ಕಾಫಿಪ್ರಿಯರೇ? ಹಾಗಿದ್ದರೆ ಕಾಫಿಯ ಕುರಿತ ಈ ಆಸಕ್ತಿಕರ ಮಾಹಿತಿಗಳು ನಿಮಗಾಗಿ

ಕಾಫಿಯನ್ನು ಜಗತ್ತಿನಲ್ಲಿ ಹೆಚ್ಚಾಗಿ ಎಲ್ಲಿ ಬೆಳೆಯುತ್ತಾರೆ ಗೊತ್ತಾ? ಅಥವಾ ಇದರಲ್ಲೆರಡು ವಿಧ ಇದೆ ಎಂದು ಗೊತ್ತಾ? ಗೊತ್ತಿಲ್ಲದಿದ್ದರೆ ಪರವಾಗಿಲ್ಲ, ನಾವು ಎಲ್ಲ ತಿಳಿಸ್ತೀವಿ.

6 Interesting facts about coffee you

ನಮ್ಮೆಲ್ಲರ ದಿನ ಆರಂಭವಾಗುವುದೇ ಒಂದು ಕಪ್ ಬಿಸಿ ಬಿಸಿ ಸ್ಟ್ರಾಂಗ್ ಕಾಫಿಯಿಂದ. ಅದೊಂದು ಹೊಟ್ಟೆಗೆ ಬಿದ್ದರೆ ಸಾಕು, ಜಡವೆಲ್ಲ ಕಳೆದು ಇಡೀ ದಿನ ಆ್ಯಕ್ಟಿವ್ ಆಗಿರಬಹುದು ಎನಿಸುತ್ತದೆ. ಕಾಫಿಯೇನು ಹೊಸ ಪೇಯವಲ್ಲ, ಸಾವಿರಾರು ವರ್ಷಗಳಿಂದ ಇದು ಜನರ ಬದುಕಿಗೆ ಕಿಕ್ ನೀಡುತ್ತಲೇ ಇದೆ. ಇಂಥ ಈ ಕಾಫಿ ಹುಟ್ಟಿದ್ದು ಯಾವಾಗ, ಭಾರತಕ್ಕೆ ಬಂದಿದ್ದು ಯಾವಾಗ, ಇದರಲ್ಲೆಷ್ಟು ವಿಧ ಮುಂತಾದ ಆಸಕ್ತಿಕರ ಸಂಗತಿಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ ನೋಡಿ...

ಬೀಟ್ರೂಟ್‌ನಿಂದ ಕೂದಲನ್ನು ಕಲರ್ ಮಾಡಿಕೊಳ್ಳುವುದು ಹೀಗೆ!

1. ಎಲ್ಲ ಶುರುವಾದದ್ದು 9ನೇ ಶತಮಾನದಲ್ಲಿ

ನಮ್ಮ ಮನೆಗಳಲ್ಲಿ ನೆಂಟರು ಬಂದಾಗ, ಹೋಟೆಲ್‌ನಲ್ಲಿ ಡೇಟ್‌ಗೆ ಹೋದಾಗ, ಹೊಸಬರನ್ನು ಪರಿಚಯ ಮಾಡಿಕೊಳ್ಳುವಾಗ- ಹೀಗೆ ಮಾತು, ಸಂಬಂಧ ಎಲ್ಲ ಶುರುವಾಗುವುದು ಒಂದು ಕಪ್ ಕಾಫಿಯಿಂದ. ಆದರೆ, ಈ ಕಾಫಿ ಶುರುವಾದದ್ದು ಎಲ್ಲಿಂದ? 9ನೇ ಶತಮಾನದಲ್ಲಿ ಒಮ್ಮೆ ಕುರಿಗಳು ಕಾಫಿ ಹಣ್ಣುಗಳನ್ನು ತಿಂದು ನೃತ್ಯ ಮಾಡಲು ಆರಂಭಿಸಿದ್ದನ್ನು ಗಮನಿಸಿದರು. ಇದನ್ನು ಹೇಳಿದಾಗ, ಸ್ಥಳೀಯ ಗುರುವೊಬ್ಬರು ಕಾಫಿ ಹಣ್ಣನ್ನು ಬಳಸಿ ಪೇಯವನ್ನು ತಯಾರಿಸಿಯೇ ಬಿಟ್ಟರು. ಅದನ್ನು ಕುಡಿದ ರಾತ್ರಿ ಅವರಿಗೆ ನಿದ್ರೆ ಬರಲಿಲ್ಲ. ಆದರೂ, ಅದು ಬಹಳ ಕಿಕ್ ನೀಡಿದ್ದು ಅನುಭವಕ್ಕೆ ಬಂತು. ಅಂದ ಹಾಗೆ ಕಾಫಿ ಬೀಜದ ಮೂಲ ಇಥಿಯೋಪಿಯಾದಲ್ಲಿದೆ. 

