್ರಕರಣಗಳ ವಿಚಾರಣೆಯನ್ನು ರಾಜ್ಯದ ಹೊರಗೆ ನಡೆಸಬೇಕು. ಜೊತೆಗೆ ಈ ಪ್ರಕರಣಗಳನ್ನು ನ್ಯಾಯಾಲಯದ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡ ತನಿಖೆ ಮಾಡಬೇಕು ಎಂದು ಮಾನವ ಹಕ್ಕುಗಳ ಆಯೋಗ ಶಿಫಾಸು ಮಾಡಿದೆ.

ಸಂತ್ರಸ್ತರಿಗೆ ಪುನರ್ವಸತಿಗಾಗಿ ಕ್ರಮಗಳು, ಹರಿಹಾರ, ಬದುಕ ಕಟ್ಟಿಕೊಳ್ಳಲು ಅನುವು ಮಾಡಿಕೊಡಲು ಹಲವು ಕ್ರಮಗಳನ್ನು ಆಯೋಗ ವರದಿಯಲ್ಲಿ ಶಿಫಾರಸು ಮಾಡಿದೆ. ಮಹಿಳೆ, ಮಕ್ಕಳ ರಕ್ಷಣೆಗೆ ಕ್ರಮ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಯೋಗ ಆಗ್ರಹಿಸಿದೆ.
 

Follow Us:
Download App:
  • android
  • ios