ಪಾದಾರಾಯನಪುರದಲ್ಲಿನ ಹಿಂಸಾಚಾರ ಪೂರ್ವನಿಯೋಜಿಕ ಕೃತ್ಯ ಅನ್ನೋದು ಸಾಬೀತಾಗುತ್ತಿದೆ. ದೇಶದಲ್ಲೇ ಪಾದರಾಯನಪುರ ಗಲಾಟೆ ಸದ್ದು ಮಾಡುತ್ತಿದೆ. ಪುಂಡಾಟ ಮೆರದ ಪುಂಡರನ್ನು ಬಂಧಿಸಲಾಗಿದ್ದು, ಕಠಿಣ ಶಿಕ್ಷೆಗೆ ಆಗ್ರಹ ಕೇಳಿಬರುತ್ತಿದೆ. ಕೊರೋನಾ ವೈರಸ್ ಹೆಮ್ಮಾರಿಗಿಂತ ದೇಶದಲ್ಲಿ ಇಂತಹ ಘಟನೆಗೆ ಹೆಚ್ಚು ಆತಂಕ ತಂದಿದೆ. ಇತ್ತ ತಬ್ಲೀಘಿಗಳಿಂದ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಕೆಜಿಎಫ್ ಬೆಡಗಿ ಮೌನಿ ರಾಯ್ ಹಾಗೂ ಕ್ರಿಕೆಟ್ ನಿರೂಪಕಿ ಮಂದಿರಾ ಬೇಡಿ ಆಪ್ತ ಗೆಳೆತಿಯರು ಅನ್ನೋದು ಬೆಳಕಿಗೆ ಬಂದಿದೆ. ಐಪಿಎಲ್ ದಾಖಲೆ, ಗರಂ ಆದ ಚೀನಾ ಸೇರಿದಂತೆ ಏಪ್ರಿಲ್ 20ರ ಟಾಪ್ 10 ಸುದ್ದಿ ಇಲ್ಲಿವೆ.

ಪಾದರಾಯನಪುರ ಗಲಭೆ: ಜಮೀರ್‌ಗೆ ಫುಲ್ ಕ್ಲಾಸ್ ತೆಗೆದುಕೊಂಡ ಬಾಸ್...!...

ಬೆಂಗಳೂರಿನ ಪಾದರಾಯನಪುರ ಘಟನೆಗೆ ಸಂಬಂಧಿಸಿದಂತೆ ಎಡವಟ್ಟು ಹೇಳಿಕೆ ಕೊಟ್ಟ ತೀವ್ರ ಟೀಕೆಗೆ ಗುರಿಯಾಗಿರುವ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.


ಪಾದರಾಯನಪುರ ಗಲಭೆ ಹಿಂದಿನ ಮಾಸ್ಟರ್ ಮೈಂಡ್?...

ಪಾದರಾಯನಪುರದಲ್ಲಿ ನಡೆದ ಗಲಭೆ ಪ್ರಕರಣ ಸದ್ಯ ಎಲಲ್ಲೆಡೆ ಸೌಂಡ್ ಮಾಡುತ್ತಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನಿಡಬೇಕೆಂಬ ಕೂಗು ಕೂಡಾ ಎದ್ದಿದೆ.ಹೀಗಿರುವಾಗ ಈ ಪ್ರಕರಣ ಪೂರ್ವ ನಿಯೋಜಿತವೇ ಎಂಬ ಅನುಮಾನವೂ ಎದ್ದಿದೆ. ದಾಳಿ ನಾಲ್ಕು ಗುಂಪುಗಳಲ್ಲಿ ನಡೆದಿತ್ತು ಎಂದೂ ಹೇಳಲಾಗಿದೆ.

ಸೋಂಕಿತರ ಸಂಖ್ಯೆ ಏರಿಕೆ: ತಬ್ಲಿಘಿ ಜಮಾತ್ ದೇಶಕ್ಕೆ ತಂದಿಟ್ಟ ಕಂಟಕವಿದು!