2. ಬ್ರೆಜಿಲ್ ಕಾಫಿಗಳ ರಾಜ

ಇಂದು ಬ್ರೆಜಿಲ್ ಜಗತ್ತಿನ ಕಾಫಿ ಉತ್ಪಾದನೆಯ ಮೂರರಲ್ಲಿ ಒಂದು ಭಾಗವನ್ನು ಹೊಂದಿದೆ. ಎರಡನೇ ಸ್ಥಾನದಲ್ಲಿರುವ ವಿಯೆಟ್ನಾಂ ಬ್ರೆಜಿಲ್‌ನ ಕಾಫಿ ಉತ್ಪಾದನೆಯ ಅರ್ಧದಷ್ಟಕ್ಕೆ ಸೀಮಿತವಾಗಿದೆ. ಕಾಫಿಯ ವಿಷಯದಲ್ಲಿ ಎಸ್‌ಪ್ರೆಸ್ಸೋ ಎಂಬ ಪದ ಕೇಳಿರಬಹುದು. ಇಟಾಲಿಯನ್ ಭಾಷೆಯಲ್ಲಿ ಹೀಗೆಂದರೆ, ಪ್ರೆಸ್ಡ್ ಔಟ್ ಎಂದರ್ಥ. ಅಂದರೆ ಇದು ಎಸ್‌ಪ್ರೆಸೋವನ್ನು ಹೇಗೆ ಮಾಡಲಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಕುಟ್ಟಿದ ಕಾಫಿ ಬೀಜಗಳ ಮೇಲೆ ಬಿಸಿ ನೀರು ಹರಿಸಿ ಕಾಫಿ ಪಡೆಯಲಾಗುತ್ತದೆ. 

ಕಾಫಿ ಅಥವಾ ಚಹಾ ಕುಡೀತಾ ದಿನ ಆರಂಭಿಸ್ತೀರಾ? ತಪ್ಪು ತಪ್ಪು ತಪ್ಪು

3. ಭಾರತಕ್ಕೆ ಬಂದದ್ದು ಹೇಗೆ?

ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯಿಂದಾಗಿ ಭಾರತಕ್ಕೆ ಕಾಫಿ ಬಂದಿತೆಂದು ಹಲವರು ನಂಬಿದ್ದಾರೆ. ಆದರೆ, ಅದಕ್ಕೂ ಬಹಳ ಮುಂಚೆಯೇ ಯೆಮನ್‌ನಿಂದ ಬಂದ ಸೂಫಿ ಸಂತ ಬಾಬಾ ಬುಡನ್ ಚಿಕ್ಕಮಗಳೂರಿನ ಗುಡ್ಡಗಳ ಮೇಲೆ 1670ರಲ್ಲಿ ಕಾಫಿಯನ್ನು ಬೆಳೆಯಲಾರಂಭಿಸಿದ. ಅಂದರೆ ಭಾರತದಲ್ಲಿ ಕಾಫಿಯ ಬೆಳೆ ಶುರುವಾದದ್ದೇ ಕರ್ನಾಟಕದಿಂದ. ಅಂದಿನಿಂದ ಇಂದಿನವರೆಗೂ ಚಿಕ್ಕಮಗಳೂರು ಕಾಫಿ ಪ್ಲ್ಯಾಂಟೇಶನ್‌ಗಳನ್ನು ಮುಂದುವರಿಸಿಕೊಂಡು ಬಂದಿದೆ. ಅಲ್ಲಿಂದ ಇದು ಕೊಡಗಿಗೂ ಹಬ್ಬಿದೆ. ಸಧ್ಯ ಭಾರತದಲ್ಲಿ ಕರ್ನಾಟಕ, ಕೇರಳ, ಹಾಗೂ ತಮಿಳುನಾಡಿನಲ್ಲಿ ಕಾಫಿ ಬೆಳೆಯಲಾಗುತ್ತದೆ. ಇಲ್ಲಿ ಬೆಳೆವ ಶೇ.80ರಷ್ಟು ಕಾಫಿ ಜರ್ಮನಿ, ರಷ್ಯಾ, ಸ್ಪೇನ್, ಯುಎಸ್, ಜಪಾನ್ ಮುಂತಾದೆಡೆಗೆ ರಫ್ತಾಗುತ್ತದೆ. 

