IPL ಮೊದಲ ಓವರ್‌ನಲ್ಲಿ ಗರಿಷ್ಠ ಸಿಕ್ಸರ್ ದಾಖಲೆ, ಮೊದಲ ಸ್ಥಾನದಲ್ಲಿ ಭಾರತೀಯ ಕ್ರಿಕೆಟಿಗ!
ಐಪಿಎಲ್ ಟೂರ್ನಿ 12 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿ ಇದೀಗ 13ನೇ ಆವೃತ್ತಿಗೆ ಕೊರೋನಾ ವೈರಸ್ ಅಡ್ಡಿಯಾಗಿದೆ. ಕಳೆದ 12 ಆವೃತ್ತಿಗಳ ಪಂದ್ಯಗಳಲ್ಲಿ ಹಲವು ದಾಖಲೆ ನಿರ್ಮಾಣವಾಗಿದೆ. ಹೊಡಿ ಬಡಿ ಆಟದಲ್ಲಿ ಮೊದಲ ಓವರ್‌ನಿಂದಲೇ ಅಬ್ಬರ ಆರಂಭಗೊಳ್ಳುತ್ತೆ. ಹೀಗೆ ಮೊದಲ ಓವರ್‌ಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಭಾರತೀಯ ಆಟಗಾರ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಹಾಗಾದರೆ ಐಪಿಎಲ್ ಪಂದ್ಯಗಳಲ್ಲಿ ಮೊದಲ ಓವರ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್ ವಿವರ ಇಲ್ಲಿದೆ.
2008ರಲ್ಲಿ ಆರಂಭಗೊಂಡ ಐಪಿಎಲ್ ಟೂರ್ನಿ 12 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿದೆ
12 ಆವೃತ್ತಿಗಳ ಒಟ್ಟು ಪಂದ್ಯಗಳಲ್ಲಿ ಮೊದಲ ಓವರ್‌ನಲ್ಲಿ ಗರಿಷ್ಠ ಸಿಕ್ಸರ್ ಸಾಧನೆ ವಿವರ ಕುತೂಹಲ
ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಎಂದೇ ಗುರುತಿಸಿಕೊಂಡಿದ್ದ ವಿರೇಂದ್ರ ಸೆಹ್ವಾಗ್‍ಗೆ ಮೊದಲ ಸ್ಥಾನ
ಸೆಹ್ವಾಗ್ ಐಪಿಎಲ್ ಕರಿಯರ್‌ನಲ್ಲಿ ಒಟ್ಟಾರೆ ಮೊದಲ ಓವರ್‌ಗಳಲ್ಲಿನ 241 ಎಸೆತ ಎದುರಿಸಿ 12 ಸಿಕ್ಸರ್ ಸಿಡಿಸಿದ್ದಾರೆ
ವಿಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಒಟ್ಟಾರೆ ಮೊದಲ ಓವರ್‌ಗಳಲ್ಲಿನ 363 ಎಸೆತದ ಎದುರಿಸಿ 12 ಸಿಕ್ಸರ್ ಸಿಡಿಸಿದ್ದಾರೆ
ಕೆಎಲ್ ರಾಹುಲ್ ಒಟ್ಟಾರೆ ಮೊದಲ ಓವರ್‌ಗಳಲ್ಲಿನ ಓಟ್ಟು 129 ಎಸೆತ ಎದುರಿಸಿ 8 ಸಿಕ್ಸರ್ ಸಿಡಿಸಿದ್ದಾರೆ
ಮೊದಲ ಓವರ್ ಗರಿಷ್ಠ ಸಿಕ್ಸರ್ ಸಾಧನೆಯಲ್ಲಿ ಕೆಎಲ್ ರಾಹುಲ್ 3ನೇ ಸ್ಥಾನ
ಘಟಾನುಘಟಿ ಬ್ಯಾಟ್ಸ್‌ಮನ್ ಹಿಂದಿಕ್ಕಿರುವ ವಿಂಡೀಸ್ ಕ್ರಿಕೆಟಿಗ ಸುನಿಲ್ ನರೈನ್‌ಗೆ 4ನೇ ಸ್ಥಾನ
ನರೈನ್ ಒಟ್ಟಾರೆ ಮೊದಲ ಓವರ್‌ಗಳಲ್ಲಿನ 81 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದಾರೆ