ಖಾಸಗಿ ವಸತಿ ಶಾಲೆಯ 8 ಮತ್ತು 12 ವರ್ಷದ ಇಬ್ಬರು ವಿದ್ಯಾರ್ಥಿಗಳು ಮೊಮೊಸ್ ತಿಂದ ನಂತರ ಸಾವನ್ನಪ್ಪಿದ್ದಾರೆ. ಚಟ್ನಿಯೊಂದಿಗೆ ಮೊಮೊಸ್ ಸೇವಿಸಿದ ಕೆಲವೇ ಗಂಟೆಗಳಲ್ಲಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದು, ಆಹಾರ ವಿಷಪ್ರಾಶನದಿಂದ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

ಮೊಮೊಸ್ ತಿಂದ ಇಬ್ಬರು ಹಾಸ್ಟೆಲ್ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಂಡಾದ ಖಾಸಗಿ ವಸತಿ ಶಾಲೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಗಳಿಗೆ 08 ಮತ್ತು 12 ವರ್ಷ ವಯಸ್ಸಗಿತ್ತು. ಇಬ್ಬರು ಮೊಮೊಸ್ ಅನ್ನು ಚಟ್ನಿ ಜೊತೆ ಸೇವಿಸಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಅವರಿಗೆ ಅನಾರೋಗ್ಯ ಎದುರಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿಗಳಿಬ್ಬರು ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಸತಿ ಶಾಲೆಯಲ್ಲಿ ಉಳಿದುಕೊಂಡು ಓದುತ್ತಿದ್ದ ವಿದ್ಯಾರ್ಥಿಗಳು

ವಿದ್ಯಾರ್ಥಿಗಳ ಸಾವಿನ ಬಗ್ಗೆ ಪೋಷಕರು ತನಿಖೆ ಕೈಗೊಂಡಿದ್ದು, ಸಾವಿನ ನಿಖರ ಕಾರಣ ತಿಳಿದುಕೊಳ್ಳಲು ಮೃತದೇಹಳ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಬಂಡಾದ ಕೊತ್ವಲಿ ನಗರದ ಜೀಲ್ ಕಾ ಪೂರ್ವಾದಲ್ಲಿರುವ ಖಾಸಗಿ ವಸತಿ ಶಾಲೆಯಲ್ಲಿ ದುರ್ಘಟನೆ ಸಂಭವಿಸಿದೆ. ಮೃತ ವಿದ್ಯಾರ್ಥಿಗಳಿಬ್ಬರು ವಸತಿ ಶಾಲಿಯಲ್ಲಿ ಉಳಿದುಕೊಂಡು ಓದುತ್ತಿದ್ದರು.

12 ವರ್ಷದ ನಿತಿನ್, ಗಿರ್ವಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಸರಸ್ವ ನಿವಾಸಿ ಎಂದು ತಿಳಿದು ಬಂದಿದೆ. 08 ವರ್ಷ ಅರುಣ್ ಕುಮಾರ್, ತಿಂಡ್ವಾರಿ ಪಟ್ಟಣದ ನಿವಾಸಿಯಾಗಿದ್ದ ಪುಷ್ಕರ್ ಅವರ ಪುತ್ರ ಎಂದು ವರದಿಯಾಗಿದೆ.

ಫಿಂಗರ್ ಚಟ್ನಿಯೊಂದಿಗೆ ಮೊಮೊಸ್ ಸೇವಿಸಿದ್ದ ವಿದ್ಯಾರ್ಥಿಗಳು

ರಾಷ್ಟ್ರೀಯ ಮಾಧ್ಯಮಗಳ ಅನ್ವಯ, ಭಾನುವಾರ ರಾತ್ರಿ ಇಬ್ಬರು ಮಕ್ಕಳು ಏಕಾಏಕಿ ಅಸ್ವಸ್ಥರಾಗಿದ್ದು, ಕೂಡಲೇ ಶಾಲಾ ಆಡಳಿತ ಮಂಡಳಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದಾರೆ. ಬಂಡಾ ಎಎಸ್‌ಪಿ ಶಿವರಾಜ್ ನೀಡಿರುವ ಮಾಹಿತಿ ಅನ್ವಯ, ಜಿಲ್ಲಾಸ್ಪತ್ರೆಯಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಮತ್ತೋರ್ವ ವಿದ್ಯಾರ್ಥಿ ಬಂಡಾ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದರು.

ಆಗಸ್ಟ್ 16ರ ಸಂಜೆ ಇಬ್ಬರು ಫಿಂಗರ್ ಚಟ್ನಿಯೊಂದಿಗೆ ಮೊಮೊಸ್ ಸೇವಿಸಿದ್ದರು ಎಂದು ಕುಟುಂಸ್ಥರು ತಿಳಿಸಿದ್ದಾರೆ. ಮೊಮೊಸ್ ಸೇವಿಸದ ಬಳಿಕವೇ ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡು, ಅನಾರೋಗ್ಯ ಉಂಟಾಗಿತ್ತು ಎಂದು ತಿಳಿಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದ್ದು, ಮೊಲ್ನೋಟ್ಟಕ್ಕೆ ಫುಡ್ ಪಾಯಿಸನ್‌ನಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ಮಕ್ಕಳ ಮರಣೋತ್ತರ ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.