Asianet Suvarna News Asianet Suvarna News

ಕೋವಿಡ್ ನಿರ್ವಹಣೆ 1ನೇ ಸ್ಥಾನದಲ್ಲಿ ಮೋದಿ, ಫಿಟ್ನೆಸ್‌ಗೆ ಶಿಲ್ಪಾ ಶೆಟ್ಟಿ ಹೊಸ ಹಾದಿ, ಏ.23ರ ಟಾಪ್ 10 ಸುದ್ದಿ

ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದರ ನಡುವೆ ಪ್ರಧಾನಿ ಮೋದಿ ಸೋಂಕು ನಿರ್ವಹಣೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕೊರೋನಾ ಲಸಿಕೆಗೆ ಪ್ರಯತ್ನಗಳು ನಡೆಯುತ್ತಿದೆ. ಇದೀಗ ಕೊರೋನಾ ಬರದಂತೆ ತಡೆಯಲು ಲಸಿಕೆ ಕಂಡು ಹಿಡಿಯಲಾಗಿದೆ. ಬೆಂಗಳೂರಿನ ಒಬ್ಬ ವ್ಯಕ್ತಿಯಿಂದ 350 ಮಂದಿಯಲ್ಲಿ ಕೊರೋನಾ ಭಯ ಆವರಿಸಿದೆ. ಲಾಕ್‌ಡೌನ್ ಕಾರಣ ಫಿಟ್ನೆಸ್ ಹಾಗೂ ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ನಟಿ ಶಿಲ್ವಾ ಶೆಟ್ಟಿ ಹೊಸ ವಿಧಾನ, ಕ್ರಿಸ್ ಗೇಲ್ ಅಬ್ಬರದ ನೆನಪು ಸೇರಿದಂತೆ ಏಪ್ರಿಲ್ 23ರ ಟಾಪ್ 10 ಸುದ್ದಿ ವಿವರ ಇಲ್ಲಿದೆ. 

PM Narendra Modi to Shilpa shetty Fitness top 10 news of April 23
Author
Bengaluru, First Published Apr 23, 2020, 4:52 PM IST

ಕೊರೋನಾ ನಿರ್ವಹಣೆ: ಪಿಎಂ ಮೋದಿ ಕಾಳಜಿಗೆ ಬಿಲ್‌ಗೇಟ್ಸ್‌ ಮೆಚ್ಚುಗೆ!

PM Narendra Modi to Shilpa shetty Fitness top 10 news of April 23

 ಕೊರೋನಾ ವೈರಸ್‌ ನಿರ್ವಹಣೆಯಲ್ಲಿ ಪಧಾನಿ ನರೇಂದ್ರ ಮೋದಿ ತೋರಿರುವ ಕಾಳಜಿಗೆ ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.


ಕೊರೋನಾ ವೈರಸ್ ತಗುಲದಂತೆ ಲಸಿಕೆ, ಶುರುವಾಯ್ತು ಪ್ರಯೋಗ.

PM Narendra Modi to Shilpa shetty Fitness top 10 news of April 23

ಅಬ್ಬಾ, ಈ ಕೊರೋನಾ ಅಬ್ಬರಿಸುತ್ತಿರುವ ರೀತಿಗೆ ಇಡೀ ವಿಶ್ವವೇ ತಲ್ಲಣಗೊಂಡಿದೆ. ಎಲ್ಲೀವರೆಗೂ ಈ ಸೋಂಕಿಗೆ ಲಸಿಕೆ ಕಂಡು ಹಿಡಿಯುವುದು ಸಾಧ್ಯವಿಲ್ಲವೋ, ಅಲ್ಲೀವರೆಗೂ ಮನುಷ್ಯ ಬಂಧಮುಕ್ತನಾಗುವುದು ಅಸಾಧ್ಯ. ಈ ಸಂಬಂಧ ಬ್ರಿಟನ್‌ನ ಆಕ್ಸ್‌ಫರ್ಡ್ ವಿವಿ ಲಸಿಕೆ ತಯಾರಿಸಿದ್ದು, ಯಶಸ್ಸು ಕಂಡರೆ ಮಾನವ ಸಂಕುಲಕ್ಕೆ ದೊಡ್ಡ ಉಡುಗರೆ ಸಿಗಲಿದೆ. 

ಒಬ್ಬನಿಂದ 350 ಮಂದಿಗೆ ಕೊರೋನಾ ಭಯ: ಆತಂಕದಲ್ಲಿ ಬೆಂಗಳೂರು ಜನತೆ..!.

