ಮೈಸೂರು, (ನ.29): "ಎಚ್.ವಿಶ್ವನಾಥ್ ಅವರೇ ನನ್ನ ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ಮಾತನಾಡ್ತೀರಿ. ನಿಮ್ಮ ರಿಯಲ್ ಎಸ್ಟೇಟ್ ಬಗ್ಗೆ ಇಂದು (ಶಕ್ರವಾರ) ಸಂಜೆ ದಾಖಲೆ ಬಿಡುಗಡೆ ಮಾಡುತ್ತೇನೆ" ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಹೊಸ ಬಾಂಬ್ ಸಿಡಿಸಿದ್ದಾರೆ. 

ಹುಣಸೂರು ಉಪಚುನಾವಣೆದಲ್ಲಿ ತೊಡಗಿರುವ ಸಾರಾ ಮಹೇಶ್ ಕೃಷ್ಟಾಪುರದಲ್ಲಿ ಮಾತನಾಡಿದ ಸಾ.ರಾ ಮಹೇಶ್, "ನನ್ನ ರಿಯಲ್ ಎಸ್ಟೇಟ್ ಅಂತೀರ, ನೀವೇನ್ ಮಾಡ್ತಿದೀರಾ?  ನಿಮ್ಮ ಎಲೆಕ್ಷನ್‌ಗೆ ಹಣ ಎಲ್ಲಿಂದ ಬರ್ತಿದೆ ಎಲ್ಲವೂ ಗೊತ್ತು. ಸಂಜೆ ಪ್ರೆಸ್‌ಮೀಟ್ ಮಾಡಿ ದಾಖಲೆ ಬಿಡುಗಡೆ ಮಾಡ್ತೀನಿ ಎಂದು ಹೇಳುವ ಮೂಲಕ ಉಪಚುನಾವಣೆ ವೇಳೆ ಸಂಚಲನ ಮೂಡಿಸಿದ್ದಾರೆ.

‘ಬ್ಲ್ಯೂ ಫಿಲ್ಮ್ ತೆಗೆಯಲು ಹೋಗಿ ಸಿಕ್ಕಿಕೊಂಡಿಲ್ಲ, ಯಾರ ಮನೆ ಚಡ್ಡಿ ತೊಳೆದಿಲ್ಲ’

ಹೋಟಲ್‌ನಿಂದ ನಿಮ್ಮನ್ನ ಕಾರಿಗೆ ಎಷ್ಟು ಜನ ಹತ್ತಿಸಿದ್ರು ನೆನೆಸಿಕೊಳ್ಳಿ. ನೀವು ಸಂಸ್ಕೃತಿಯ ಬಗ್ಗೆ ಮಾತಾಡ್ತೀರ ಮಿಸ್ಟರ್ ಕ್ಲೀನ್ ಎಂದು ಹೇಳುವ ಮೂಲಕ ದಾಖಲೆ ಬಿಡುಗಡೆ ಮಾಡುವ ಮುನ್ನವೇ ಒಂದು ಸುಳಿವು ನೀಡಿದರು.

ನಾವು ವಿಶ್ವನಾಥ್ ಅವರನ್ನು ಲೋಕಸಭೆಗೆ ಕಳಿಸ್ತಿದ್ವಿ. ಅವರೇ ಕಡೆಗಾಲದಲ್ಲಿ ಶಾಸಕ ಆಗ್ತೀನಿ ಸಾಕು ಅಂದಿದ್ರು. ವಿಶ್ವನಾಥ್ ಕೈ ಮುಗಿದು ಕೇಳ್ಕೊಂಡಿದ್ರು. ಹೆಚ್ಡಿಕೆ ಸಿಎಂ ಆದ್ರೆ ವಿಶ್ವನಾಥ್ ನೆಮ್ಮದಿ ಆಗಿರೋಕೆ ಬಿಡಲ್ಲ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.

ಮತ್ತೆ ಚಾಮುಂಡೇಶ್ವರಿ ಬಳಿ ಹೋಗಿ ಕ್ಷಮೆ ಕೇಳಿದ ಸಾರಾ!

ನನ್ನ ರಿಯಲ್ ಎಸ್ಟೇಟ್ ವ್ಯವಹಾರದ ಬಗ್ಗೆ ಮಾತನಾಡ್ತೀರಿ. ನಿಮ್ಮ ರಿಯಲ್ ಎಸ್ಟೇಟ್ ಬಗ್ಗೆ ದಾಖಲೆಯನ್ನು ಬಿಡುಗಡೆ ಮಾಡುತ್ತೇನೆ. ಸಾಮಾಜಿಕ ಬದುಕಿನಲ್ಲಿ ನೀವು ಕ್ಲೀನ್ ಇಲ್ಲ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ವಾಗ್ದಾಳಿ ನಡೆಸಿದರು.

ಈಗಾಗಲೇ ವಿಶ್ವನಾಥ್ ಹಾಗೂ ಸಾರಾ ಮಹೇಶ್ ಮಧ್ಯೆ ಒಂದು ಸುತ್ತಿನ ವಾಕ್ ಸಮರ ಚಾಮುಂಡೇಶ್ವರಿ ಆಣೆ ಪ್ರಮಾಣದವರೆಗೂ ಹೋಗಿ ಅಂತ್ಯವಾಗಿತ್ತು. ಇದೀಗ ಉಪಚುನಾವಣೆ ಹೊತ್ತಲ್ಲಿ ಸಾರಾ ಮಹೇಶ್ ವಿಶ್ವನಾಥ್ ಮೇಲೆ ಮುಗಿಬಿದ್ದಿದ್ದಾರೆ. ಅದರಲ್ಲೂ ದಾಖಲೆ ಬಿಡುಗಡೆ ಮಾಡುತ್ತೇನೆಂದು ಘೋಷಣೆ ಮಾಡಿದ್ದಾರೆ.

ಇದೇ ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ಕ್ಕೆ ಫಲಿತಾಂ ಹೊರಬೀಳಲಿದೆ. ಇದರ ಮದ್ಯೆ ಸಾರಾ ಮಹೇಶ್ ಸಿಡಿಸಿದ ಬಾಂಬ್ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.