4. ಎರಡು ವಿಧ

ಕಾಫಿಯಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ. ಅರೇಬಿಕಾ ಹಾಗೂ ರೋಬಸ್ಟಾ. ರೋಬಸ್ಟಾದಲ್ಲಿ ಕೆಫಿನ್ ಹೆಚ್ಚು ಪ್ರಮಾಣದಲ್ಲಿದ್ದು ಇದರಿಂದ ತಯಾರಿಸಿದ ಕಾಫಿ ಸ್ವಲ್ಪ ಕಹಿಯಾಗಿರುತ್ತದೆ. ಅರೇಬಿಕಾ ಜಾತಿಯ ಸಸ್ಯಗಳನ್ನು ಸಾಮಾನ್ಯವಾಗಿ ಕಾಫಿ ಬೆಳೆಗಾರರು ಆಯ್ದುಕೊಳ್ಳುತ್ತಾರೆ. 

ಕಾಂತಿಯುತ ಕೂದಲಿಗೆ ಕೆಫಿನ್ ಟ್ರೀಟ್ಮೆಂಟ್!

5. ಕಾಫಿ ನಿಷೇಧಕ್ಕಾಗಿ ಪ್ರಯತ್ನಿಸಿದವರು ಹಲವರು

1511ರಲ್ಲಿ ಕಾಫಿಯು ಮೂಲಭೂತ ಚಿಂತನೆ ಹೆಚ್ಚಿಸುತ್ತದೆ ಎಂದು ನಂಬಿದ ಮೆಕ್ಕಾದ ನಾಯಕರು ಈ ಪೇಯವನ್ನು ಕಾನೂನುಬಾಹಿರ ಮಾಡಿದ್ದರು. 16ನೇ ಶತಮಾನದಲ್ಲಿ ಇಟಲಿಯ ಕ್ಲೆರ್ಜಿಮೆನ್ ಕೂಡಾ ಕಾಫಿಯು ಸೈತಾನ್ ಎಂದು ಹೇಳಿ ಅದನ್ನು ನಿಷೇಧಿಸಲು ಪ್ರಯತ್ನಿಸಿದ್ದರು. ಆದರೆ, ಪೋಪ್ ಕ್ಲೆಮೆಂಟ್‌ಗೆ ಕಾಫಿ ಎಂದರೆ ಅದೆಷ್ಟು ಪ್ರೀತಿಯಿತ್ತೆಂದರೆ ಇದಕ್ಕಾಗಿಯೇ ಅವರು ನಿಷೇಧವನ್ನು ತೆಗೆದು ಹಾಕಿದರು. 

ಬೀಟ್‌ರೂಟ್ ಚಹಾ ಎಂಬ ಗರ್ಭಿಣಿಗೆ ಅದ್ಭುತ ಮದ್ದು!

6. ಜಗತ್ತಿನ ಅತಿ ಕಾಸ್ಟ್ಲಿ ಕಾಫಿ

ಜಗತ್ತಿನಲ್ಲೇ ಅತಿ ದುಬಾರಿಯಾದ ಕಾಫಿಯು 600 ಡಾಲರ್‌ಗೂ ಅಧಿಕ ಬೆಲೆ ಹೊಂದಿದೆ. ಏಷಿಯನ್ ಪಾಮ್ ಸಿವೆಟ್ ಎಂಬ ಬೆಕ್ಕಿನಂಥ ಪ್ರಾಣಿಯು ಕಾಫಿಹಣ್ಣುಗಳು ಸೇರಿದಂತೆ ಇತರೆ ಹಣ್ಣುಗಳನ್ನು ತಿಂದು ಮಾಡುವ ಮಲದಲ್ಲಿ, ಜೀರ್ಣವಾಗದೆ ಉಳಿದ ಕಾಫಿಬೀಜಗಳಿರುತ್ತವೆ. ಇವನ್ನು ಬಳಸಿ ತಯಾರಿಸುವ ಕಾಫಿಗೆ ವಿಶೇಷ ರುಚಿಯಿರುತ್ತದೆಯಂತೆ. ಕೊಪಿ ಲುವಾಕ್ ಎಂಬ ಈ ಕಾಫಿ ಜಗತ್ತಿನಲ್ಲೇ ಅತಿ ದುಬಾರಿಯಾದುದು. 

Latest Videos
Follow Us:
Download App:
  • android
  • ios