ಜಿಡಿಪಿ ವರದಿ ಮುನ್ನವೇ ರೂಪಾಯಿ ಕುಸಿತ: ಎಲ್ಲಿ ತಪ್ಪಿತು ಮೋದಿ ಕಾಗುಣಿತ?
ಮೋದಿ ಸರ್ಕಾರವನ್ನು ಕಾಡುತ್ತಿರುವ ಆರ್ಥಿಕ ಕುಸಿತದ ಭೀತಿ| ಮೋದಿ ಸರ್ಕಾರದ ಕದ ತಟ್ಟಿದ ಕಹಿ ಸುದ್ದಿ| ಜಿಡಿಪಿ ವರದಿ ಬಿಡುಗಡೆಗೂ ಮುನ್ನವೇ ರೂಪಾಯಿ ಮೌಲ್ಯ ಕುಸಿತ| ಡಾಲರ್ ಎದುರು 11 ಪೈಸೆ ಕುಸಿತ ಕಂಡ ರೂಪಾಯಿ ಮೌಲ್ಯ| 71.73 ರೂ. ಆಸುಪಾಸು ವ್ಯವಾಹಾರ ನಡೆಸಿದ ಭಾರತೀಯ ರೂಪಾಯಿ ಮೌಲ್ಯ|
ಮುಂಬೈ(ನ.29): ಆರ್ಥಿಕ ಕುಸಿತದ ಭೂತ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಾಡುತ್ತಲೇ ಇದೆ. ಆರ್ಥಿಕ ಹಿನ್ನಡೆಯಾಗಿರುವುದು ನಿಜ ಎಂದು ಖುದ್ದು ಕೇಂದ್ರ ಹಣಕಾಸು ಸಚಿವೆ ಒಪ್ಪಿಕೊಂಡಿರುವುದು ಸಮಸ್ಯೆಯ ಗಂಭೀರತೆಯನ್ನು ಎತ್ತಿ ತೋರಿಸಿದೆ.
ಈ ಮಧ್ಯೆ ಮತ್ತೊಂದು ಕಹಿ ಸುದ್ದಿ ಮೋದಿ ಸರ್ಕಾರದ ಕದ ತಟ್ಟಿದ್ದು, ಎರಡನೆ ತ್ರೈಮಾಸಿಕ ಜಿಡಿಪಿ ವರದಿ ಪ್ರಕಟವಾಗುವ ಮುನ್ನವೇ ರೂಪಾಯಿ ಮೌಲ್ಯ ದಿಢೀರ್ ಕುಸಿತ ಕಂಡಿದೆ.
ಮೋದಿ ಊರಲ್ಲಿಲ್ಲ: ಸರ್ಕಾರ ಈ ಆಘಾತ ಖಂಡಿತ ನಿರೀಕ್ಷಿಸಿರಲಿಲ್ಲ!
ಇಂದಿನ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಅಮೆರಿಕನ್ ಡಾಲರ್ ಎದುರು 11 ಪೈಸೆ ಕುಸಿತ ಕಂಡಿದ್ದು, 71.73 ರೂ. ಆಸುಪಾಸು ವ್ಯವಾಹಾರ ನಡೆಸಿದೆ. ಇಂಟರ್ ಬ್ಯಾಂಕ್ ಫಾರಿನ್ ಎಕ್ಸ್ಚೇಂಜ್ನಲ್ಲಿ ಬೆಳಗ್ಗೆ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿತು.
ಹೂಡಿಕೆದಾರರು ಅಮೆರಿಕ-ಚೀನಾ ವಾಣಿಜ್ಯ ವಹಿವಾಟಿನಲ್ಲಿ ಸ್ಪಷ್ಟತೆಯನ್ನು ಹುಡುಕುತ್ತಿದ್ದು, ನಿಧಾನಗತಿಯ ಹೂಡಿಕೆಯ ಮೊರೆ ಹೋಗಿದ್ದಾರೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಆರ್ಥಿಕ ಪುನಶ್ಚೇತನ ಒಂದು ಊಹೆ: ಆ್ಯಕ್ಟೀವ್ ಆಯ್ತು ಆರ್‌ಬಿಐ ಗವರ್ನರ್ ಗುಹೆ!
ಇನ್ನು ಕಚ್ಚಾ ತೈಲ ಬೆಲೆ ಕೂಡ ಶೇ.0.41ರಷ್ಟು ಕುಸಿದಿದ್ದು, ಬ್ಯಾರೆಲ್ ಕಚ್ಚಾ ತೈಲ ದರ 63.61 ಡಾಲರ್ ಆಗಿದೆ.