ಗೇಲ್ ಸಿಡಿಲಬ್ಬರದ ಶತಕಕ್ಕೆ 7 ವರ್ಷ ಭರ್ತಿ; ಮರೆಯಲು ಸಾಧ್ಯವೇ RCB ಮಾಜಿ ಕ್ರಿಕೆಟಿಗನ ಆರ್ಭಟ..!
ಬೆಂಗಳೂರು: 2013ರ ಏಪ್ರಿಲ್ 23 ಚುಟುಕು ಕ್ರಿಕೆಟ್‌ನಲ್ಲಿ ಕ್ರಿಸ್ಟೋಪರ್ ಹೆನ್ರಿ ಗೇಲ್ ಅಕ್ಷರಶಃ ಅಬ್ಬರಿಸಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಪುಣೆ ವಾರಿಯರ್ಸ್ ವಿರುದ್ಧ ಕ್ರಿಸ್ ಗೇಲ್ ಅಜೇಯ 175 ರನ್ ಬಾರಿಸಿದ್ದು ಇದುವರೆಗೂ ಮುರಿಯಲಾಗದ ದಾಖಲೆಯಾಗಿಯೇ ಉಳಿದಿದೆ.ಕ್ರಿಸ್ ಗೇಲ್ ಆ ಪಂದ್ಯದಲ್ಲಿ ಪುಣೆ ವಾರಿಯರ್ಸ್ ತಂಡದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದರು. ಗೇಲ್ ಸಿಡಿಲಬ್ಬರದ ಇನಿಂಗ್ಸ್‌ಗೆ ಹಲವಾರು ದಾಖಲೆಗಳು ದೂಳೀಪಟವಾಗಿದ್ದವು. 7 ವರ್ಷಗಳ ಹಿಂದಿನ ಆ ಪಂದ್ಯ ಹೇಗಿತ್ತು ಎನ್ನುವುದರ ಕ್ವಿಕ್ ಝಲಕ್ ಇಲ್ಲಿದೆ ನೋಡಿ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನ RCB-ಪುಣೆ ವಾರಿಯರ್ಸ್ ನಡುವಿನ ಕಾದಾಟಕ್ಕೆ ಆತಿಥ್ಯ ವಹಿಸಿತ್ತು

ಟಾಸ್ ಗೆದ್ದಿದ್ದ ಪುಣೆ ವಾರಿಯರ್ಸ್ ತಂಡ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡು ತಪ್ಪು ಮಾಡಿತು

ಪುಣೆ ವಾರಿಯರ್ಸ್ ಎದುರು ಕ್ರಿಸ್ ಗೇಲ್ ಸ್ಪೋಟಕ ಇನಿಂಗ್ಸ್ ಕಟ್ಟಿದರು

ಕೇವಲ 30 ಎಸೆತಗಳಲ್ಲಿ ಸಿಡಿಲಬ್ಬರ ಶತಕ ಪೂರೈಸಿದ ಕ್ರಿಸ್ ಗೇಲ್

ಇದಕ್ಕೂ ಮೊದಲು ಕೆಂಟ್ ತಂಡದ ಪರ ಆಂಡ್ರ್ಯೂ ಸೈಮಂಡ್ಸ್ 34 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು

ಚುಟುಕು ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗದ ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ಗೇಲ್ ಹೆಸರಿನಲ್ಲೇ ಉಳಿದಿದೆ

30 ಎಸೆತಗಳ ಪೈಕಿ 7 ಚುಕ್ಕೆ ಎಸೆತ, 4 ಸಿಂಗಲ್ಸ್, 8 ಬೌಂಡರಿ ಹಾಗೂ 11 ಸಿಕ್ಸರ್ ನೆರವಿನಿಂದ ಶತಕ ಪೂರೈಸಿದ್ದ ಗೇಲ್

ಅಂತಿಮವಾಗಿ 66 ಎಸೆತಗಳನ್ನು ಎದುರಿಸಿದ್ದ ಗೇಲ್ 17 ಸಿಕ್ಸರ್ ಹಾಗೂ 13 ಬೌಂಡರಿಗಳ ನೆರವಿನಿಂದ ಅಜೇಯ 175 ರನ್ ಚಚ್ಚಿದ್ದ ಗೇಲ್

ಗೇಲ್ ವಿಸ್ಫೋಟಕ ಶತಕದ ನೆರವಿನಿಂದ RCB 5 ವಿಕೆಟ್ ಕಳೆದುಕೊಂಡು ದಾಖಲೆಯ 263 ರನ್ ಚಚ್ಚಿತ್ತು

ಇದಕ್ಕುತ್ತರವಾಗಿ ಪುಣೆ ವಾರಿಯರ್ಸ್ ತಂಡ ಕೇವಮ 133 ರನ್ ಗಳಿಸಿತು. ಗೇಲ್ ಬೌಲಿಂಗ್‌ನಲ್ಲೂ 5 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು.

ಇದೊಂದು ಅಮೋಘ ಇನಿಂಗ್ಸ್. ನನ್ನ 20 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಇಂತಹ ಮತ್ತೊಂದು ಇನಿಂಗ್ಸ್ ನೋಡಿಲ್ಲ ಎಂದು ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರುಳೀಧರನ್ ಉದ್ಘರಿಸಿದ್ದರು

ಇನ್ನು ಲೈವ್ ಆಗಿ ಈ ಪಂದ್ಯವನ್ನು ವೀಕ್ಷಿಸಿದ್ದೇ ನನ್ನ ಪಾಲಿನ ಅದೃಷ್ಟ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಆ ಇನಿಂಗ್ಸ್ ಬಣ್ಣಿಸಿದ್ದರು