ದೆಹಲಿಯ ತಬ್ಲಿಘಿ ಜಮಾತ್‌ನಲ್ಲಿ ಧರ್ಮಸಭೆ ನಡೆಯದಿದ್ದರೆ ಕೊರೋನಾ ಮಹಾಮಾರಿ ದೇಶದ ತುಂಬೆಲ್ಲಾ ಈ ಮಟ್ಟಿಗೆ ಹರಡುತ್ತಿರಲಿಲ್ಲ. ಜನ ಈ ರೀತಿ ಕಷ್ಟಪಡಬೇಕಾಗಿರಲಿಲ್ಲ. ಇದೊಂದು ಘಟನೆ ಇಡೀ ದೇಶಕ್ಕೆ ಕಂಟಕವಾಯಿತು. ಕೊರೋನಾ ಸೋಂಕಿತರ ಸಂಖ್ಯೆ ಏರುವುದಕ್ಕೆ ತಬ್ಲಿಘಿಗಳು ಕೊಡುಗೆ ಸಾಕಷ್ಟಿದೆ. ಸರ್ಕಾರದ ನೀತಿ, ನಿಯಮಗಳು ಇವರಿಗೆ ಲೆಕ್ಕಕ್ಕೇ ಇಲ್ಲ. ಲಾಕ್‌ಡೌನ್ ನಿಯಮವನ್ನು ಉಲ್ಲಂಘಿಸಿ ನಡೆಸಿದ ಧರ್ಮಸಭೆ ಇಡೀ ದೇಶಕ್ಕೆ ಸಂಕಷ್ಟ ತಂದಿಟ್ಟಿತು. 

ಪಾದರಾಯನಪುರ ಪುಂಡರ ಬೆನ್ನಿಗೆ ನಿಂತ ಜಮೀರ್: ಪ್ರಶ್ನೆಗೆ ಪಲಾಯನ...

 ಇತ್ತೀಚೆಗೆ ಬೆಂಗಳೂರಿನ ಸಾಧಿಕ್ ನಗರದಲ್ಲಿ ಆಶಾಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಾಗ ಅಲ್ಲಿಗೆ ಯಾರನ್ನು ಕೇಳಿ ಅವರು ಹೋಗಿದ್ರು? ಎಂದು ಪ್ರಶ್ನಿಸಿದ್ದ ಶಾಸಕ ಜಮೀರ್ ಅಹ್ಮದ್ ಖಾನ್, ಇದೀಗ ಪಾದರಾಯನಪುರದ ಘಟನೆಯಲ್ಲೂ ಅದೇ ರಾಗ ಹಾಡಿದ್ದಾರೆ.


IPL ಮೊದಲ ಓವರ್‌ನಲ್ಲಿ ಗರಿಷ್ಠ ಸಿಕ್ಸರ್ ದಾಖಲೆ, ಮೊದಲ ಸ್ಥಾನದಲ್ಲಿ ಭಾರತೀಯ ಕ್ರಿಕೆಟಿಗ!...

ಐಪಿಎಲ್ ಟೂರ್ನಿ 12 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿ ಇದೀಗ 13ನೇ ಆವೃತ್ತಿಗೆ ಕೊರೋನಾ ವೈರಸ್ ಅಡ್ಡಿಯಾಗಿದೆ. ಕಳೆದ 12 ಆವೃತ್ತಿಗಳ ಪಂದ್ಯಗಳಲ್ಲಿ ಹಲವು ದಾಖಲೆ ನಿರ್ಮಾಣವಾಗಿದೆ. ಹೊಡಿ ಬಡಿ ಆಟದಲ್ಲಿ ಮೊದಲ ಓವರ್‌ನಿಂದಲೇ ಅಬ್ಬರ ಆರಂಭಗೊಳ್ಳುತ್ತೆ. ಹೀಗೆ ಮೊದಲ ಓವರ್‌ಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಭಾರತೀಯ ಆಟಗಾರ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಕೆಜಿಎಫ್ ಬೆಡಗಿ ಮತ್ತು ಮಂದಿರಾ ಬೇಡಿ... ಇವರಿಬ್ಬರದ್ದು ಎಂಥಾ ಫ್ರೆಂಡ್‌ಶಿಪ್ ನೋಡಿ!

ಕ್ರಿಕೆಟ್ ಪ್ರೇಮಿಗಳಿಗೆ ಮಂದಿರಾ ಬೇಡಿ ಗೊತ್ತು. ಸಿನಿಮಾ ಮಂದಿಗೆ ಮೌನಿ ರಾಯ್ ಗೊತ್ತು . ಆದರೆ ಇವರಿಬ್ಬರು ಅಪ್ಪಟ ಸ್ನೇಹಿತೆಯರು ಅನ್ನೋದು ಗೊತ್ತಿಲ್ಲ. ಗೆಳತಿಯ ಜನ್ಮದಿನಕ್ಕೆ ವಿಶ್ ಮಾಡಿದ ರೀತಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.

