ಸದಾ ಯೋಗಾಸನದ ಭಂಗಿಯಲ್ಲೇ ಕ್ಯಾಮರಾದೆದುರು ಬರೋ ಶಿಲ್ಪಾ ಶೆಟ್ಟಿಈಗ ಮೆಟ್ಟಿಲೇರಿ ಇಳಿಯುತ್ತಿದ್ದಾರೆ. ಕಾರಣ ಇಮ್ಯುನಿಟಿ ಹೆಚ್ಚಿಸಿಕೊಳ್ಳೋ ಎಕ್ಸರ್‌ ಸೈಸ್‌. ಮೆಟ್ಟಿಲಲ್ಲಿ ಎಕ್ಸರ್‌ ಸೈಸ್‌ ಮಾಡೋದನ್ನು ಶಿಲ್ಪಾ ಹೇಳ್ಕೊಡ್ತಾರೆ.

1. ಮೊದಲ ಮೆಟ್ಟಲನ್ನು ಜಂಪಿಂಗ್‌ ಭಂಗಿಯಲ್ಲಿ ಹತ್ತಿ ಇಳಿಯಿರಿ. ಇಡೀ ದೇಹಕ್ಕೆ ಎಕ್ಸರ್‌ಸೈಸ್‌ ಸಿಗಬೇಕು.

2. ಎರಡೆರಡು ಮೆಟ್ಟಿಲು ಹತ್ತಿ. ಒಂದು ಕಾಲು ಕೆಳಮೆಟ್ಟಿಲಲ್ಲಿ, ಮತ್ತೊಂದು ಕಾಲು ಎರಡು ಮೆಟ್ಟಿಲು ಮೇಲಿರಲಿ. ಹಾಗೇ ಕಾಲು ಅಗಲ ಮಾಡಿ ಕೂರುವ ಪ್ರಯತ್ನ ಮಾಡಿ.

3. ಫಾಸ್ಟಾಗಿ ಎರಡು ಮೆಟ್ಟಿಲು ಹತ್ತಿ ಇಳಿಯಿರಿ.

ಶಿಲ್ಪಾ ಶೆಟ್ಟಿ ಹೆಣ್ಣು ಮಗುವಿಗಾಗಿ ಹಂಬಲಿಸಿದ್ದು ಇದಕ್ಕಾ?

4. ಮೂರು ಮೂರು ಮೆಟ್ಟಿಲು ಹತ್ತಿ ಮಂಡಿಗೆ ಬಲಹಾಕಿ ನಿಂತು ಮೇಲಕ್ಕೆ ಹೋಗಿ, ಅದೇ ರೀತಿ ಕೆಳಗಿಳಿಯಿರಿ.

5. ಕೆಳಗೆ ನಿಂತು ಕೈಗಳನ್ನು ನೇರಕ್ಕೆ ಚಾಚಿ ಕಾಲು ಎಲ್ಲಿ ಕೈಗೆ ಟಚ್‌ ಮಾಡಲು ಪ್ರಯತ್ನಿಸಿ.

ಶಿಲ್ಪಾ ಶೆಟ್ಟಿ ಹೊಟ್ಟೆಪಾಡು ಹೇಗೆ?

ಈ ಎಕ್ಸರ್‌ಸೈಸ್‌ಗಳನ್ನು ಹೆಚ್ಚೆಚ್ಚು ಮಾಡುತ್ತಾ ಹೋದರೆ ಸ್ಟ್ರೆಂತ್‌ ಹೆಚ್ಚಾಗುತ್ತೆ, ನಿಮ್ಮ ಇಮ್ಯುನಿಟಿ ಹೆಚ್ಚುತ್ತೆ. ಎಕ್ಸರ್‌ಸೈಸ್‌ಗಳ ಮೂಲಕ ದೇಹವನ್ನು ಫಿಟ್‌ ಆಂಡ್‌ ಫೈನ್‌ ಆಗಿಟ್ಟುಕೊಳ್ಳಲು ಇದು ಬೆಸ್ಟ್‌ ಟೈಮ್‌ ಅನ್ನೋದು ಶಿಲ್ಪಾ ಕಿವಿಮಾತು.

View post on Instagram