LPG ಗ್ಯಾಸ್ ಸಮಸ್ಯೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ವೈರಲ್, ಸಂಕಷ್ಟದ ನಡುವೆ ನಕ್ಕು ಸುಸ್ತಾದ ಜನ, ದೇಶದಲ್ಲಿ ಎದುರಾಗರುವ ಗ್ಯಾಸ್ ಕೊರತೆ ಸಮಸ್ಯೆಯನ್ನು ಹಲವರು ತಮಾಷೆ ಮಾಡಿದ್ದಾರೆ. ಈ ಕುರಿತ ಮೀಮ್ಸ್ ಇಲ್ಲಿದೆ.
ನವದೆಹಲಿ (ಮಾ.13) ಇಸ್ರೇಲ್ ಹಾಗೂ ಇರಾನ್ ಯುದ್ಧದಿಂದ ಭಾರತ ಸೇರದಂತೆ ಹಲವು ದೇಶಗಳು ತೈಲ ಹಾಗೂ ಗ್ಯಾಸ್ ಸಮಸ್ಯೆ ಎದುರಿಸುತ್ತಿದೆ. ಈ ಪೈಕಿ ಭಾರತ ಗ್ಯಾಸ್ ಕೊರತೆ ಎದುರಿಸುತ್ತಿದೆ. ಗ್ಯಾಸ್ ಪೂರೈಕೆಯಾಗದೇ ಜನರು ಆತಂಕಗೊಂಡಿದ್ದಾರೆ. ಹೊಟೆಲ್ ಮುಚ್ಚಿದೆ. ಸಮಸ್ಯೆ ತೀವ್ರಗೊಳ್ಳುತ್ತಿದೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಗ್ಯಾಸ್ ಕೊರತೆ, ಪೂರೈಕೆ ಸ್ಥಗಿತದ ಕುರಿತು ಹಲವು ಮೀಮ್ಸ್ ಪೋಸ್ಟ್ ಮಾಡಲಾಗಿದೆ. ಈ ಮೀಮ್ಸ್ ವೈರಲ್ ಆಗಿದೆ. ದೇಶದಲ್ಲಿ ಆತಂಕ ಪರಿಸ್ಥಿತಿ ಎದುರಾಗುತ್ತಿದ್ದರೆ, ಇತ್ತ ಮೀಮ್ಸ್ ಹಲವರ ತಲೋನೋವು ಕಡಿಮೆ ಮಾಡಿದೆ.
ಪ್ರಮುಖ ಘಟನೆಗಳು, ದೇಶದಲ್ಲಿ ದಿಢೀರ್ ಎದುರಾಗುವ ಸಮಸ್ಯೆಗಳ ಕುರಿತು ಮೀಮ್ಸ್ ಮಾಡುವುದು ಇದೇ ಹೊಸದೇನಲ್ಲ. ಪ್ರತಿ ಘಟನೆಗಳ ಕುರಿತು ಮೀಮ್ಸ್ ಮಾಡಲಾಗುತ್ತದೆ. ಇದೀಗ ಭಾರತದ ಗ್ಯಾಸ್ ಕೊರತೆ ಸೋಶಿಯಲ್ ಮೀಡಿಯಾದ ಆಹಾರವಾಗಿದೆ. ಇತ್ತ ದೇಶದಲ್ಲಿ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸ್ಟ್ರೇಟ್ ಆಫ್ ಹೊರ್ಮೊಜ್ ಜಲಸಂಧಿ ಬಂದ್ ಆಗಿರುವ ಕಾರಣ ಪೂರೈಕೆಯಾಗುತ್ತಿಲ್ಲ. ದೇಶದ ಗ್ಯಾಸ್ ಉತ್ಪಾದನೆಯನ್ನು ಶೇಕಡಾ 30ರಷ್ಟು ಹೆಚ್ಚಿಲಾಗಿದೆ. ಆದರೆ ಜನರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಜನರು ಆತಂಕದಿಂದ ಗ್ಯಾಸ್ ಬುಕ್ ಮಾಡುವ ಅವಶ್ಯಕತೆ ಇಲ್ಲ
ಜನರು ಆತಂಕದಿಂದ ಎಲ್‌ಪಿಜಿ ಗ್ಯಾಸ್ ಬುಕ್ ಮಾಡುತ್ತಿದ್ದಾರೆ. ಗ್ಯಾಸ್ ಡೀಲರ್ ಬಳಿ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇದರ ಅವಶ್ಯಕತೆ ಇಲ್ಲ. ಅಧಿಕೃತ ವೆಬ್‌ಸೈಟ್ ಮೂಲಕ ಗ್ಯಾಸ್ ಬುಕಿಂಗ್ ಮಾಡಲು ಸೂಚಿಸಿದ್ದಾರೆ. ಸದ್ಯ ಆಸ್ಪತ್ರೆ, ಶಾಲೆ ಸೇರಿದಂತೆ ತುರ್ತು ಅಗತ್ಯದ ಕಡೆದೆ ಎಲ್‌ಪಿಜಿ ಅಡೆತಡೆ ಇಲ್ಲದೆ ಪೂರೈಕೆ ಮಾಡಲಾಗುತ್ತಿದೆ. ಭಾರತದ ಉತ್ಪಾದನೆ ಹೆಚ್ಚಿಸಲಾಗಿದ್ದು, ಸಮಸ್ಯೆಗೆ ಶೀಘ್ರವೇ ಪರಿಹಾರ ಸಿಗಲಿದೆ ಎಂದಿದೆ.
ಹೊರ್ಮುಜ್ ಬಳಿ ನಡೆದ ದಾಳಿಯಲ್ಲಿ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ. ಭಾರತದ ತೈಲ ಟ್ಯಾಂಕರ್ ಹಡುಗು ಭಾರತ ಪ್ರವೇಶ ಮಾಡಿದೆ. ಇತ್ತ ಮಾತುಕತೆಗಳು ಮುಂದುರಿದಿದೆ. ಗ್ಯಾಸ್ ಸಮಸ್ಯೆ ಬಗೆಹರಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವಿನಾಕಾರಣ ಆತಂಕಪಡುವು ಅಗತ್ಯವಿಲ್ಲ ಎಂದಿದೆ.
ತೈಲ ಕೊರೆತೆ ಇಲ್ಲ
ಭಾರತದಲ್ಲಿ ತೈಲ ಶೇಖರಣೆ ಸಾಕಷ್ಟಿದೆ. ಹೀಗಾಗಿ ಪೆಟ್ರೋಲ್ ಹಾಗೂ ಡೀಸೆಲ್ ಆತಂಕವಿಲ್ಲ. ಸದ್ಯ ಗ್ಯಾಸ್ ಪೂರೈಯಲ್ಲಿ ವ್ಯತ್ಯಯವಾಗಿದೆ ನಿಜ. ಇದನ್ನು ಪರಿಹರಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ಯಾಸ್ ಡೀಲರ್‌ಗಳು ಗ್ಯಾಸ್ ಮುಗಿದಿರುವ ಬಗ್ಗೆ ನಮಗೆ ವರದಿ ಮಾಡಿಲ್ಲ. ಆದರೂ ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದಿದೆ.


