ವಿಶ್ವನಾಥ್ ದಾಖಲೆ ಬಿಡುಗಡೆ ಮಾಡ್ತಾರೆ ಸಾರಾ, ಸಾಧ್ವಿ ಕ್ಷಮೆ ಕೇಳ್ತಾರಾ ರಾಗಾ?: ಇಂದಿನ ಟಾಪ್ 10!

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯ ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ನ.29ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|

Top 10 Stories Of November 29

ಬೆಂಗಳೂರು(ನ.29): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.

1. ಸಂಜೆ ವಿಶ್ವನಾಥ್ ದಾಖಲೆ ಬಿಡುಗಡೆ ಮಾಡ್ತೇನೆ: ಬಾಂಬ್ ಸಿಡಿಸಿದ ಸಾರಾ..!

Top 10 Stories Of November 29
ಉಪಚುನಾವಣೆ ಹೊತ್ತಲ್ಲಿ ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಹಾಗೂ ಜೆಡಿಎಸ್ ಶಾಸಕ ಸಾರಾ ಮಹೇಶ್ ನಡುವೆ ಮತ್ತೆ ವಾಕ್ ಸಮರ ಶುರುವಾಗಿದೆ. ಸಂಜೆ ವಿಶ್ವನಾಥ್ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೊಸ ಬಾಂಬ್ ಸಿಡಿಸುವುದರ ಮೂಲಕ ಒಂದು ಸುಳಿವು ಸಹ ಕೊಟ್ಟಿದ್ದಾರೆ. ಏನದು ಸುಳಿವು..? ಮುಂದೆ ಓದಿ.

2. ಗುಪ್ತಚರ ವರದಿ ಬೆನ್ನಲ್ಲೇ ಯಡಿಯೂರಪ್ಪ ಫುಲ್ ಜೋಶ್‌ನಲ್ಲಿ ಆಡಿದ ಮಾತುಗಳು...!

Top 10 Stories Of November 29
ಜಿದ್ದಾಜಿದ್ದಿನ ಕೂಡಿರುವ ರಾಜ್ಯ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 9ಕ್ಕೂ ಹೆಚ್ಚು ಕ್ಷೇತಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗ ವರದಿ ನೀಡಿದೆ. ಈ ವರದಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಫುಲ್ ಖುಷ್ ಆಗಿದ್ದು, ಯಾರ ಸಪೋರ್ಟ್ ನಮಗೆ ಬೇಡವೆಂದು ಘಂಟಾಘೋಷವಾಗಿ ಹೇಳಿದ್ದಾರೆ.

3. ಕೆಬಿಸಿಯಲ್ಲಿ ಕನ್ನಡತಿ ಸುಧಾಮೂರ್ತಿ; ಸರಳತೆಗೆ ಸಲಾಂ ಎಂದ ಬಿಗ್ ಬಿ!

Top 10 Stories Of November 29
ಖ್ಯಾತ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್‌ಪತಿ' ಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಭಾಗವಹಿಸಿದ್ದರೆ.  ಕಾರ್ಯಕ್ರಮ ಆರಂಭಕ್ಕೂ ಮುನ್ನ ಅಮಿತಾಬ್ ಸುಧಾ ಮೂರ್ತಿ ಕಾಲಿಗೆ ಬಿದ್ದಿದ್ದು ಗಮನ ಸೆಳೆದಿದೆ.  ಸುಧಾಮೂರ್ತಿಯವರ ಸಾಧನೆ, ಸರಳತೆಯನ್ನು ಬಿಗ್ ಬಿ ಶ್ಲಾಘಿಸಿದ್ದಾರೆ.  ಈ ಎಪಿಸೋಡ್ ಇಂದು ಸಂಜೆ ಪ್ರಸಾರವಾಗಲಿದೆ. ಕಾರ್ಯಕ್ರಮದ ಅನುಭವದ ಬಗ್ಗೆ ಸ್ವತಃ ಸುಧಾಮೂರ್ತಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಕೇಳಿ.

5. ಶತಮಾನದ ಸತ್ಯ?: ಇವಿಎಂ ಹ್ಯಾಕ್ ಆಗತ್ತೆ ಎಂದ ಬಿಜೆಪಿ ನಾಯಕ!