PM Narendra Modi to Shilpa shetty Fitness top 10 news of April 23

ಕೊರೋನಾ ಸೋಂಕಿನಿಂದ ಬೆಂಗಳೂರು ಅಕ್ಷರಶಃ ನಲುಗಿ ಹೋಗುತ್ತಿದೆ. ಹೌದು, ಕೇವಲ ಒಬ್ಬನೇ ರೋಗಿಯಿಂದ ಬರೋಬ್ಬರಿ 250 ಜನರಿಗೆ ಸಂಕಷ್ಟ ಎದುರಾಗಿದೆ. ನಗರದ ಬೊಮ್ಮನಹಳ್ಳಿಯ ಸ್ಲಂನಲ್ಲಿ ಬಿಹಾರ ಮೂಲದ 150  ಮಂದಿ ವಾಸಿಸುತ್ತಿದ್ದರು. ಇದರಲ್ಲಿ ಒಬ್ಬ ವ್ಯಕ್ತಿಗೆ ಕೊರೋನಾ ಸೊಂಕು ತಗುಲಿದೆ. ಇದರಿಂದ ಇಲ್ಲಿ ವಾಸಿಸುತ್ತಿದ್ದ ಎಲ್ಲರಿಗೂ ಭಯ ಆರಂಭವಾಗಿದೆ. 

ಕೊರೋನಾದ ನಿರ್ವಹಣೆ: ಮೋದಿ ವಿಶ್ವ ನಂ.1!

PM Narendra Modi to Shilpa shetty Fitness top 10 news of April 23

 ಕೊರೋನಾ ಸೋಂಕು ಹಬ್ಬುವ ಅಪಾಯ ಅರಿಯುತ್ತಲೇ 130 ಕೋಟಿಗೂ ಹೆಚ್ಚು ಜನರನ್ನು ಲಾಕ್‌ಡೌನ್‌ಗೆ ಒಳಪಡಿಸುವ ಮೂಲಕ, ಸೋಂಕು ವ್ಯಾಪಕವಾಗದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೀಗ ಮತ್ತೊಂದು ಹೆಗ್ಗಳಿಕೆ. ಇಡೀ ವಿಶ್ವದಲ್ಲೇ ಕೊರೋನಾ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿರುವ ನಾಯಕ ಮೋದಿ ಎಂದು ಸಮೀಕ್ಷೆಯೊಂದು ಹೇಳಿದೆ.

ಗೇಲ್ ಸಿಡಿಲಬ್ಬರದ ಶತಕಕ್ಕೆ 7 ವರ್ಷ ಭರ್ತಿ; ಮರೆಯಲು ಸಾಧ್ಯವೇ RCB ಮಾಜಿ ಕ್ರಿಕೆಟಿಗನ ಆರ್ಭಟ..!

PM Narendra Modi to Shilpa shetty Fitness top 10 news of April 23

ಬೆಂಗಳೂರು: 2013ರ ಏಪ್ರಿಲ್ 23 ಚುಟುಕು ಕ್ರಿಕೆಟ್‌ನಲ್ಲಿ ಕ್ರಿಸ್ಟೋಪರ್ ಹೆನ್ರಿ ಗೇಲ್ ಅಕ್ಷರಶಃ ಅಬ್ಬರಿಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಪುಣೆ ವಾರಿಯರ್ಸ್ ವಿರುದ್ಧ ಕ್ರಿಸ್ ಗೇಲ್ ಅಜೇಯ 175 ರನ್ ಬಾರಿಸಿದ್ದು ಇದುವರೆಗೂ ಮುರಿಯಲಾಗದ ದಾಖಲೆಯಾಗಿಯೇ ಉಳಿದಿದೆ.

ಕೊರೋನಾ ಕಾಲದಲ್ಲಿ ಶಿಲ್ಪಾ ಶೆಟ್ಟಿಯ ಸ್ಟೇರ್‌ಕೇಸ್‌ ಎಕ್ಸರ್‌ಸೈಸ್‌ ಹೇಗಿದೆ ನೋಡಿ!

PM Narendra Modi to Shilpa shetty Fitness top 10 news of April 23

ಸದಾ ಯೋಗಾಸನದ ಭಂಗಿಯಲ್ಲೇ ಕ್ಯಾಮರಾದೆದುರು ಬರೋ ಶಿಲ್ಪಾ ಶೆಟ್ಟಿಈಗ ಮೆಟ್ಟಿಲೇರಿ ಇಳಿಯುತ್ತಿದ್ದಾರೆ. ಕಾರಣ ಇಮ್ಯುನಿಟಿ ಹೆಚ್ಚಿಸಿಕೊಳ್ಳೋ ಎಕ್ಸರ್‌ ಸೈಸ್‌. ಮೆಟ್ಟಿಲಲ್ಲಿ ಎಕ್ಸರ್‌ ಸೈಸ್‌ ಮಾಡೋದನ್ನು ಶಿಲ್ಪಾ ಹೇಳ್ಕೊಡ್ತಾರೆ.

