ಭೋಪಾಲ್(ನ.29): ಮಹಾತ್ಮ ಗಾಂಧಿ ಹಮತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಕ್ಷೇತ್ರಕ್ಕೆ ಕಾಲಿಟ್ಟರೆ ಬೆಂಕಿ ಹಚ್ಚುವುದಾಗಿ ಮಧ್ಯಪ್ರದೇಶ ಕಾಂಗ್ರೆಸ್ ಶಾಸಕ ಗೋವರ್ಧನ್ ದಂಗಿ ಬೆದರಿಕೆಯೊಡ್ಡಿದ್ದಾರೆ.

ಬಿಯೋರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋವರ್ಧನ್ ದಂಗಿ ಇಂತಹ ವಿವಾದಾತ್ಮಕ ಹೇಳಿಕೆ ನೀಡಿದ್ದು, ಗೋಡ್ಸೆಯನ್ನು ದೇಶಭಕ್ತ ಎಂದ ಸಾಧ್ವಿಗೆ ಬದುಕುವ ಹಕ್ಕಿಲ್ಲ ಎಂದು ಹೇಳುವ ಮೂಲಕ ವಿವಾವಾದ ಕಿಡಿ ಹೊತ್ತಿಸಿದ್ದಾರೆ.

ಗೋಡ್ಸೆಯನ್ನು ಮತ್ತೆ ‘ದೇಶಭಕ್ತ’ ಎಂದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ!

ಇಡೀ ದೇಶ ರಾಷ್ಟ್ರಪಿತ ಎಂದು ಪೂಜಿಸುವ ಗಾಂಧಿಜೀ ಅವರನ್ನು ಕೊಂದಿದ್ದ ಗೋಡ್ಸೆ ಓರ್ವ ದೇಶದ್ರೋಹಿ ಭಯೋತ್ಪಾದಕ ಎಂದು ದಂಗಿ ಅಭಿಪ್ರಾಯಪಟ್ಟಿದ್ದಾರೆ. ಇಂತಹ ವ್ಯಕ್ತಿಯನ್ನು ಲೋಕಸಭೆಯಲ್ಲೇ ಹೊಗಳಿದ ಸಾಧ್ವಿ ಭೋಪಾಲ್ ಕ್ಷೇತ್ರಕ್ಕೆ ಕಾಲಿಟ್ಟರೆ ಸುಟ್ಟು ಹಾಕುವುದಾಗಿ ದಂಗಿ ಗುಡುಗಿದ್ದಾರೆ.

ಮಾತು ಕೇಳದ ಪ್ರಜ್ಞಾಗಿಲ್ಲ ಪ್ರಜ್ಞೆ: ಪ್ರಧಾನಿ ಮೋದಿ ಕೊಟ್ಟರು ಶಿಕ್ಷೆಯ ಆಜ್ಞೆ!

ಷರತ್ತುಬದ್ಧ ಕ್ಷಮೆ ಕೇಳಿದ ಸಾಧ್ವಿ ಪ್ರಜ್ಞಾ:

ಇನ್ನು ಲೋಕಸಭೆಯಲ್ಲಿ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದು ವಿವಾದ ಸೃಷ್ಟಿಸಿದ್ದ ಸಾಧ್ವಿ ಪ್ರಜ್ಞಾ ಠಾಕೂರ್, ಇಂದು ಲೋಕಸಭೆಯಲ್ಲಿ ಷರತ್ತುಬದ್ಧ ಕ್ಷಮೆ ಕೇಳಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಧು ಸ್ಪಷ್ಟಪಡಿಸಿರುವ ಸಾಧ್ವಿ, ತಮ್ಮ ಹೇಳಿಕೆಗಾಗಿ ಕ್ಷಮೆ ಕೋರುವುದಾಗಿ ಸ್ಪಷ್ಟಪಡಿಸಿದರು.

ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಹರಿಹಾಯ್ದ ಸಾಧ್ವಿ ಪ್ರಜ್ಞಾ, ತಮ್ಮನ್ನು ಭಯೋತ್ಪಾದಕಿ ಎಂದು ಕರೆದ ರಾಹುಲ್ ಕೂಡ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.