Asianet Suvarna News Asianet Suvarna News

ಪಾದರಾಯನಪುರ ಗಲಭೆ: ಜಮೀರ್‌ಗೆ ಫುಲ್ ಕ್ಲಾಸ್ ತೆಗೆದುಕೊಂಡ ಬಾಸ್...!

ಬೆಂಗಳೂರಿನ ಪಾದರಾಯನಪುರ ಘಟನೆಗೆ ಸಂಬಂಧಿಸಿದಂತೆ ಎಡವಟ್ಟು ಹೇಳಿಕೆ ಕೊಟ್ಟ ತೀವ್ರ ಟೀಕೆಗೆ ಗುರಿಯಾಗಿರುವ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

siddaramaih-takes-class To zameer ahmed khan Over Padarayanapura Violence
Author
Bengaluru, First Published Apr 20, 2020, 3:07 PM IST

ಬೆಂಗಳೂರು, (ಏ.20):  ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದವರ ಪರವಾಗಿ ಜಮೀರ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಶ ವ್ಯಕ್ತವಾಗುತ್ತಿದ್ದು, ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಇದೀಗ ಅವರ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೂಡ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನವ ಮಾಹಿತಿ ಲಭ್ಯವಾಗಿದೆ.

ಪಾದರಾಯನಪುರ ಪುಂಡರ ಬೆನ್ನಿಗೆ ನಿಂತ ಜಮೀರ್: ಪ್ರಶ್ನೆ ಕೇಳದ್ದಂತೆಯೇ ಪಲಾಯನ

ಸಿದ್ದರಾಮಯ್ಯ ಕ್ಲಾಸ್..!
ದೂರವಾಣಿ ಕರೆ ಮಾಡಿ ಮಾತನಾಡಿದ ಸಿದ್ದರಾಮಯ್ಯ, "ಇಂತಹ ಸಂದರ್ಭದಲ್ಲಿ ಸರ್ಕಾರದ ಜೊತೆ ಕೈಜೋಡಿಸಬೇಕು. ಪೊಲೀಸ್, ವೈದ್ಯಕೀಯ ಸಿಬ್ಬಂದಿ ನಮ್ಮ ಜೀವ ಉಳಿಸಲು ಹೋರಾಡುತ್ತಿದ್ದಾರೆ. ಅವರ ಮೇಲೆ ಹಲ್ಲೆ ಸರಿಯಲ್ಲ. ಕ್ಷೇತ್ರದ ಜನರಿಗೆ ಮನೆಯಿಂದ ಹೊರ ಬರದಂತೆ ಮನವಿ ಮಾಡಬೇಕು, ಎಚ್ಚರಿಕೆಯಿಂದ ಹೇಳಿಕೆ ನೀಡಬೇಕು. ಇಲ್ಲ ಸಲ್ಲದ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿರೋದು ಯಾಕೆ"? ಅಂತೆಲ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತುಳಿದುಬಂದಿದೆ. 

ಅಷ್ಟಕ್ಕೂ ಆಗಿದ್ದೇನು..?
ಕೊರೋನಾ ಸೊಂಕಿತರ ಸಂಪರ್ಕದಲ್ಲಿದ್ದ ಚಾಮರಾಜಪೇಟೆಯ ಪಾದರಾಯನಪುರದ ಕೆಲವರನ್ನು ಕ್ವಾರಂಟೈನ್ ಮಾಡಲು ಭಾನುವಾರ ಸಂಜೆ ಪೊಲೀಸರು, ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಯಾವುದೇ ಕಾರಣಕ್ಕೂ ಬರುವುದಿಲ್ಲ. ಇಲ್ಲೇ ಪರೀಕ್ಷೆ ಮಾಡಿ ಎಂದು ಒತ್ತಾಯಿಸಿದ್ದಾರೆ. ಹೀಗೆ ವಾದ ಮಾಡುತ್ತಿರುವಾಗ ಎಲ್ಲರೂ ಗುಂಪು ಸೇರಿಕೊಂಡು ಅಲ್ಲಿದ್ದ ಬ್ಯಾರಿಕೇಡ್‌ಗಳನ್ನೆಲ್ಲಾ ಕಿತ್ತು ಹಾಕಿದ್ದಾರೆ. ಅಲ್ಲದೇ ಕೆಲವರು ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಅಧಿಕಾರಿಗಳು ಸ್ಥಳದಿಂದ ಕಾಲ್ಕಿತ್ತರು. 

ಪಾದರಾಯನಪುರ ಘಟನೆಗೆ ಜಮಿರ್ ಅಹ್ಮದ್ ಕಾರಣ: ಪ್ರಮೋದ್‌ ಮುತಾಲಿಕ್‌

ಘಟನೆ  ಬಗ್ಗೆ ಜಮೀರ್ ಹೇಳಿದ್ದೇನು..?
ಕೊರೋನಾ ವೈರಸ್ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲು ಪೊಲೀಸರು ರಾತ್ರಿ ಏಕೆ ಪಾದರಾಯನಪುರಕ್ಕೆ ಹೋದ್ರು.. ಬೆಳಗ್ಗೆ ಬರಬೇಕಿತ್ತು ಎಂದು ಹೇಳುವ ಮೂಲಕ ಪರೋಕ್ಷವಾಗಿ ದಂಧೆಕೋರರನ್ನು ಸಮರ್ಥಿಸಿಕೊಳ್ಳುವ ಮಾತಗಳನ್ನಾಡಿದರು. ಇದೇ ವೇಳೆ ತಾವು ಯಾರನ್ನೂ ಸಮರ್ಥಿಸಿಕೊಳ್ಳುತ್ತಿಲ್ಲ ಅಂತ ಸಬೂಬು ಬೇರೆ ಹೇಳಿದರು.

Follow Us:
Download App:
  • android
  • ios