Top 10 Stories Of November 29
ಟಿಎಂಸಿ ಚುನಾವಣೆ ಗೆಲ್ಲಲು ಇವಿಎಂ ಮತಯಂತ್ರ ದುರುಪಯೋಗವೇ ಕಾರಣ ಎಂದು ಬಿಜೆಪಿ ನಾಯಕರೊಬ್ಬರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಪ.ಬಂಗಾಳದ ಬಿಜೆಪಿ ನಾಯಕ ರಾಹುಲ್ ಸಿನ್ಹಾ, ಉಪಚುನಾವಣೆಯಲ್ಲಿ  ಇವಿಎಂ  ಮತಯಂತ್ರದ ದುರುಪಯೋಗ ನಡೆದ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

6. 'ಶೃಂಗಾರದ ಹೊಂಗೇ ಮರ'ದ ಹುಡುಗಿ ತುಂಡು ಬಟ್ಟೆ ಗಿಟ್ಟಿಸಿತು ನೆಟ್ಟಿಗರ ಗಮನ!

Top 10 Stories Of November 29
'ಪ್ರೇಮದಲ್ಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅಕ್ಷರಾ ಗೌಡ ಬಿಕಿನಿ ಲುಕ್‌ ಮೂಲಕ ಈಗ ಸ್ಯಾಂಡಲ್‌ವುಡ್‌ ಸೆನ್ಸೇಷನ್‌ ಕ್ವೀನ್ ಆಗಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಕ್ಷರಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

7. ಜಿಡಿಪಿ ವರದಿ ಮುನ್ನವೇ ರೂಪಾಯಿ ಕುಸಿತ: ಎಲ್ಲಿ ತಪ್ಪಿತು ಮೋದಿ ಕಾಗುಣಿತ?

Top 10 Stories Of November 29
ಆರ್ಥಿಕ ಕುಸಿತದ ಭೂತ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಾಡುತ್ತಲೇ ಇದೆ. ಆರ್ಥಿಕ ಹಿನ್ನಡೆಯಾಗಿರುವುದು ನಿಜ ಎಂದು ಖುದ್ದು ಕೇಂದ್ರ ಹಣಕಾಸು ಸಚಿವೆ ಒಪ್ಪಿಕೊಂಡಿರುವುದು ಸಮಸ್ಯೆಯ ಗಂಭೀರತೆಯನ್ನು ಎತ್ತಿ ತೋರಿಸಿದೆ. ಈ ಮಧ್ಯೆ ಮತ್ತೊಂದು ಕಹಿ ಸುದ್ದಿ ಮೋದಿ ಸರ್ಕಾರದ ಕದ ತಟ್ಟಿದ್ದು, ಎರಡನೆ ತ್ರೈಮಾಸಿಕ ಜಿಡಿಪಿ ವರದಿ ಪ್ರಕಟವಾಗುವ ಮುನ್ನವೇ ರೂಪಾಯಿ ಮೌಲ್ಯ ದಿಢೀರ್ ಕುಸಿತ ಕಂಡಿದೆ.

8. ಆಮೀರ್ ಖಾನ್ ಪತ್ನಿ ಕಿರಣ್ ರಾವ್ ಖ್ಯಾತ ಕನ್ನಡ ಸಾಹಿತಿಯ ವಂಶಸ್ಥೆ...?

Top 10 Stories Of November 29
ಬಾಲಿವುಡ್ ಪರ್ಫೆಕ್ಟ್ ಸ್ಟಾರ್ ಆಮೀರ್ ಖಾನ್ ಪತ್ನಿ ಕಿರಣ್ ರಾವ್, ಖ್ಯಾತ ಸೇನಾ ಪತ್ರಕರ್ತ ಶಿವು ಅರೋರಾ ಹಾಗೂ ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಎಲ್ಲರೂ ಕಸಿನ್ಸ್. ಅದೂ 'ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಭಿಮ್ಮನೆ ಬಂದಳೋ?...' ಎಂದು ಹುತ್ತರಿ ಹಾಡು ರಚಿಸಿದ ಕನ್ನಡದ ಖ್ಯಾತ ಸಾಹಿತಿಯ ಮರಿ ಮೊಮ್ಮಕ್ಕಳು. ಕಿರಣ್ ಕರ್ನಾಟಕ ಮೂಲದವರು ಅಂತ ಎಲ್ಲರಿಗೂ ಗೊತ್ತು. ಆದರೆ, ಕನ್ನಡ ನಾಡಿನ ಹೆಮ್ಮೆ, ಪ್ರಖ್ಯಾತ ಸಾಹಿತಿಯ ವಂಶಸ್ಥೆ ಎಂಬುವುದು ಗೊತ್ತಿತ್ತಾ?   ನಾವ್ ಹೇಳ್ತೀವಿ ಕೇಳಿ.