ಭಾರತದ ನಡೆಗೆ ತತ್ತರಿಸಿದ ಚೀನಾ: ಇದು ಸರಿಯಲ್ಲ ಎಂದು ಅರಚಾಟ!...

ಕೊರೋನಾ ವೈರಸ್‌ ಸಮಸ್ಯೆಯಿಂದಾಗಿ ಭಾರತದ ಆರ್ಥಿಕತೆ ಹಿಂಜರಿಕೆಯಲ್ಲಿರುವುದರಿಂದ ಚೀನಾ ಇದರ ಲಾಭ ಪಡೆಯಲು ಯತ್ನಿಸಬಹುದೆಂಬ ಕಾರಣಕ್ಕೆ ಕೇಂದ್ರ ಸರ್ಕಾರ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ನೀತಿಯನ್ನೇ ಬದಲಿಸಿದೆ. ಹೀಗಿರುವಾಗ ಭಾರತದ ಈ ನಡೆಯಿಂದ ಚಡಪಡಿಸುತ್ತಿರುವ ಚೀನಾ, ಈ ನಡೆಯನ್ನು ಖಂಡಿಸಿದೆ. ಅಲ್ಲದೇ ಭಾರತದ ಈ ನಿರ್ಧಾರ ವಿಶ್ವಸಂಸ್ಥೆಯ ನಿಯಮಗಳ ವಿರುದ್ಧವಾಗಿದೆ ಎಂದಿದ್ದಾರೆ.

ಲಾಕ್‌ಡೌನ್‌ ಮಾನ ಬೀದೀಲಿ ಹರಾಜು ಹಾಕಿದ ದಾವಣಗೆರೆ!...

ನಗರ, ಜಿಲ್ಲೆಯಲ್ಲಿ ಪ್ರಧಾನಿ, ಸಿಎಂ, ಜಿಲ್ಲಾಡಳಿತ ಮನವಿಗೆ ಕಿಮ್ಮತ್ತು ನೀಡದೇ ಜನ ಎಂದಿನ ತಮ್ಮ ನಿರ್ಲಕ್ಷ್ಯ ಪ್ರದರ್ಶಿಸುತ್ತಿರುವುದು ದಿನವೂ ಜಗಜ್ಜಾಹೀರಾಗುತ್ತಿದೆ. ಇದನ್ನು ಕಂಡವರೆಲ್ಲ ಹೀಗೇ ಹೇಳಿ ಗೇಲಿ ಮಾಡುತ್ತಿದ್ದಾರೆ.

ಪಾದರಾಯನಪುರ ಗಲಭೆ, ತಪ್ಪೊಪ್ಪಿಕೊಂಡ ಆರೋಪಿ ವಜೀರ್ ಖಾನ್!...

ಬೆಂಗಳೂರಿನ ಪಾದರಾಯನುರ ವಾರ್ಡ್‌ನಲ್ಲಿ ಕೊರೋನಾ ವಾರಿಯರ್ಸ್‌ ಮೇಲೆ ನಡೆದ ದಾಳಿ ಸದ್ಯ ದೇಶದಾದ್ಯಂತ ಸದ್ದು ಮಾಡಿದೆ. ಈಗಾಗಲೇ ಪೊಲೀಸರು ಐವತ್ತಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಾಲಾಗಿದೆ. ಇನ್ನು ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಬೇಕೆಂಬ ಕೂಗೂ ಕೇಳಿ ಬಂದಿದೆ. ಪ್ರಮುಖ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಕೊರೋನಾ ಬಗ್ಗೆ ಸಾರ್ವಜನಿರಿಗೆ ಮಹತ್ವದ ಮಾಹಿತಿ ಕೊಟ್ಟ ಡಾ. ಸುಧಾಕರ್..!...

ರಾಜ್ಯದಲ್ಲಿ ಕೋವಿಡ್ 19ನ ಹರಡುವಿಕೆ ಮತ್ತು ಅದರಿಂದಾಗುತ್ತಿರುವ ಪರಿಣಾಮಗಳಿಗೆ ಸಂಬಂಧಿಸಿದಂತೆ ಇಂದು (ಸೋಮವಾರ) ವಿಧಾನಸೌಧದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕೊರೋನಾ ವೈರಸ್‌ಗೆ ಸಂಬಂಧಿಸಿದಂತೆ ಕೆಲವು ಮಹತ್ವದ ಮಾಹಿತಿಗಳನ್ನು ತಿಳಿಸಿದರು.