ಹುಬ್ಬಳ್ಳಿಯ ಗೋಕುಲಧಾಮದ ನಿವಾಸಿ ಹಾಗೂ ಜೆಡಿಎಸ್ ಕಾರ್ಯಕರ್ತ ವಾಸೀಮ ಮುಕಾಶಿ ಎಂಬ ವ್ಯಕ್ತಿ ಹಣ ದ್ವಿಗುಣ ಗೊಳಿಸುವುದಾಗಿ ಹೇಳಿ 300ಕ್ಕೂ ಅಧಿಕ ಜನರಿಂದ 25 ಕೋಟಿ ರೂಪಾಯಿಗೂ ಅಧಿಕ ಹಣ ಪಂಗನಾಮ ಹಾಕಿದ್ದಾನೆ.

ಹುಬ್ಬಳ್ಳಿ (ಫೆ.26): ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ನಿಮ್ಮ ಹಣ ದ್ವಿಗುಣವಾಗುತ್ತದೆಯೆಂದು ಹೇಳಿ ಸುಮಾರು 25 ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿ ವಂಚಕನೋಬ್ಬ ಪರಾರಿಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಹುಬ್ಬಳ್ಳಿಯ ಗೋಕುಲಧಾಮದ ನಿವಾಸಿ ಹಾಗೂ ಜೆಡಿಎಸ್ ಕಾರ್ಯಕರ್ತ ವಾಸೀಮ ಮುಕಾಶಿ ಎಂಬ ವ್ಯಕ್ತಿ ಹಣ ದ್ವಿಗುಣ ಗೊಳಿಸುವುದಾಗಿ ಹೇಳಿ 300ಕ್ಕೂ ಅಧಿಕ ಜನರಿಂದ 25 ಕೋಟಿ ರೂಪಾಯಿಗೂ ಅಧಿಕ ಹಣ ಪಂಗನಾಮ ಹಾಕಿದ್ದಾನೆ.

ಅಲ್ಲದೇ, ಕಳೆದ ಒಂದು ತಿಂಗಳಿನಿಂದ ಯಾರಿಗೂ ಮುಖ ತೋರಿಸದೆ, ಸಂಪರ್ಕಕ್ಕೆ ಸಿಗದೇ ಪರಾರಿಯಾಗಿದ್ದಾನೆ.

ಇದರಿಂದ ಆಕ್ರೋಶಗೊಂಡ ಹಣ ಕಳೆದುಕೊಂಡವರು ಈತನ ಮನೆಗೆ ನುಗ್ಗಿದ್ದಾರೆ. ವಾಸೀಮ ತಲೆ ಮರೆಸಿಕೊಂಡಿದ್ದರಿಂದ ಆತನ ಅಣ್ಣ ಫಿರೋಜ್ ಮೊಕಾಶಿ ಅವರನ್ನ ಥಳಿಸಿ ಹಳೇ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.