9. ಪ್ರಜ್ಞಾ ಠಾಕೂರ್ ಕ್ಷೇತ್ರಕ್ಕೆ ಕಾಲಿಟ್ಟರೆ ಸುಡ್ತಿನಿ: ಗಾಂಧಿವಾದಿ ಕಾಂಗ್ರೆಸ್ ಶಾಸಕ!

Top 10 Stories Of November 29

ಮಹಾತ್ಮ ಗಾಂಧಿ ಹಮತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಕ್ಷೇತ್ರಕ್ಕೆ ಕಾಲಿಟ್ಟರೆ ಬೆಂಕಿ ಹಚ್ಚುವುದಾಗಿ ಮಧ್ಯಪ್ರದೇಶ ಕಾಂಗ್ರೆಸ್ ಶಾಸಕ ಗೋವರ್ಧನ್ ದಂಗಿ ಬೆದರಿಕೆಯೊಡ್ಡಿದ್ದಾರೆ. ಬಿಯೋರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋವರ್ಧನ್ ದಂಗಿ ಇಂತಹ ವಿವಾದಾತ್ಮಕ ಹೇಳಿಕೆ ನೀಡಿದ್ದು, ಗೋಡ್ಸೆಯನ್ನು ದೇಶಭಕ್ತ ಎಂದ ಸಾಧ್ವಿಗೆ ಬದುಕುವ ಹಕ್ಕಿಲ್ಲ ಎಂದು ಹೇಳುವ ಮೂಲಕ ವಿವಾವಾದ ಕಿಡಿ ಹೊತ್ತಿಸಿದ್ದಾರೆ.

10. ಕಾಫಿಪ್ರಿಯರೇ? ಹಾಗಿದ್ದರೆ ಕಾಫಿಯ ಕುರಿತ ಈ ಆಸಕ್ತಿಕರ ಮಾಹಿತಿಗಳು ನಿಮಗಾಗಿ

Top 10 Stories Of November 29
ನಮ್ಮೆಲ್ಲರ ದಿನ ಆರಂಭವಾಗುವುದೇ ಒಂದು ಕಪ್ ಬಿಸಿ ಬಿಸಿ ಸ್ಟ್ರಾಂಗ್ ಕಾಫಿಯಿಂದ. ಅದೊಂದು ಹೊಟ್ಟೆಗೆ ಬಿದ್ದರೆ ಸಾಕು, ಜಡವೆಲ್ಲ ಕಳೆದು ಇಡೀ ದಿನ ಆ್ಯಕ್ಟಿವ್ ಆಗಿರಬಹುದು ಎನಿಸುತ್ತದೆ. ಕಾಫಿಯೇನು ಹೊಸ ಪೇಯವಲ್ಲ, ಸಾವಿರಾರು ವರ್ಷಗಳಿಂದ ಇದು ಇದು ಜನರ ಬದುಕಿಗೆ ಕಿಕ್ ನೀಡುತ್ತಲೇ ಇದೆ. ಇಂಥ ಈ ಕಾಫಿ ಹುಟ್ಟಿದ್ದು ಯಾವಾಗ, ಭಾರತಕ್ಕೆ ಬಂದಿದ್ದು ಯಾವಾಗ, ಇದರಲ್ಲೆಷ್ಟು ವಿಧ ಮುಂತಾದ ಆಸಕ್ತಿಕರ ಸಂಗತಿಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ ನೋಡಿ.

Latest Videos
Follow Us:
Download App:
  • android
  • ios