ಬೆಂಗಳೂರು, (ಏ.20): ಮೇ 3 ರವರೆಗೆ ಲಾಕ್‌ಡೌನ್ ಮುಂದುವರಿಕೆ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆರ್ಥಿಕ ಸಮಸ್ಯೆ ಆಗುತ್ತಿದೆ. ಆದ್ರೂ, ಜೀವ ಬಹಳ ಮುಖ್ಯ.  ಲಾಕ್‌ಡೌನ್ ಮುಂದುವರೆಸಲು ನಿರ್ಧರಿಸಿದ್ದೇವೆ ಎಂದು  ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಸುಧಾಕರ್ ಸ್ಪಷ್ಟಪಡಿಸಿದರು.

 ನಮ್ಮಲ್ಲಿ 390 ಸೋಂಕಿತ ಪ್ರಕರಣಗಳು ಇದ್ರೂ, 16 ಸಾವು ಆಗಿದೆ. ಇದನ್ನು ಹೇಗೆ ತಪ್ಪಿಸಬೇಕು ಎಂಬುದರ ಬಗ್ಗೆ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದು, ಅದು ಈ ಕೆಳಗಿನಂತಿವೆ.

98 ವರ್ಷದ ಅಜ್ಜಿಯಿಂದ ಬಡವರಿಗಾಗಿ ಮಾಸ್ಕ್ ತಯಾರಿಕೆ, ಎಲ್ಲರಿಗೂ ಮಾದರಿ! 

ಸೋಂಕು ಮತ್ತು ಸಾವು ಹೆಚ್ಚಾಗಿರುವುದು ಹಿರಿಯ ನಾಗರಿಕರಲ್ಲಿ ಎಂಬುದು ಗೊತ್ತಾಗಿದೆ. ಅತಿ ಹೆಚ್ಚು ವರ್ಷದ ವ್ಯಕ್ತಿಯ ಸಾವು ಅಂದ್ರೆ ಅದು 80 ವರ್ಷ. ಅತಿ ಕಡಿಮೆ ವಯಸ್ಸಿನ ವ್ಯಕ್ತಿಯ ಸಾವು ಅಂದ್ರೆ 55 ವರ್ಷ. ಅದ್ರೆ ಸೋಂಕು 2 ತಿಂಗಳ ಮಗುವಿಗೂ ತಗುಲಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.

ಈ ರೋಗಿಗಳು ಎಚ್ಚರಿಕೆಯಿಂದ ಇರ್ಬೇಕು..!
 ಅತಿ ಹೆಚ್ಚಿನ ವಯೋಮಾನದವರಿಗೆ ಸೋಂಕು ತಗುಲಿದೆ. 55 ವರ್ಷದ ವಯೋಮಾನದವರು ಆರೋಗ್ಯ ಕಾಪಾಡಿಕೊಳ್ಳಬೇಕೆಂಬುದನ್ನು ಹೇಳಲು ಇಲ್ಲಿಗೆ ಬಂದಿದ್ದೇನೆ. ಕೊರೋನಾ ವೈರಸ್ ಗ್ರಾಫ್ ಕಡಿಮೆಯಾಗುವವರಿಗೂ ಮನೆಯಲ್ಲಿಯೇ ಇರಬೇಕು. ಆಸ್ತಮಾ, ಶ್ವಾಸಕೋಶ ತೊಂದರೆ, ಕ್ಷಯ ರೋಗ, ಕ್ಷಯ ರೋಗದ ಚಿಕಿತ್ಸೆ ಪಡೆದು ಗುಣಮುಖರಾದವರು, ಮೂತ್ರಪಿಂಡದ ಸಮಸ್ಯೆ, ಮದ್ಯಪಾನ ಸೇವನೆ ಹೆಚ್ಚಾಗಿ ಮಾಡುತ್ತಿರುವವರು, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಏಡ್ಸ್, ಕ್ಯಾನ್ಸರ್ ರೋಗಿಗಳು ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಇರುವವರು ಎಚ್ಚರಿಕೆಯಿಂದ ಇರಬೇಕು ಎಂದು ಸಚಿವರು ಮನವಿ ಮಾಡಿಕೊಂಡರು.

ಪಾದರಾಯನಪುರ ಗಲಭೆ: ಜಮೀರ್‌ಗೆ ಫುಲ್ ಕ್ಲಾಸ್ ತೆಗೆದುಕೊಂಡ ಬಾಸ್...!

55 ವರ್ಷದ ಮೇಲ್ಪಟ್ಟವರು ಎಚ್ಚರವಾಗಿರಬೇಕು..! 
55 ವರ್ಷದ ಮೇಲ್ಪಟ್ಟವರೇ ಇದಕ್ಕೆ ಮೊದಲ ಟಾರ್ಗೆಟ್. ಈ ಮೇಲೆ ಹೇಳಿರುವ ಕಾಯಿಲೆಗಳಿಂದ ಬಳಲುತ್ತಿರುವವರು ಎರಡು ಪಟ್ಟು ಎಚ್ಚರಿಕೆಯಿಂದ ಇರಬೇಕು. 55 ವರ್ಷ ಮೇಲ್ಪಟ್ಟವರಿಗೆ ನಾವು ಸರ್ಕಾರದ ಕಡೆಯಿಂದ ಪರೀಕ್ಷೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದೇವೆ. ಸಣ್ಣ ಆಯಾಸ ಇದ್ರೂ, ಪರೀಕ್ಷೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.

ವೈರಸ್‌ನ ಗುಣಲಕ್ಷಣಗಳು ತಿಳಿದುಕೊಳ್ಳಿ
ಇನ್ನು 60 ವರ್ಷದ ಮೇಲ್ಪಟ್ಟು ಕರ್ನಾಟಕದಲ್ಲಿ 7.7% ಹಿರಿಯ ನಾಗರಿಕರಿದ್ದಾರೆ. 2011 ರ ಜನಗಣತಿಯ ಪ್ರಕಾರ, 57.91 ಲಕ್ಷ ಮಂದಿ ಆಗುತ್ತಾರೆ. ರೋಗದ ಗುಣಲಕ್ಷಣಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಮೊದಲು ಜ್ವರ ಬರುತ್ತದೆ. 13.6% ಗಂಟಲು ಬೇನೆ, 69.8% ಕೆಮ್ಮು ಬರುವಂತಹದ್ದು ತಿಳಿದು ಬಂದಿದೆ. ಬಹಳ ಮಂದಿ ಕೊನೆಯ ಹಂತಕ್ಕೆ ಬಂದಾಗ ವೈದ್ಯರ ಬಳಿ ಬಂದ್ರೆ, ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ. ಕಳೆದ ವಾರ ಇಬ್ಬರು ಕೊನೆ ಹಂತಕ್ಕೆ ರೋಗದ ಗುಣಲಕ್ಷಣಗಳು ಬಂದಾಗ ವೈದ್ಯರ ಬಳಿ ಬಂದಿದ್ರು. ಆ ಎರಡು ಜೀವಗಳನ್ನು ಉಳಿಸಲು ಸಾಧ್ಯವಾಗಲಿಲ್ಲ. ರೋಗದ ಲಕ್ಷಣಗಳು ಕಂಡು ಬಂದ ತಕ್ಷಣವೇ ವೈದ್ಯರ ಬಳಿ ಬನ್ನಿ ಎಂದು ಸುಧಾಕರ್ ಹೇಳಿದರು.