ಲಾಕ್‌ಡೌನ್‌ ಎಫೆಕ್ಟ್‌: 'ಉದ್ಯೋಗವಿಲ್ಲದವ​ರ ಬ್ಯಾಂಕ್‌ ಖಾತೆಗೆ ದುಡ್ಡು ಹಾಕುತ್ತೇನೆ'

PM Narendra Modi to Shilpa shetty Fitness top 10 news of April 23

 ಇಸ್ತ್ರಿ ಮಾಡುವವರಿಗೆ ಹಾಗೂ ಶೇವಿಂಗ್‌ ಶಾಪ್‌ಗಳಲ್ಲಿ ಉದ್ಯೋಗ ನಿರ್ವಹಿಸುವ ಕಾರ್ಮಿಕರಿಗೆ ಲಾಕ್‌ಡೌನ್‌ ಮುಗಿಯುವವರೆಗೂ ಅವರ ಖಾತೆಗಳಿಗೆ 500 ರು. ಜಮೆ ಮಾಡುವುದಾಗಿ ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ತಿಳಿಸಿದ್ದಾರೆ.

ಜಿಯೋದಲ್ಲಿ ಫೇಸ್‌ಬುಕ್‌ 43000 ಕೋಟಿ ರು. ಹೂಡಿಕೆ: ಏನಿದರ ಒಳಮರ್ಮ?

PM Narendra Modi to Shilpa shetty Fitness top 10 news of April 23

ಅತ್ಯಂತ ಕಡಿಮೆ ಅವಧಿಯಲ್ಲಿ ದೇಶದ ನಂ.1 ಟೆಲಿಕಾಂ ಕಂಪನಿಯಾಗಿ ಹೊರಹೊಮ್ಮಿರುವ ರಿಲಯನ್ಸ್‌ ಜಿಯೋ ಮಾತೃಸಂಸ್ಥೆಯಾದ ಜಿಯೋ ಪ್ಲಾಟ್‌ಫಾಮ್ಸ್‌ರ್‍ನಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹೆಸರುವಾಸಿಯಾಗಿರುವ ಫೇಸ್‌ಬುಕ್‌ 43,574 ಕೋಟಿ ರು. (5.7 ಬಿಲಿಯನ್‌ ಡಾಲರ್‌) ಹೂಡುವುದಾಗಿ ಗುರುವಾರ ಪ್ರಕಟಿಸಿದೆ. ಇದಕ್ಕೆ ಪ್ರತಿಯಾಗಿ ಫೇಸ್‌ಬುಕ್‌ ಕಂಪನಿಗೆ ಜಿಯೋ ಪ್ಲಾಟ್‌ಫಾಮ್ಸ್‌ರ್‍ನ ಶೇ.9.9ರಷ್ಟುಷೇರುಗಳು ದೊರೆಯಲಿವೆ.

ಅಕ್ಷಯ ತೃತೀಯ: ಚಿನ್ನ ಆನ್‌ಲೈನಲ್ಲೇ ಮಾರಾಟ!...

PM Narendra Modi to Shilpa shetty Fitness top 10 news of April 23

ಲಾಕ್‌ಡೌನ್‌ ನಡುವೆಯೂ ಈ ಬಾರಿಯ ಅಕ್ಷಯ ತೃತೀಯ ಆಚರಣೆಗೆ ಅಡಚಣೆಯಾಗದಂತೆ ಚಿನ್ನದ ಮಾರಾಟಗಾರರು ಮನೆ ಬಾಗಿಲಿಗೇ ಚಿನ್ನ ಮಾರಾಟ ಮಾಡಲು ಯೋಜನೆ ರೂಪಿಸಿದ್ದಾರೆ.

ಶಂಕರಮೂರ್ತಿಗೆ ಮೋದಿ ದೂರವಾಣಿ ಕರೆ, ಸಹಪಾಠಿ ಆರೋಗ್ಯ ವಿಚಾರಿಸಿದ ಪ್ರಧಾನಿ

PM Narendra Modi to Shilpa shetty Fitness top 10 news of April 23

 ಪ್ರಧಾನಿ ನರೇಂದ್ರ ಮೋದಿ  ಬಿಜೆಪಿ ಹಿರಿಯ ರಾಜಕಾರಣಿ, ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರಿಗೆ ದೂರವಾಣಿ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಹೇಗೆ ಸಮಯ ಕಳೆಯುತ್ತಿದ್ದೀರಿ ಎಂದು ಮೋದಿ ಕೇಳಿದ್ದಾರೆ.  ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲೇ ಇದ್ದು, ಫೋನ್ ಮೂಲಕವೇ ಕೆಲಸ ಮಾಡುತ್ತಿರುವುದಾಗಿ ಪ್ರಧಾನಿಗೆ ಶಂಕರಮೂರ್ತಿ ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios